logo
ಕನ್ನಡ ಸುದ್ದಿ  /  ಮನರಂಜನೆ  /  ಮಧ್ಯರಾತ್ರೀಲಿ ಹೈವೇ ರೋಡಲ್ಲಿ Bbk 11 ಸ್ಪರ್ಧಿ ಜಗದೀಶ್‌ ಪ್ರತ್ಯಕ್ಷ!; ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌

ಮಧ್ಯರಾತ್ರೀಲಿ ಹೈವೇ ರೋಡಲ್ಲಿ BBK 11 ಸ್ಪರ್ಧಿ ಜಗದೀಶ್‌ ಪ್ರತ್ಯಕ್ಷ!; ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌

Oct 20, 2024 11:16 AM IST

google News

ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌ ಜಗದೀಶ್‌

    • Bigg boss kannada 11: ತಾವೇ ಮಾಡಿಕೊಂಡ ಅವಾಂತರಗಳಿಂದ ಎರಡೇ ವಾರಕ್ಕೆ ಆಟ ಮುಗಿಸಿ, ನೇರವಾಗಿ ಎಲಿಮಿನೇಟ್‌ ಆಗಿದ್ದರು ಜಗದೀಶ್‌. ಈಗ ಬಿಗ್‌ಬಾಸ್‌ನಿಂದ ಹೊರಬಂದ ಅವರು, ಎಲ್ಲರನ್ನು ಭೇಟಿಯಾಗುವ ಸಲುವಾಗಿ ಮಧ್ಯರಾತ್ರಿಯೇ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.
ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌ ಜಗದೀಶ್‌
ಮುಖಾಮುಖಿ ಭೇಟಿಗೆ ಸಮಯ ಫಿಕ್ಸ್‌ ಮಾಡಿದ ಲಾಯರ್‌ ಜಗದೀಶ್‌

Bigg Boss Kannada 11: ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡದ ಎಂಬ ಕಾರಣಕ್ಕೆ ನೇರವಾಗಿಯೇ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿದ್ದರು ಲಾಯರ್‌ ಜಗದೀಶ್.‌ ಹೀಗೆ ಮನೆಯಿಂದ ಹೊರ ಹೋಗಿದ್ದ ಜಗದೀಶ್‌, ಎಲ್ಲಿಯೂ ಅಧಿಕೃತವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅವರೇ ಮಾತನಾಡಿದ ಆಡಿಯೋವೊಂದು ವೈರಲ್‌ ಆಗಿತ್ತು. ಕಿಚ್ಚನ ಬಗ್ಗೆಯೂ ಮೆಚ್ಚುಗೆ ಸೂಚಿಸಿ, ನನ್ನ ಹೀರೋ ಸುದೀಪ್‌ ಎಂದಿದ್ದರು. ಇಷ್ಟಾದರೂ, ಕೆಲವರಿಗೆ ಇದಿನ್ನೂ ಡೌಟ್‌ನಲ್ಲಿಯೇ ಇತ್ತು. ಶನಿವಾರದ ಸಂಚಿಕೆಯಲ್ಲಿ ಕಿಚ್ಚನ ಮಾತುಗಳನ್ನು ಕೇಳುತ್ತಿದ್ದರೆ, ಜಗದೀಶ್‌ ಮತ್ತೆ ಮನೆಗೆ ರೀ ಎಂಟ್ರಿ ಪಡೆಯಬಹುದೇ? ಎಂಬ ಅನುಮಾನ ಮೂಡಿತ್ತು. ಈಗ ಅದು ಸುಳ್ಳಾಗಿದೆ.

ಬಿಗ್‌ ಮನೆಯಿಂದ ಲಾಯರ್‌ ಜಗದೀಶ್‌ ಹೊರಬಂದು ಎರಡು ದಿನಗಳಾಗಿವೆ. ಅಲ್ಲಿಂದ ನಿನ್ನೆಯವರೆಗೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈಗ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪ್ರತ್ಯಕ್ಷರಾಗಿದ್ದಾರೆ. ನಿಮ್ಮೆಲ್ಲರನ್ನು ಭೇಟಿ ಮಾಡಬೇಕಿದೆ. ಬನ್ನಿ ಮಾತನಾಡೋಣ ಎಂದೂ ಮಾಧ್ಯಮವನ್ನು ಆಹ್ವಾನಿಸಿದ್ದಾರೆ. ತಾವೇ ಮಾಡಿಕೊಂಡ ಅವಾಂತರಗಳಿಂದ ಎರಡೇ ವಾರಕ್ಕೆ ಆಟ ಮುಗಿಸಿ, ನೇರವಾಗಿ ಎಲಿಮಿನೇಟ್‌ ಆಗಿದ್ದರು ಜಗದೀಶ್‌. ಈಗ ಬಿಗ್‌ಬಾಸ್‌ನಿಂದ ಹೊರಬಂದ ಅವರು, ಎಲ್ಲರನ್ನು ಭೇಟಿಯಾಗುವ ಸಲುವಾಗಿ ಮಧ್ಯರಾತ್ರಿಯೇ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮಧ್ಯರಾತ್ರೀಲಿ.. ಹೈವೇ ರಸ್ತೇಲಿ.. ನಾನು ನಿಮ್ಮ ಜೊತೆ ಮಾತಾಡ್ತಾ ಇದ್ದೀನಿ. ನಮಸ್ಕಾರ ಕರ್ನಾಟಕ, ನಾನು ನಿಮ್ಮ ‘ಬಿಗ್ ಬಾಸ್’ ಕಂಟೆಸ್ಟೆಂಟ್ ಜಗದೀಶ್. ಇಂದು ‘ಬಿಗ್ ಬಾಸ್’ ಮನೆಯಿಂದ ಅಫೀಶಿಯಲ್ ಆಗಿ ಹೊರಗೆ ಬಂದಿದ್ದೇನೆ. ನಿಮ್ಮ ಜೊತೆ ಇವತ್ತು ಮಧ್ಯರಾತ್ರಿ 1 ಗಂಟೆಯಲ್ಲಿ ಮಾತಾಡ್ತಾ ಇದ್ದೇನೆ. ಗುಂಡಾಂಜನೇಯ ದೇವಸ್ಥಾನ, ಸಹಕಾರ ನಗರದಲ್ಲಿ ಸಂಜೆ 4.30ಕ್ಕೆ ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಮಾಧ್ಯಮ ಮಿತ್ರರು ಇದನ್ನೇ ಆಹ್ವಾನ ಅಂತ ಪರಿಗಣಿಸಿ. ಸಾರ್ವಜನಿಕರ ಮುಂದೆ ನನ್ನ ಮನದಾಳದ ಮಾತುಗಳನ್ನ ಹಂಚಿಕೊಳ್ಳಲು ಕಾಯುತ್ತಿದ್ದೇನೆ. ಬಿಗ್‌ ಬಾಸ್‌ನಿಂದ ಹೊರ ಬಂದ ಮೇಲೆ ನಿಮ್ಮ ಜೊತೆ ಸವಿಮಾತುಗಳನ್ನು ಹಂಚಿಕೊಳ್ಳುತ್ತೇನೆ. ನಲಿಯುತ, ಕುಣಿಯುತ ಒಂದು ಕಾಫಿನೋ, ನೀರೋ ನಿಮ್ಮ ಜತೆಗೆ ಕುಡಿಯೋಣ ಅಂತ. ಬರ್ತೀರಿ ಅಲ್ವಾ" ಎಂದಿದ್ದಾರೆ.

ಸುರೇಶ್‌ ಮುಂದೆ ಹಂಸಾಗೆ ಕೆಟ್ಟ ಪದ ಬಳಕೆ

ಟಾಸ್ಕ್‌ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಜಗದೀಶ್‌ ಮತ್ತು ಗೋಲ್ಡ್‌ ಸುರೇಶ್‌ ಮಾತನಾಡುತ್ತ ಕೂತಿದ್ದರು. ಈ ವೇಳೆ ಮಾತಿನ ಭರದಲ್ಲಿ ಜಗದೀಶ್‌ ಮನೆಯ ಸ್ಪರ್ಧಿಗಳ ಬಗ್ಗೆ ಇಲ್ಲ ಸಲ್ಲದ ಪದ ಬಳಕೆ ಮಾಡಿ ಮಾತನಾಡಲು ಶುರುಮಾಡಿದರು. ಜಗದೀಶ್‌ ಅವರ ಮಾತುಗಳು ಸುರೇಶ್‌ಗೆ ಅಸಹನೀಯ ಎನಿಸತೊಡಗಿದವು. ಕೂಡಲೇ ಇಂಥ ಪದಗಳ ಪ್ರಯೋಗ ನನ್ನ ಮುಂದೆ ಮಾಡಬೇಡ ಎಂದು ಬೇಡಿಕೊಂಡರು. ಮುಂದುವರಿದು, ಆ ಹಂಸಾ ಮುಂ* ಎಂಬ ಪದ ಪ್ರಯೋಗಿಸಿದರು ಜಗದೀಶ್‌.

"ನನ್ನ ಮುಂದೆ ಅವರ ಬಗ್ಗೆ ಆ ರೀತಿಯ ಪದಗಳನ್ನು ಯೂಸ್ ಮಾಡಬೇಡ. ನಾನು ಎದ್ದು ಹೋಗುತ್ತೇನೆ" ಎಂದು ಸುರೇಶ್‌ ಎದ್ದು ನಡೆದರು. ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡ ಎಂದು ಸುರೇಶ್‌ ಪದೇ ಪದೆ ಹೇಳಿದರೂ ಕೇಳದ ಜಗದೀಶ್‌, ಯಾಕೆ ಗಂಡು ಮಕ್ಕಳು ಬಿಟ್ಟಿ ಬಿದ್ದಿದ್ದೇವಾ? ಎಂದು ಸುರೇಶ್‌ಗೆ ಏಕವಚನದಲ್ಲಿ ಬೈಯುತ್ತ ಮರು ಪ್ರಶ್ನೆ ಮಾಡಿದರು. ಇವರಿಬ್ಬರ ಈ ಜಗಳ ಮನೆಯೊಳಗೆ ಇದ್ದವರಿಗೂ ಕೇಳಿಸಿ, ಎಲ್ಲರೂ ಆಚೆ ಬಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ