ಬಿಗ್ ಬಾಸ್ ಕನ್ನಡ ಸೀಸನ್ 11: ನಾಲ್ಕನೇ ಸ್ಪರ್ಧಿಯಾಗಿ ಅದ್ಧೂರಿ ಎಂಟ್ರಿ ಕೊಟ್ಟ ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್
Sep 29, 2024 07:52 PM IST
ಬಿಗ್ ಬಾಸ್ ಕನ್ನಡ ಸೀಸನ್ 11: ಅದ್ಧೂರಿ ಎಂಟ್ರಿ ಕೊಟ್ಟ ನಟಿ ಗೌತಮಿ ಜಾಧವ್
- Bigg boss Kannada Season 11 contestants List: ಸತ್ಯ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಗೌತಮಿ ಜಾಧವ್ ಬಿಗ್ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿದ್ದಾರೆ. ಕಿರುತೆರೆ ನಟಿಯಾಗಿ ಜನಪ್ರಿಯರಾಗಿರುವ ಅವರು ದೊಡ್ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಗೌತಮಿ ಜಾಧವ್ ಅವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಕಳೆದ ಬಾರಿಯ ಸೀಸನ್ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಶನಿವಾರ (ಸೆ 28) ಉತ್ತರ ಸಿಕ್ಕಿತ್ತು. 16 ಮಂದಿ ಸ್ಪರ್ಧಿಗಳ ಪೈಕಿ ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿತ್ತು. ಅವರಲ್ಲಿ ಒಬ್ಬರಾದ ಸತ್ಯ ಸೀರಿಯಲ್ ನಾಯಕಿ ನಟಿ ಗೌತಮಿ ಜಾಧವ್ (Gouthami Jadav), ಇದೀಗ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ಲಾಯರ್ ಕೆ.ಎನ್.ಜಗದೀಶ್, ಹಿಂದುತ್ವದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಮನೆಗೆ ಕಾಲಿಡಬೇಕಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ‘ಸತ್ಯ’ ಭಾರಿ ಜನಪ್ರಿಯವಾಗಿತ್ತು. ಈ ಸೀರಿಯಲ್ ಇತ್ತೀಚೆಗಷ್ಟೇ ಮುಕ್ತಾಯ ಕಂಡಿತ್ತು. ಧಾರಾವಾಹಿಯ ಕಥಾನಾಯಕಿ, ಟಾಮ್ ಬಾಯ್ಯಾಗಿ ಗುರುತಿಸಿಕೊಂಡಿದ್ದ ಸತ್ಯ, ಬಿಗ್ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಪಡೆದಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಅವರು ಅಮುಲ್ ಬೇಬಿಯ ಮಡದಿಯಾಗಿ ಖಡಕ್ ಪಾತ್ರದಲ್ಲಿ ಮಿಂಚಿದ್ದರು. ಕೆಲವೊಂದು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ.
ಸ್ವರ್ಗಕ್ಕೆ ಎಂಟ್ರಿ ಪಡೆದ ಭವ್ಯಾ, ಯಮುನಾ, ಧನರಾಜ್ ಆಚಾರ್
ನಟಿ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರು ಬಿಗ್ಬಾಸ್ ಮನೆಗೆ ಮೊದಲ ಎರಡು ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ನಂತರ ಬರುವ ಸ್ಪರ್ಧಿಗಳನ್ನು ಸ್ವರ್ಗ-ಅಥವಾ ನರಕಕ್ಕೆ ಕಳುಹಿಸುವ ವಿಶೇಷ ಅಧಿಕಾರ ಅವರಿಗೆ ನೀಡಲಾಗಿದೆ. ಅವರ ಬೆನ್ನಲ್ಲೇ ಮೂರನೇ ಸ್ಪರ್ಧಿಯಾಗಿ ಬಂದ ಯೂಟ್ಯೂಬರ್ ಧನರಾಜ್ ಆಚಾರ್ಯ ಕೂಡಾ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?
ಕಲರ್ಸ್ ಕನ್ನಡ ನಡೆಸುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು kannada.hindustantimes.com ಜಾಲತಾಣಕ್ಕೆ ಭೇಟಿ ನೀಡಿ.