logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಅಪ್ಪ- ಅಮ್ಮ ಬರೋವರ್ಗೂ ತುತ್ತು ಅನ್ನ, ಹನಿ ನೀರೂ ಮುಟ್ಟದ ಡ್ರೋನ್‌ ಪ್ರತಾಪ್! ಕೊನೆಗೂ ಫಲಿಸಿತು ಪೂಜಾ ಫಲ‌

BBK 10: ಅಪ್ಪ- ಅಮ್ಮ ಬರೋವರ್ಗೂ ತುತ್ತು ಅನ್ನ, ಹನಿ ನೀರೂ ಮುಟ್ಟದ ಡ್ರೋನ್‌ ಪ್ರತಾಪ್! ಕೊನೆಗೂ ಫಲಿಸಿತು ಪೂಜಾ ಫಲ‌

Dec 28, 2023 03:31 PM IST

google News

BBK 10: ಅಪ್ಪ- ಅಮ್ಮ ಬರೋವರ್ಗೂ ತುತ್ತು ಅನ್ನ, ಹನಿ ನೀರೂ ಮುಟ್ಟದ ಡ್ರೋನ್‌ ಪ್ರತಾಪ್! ಕೊನೆಗೂ ಫಲಿಸಿತು ಪೂಜಾ ಫಲ‌

    • ಡ್ರೋಣ್‌ ಪ್ರತಾಪ್‌ ಉಪವಾಸ ಕೈಗೂಡಿದೆ. ಬಿಗ್‌ ಬಾಸ್‌ ಮನೆಗೆ ಅಪ್ಪ ಮಾತ್ರವಲ್ಲ, ಅಮ್ಮನ ಆಗಮನವೂ ಆಗಿದೆ. ಮೂರು ವರ್ಷಗಳಿಂದ ಹೆತ್ತವರಿಂದ ದೂರವೇ ಉಳಿದಿದ್ದ ಪ್ರತಾಪ್‌, ಇದೀಗ ಇಬ್ಬರನ್ನು ಹತ್ತಿರದಿಂದ ಕಣ್ತುಂಬಿಕೊಂಡು ಕಣ್ಣೀರಿಟ್ಟಿದ್ದಾರೆ. 
BBK 10: ಅಪ್ಪ- ಅಮ್ಮ ಬರೋವರ್ಗೂ ತುತ್ತು ಅನ್ನ, ಹನಿ ನೀರೂ ಮುಟ್ಟದ ಡ್ರೋನ್‌ ಪ್ರತಾಪ್! ಕೊನೆಗೂ ಫಲಿಸಿತು ಪೂಜಾ ಫಲ‌
BBK 10: ಅಪ್ಪ- ಅಮ್ಮ ಬರೋವರ್ಗೂ ತುತ್ತು ಅನ್ನ, ಹನಿ ನೀರೂ ಮುಟ್ಟದ ಡ್ರೋನ್‌ ಪ್ರತಾಪ್! ಕೊನೆಗೂ ಫಲಿಸಿತು ಪೂಜಾ ಫಲ‌

BBK 10: ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡಿದ್ದಾರೆ. ಅದರಂತೆ, ಒಬ್ಬೊಬ್ಬರೇ ಮನೆ ಪ್ರವೇಶಿಸಿ ತಮ್ಮವರನ್ನು ಭೇಟಿ ಮಾಡಿ, ಬಗೆಬಗೆ ಅಡುಗೆ ಮಾಡಿ ತುತ್ತು ಮಾಡಿ ತಿನಿಸುತ್ತಿದ್ದಾರೆ.

ಈ ವಾರ ಭಾವನೆಗಳಿಗೆ ಪಾಸ್‌ ಪ್ಲೇ ಹಾಕುವ ಮೂಲಕ ಮನೆ ಮಂದಿಯನ್ನು ಭಾವುಕ ಕಡಲಲ್ಲಿ ತೇಲಿಸುತ್ತಿದ್ದಾರೆ ಬಿಗ್‌ ಬಾಸ್‌. ಈಗಾಗಲೇ ಇದೇ ಪಾಸ್‌ ಪ್ಲೇ ಆಟದಲ್ಲಿ ಸ್ಪರ್ಧಿಗಳಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿದ್ದರು ಬಿಗ್‌ ಬಾಸ್.‌ ಆ ಆಟದಲ್ಲಿ ಮೊದಲಿಗೆ ನಮ್ರತಾ ತಾಯಿಯ ಆಗಮನವಾಗಿತ್ತು. ಅದಾದ ಬಳಿಕ ವರ್ತೂರು ಸಂತೋಷ್‌ ತಾಯಿ ಮಂಜುಳಾ ಮತ್ತು ಮೈಕಲ್‌ ಅಜಯ್‌ ತಾಯಿ ವಿಜಿ ಎಂಟ್ರಿಕೊಟ್ಟು ಭಾವುಕ ಲೋಕವನ್ನೇ ಸೃಷ್ಟಿಸಿದ್ದರು. ಹಾಗೇ ಮುಂದುವರಿದು ಬುಧವಾರ ಬಹುತೇಕರ ಮನೆಯವರೂ ಆಗಮಿಸಿದ್ದರು. ಆದರೆ, ಡ್ರೋಣ್‌ ಪ್ರತಾಪ್‌ ಮನೆಯಿಂದ ಯಾರೂ ಬಂದಿರಲಿಲ್ಲ.

ಇತ್ತ ಸೋಷಿಯಲ್‌ ಮೀಡಿಯಾದಲ್ಲೂ ಡ್ರೋಣ್‌ ಪ್ರತಾಪ್‌ ಅವರ ಅಪ್ಪ ಮತ್ತು ಅಮ್ಮನನ್ನು ಕರೆಸಿ ಎಂಬ ಬೇಡಿಕೆ ಹೆಚ್ಚಾಗಿತ್ತು. ಇದೀಗ ಅದೂ ಘಟಿಸಿದೆ. ಬಿಗ್‌ ಬಾಸ್‌ ಮನೆಗೆ ಸರಳವಾಗಿಯೇ ಮುಖ್ಯದ್ವಾರದಿಂದ ಆಗಮಿಸಿದ್ದಾರೆ ಪ್ರತಾಪ್‌ ಅಪ್ಪ ಅಮ್ಮ. ಆದರೆ, ಹಾಗೇ ಆಗಮಿಸಿದ ಪ್ರತಾಪ್‌ಗೆ ಅಷ್ಟು ಸುಲಭವಾಗಿ ಹೆತ್ತವರ ಜತೆಗೆ ಬೆರೆಯಲು ಆಗಲಿಲ್ಲ. ಬಾಗಿಲು ಲಾಕ್‌ ಮಾಡಿ, ಭಾವನೆಗಳ ಕೋಡಿ ಹರಿಸಿದ್ದರು ಬಿಗ್‌ ಬಾಸ್.‌ ಇದಕ್ಕೂ ಮೊದಲು ಅಪ್ಪ ಅವ್ವ ಬರ್ತಾರಾ? ಅನ್ನೋ ಪ್ರಶ್ನೆ ಪ್ರತಾಪ್‌ನಲ್ಲಿ ಮೂಡಿತ್ತು. ಆ ಕಾರಣಕ್ಕೂ ನೋಡುಗರ ಎದೆಯಲ್ಲೂ ಕೌತುಕದ ಬೀಜ ಬಿತ್ತಿದ್ದರು ಬಿಗ್‌ ಬಾಸ್.‌

ಊಟ ಮಾಡಿಲ್ಲ, ನೀರೂ ಕುಡಿದಿಲ್ಲ ಪ್ರತಾಪ್‌

ಪ್ರತಾಪ್‌ ಕಳೆದ ಮೂರು ವರ್ಷಗಳಿಂದ ಹೆತ್ತವರನ್ನು ನೋಡಿಲ್ಲ. ಇದೀಗ ಸುದೀರ್ಘ ಮೂರು ವರ್ಷಗಳ ಬಳಿಕ ಮೂವರು ಸಂದಿಸಿದ್ದಾರೆ. ಎಲ್ಲರ ಅಪ್ಪ ಅಮ್ಮ ಬಂದ್ರು, ನಮ್ಮಪ್ಪ ಅಮ್ಮ ಮಾತ್ರ ಇನ್ನೂ ಬಂದಿಲ್ಲ ಎಂಬ ಬೇಸರದಲ್ಲಿದ್ದ ಡ್ರೋಣ್‌ ಪ್ರತಾಪ್‌, ಅವರ ಆಗಮನವಾಗುವವರೆಗೂ ಊಟ ಮಾಡಿರಲಿಲ್ಲ. ನೀರೂ ಕುಡಿದಿರಲಿಲ್ಲ. ಸಂಗೀತಾ ಕೈ ತುತ್ತು ಕೊಟ್ಟರೂ ಬೇಡ ಎಂದಿದ್ದ ಪ್ರತಾಪ್‌, ನೀರು ಕುಡಿಸಿದರೂ ಕುಡಿದಿರಲಿಲ್ಲ. ಬರ್ತಾರೆ ಎಂದು ಸಂಗೀತಾ, ನಮ್ರತಾ, ವರ್ತೂರು ಸಮಾಧಾನ ಮಾಡುತ್ತಲೇ ಬಂದಿದ್ದರು. ಕೊನೆಗೆ ಪ್ರತಾಪನ ಪೂಜಾ ಫಲ ಫಲಿಸಿಯೇ ಬಿಟ್ಟಿತು. ಮಾಡಿದ ಉಪವಾಸ ಕೈಗೂಡಿತು. ಅಮ್ಮನ ಪ್ರತಾಪು ಎಂಬ ದನಿ ಕೇಳಿ, ಪ್ರತಾಪ್‌ನ ಕಿವಿ ನಿಮಿರಿದವು.

ಮುಖ್ಯದ್ವಾರದ ಬಳಿಯಿಂದ ಪ್ರತಾಪ್‌ ಅಮ್ಮ, ಅಪ್ಪನ ಆಗಮನವಾಯ್ತು. ಇಬ್ಬರನ್ನೂ ಸ್ಪರ್ಶಿಸಬೇಕು, ಪಾದ ಮುಟ್ಟಿ ನಮಸ್ಕರಿಸಬೇಕು ಎಂದರೆ ಗಾಜಿನ ಬಾಗಿಲನ್ನು ಲಾಕ್‌ ಮಾಡಿದ್ದಾರೆ ಬಿಗ್‌ ಬಾಸ್.‌ ಮಗನನ್ನು ಕಂಡು ಅಪ್ಪ ಖುಷಿಪಟ್ಟರೆ, ಅಪ್ಪ ಅಮ್ಮನ ಪ್ರೀತಿ ಕಳೆದುಕೊಂಡಿದ್ದ ಪ್ರತಾಪ್‌ಗೆ ಅದರ ಅರಿವೂ ಈಗ ಆದಂತಿದೆ. ಈ ಭಾವುಕ ಏಪಿಸೋಡ್‌ ಇಂದು ರಾತ್ರಿ ಪ್ರಸಾರವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ