logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘‌ದೂರವಿದ್ದು ಧೂಪವಾಗ್ತಿಯೋ, ಹತ್ತಿರ ಹೋಗಿ ಹೇಸಿಗೆಯಾಗ್ತಿಯೋ?’ ಸ್ವಾಮೀಜಿ ಭವಿಷ್ಯ ಕೇಳಿ ದಂಗಾದ ಡ್ರೋಣ್ ಪ್ರತಾಪ್‌!

BBK 10: ‘‌ದೂರವಿದ್ದು ಧೂಪವಾಗ್ತಿಯೋ, ಹತ್ತಿರ ಹೋಗಿ ಹೇಸಿಗೆಯಾಗ್ತಿಯೋ?’ ಸ್ವಾಮೀಜಿ ಭವಿಷ್ಯ ಕೇಳಿ ದಂಗಾದ ಡ್ರೋಣ್ ಪ್ರತಾಪ್‌!

Jan 02, 2024 10:14 AM IST

google News

BBK 10: ‘ದೂರವಿದ್ದು ಧೂಪವಾಗ್ತಿಯೋ, ಹತ್ತಿರ ಹೋಗಿ ಹೇಸಿಗೆಯಾಗ್ತಿಯೋ?’ ಸ್ವಾಮೀಜಿ ಭವಿಷ್ಯ ಕೇಳಿ ದಂಗಾದ ಡ್ರೋಣ್ ಪ್ರತಾಪ್‌!

    • ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ‌ಡ್ರೋಣ್ ಪ್ರತಾಪ್ ‌ಭವಿಷ್ಯ ನುಡಿದಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.
BBK 10: ‘ದೂರವಿದ್ದು ಧೂಪವಾಗ್ತಿಯೋ, ಹತ್ತಿರ ಹೋಗಿ ಹೇಸಿಗೆಯಾಗ್ತಿಯೋ?’ ಸ್ವಾಮೀಜಿ ಭವಿಷ್ಯ ಕೇಳಿ ದಂಗಾದ ಡ್ರೋಣ್ ಪ್ರತಾಪ್‌!
BBK 10: ‘ದೂರವಿದ್ದು ಧೂಪವಾಗ್ತಿಯೋ, ಹತ್ತಿರ ಹೋಗಿ ಹೇಸಿಗೆಯಾಗ್ತಿಯೋ?’ ಸ್ವಾಮೀಜಿ ಭವಿಷ್ಯ ಕೇಳಿ ದಂಗಾದ ಡ್ರೋಣ್ ಪ್ರತಾಪ್‌!

BBK 10: ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್‌ಬಾಸ್‌ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ. ಅವರು ಯಾರ ಯಾರ ಬಗ್ಗೆ ಏನೇನು ಹೇಳಿದ್ದಾರೆ ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ಇದೆ.

ಬಿಗ್‌ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆ ಭವಿಷ್ಯ ಕೇಳಿ ಕೆಲ ಸ್ಪರ್ಧಿಗಳು ಪುಳಿಕಿತರಾದರೆ, ಇನ್ನು ಕೆಲವರು ದಂಗಾಗಿದ್ದಾರೆ. ಹಾಗಾದರೆ ಸದ್ಯ ಪ್ರೋಮೋದಲ್ಲಿ ಕಂಡಂತೆ, ಯಾರ ಭವಿಷ್ಯ ಹೇಗಿದೆ, ಇಲ್ಲಿದೆ ಮಾಹಿತಿ.

ವರ್ತೂರು ಸಂತೋಷ್ ಅವರನ್ನು ಕರೆದು, ‘ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು’ ಎಂದು ಹೇಳಿದ್ದಾರೆ. ಅದನ್ನು ವರ್ತೂರು ಒಪ್ಪಿಕೊಂಡಿದ್ದಾರೆ ಕೂಡ.

ನಮ್ರತಾ ಅವರ ಬಳಿ, ‘ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ನಮ್ರತಾ ಅವರ ಮುಖದಲ್ಲಿ ನಗುವರಳಿದೆ.

ಪ್ರತಾಪ್ ಅವರಿಗೆ ಮಾತ್ರ ಸಂಕಟಪಡುವಂಥ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಮನೆಯಿಂದ, ಕುಟುಂಬದಿಂದ ದೂರವೇ ಉಳಿದಿರುವ ಡ್ರೋನ್‌ ಪ್ರತಾಪ್‌, ಅದ್ಯಾವಾಗ ಅಪ್ಪ ಅಮ್ಮನ ಮಡಿಲು ಸೇರುತ್ತೇನೋ ಎಂದು ದಿನ ಎಣಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಗ್‌ ಮನೆಗೆ ಬಂದ ಹೆತ್ತವರ ಬಳಿಯೂ, ನಿಮ್ಮ ಜತೆಗೇ ಇರುತ್ತೇನೆ ಎಂದು ಪ್ರತಾಪ್‌ ಹೇಳಿದ್ದರು. ಆದರೆ, ಅವರ ಬಯಕೆಗೆ ಇದೀಗ ಗುರೂಜಿ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

‘ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.

ಉಳಿದ ಸ್ಪರ್ಧಿಗಳ ಹಣೆಬರಹದಲ್ಲಿ ಏನು ಬರೆದಿದೆ? ಅವರ ಮಾತುಗಳು ಮನೆಯೊಳಗಿನ ಸಮತೋಲವನ್ನು ಹದಗೆಡಿಸುತ್ತದೆಯೇ? ಈ ಎಲ್ಲವನ್ನೂ ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಬೇಕು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ