logo
ಕನ್ನಡ ಸುದ್ದಿ  /  ಮನರಂಜನೆ  /  Taapsee Pannu Breaks Silence: ತಾಳ್ಮೆ ಕಳೆದುಕೊಂಡ ತಾಪ್ಸೀ ಪನ್ನು; ಫೋಟೋಗ್ರಾಫರ್‌ ವರ್ತನೆಗೆ ಕೆಂಡಾಮಂಡಲ.. ವಿಡಿಯೋ ನೋಡಿ...

Taapsee Pannu Breaks Silence: ತಾಳ್ಮೆ ಕಳೆದುಕೊಂಡ ತಾಪ್ಸೀ ಪನ್ನು; ಫೋಟೋಗ್ರಾಫರ್‌ ವರ್ತನೆಗೆ ಕೆಂಡಾಮಂಡಲ.. ವಿಡಿಯೋ ನೋಡಿ...

Aug 27, 2022 11:15 AM IST

google News

ತಾಳ್ಮೆ ಕಳೆದುಕೊಂಡ ತಾಪ್ಸೀ ಪನ್ನು; ಫೋಟೋಗ್ರಾಫರ್‌ ವರ್ತನೆಗೆ ಕೆಂಡಾಮಂಡಲ.. ವಿಡಿಯೋ ನೋಡಿ...

    • ಯಾವುದಾದರೂ ಕಾರ್ಯಕ್ರಮವೋ ಅಥವಾ ಸಿನಿಮಾ ಪ್ರಚಾರವೋ… ಸಿನಿಮಾ ಸೆಲೆಬ್ರಿಟಿಗಳು ಬರುತ್ತಿದ್ದಾರೆ ಎಂದರೆ ಅಲ್ಲಿ ಸಹಜವಾಗಿ ಜನಜಂಗುಳಿ ಕೊಂಚ ಹೆಚ್ಚೇ ಇರುತ್ತದೆ. ಕೆಲವೊಮ್ಮೆ ಫೋಟೋಗಳಿಗಾಗಿ ಸೆಲೆಬ್ರಿಟಿಗಳ ಮೇಲೆ ಮುಗಿಬಿದ್ದ ಉದಾಹರಣೆಗಳೂ ಇವೆ. ಅನುಚಿತವಾಗಿ ವರ್ತಿಸಿದ ಘಟನೆಗಳೂ ನಡೆದಿವೆ.
ತಾಳ್ಮೆ ಕಳೆದುಕೊಂಡ ತಾಪ್ಸೀ ಪನ್ನು; ಫೋಟೋಗ್ರಾಫರ್‌ ವರ್ತನೆಗೆ ಕೆಂಡಾಮಂಡಲ.. ವಿಡಿಯೋ ನೋಡಿ...
ತಾಳ್ಮೆ ಕಳೆದುಕೊಂಡ ತಾಪ್ಸೀ ಪನ್ನು; ಫೋಟೋಗ್ರಾಫರ್‌ ವರ್ತನೆಗೆ ಕೆಂಡಾಮಂಡಲ.. ವಿಡಿಯೋ ನೋಡಿ... (Instagram/ Saroj Maharaa)

ಯಾವುದಾದರೂ ಕಾರ್ಯಕ್ರಮವೋ ಅಥವಾ ಸಿನಿಮಾ ಪ್ರಚಾರವೋ ಸಿನಿಮಾ ಸೆಲೆಬ್ರಿಟಿಗಳು ಬರುತ್ತಿದ್ದಾರೆ ಎಂದರೆ ಅಲ್ಲಿ ಸಹಜವಾಗಿ ಜನಜಂಗುಳಿ ಕೊಂಚ ಹೆಚ್ಚೇ ಇರುತ್ತದೆ. ಕೆಲವೊಮ್ಮೆ ಫೋಟೋಗಳಿಗಾಗಿ ಸೆಲೆಬ್ರಿಟಿಗಳ ಮೇಲೆ ಬಿದ್ದ ಉದಾಹರಣೆಗಳೂ ಇವೆ. ಅನುಚಿತವಾಗಿ ವರ್ತಿಸಿದ ಘಟನೆಗಳೂ ನಡೆದಿವೆ.

ಇದೀಗ ಬಾಲಿವುಡ್‌ ನಟಿ ತಾಪ್ಸೀ ಪನ್ನು ಸಹ ಅಂಥದ್ದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ದೋಬಾರಾ ಸಿನಿಮಾ ಪ್ರಚಾರಕ್ಕೆಂದು ಕಾಲೇಜೊಂದಕ್ಕೆ ತೆರಳಿದ್ದಾಗ, ಫೋಟೋಗ್ರಾಫರ್‌ಗಳ ವರ್ತನೇ ಕಂಡು ತಾಪ್ಸೀ ಗರಂ ಆಗಿದ್ದರು. ಆ ಗರಂ ಆದ ವಿಡಿಯೋ ಸೋಷಿಯಲ್‌ ಮೀಡಿಯದಲೀಗ ಹರಿದಾಡುತ್ತಿದ್ದು, ಅದಕ್ಕೆ ನಟಿಯೂ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗಾದರೆ ಅಷ್ಟಕ್ಕೂ ಆಗಿದ್ದೇನು?

ಕೆಲ ದಿನಗಳ ಹಿಂದೆ ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ದೋಬಾರಾ ಸಿನಿಮಾ ಪ್ರಚಾರಕ್ಕೆಂದು ತಾಪ್ಸೀ ಪನ್ನು ತೆರಳಿದ್ದರು. ಸರಿಯಾದ ಸಮಯಕ್ಕೆ ಬಾರದ ನಟಿಯನ್ನು ಫೋಟೋಗ್ರಾಫರ್‌ಗಳು ಪ್ರಶ್ನೆ ಮಾಡಿದ್ದರು. ಇದ್ಯಾವುದಕ್ಕೂ ಉತ್ತರ ನೀಡದೇ ಹಾಗೇ ತೆರಳಿದ ನಟಿಯನ್ನು ಫೋಟೋಗ್ರಾಫರ್‌ಗಳು ಮೇಲಿಂದ ಮೇಲೆ ಅದೇ ಪ್ರಶ್ನೆಯನ್ನು ಕೇಳಿದರು. ಇದರಿಂದ ತಾಳ್ಮೆ ಕಳೆದುಕೊಂಡ ತಾಪ್ಸೀ, ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವಾಗ್ವಾದದ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ನಟಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಬಗ್ಗೆ ಬಾಲಿವುಡ್ ಹಂಗಾಮಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ, "ಅವರಿಂದ ನನಗೆ ಗೌರವ ಸಿಕ್ಕರೆ ನಾನು ಗೌರವಯುತವಾಗಿಯೇ ಮಾತನಾಡುವೆ. ಅವರ ಮಾತಿನ ಧಾಟಿಯೇ ಬೇರೆ ಇದ್ದಿದ್ದಕ್ಕೆ, ನಾನೂ ಕೊಂಚ ಗರಂ ಆಗಬೇಕಾಯಿತು. ಸಾರ್ವಜನಿಕ ವ್ಯಕ್ತಿ ಮತ್ತು ಸಾರ್ವಜನಿಕ ಆಸ್ತಿ ಎರಡಕ್ಕೂ ವ್ಯತ್ಯಾಸವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಜನ ಒಮ್ಮೊಮ್ಮೆ ಅದನ್ನು ಮರೆತುಬಿಡುತ್ತಾರೆ" ಎಂದಿದ್ದಾರೆ.

ನನ್ನ ಮನೆಯಲ್ಲಿಯೂ ಆ ರೀತಿ ಗದರುವುದಿಲ್ಲ..

"ಆ ಸಂದರ್ಭದಲ್ಲಿ ಅವರ ಮಾತಿನ ಟೋನ್‌ ಹೇಗಿರುತ್ತಿತ್ತು ಎಂಬುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಆ ಧಾಟಿಯಲ್ಲಿ ಮಾತನಾಡಿದ್ದು, ನನಗೆ ಅವಮಾನ ಎನಿಸಿತು. ನನ್ನ ಮನೆಯಲ್ಲಿ ಕುಟುಂಬದವರೂ ಆ ರೀತಿಯಲ್ಲಿ ನನ್ನನ್ನು ಕರೆಯುವುದಿಲ್ಲ, ಗದರಿಸುವುದಿಲ್ಲ. ಅಲ್ಲಿ ನಡೆದಿದ್ದನ್ನು ಹೇಗೆ ವಿವರಣೆ ಮಾಡಬೇಕು ಎಂದೇ ನನಗೆ ಗೊತ್ತಾಗುತ್ತಿಲ್ಲ. ನನಗೆ ಅಂತ ಒಂದು ಶೆಡ್ಯೂಲ್‌ ನೀಡಿದ್ದಾರೆ. ನಾನು ಅದರ ಪ್ರಕಾರ ನಡೆದುಕೊಳ್ಳುತ್ತೇನೆ. ಹೀಗಿರುವಾಗ ನಾನೇಕೇ ಈ ರೀತಿಯ ಮಾತುಗಳನ್ನು ಕೇಳಬೇಕು. ನಾನೇನು ಕ್ರೈಂ ಮಾಡಿದ್ದೇನಾ?" ಎಂದು ಪ್ರಶ್ನಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ