ಬಿಗ್ ಬಾಸ್ ಮನೆಯಲ್ಲಿ ಬಿಗ್ ವಾರ್; ತಾಕತ್ತಿದ್ರೆ ನನ್ ಎದುರು ಬಂದು ಮಾತಾಡ್ಲಿ ಎಂದು ಜಗದೀಶ್‌ಗೆ ವಾರ್ನ್ ಮಾಡಿದ ಚೈತ್ರಾ ಕುಂದಾಪುರ
Oct 15, 2024 06:56 PM IST
ತಾಕತ್ತಿದ್ರೆ ನನ್ ಎದುರು ಬಂದು ಮಾತಾಡ್ಲಿ ಎಂದು ಜಗದೀಶ್‌ಗೆ ವಾರ್ನ್ ಮಾಡಿದ ಚೈತ್ರಾ
- ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ಚೈತ್ರಾ ಕುಂದಾಪುರ ನಡುವೆ ಜಗಳ ಆರಂಭವಾಗಿದೆ. ಚೈತ್ರಾ ಕುಂದಾಪುರ ಆಡಿದ ಮಾತುಗಳನ್ನು ಕೇಳಿ ಜಗದೀಶ್ ಸುಮ್ಮನೆ ನಿಂತಿದ್ದಾರೆ. ಮನೆಯ ಹೊರಗಿನ ವಿಚಾರಗಳು ಇಲ್ಲಿ ಬರಬಾರದು ಎಂದು ವಾರ್ನ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ಚೈತ್ರಾ ಕುಂದಾಪುರ ನಡುವೆ ಜಗಳ ಆರಂಭವಾಗಿದೆ. ಚೈತ್ರಾ ಕುಂದಾಪುರ ಆಡಿದ ಮಾತುಗಳನ್ನು ಕೇಳಿ ಜಗದೀಶ್ ಸುಮ್ಮನೆ ನಿಂತಿದ್ದಾರೆ. ಮನೆಯವರೆಲ್ಲರಿಗೂ ಚೈತ್ರಾ ಆಡಿದ ಮಾತುಗಳನ್ನು ಕೇಳಿ ಶಾಕ್ ಆಗಿದೆ. ಶಿಶಿರ್ ಹತ್ತಿರ ಜಗದೀಶ್ ಮಾತಾಡ್ತಾ ಇರ್ತಾರೆ. “ಏನ್ ಮಾತಾಡ್ತಾಳೆ ಚೈತ್ರಾ?” ಎಂದು ಪ್ರಶ್ನೆ ಮಾಡುತ್ತಾ. ಚೈತ್ರಾ ಮೇಲೆ ಎಷ್ಟು ಕೇಸ್ ಇದೆ ಎಂದು ಮನೆಯ ಹೊರಗಿನ ವಿಚಾರವನ್ನು ತೆಗೆಯುತ್ತಾರೆ. ಆಗ ಅದನ್ನು ಚೈತ್ರಾ ನಿಂತು ಕೇಳಿಸಿಕೊಳ್ಳುತ್ತಾರೆ. ಚೈತ್ರಾಗೆ ಈ ವಿಚಾರವಾಗಿ ತುಂಬಾ ಕೋಪ ಬಂದಿರುತ್ತದೆ.
"ಆಗ ಚೈತ್ರಾ ಬಂದು ನನ್ನ ಎದುರು ಬಂದು ನಿಂತು ಮಾತಾಡುವ ತಾಕತ್ತಿಲ್ಲ ಥೂ" ಎಂದು ಬೈಯ್ಯುತ್ತಾ ಜಗದೀಶ್ ಅವರ ಹತ್ತಿರ ಬರುತ್ತಾರೆ. “ಕೊಚ್ಚೆ ಮೇಲೆ ಕಲ್ಲಾಕಬಾರದು” ಎಂದು ಹೇಳುತ್ತಾ ಇನ್ನೂ ಸಮೀಪಕ್ಕೆ ಬರುತ್ತಾರೆ. ಜಗದೀಶ್ ಕೂಡ ಸುಮ್ಮನಾಗುವುದಿಲ್ಲ. ಇಬ್ಬರ ಮಾತು ಹೆಚ್ಚಾಗುತ್ತಾ ಹೋಗುತ್ತದೆ. ಒಬ್ಬರಾದ ಮೇಲೆ ಒಬ್ಬರು ದೊಡ್ಡದಾಗಿ ಮಾತಾಡುತ್ತಾರೆ. ಇದರಿಂದ ಮನೆಯಲ್ಲಿ ಇದ್ದ ಎಲ್ಲರ ಸ್ಪರ್ಧಿಗಳ ಗಮನ ಅವರಿಬ್ಬರ ಕಡೆ ಹೋಗುತ್ತದೆ.
ಜಗದೀಶ್ ಮಾತಿಗೆ ತಿರುಗುತ್ತರ ನೀಡಿದ ಚೈತ್ರಾ
ಅವಳಿಗೊಬ್ಬಳಿಗೇ ಅಲ್ಲ, ನನಗೂ ಫಾಲೋವರ್ಸ್ ಇದ್ದಾರೆ ಎಂದು ಜಗದೀಶ್ ಹೇಳುತ್ತಾರೆ. ಒಂದು ಇಪ್ಪತೆಂಟು ಕೇಸ್ ಇದೆ ಆಕೆ ಮೇಲೆ ಎಂದು ಜೋರಾಗಿ ಕೂಗಿ ಹೇಳುತ್ತಾರೆ. "ಧೈರ್ಯ ಇದ್ರೆ ನನ್ನ ಎದುರು ಬಂದು ಮಾತಾಡ್ಲಿ,, ನನ್ನ ಕೇಸ್ ಬಗ್ಗೆ ಮಾತಾಡೋಕೆ ಯಾವನಿಗೂ ಯೋಗ್ಯತೆ ಇಲ್ಲ" ಎಂದು ಚೈತ್ರಾ ಕುಂದಾಪುರ ವಾದ ಮಾಡುತ್ತಾರೆ. “ಐವತ್ತಲ್ಲ ನೂರ್ ಕೇಸ್ ಹಾಕಿಸಿಕೊಳ್ತೀನಿ, ನಾನೇನು ಇವರಪ್ಪಂಗೆ ಹೊಡ್ದು ಕೇಸ್ ಹಾಕಿಸಿಕೊಂಡಿರುವುದಲ್ಲ” ಎಂದು ಹೇಳುತ್ತಾರೆ.
"ಯಾವನಾದ್ರೂ ಅಪ್ಪಂಗೇ ಹುಟ್ಟಿದ್ರೆ, ನನ್ನ ಕಣ್ಣೆದುರು ಬಂದು ಮಾತಾಡ್ಲಿ" ಎಂದು ಓಪನ್ ಛಾಲೆಂಜ್ ಹಾಕುತ್ತಾರೆ ಚೈತ್ರಾ ಕುಂದಾಪುರ. ಮನೆಯಲ್ಲಿ ಇದ್ದ ಇತರ ಸ್ಪರ್ಧಿಗಳಿಗೆ ಈ ಸಂದರ್ಭದಲ್ಲಿ ತಾವು ಏನು ಮಾಡಬೇಕು ಎಂದು ತೋಚುವುದಿಲ್ಲ. ಇನ್ನು ಶಿಶಿರ್ ಈ ವಾರದ ಕ್ಯಾಪ್ಟನ್ ಆಗಿದ್ದ ಕಾರಣ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಮಧ್ಯದಲ್ಲಿ ಏನೂ ಮಾಡಲು ಸಾಧ್ಯ ಆಗುವುದಿಲ್ಲ. ಇವರು ಈ ರೀತಿ ಮಾತಾಡುವುದನ್ನು ನೋಡಿ ಎಲ್ಲರೂ ಅವರ ಪಾಡಿಗವರು ಸುಮ್ಮನಾಗುತ್ತಾರೆ.
ಇಲ್ಲಿದೆ ನೋಡಿ ವಿಡಿಯೋ
ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಅವರ ನಡುವೆ ನಡೆದ ಈ ಗಲಾಟೆಯನ್ನು ನೋಡಿ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಕೆಲವರು ಚೈತ್ರಾ ಕುಂದಾಪುರ ಅವರ ಪರವಾಗಿ ಕಾಮೆಂಟ್ ಮಾಡಿದರೆ, ಹಲವರು ಜಗದೀಶ್ ಪರವಾಗಿ ಕಾಮೆಂಟ್ ಮಾಡಿದ್ದಾರೆ.