logo
ಕನ್ನಡ ಸುದ್ದಿ  /  ಮನರಂಜನೆ  /  ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಉರ್ಫಿ ಜಾವೇದ್‌ ಮನೆಯಲ್ಲಿ ಹೋಮ ಹವನ; ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಉರ್ಫಿ ಜಾವೇದ್‌ ಮನೆಯಲ್ಲಿ ಹೋಮ ಹವನ; ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

Jan 22, 2024 02:41 PM IST

google News

ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಉರ್ಫಿ ಜಾವೇದ್‌ ಮನೆಯಲ್ಲಿ ಹೋಮ ಹವನ; ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

    • ಸೋಷಿಯಲ್‌ ಮೀಡಿಯಾದಲ್ಲಿ ತುಂಡುಡುಗೆಯಲ್ಲಿ ಅರೆಬೆತ್ತಲೆ ಫೋಟೋ, ವಿಡಿಯೋ ಹಂಚಿಕೊಳ್ಳುತ್ತ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ಸೆಲೆಬ್ರಿಟಿ ಎಂದರೆ ಅದು ಉರ್ಫಿ ಜಾವೇದ್‌. ಈಗ ಇದೇ ಬೆಡಗಿ ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ, ತಮ್ಮ ಮುಂಬೈನ ಮನೆಯಲ್ಲಿ ಹೋಮ ಹವನ ನೆರವೇರಿಸಿ, ರಾಮನ ಜಪ ಮಾಡಿದ್ದಾರೆ. 
ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಉರ್ಫಿ ಜಾವೇದ್‌ ಮನೆಯಲ್ಲಿ ಹೋಮ ಹವನ; ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು
ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಉರ್ಫಿ ಜಾವೇದ್‌ ಮನೆಯಲ್ಲಿ ಹೋಮ ಹವನ; ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

Ayodhya Ram Mandir: ಸೋಷಿಯಲ್‌ ಮೀಡಿಯಾದಲ್ಲಿ ಬೋಲ್ಡ್‌ ಫೋಟೋ ವಿಡಿಯೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಿದ್ದ ಬಾಲಿವುಡ್‌ನ ಸೆಲೆಬ್ರಿಟಿ ಉರ್ಫಿ ಜಾವೇದ್‌ ಇದೀಗ, ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದರೆ, ಇತ್ತ ಉರ್ಫಿ ತಮ್ಮ ಮನೆಯಲ್ಲೂ ಹೋಮ ಹವನದ ಮೂಲಕ ರಾಮ ಜಪ ಮಾಡಿದ್ದಾರೆ ಉರ್ಫಿ. ಈ ವಿಶೇಷ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಮೈಮಾಟ ಪ್ರದರ್ಶಿಸುತ್ತ ಸದಾ ಟೀಕೆಯನ್ನೇ ಎದುರಿಸುತ್ತ, ಟ್ರೋಲ್‌ಗೆ ಆಹಾರವಾಗುತ್ತಿದ್ದ ಉರ್ಫಿ ಜಾವೇದ್‌, ಈಗ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಿಮಿತ್ತ ಮುಂಬೈನ ತಮ್ಮ ಮನೆಯಲ್ಲಿ ರಾಮ ಜಪ ಮಾಡಿದ್ದಾರೆ. ಮನೆಗೆ ಅರ್ಚಕರನ್ನು ಕರೆಸಿ, ಹೋಮ, ಹವನ ಕಾರ್ಯ ನೆರವೇರಿಸಿದ್ದಾರೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರಿಂದಲೂ ಮೆಚ್ಚುಗೆ ಜತೆಗೆ ನೆಗೆಟಿವ್‌ ಕಾಮೆಂಟ್‌ಗಳೂ ಹರಿದು ಬಂದಿವೆ.

ಕಡು ನೀಲಿ ಬಣ್ಣದ ಬ್ಲೂ ಸೂಟ್- ಸಲ್ವಾರ್ ಧರಿಸಿ ಸರಳವಾಗಿ ಆಪ್ತರ ಜತೆ ಸೇರಿ ಹಮನದಲ್ಲಿ ಭಾಗವಹಿಸಿದ್ದಾರೆ ಉರ್ಫಿ ಜಾವೇದ್. ಹಿನ್ನೆಲೆಯಲ್ಲಿ 'ರಾಮ್ ಆಯೇಂಗೆ ತೊ ಅಂಗನಾ ಸಜೌಂಗಿ' ಹಾಡೂ ಗುನುಗುತ್ತಿದೆ. ಈ ವಿಡಿಯೋ ಜತೆಗೆ "ಅಭಿನಂದನೆಗಳು, ಎಲ್ಲರೂ ಈ ದಿನವನ್ನು ಸೆಲೆಬ್ರೇಟ್‌ ಮಾಡುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಇತ್ತ ನೆಟ್ಟಿಗರು ಮೆಚ್ಚುಗೆಯ ಮಹಾಮಳೆಯನ್ನೇ ಸುರಿಸಿದ್ದಾರೆ.

ನೆಟ್ಟಿಗೆ ಪ್ರತಿಕ್ರಿಯೆ

- "ಜೈ ಶ್ರೀ ರಾಮ್, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ"

- "ಇದೇ ಮೊದಲ ಸಲ ಉರ್ಫಿ ಅವರ ವಿಡಿಯೋ ಕಂಡು ನಾನು ಇಂಪ್ರೆಸ್‌ ಆಗಿದ್ದೇನೆ"

- "ಉರ್ಫಿ ಮೇಲೆ ಗೌರವ ಹೆಚ್ಚಾಗುತ್ತಿದೆ. ಈಕೆ ಇತರರಿಗಿಂತ ಭಿನ್ನ"

- ನಮಗೆ ಉರ್ಫಿ ರೀತಿಯ ಅಪ್ಪಟ ಭಾರತೀಯಳು ಬೇಕು. ಕಟ್ಟರ್‌ ಮುಸ್ಲಿಂ, ಕಟ್ಟರ್‌ ಹಿಂದೂ ಬೇಡ"

"ನಿಮ್ಮನ್ನು ನೋಡಿದರೆ ವಿವಿಧತೆಯಲ್ಲಿ ಏಕತೆ" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ