logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ತುಕಾಲಿ ಸಂತು ಅಣ್ಣನಾದ, ಹತ್ತಾರು ಸ್ನೇಹಿತರು ನಮ್ಮವರಾದರು, ಇನ್ನೇನು ಬೇಕು?; ವರ್ತೂರು ಸಂತೋಷ್‌ ಸಂದರ್ಶನ

BBK 10: ತುಕಾಲಿ ಸಂತು ಅಣ್ಣನಾದ, ಹತ್ತಾರು ಸ್ನೇಹಿತರು ನಮ್ಮವರಾದರು, ಇನ್ನೇನು ಬೇಕು?; ವರ್ತೂರು ಸಂತೋಷ್‌ ಸಂದರ್ಶನ

Jan 30, 2024 04:25 PM IST

google News

BBK 10: ತುಕಾಲಿ ಸಂತು ಅಣ್ಣನಾದ, ಹತ್ತಾರು ಸ್ನೇಹಿತರು ನಮ್ಮವರಾದರು, ಇನ್ನೇನು ಬೇಕು?; ವರ್ತೂರು ಸಂತೋಷ್‌ ಸಂದರ್ಶನ (Varthur Santhosh interview)

    • Bigg boss Kannada Season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ನಾಲ್ಕನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್ (varthur santhosh).‌ ಈ ಬಿಗ್‌ಬಾಸ್‌ ಜರ್ನಿಯನ್ನು ನೆನೆದಿರುವ ವರ್ತೂರು, ಅಣ್ಣನಂತೆ ತುಕಾಲಿ ಸಂತೋಷ್‌ ಜತೆಗೆ ಮನೆ ಮಂದಿಯ ಸ್ನೇಹವನ್ನು ಪಡೆದಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
BBK 10: ತುಕಾಲಿ ಸಂತು ಅಣ್ಣನಾದ, ಹತ್ತಾರು ಸ್ನೇಹಿತರು ನಮ್ಮವರಾದರು, ಇನ್ನೇನು ಬೇಕು?; ವರ್ತೂರು ಸಂತೋಷ್‌ ಸಂದರ್ಶನ (Varthur Santhosh interview)
BBK 10: ತುಕಾಲಿ ಸಂತು ಅಣ್ಣನಾದ, ಹತ್ತಾರು ಸ್ನೇಹಿತರು ನಮ್ಮವರಾದರು, ಇನ್ನೇನು ಬೇಕು?; ವರ್ತೂರು ಸಂತೋಷ್‌ ಸಂದರ್ಶನ (Varthur Santhosh interview)

BBK 10: ಬಿಗ್‌ಬಾಸ್ ಕನ್ನಡದ ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ಎಂದರೆ ಅದು ವರ್ತೂರು ಸಂತೋಷ್. ಕೆಲವು ಕಹಿಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಹಳ್ಳಿಕಾರ್‌ ತಳಿಯ ಅಭಿವೃದ್ಧಿ ಮತ್ತು ರೈತರ ಹೆಸರಿನಲ್ಲಿಯೇ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದ ವರ್ತೂರು, ಆಡುವ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದರು. ಈ ನಡುವೆ ಹುಲಿ ಉಗುರು ಪ್ರಕರಣದಲ್ಲಿ ಜೈಲಿಗೂ ಹೋಗಿ, ಜಾಮೀನಿನ ಮೇಲೆ ಮರಳಿ, ಮತ್ತೆ ಬಿಗ್‌ ಮನೆ ಪ್ರವೇಶಿಸಿದ್ದರು. ಆದರೆ, ಇದೇ ಹಳ್ಳಿಕಾರ್‌ ಒಡೆಯ ಫಿನಾಲೆ ವರೆಗೂ ಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇದೀಗ ಜಿಯೊಸಿನಿಮಾ ನಡೆಸಿದ ಸಂದರ್ಶನದಲ್ಲಿ ಸಂತೋಷ್ ಆಡಿದ ಮಾತುಗಳು ಹೀಗಿವೆ.

ಬಿಗ್‌ಬಾಸ್ ಅಂದರೆ ವ್ಯಕ್ತಿತ್ವದ ಆಟ

‘’ನಮಸ್ಕಾರ ನನ್ನೆಸ್ರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಷೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್‌ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಷೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್‌ ವೀಕ್‌ವರೆಗೆ ಇರುವುದು. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್‌ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್‌ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು ಸ್ಪರ್ಧಿಗಳು. ಅವರಲ್ಲಿ ನಾನು ಅವರಲ್ಲಿ ಒಬ್ಬನಾಗಿದ್ದೇನೆ.

ಸೋಲು ಗೆಲುವು ಎರಡನ್ನೂ ಒಂದೇ ರೀತಿ ತಗೊಬೇಕು. ಒಬ್ಬರು ಸೋತಾಗಲೇ ಗೆಲ್ಲಬೇಕು ಅನ್ನೋ ಛಲ ಬಂದಿರೋದು. ನಾನು ಈ ಸೀಸನ್‌ನ ಗೆಲ್ಲದೇ ಇರಬೋದು. ಆದ್ರೆ ಕರ್ನಾಟಕದ ಪ್ರತಿಯೊಬ್ಬರ ಮನೆಮಗನಾಗಿ ಮನಸ್ಸು ಗೆದ್ದಿದ್ದೇನೆ. ಅದರ ಬಗ್ಗೆ ಖುಷಿಯಿದೆ. ನಾನು ಜನರಿಂದ ಬೆಳೆದವನು, ಜನರಿಗೋಸ್ಕರ ಜನರ ಜೊತೆಗೇ ಇರೋನು.

ಬಿಗ್‌ ಮನೆಯಿಂದ ಸ್ನೇಹವನ್ನು ಕೊಂಡೊಯ್ಯುತ್ತಿದ್ದೇನೆ..

ನಾನು ಈ ಬಿಗ್‌ಬಾಸ್ ಮನೆಯಲ್ಲಿ, ಏನಾದ್ರೂ ಹೊರಗಡೆ ತೆಗೆದುಕೊಂಡು ಹೋಗ್ತಿದೀನಿ ಅಂದ್ರೆ ಅದು ಫ್ರೆಂಡ್‌ಷಿಪ್. ಎಲ್ಲ ಸ್ನೇಹಿತರಿಂದಲೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತುಕಾಲಿ ಅವರ ಕಡೆಯಿಂದ ಒಂದು ಸಹೋದರ ಸ್ನೇಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಯಾಕೆಂದರೆ ನನ್ನ ನಗು, ದುಃಖ ಎಲ್ಲವನ್ನೂ ಅವರ ಜೊತೆಗೆ ಹಂಚಿಕೊಂಡಿದ್ದೀನಿ. ಅದಕ್ಕೆ ವಿಶೇಷ ಸ್ಥಾನವಿದೆ. ಮನೆಯ ಸದಸ್ಯರು, ಸುದೀಪಣ್ಣ ಅಷ್ಟೇ ಏಕೆ, ಬಿಗ್‌ಬಾಸ್‌ ಕೂಡ ನಮ್ಮ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದೆ ಇರಲಿ ಎಂದು ಹಾರೈಸಿದರು.

ಬೀನ್‌ ಬ್ಯಾಗ್‌ ನಂಟು

ನನ್ನ ಫೆವರೆಟ್ ಮೊಮೆಂಟ್ಸ್ ಬಿನ್‌ಬ್ಯಾಗ್‌ದು. ಅಲ್ಲಿ ಕೂತು ನಾವು ಆಡದೇ ಇರುವ ಮಾತುಗಳಿಲ್ಲ. ಮಾಡದೆ ಇರುವ ತಂತ್ರಗಳಿಲ್ಲ. ಹಾಗಾಗಿ ಬಿನ್‌ಬ್ಯಾಗ್ ಅನುಭವ ಅದ್ಭುತವಾದದ್ದು. ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿ ಲಗೋರಿ ಆಟ ನನಗೆ ತುಂಬ ಇಷ್ಟವಾಯ್ತು. ಎಲ್ಲರೂ ಬೇರೆ ಬೇರೆ ಹಿನ್ನೆಲೆಯವರು ಬಂದವರು, ಎರಡು ತಂಡಗಳಾಗಿ ಆಡಿದ್ದು ನನಗೆ ಸಾಕಷ್ಟು ಖುಷಿ ಕೊಡ್ತು.

ಬಿಗ್‌ ಬಾಸ್‌ಗೆ ಧನ್ಯವಾದ

ಒಂದು ಅರ್ಧಮರ್ಧ ಶಿಲೆಯನ್ನು ತಂದು ಬಿಗ್‌ಬಾಸ್ ಮನೆಯಲ್ಲಿ ಬಿಡುತ್ತಾರೆ. ಬಿಗ್‌ಬಾಸ್ ವೇದಿಕೆ ಅವರನ್ನು ಪೂರ್ತಿ ಶಿಲ್ಪವಾಗಿ ಕೆತ್ತಿ ಹೊರಗೆ ಕಳಿಸುತ್ತಾರೆ. ಅವರಲ್ಲಿ ಕೆಲವರು ಆಚೆಹೋಗಿ ಒಡೆದುಹೋಗಿರುವುದೂ ಇರುತ್ತದೆ. ಕೆಲವು ಅವರವರ ಸ್ಥಾನ ಪಡೆದುಕೊಳ್ಳುತ್ತವೆ. ಬಿಗ್‌ಬಾಸ್ ವೇದಿಕೆ ಯಾರೇ ಬಂದಿದ್ದರೂ ಕೃತಜ್ಞತೆ ಇಟ್ಕೋಬೇಕು. ಯಾಕೆಂದರೆ ಒಂದು ತುತ್ತು ಅನ್ನ ತಿಂದರೂ ಅದರ ಋಣ ನಮ್ಮ ಮೇಲೆ ಇರುತ್ತದೆ. ಹಾಗಾಗಿ ಬಿಗ್‌ಬಾಸ್ ಧ್ವನಿಗೆ ನಾನು ಚಿರಋಣಿಯಾಗಿರುತ್ತೇನೆ. ಥ್ಯಾಂಕ್ಯೂ ಬಿಗ್‌ಬಾಸ್‌!! ಎಂದಿದ್ದಾರೆ ವರ್ತೂರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ