BBK 10: ‘ರಕ್ಷಕ್ ಅಂದ್ರೆ ಬುಲೆಟ್ ಪ್ರಕಾಶ್ ಮಗ ಅಲ್ವಾ, ವಯಸ್ಸು 11, 12 ಇರಬೇಕಲ್ವಾ? ಅಪ್ಪನ ಹೆಸರು ಉಳಿಸೋ ಮಗನಾಗಿ’; ಕಿಚ್ಚನ ಪಾಠ
Jan 21, 2024 09:31 AM IST
BBK 10: ‘ರಕ್ಷಕ್ ಅಂದ್ರೆ ಬುಲೆಟ್ ಪ್ರಕಾಶ್ ಮಗ ಅಲ್ವಾ, ವಯಸ್ಸು 11, 12 ಇರಬೇಕಲ್ವಾ? ಅಪ್ಪನ ಹೆಸರು ಉಳಿಸೋ ಮಗನಾಗಿ’; ಕಿಚ್ಚನ ಪಾಠ
- ಬಿಗ್‌ಬಾಸ್ ಮನೆಗೆ ಮತ್ತೊಮ್ಮೆ ಅತಿಥಿಯಾಗಿ ಎಂಟ್ರಿ ಕೊಟ್ಟು ತೆರಳಿದ್ದ ರಕ್ಷಕ್ ಬುಲೆಟ್‌ಗೆ, ಕಿಚ್ಚ ಸುದೀಪ್ ಸರಿಯಾಗಿಯೇ ಕ್ಲಾಸ್ ಮಾಡಿದ್ದಾರೆ. ಅಪ್ಪನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
BBK 10: ನಾನು ಬಿಗ್‌ಬಾಸ್‌ಗೆ ಬಂದಿರೋದೇ ಫೇಮಸ್ ಆಗುವ ಸಲುವಾಗಿ ಎಂದು ಶೋಗೆ ಕಾಲಿಟ್ಟ ಮೊದಲ ದಿನವೇ ಕಿಚ್ಚನ ಬಳಿ ಹೇಳಿಕೊಂಡಿದ್ದರು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್. ಅದರಂತೆ ಬಿಗ್‌ಬಾಸ್ ಮನೆಯಲ್ಲಿದ್ದಷ್ಟು ದಿನ ಕಾಲು ಕೆರೆದುಕೊಂಡು ಹಲವರ ಮೇಲೆ ತಿರುಗಿ ಬಿದ್ದಿದ್ದರು. ಅದರಲ್ಲೂ ಡ್ರೋಣ್ ಪ್ರತಾಪ್ ಮೇಲೂ ತಮ್ಮ ಪ್ರತಾಪ ತೋರಿಸಿದ್ದರು. ನೇರವಾಗಿ ಗೂಬೆ ಎಂದು ಸಂಬೋಧಿಸಿದ್ದರು. ಕಿಚ್ಚನ ಪಂಚಾಯ್ತಿಯಲ್ಲೂ ಸುದೀಪ್ ಅವರಿಂದಲೂ ರಕ್ಷಕ್‌ಗೆ ವಿಶೇಷ ಟ್ರೀಟ್‌ಮೆಂಟ್ ಸಿಕ್ಕಿತ್ತು. ಇದೀಗ ಇದೇ ರಕ್ಷಕ್‌ಗೆ ಮತ್ತೊಮ್ಮೆ ಬುದ್ಧಿಮಾತಲ್ಲ ಎಚ್ಚರಿಕೆ ಸಂದೇಶವನ್ನೇ ರವಾನಿಸಿದ್ದಾರೆ ಸುದೀಪ್.
ಕಳೆದ ಕೆಲ ದಿನಗಳ ಹಿಂದಷ್ಟೇ ಈ ವರೆಗೆ ಎಲಿಮಿನೇಟ್ ಆದ ಕೆಲವು ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್‌ಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಪೈಕಿ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಸಹ ಆಗಮಿಸಿದ್ದರು. ಡ್ರೋಣ್ ಪ್ರತಾಪ್ ಬಳಿ ಬ್ಲಾಂಕೆಟ್ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಸ್ಪರ್ಧಿಯಾಗಿ ಬಂದಾಗಲೂ ಇವರಿಬ್ಬರ ಸಂಬಂಧ ಚೆನ್ನಾಗಿರಲಿಲ್ಲ. ಕಿಚ್ಚನಿಂದ ಬುದ್ಧಿ ಮಾತು ಹೇಳಿಸಿಕೊಂಡು ಕೆಲವೇ ವಾರಗಳಲ್ಲಿ ಎಲಿಮಿನೇಷನ್ ಆಗಿ ಹೊರ ನಡೆದಿದ್ದರು. ಹೀಗೆ ಹೊರ ಬರುತ್ತಿದ್ದಂತೆ, ಸಂದರ್ಶನಗಳಲ್ಲಿ ಬಿಗ್ ಬಾಸ್ ಬಗ್ಗೆ ಮತ್ತು ಕಿಚ್ಚನ ಬಗ್ಗೆ ಮಾತನಾಡಿದ್ದರು.
ರಕ್ಷಕ್‌ಗೆ ಕಿಚ್ಚನ ಖಡಕ್ ಮಾತು
"ರಕ್ಷಕ್ ಅಂದ್ರೆ ಅವರು ನಮ್ಮ ಹೆಮ್ಮೆಯ ಕಲಾವಿದ ಬುಲೆಟ್ ಪ್ರಕಾಶ್ ಪುತ್ರ ಅಲ್ವಾ? ರಕ್ಷಕ್ ಅಲ್ವಾ ಅವರ ಹೆಸರು.. ವಯಸ್ಸು 11, 12 ಇರಬೇಕು ಅಲ್ವಾ? ಎಷ್ಟು ಇಪ್ಪತ್ತೆರಡಾ? ನಿಮ್ಮ ತಂದೆ ದೊಡ್ಡ ಹೆಸರು ಮಾಡಿದ್ದಾರೆ. ಬುಲೆಟ್ ಪ್ರಕಾಶ್ ಅವರ ಮಗನಾಗಿ ಹೆಸರು ಉಳಿಸಿಕೊಳ್ಳಿ. ಸಮಾಜ ನಿಮಗೆ ಕೊಡುವ ಗೌರವವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನೀವು ಈ ಮನೆಯಿಂದ ಹೊರಗಡೆ ಹೋಗಿ ಸಂದರ್ಶನಗಳಲ್ಲಿ ಬಿಗ್ ಬಾಸ್ ಬಗ್ಗೆ ಮಾತಾಡಿರೋದನ್ನು ನಾವು ಕೇಳಿದ್ದೇವೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ" ಎಂದು ಖಡಕ್ಕಾಗಿಯೇ ಹೇಳಿದ್ದಾರೆ ಸುದೀಪ್.
ಬುಲೆಟ್ ಪ್ರಕಾಶ್ ಮಗನಾಗಿರುವ ರಕ್ಷಕ್, ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್, ರೋಸ್ಟ್ ಆಗುತ್ತಲೇ ಇರುತ್ತಾರೆ. ಇದು ಅವರಿಗೆ ಹೊಸದೇನೂ ಅಲ್ಲ. ಹೀಗಿರುವಾಗಲೇ ಇತ್ತೀಷೆಗಷ್ಟೇ ನಟ ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ಬಗ್ಗೆ ಟಿವಿ ಸಂದರ್ಶನಗಳಲ್ಲಿ ಬಗೆಬಗೆ ಹೇಳಿಕೆಗಳನ್ನು ನೀಡಿದ್ದರು. ಇದೆಲ್ಲವನ್ನು ಗಮನಿಸಿದ ಸುದೀಪ್ ಇದೀಗ, ನೇರವಾಗಿಯೇ ಪ್ರತಾಪ್‌ಗೆ ಧೈರ್ಯ ತುಂಬಿ ರಕ್ಷಕ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ನಟನ ಮಗ ಎಂದು ಸಮಾಜ ಕೊಡುವ ಗೌರವವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ರಕ್ಷಕ್ ಕಿವಿಹಿಂಡಿದ್ದಾರೆ ಸುದೀಪ್.
ಸಂದರ್ಶನದಲ್ಲಿ ಸುದೀಪ್ ಬಗ್ಗೆ ರಕ್ಷಕ್ ಏನಂದ್ರು?
"ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಅನಿಸಿದ್ದನ್ನು ಕೊಟ್ಟು ಬಿಡ್ತಾರೆ. ಆಮೇಲೆ ಸುದೀಪ್ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ" ಎಂದು ರಕ್ಷಕ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗಿತ್ತು.
ಟೀಕೆಯ ಬಳಿಕ ಕ್ಷಮೆಯಾಚನೆ
"ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡ್ತಿದೆ. ಅಂದ್ರೆ, ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಕಾಂಟಾಸ್ಟ್‌ನಲ್ಲಿ ಅಲ್ಲ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಏನಕ್ಕೆ ಯಾವ ಲೈನ್ ಹೇಳಿದೆ ಎಂದು ಗೊತ್ತಾಗುತ್ತದೆ. ಬೇಜಾರಾಗಿದ್ದರೆ, ಎಲ್ಲರಿಗೂ ಸಾರಿ. ಸುದೀಪ್ ಅಣ್ಣನಿಗೂ ಮತ್ತು ಸುದೀಪ್ ಅಣ್ಣನ ಫ್ಯಾನ್ಸ್‌ಗೂ. ಸುದೀಪಣ್ಣನ ಮೇಲೆ ತುಂಬ ಗೌರವ ಇದೆ" ಎಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದರು ರಕ್ಷಕ್.