Karan Johar Quits Twitter: 'ಶಾಂತಿ...' ಸಲುವಾಗಿ ಟ್ವಿಟರ್‌ಗೆ ಗುಡ್‌ಬೈ ಹೇಳಿದ ಕರಣ್ ಜೋಹರ್; ನೆಟ್ಟಿಗರಿಂದ ಬಗೆ ಬಗೆ ಕಮೆಂಟ್..
Oct 11, 2022 09:30 AM IST
'ಶಾಂತಿ...' ಸಲುವಾಗಿ ಟ್ವಿಟರ್‌ಗೆ ಗುಡ್‌ಬೈ ಹೇಳಿದ ಕರಣ್ ಜೋಹರ್; ನೆಟ್ಟಿಗರಿಂದ ಬಗೆ ಬಗೆ ಕಮೆಂಟ್..
- ಕರಣ್ ಜೋಹರ್ ಸಿನಿಮಾ ಸೇರಿ ಹಲವು ವಿಚಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದೀಗ ಇದೆಲ್ಲದರಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಅಂದರೆ, ಟ್ವಿಟರ್‌ಗೆ ಗುಡ್ ಬೈ ಹೇಳಿದ್ದಾರೆ!
ಕರಣ್ ಜೋಹರ್, ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ಸಿನಿಮಾಗಳ ಜತೆಗೆ ವಿವಾದದ ವಿಚಾರವಾಗಿಯೂ ಇವರು ಸದಾ ಸುದ್ದಿಯಲ್ಲಿರುತ್ತಾರೆ. ಒಮ್ಮೊಮ್ಮೆ ತಾವು ಏನೂ ಮಾಡದಿದ್ದರೂ, ಕೆಲವು ವಿವಾದಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿರುತ್ತದೆ.
ಟ್ವಿಟರ್‌ನಲ್ಲಿ ಆಗಾಗ ಅವರ ಹೆಸರು ಟ್ರೆಂಡಿಂಗ್‌ನಲ್ಲಿರುತ್ತವೆ. ಇತ್ತ ತಮ್ಮ ಸಿನಿಮಾ ಸೇರಿ ಹಲವು ವಿಚಾರಗಳನ್ನೂ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದೀಗ ಇದೆಲ್ಲದರಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಅಂದರೆ, ಟ್ವಿಟರ್‌ಗೆ ಗುಡ್ ಬೈ ಹೇಳಿದ್ದಾರೆ!
ಕರಣ್ ಜೋಹರ್ ಟ್ವಿಟರ್‌ಗೆ ಗುಡ್‌ಬೈ ಹೇಳುವುದಕ್ಕೂ ಮೊದಲು, ಕೊನೆಯ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಿದ್ದಾರೆ. 'ಮತ್ತಷ್ಟು ಪಾಸಿಟಿವ್ ಎನರ್ಜಿ ಪಡೆಯುವುದರ ಸಲುವಾಗಿ, ನಾನು ಟ್ವಿಟರ್ ತ್ಯಜಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆ. ಗುಡ್ ಬೈ ಟ್ವಿಟರ್!" ಎಂದು ಹೇಳಿ ಟ್ವಿಟರ್‌ನಿಂದ ಹಿಂದೆ ಸರಿದಿದ್ದಾರೆ.
ಕರಣ್ ಹೀಗೆ ಟ್ವಿಟರ್ ತ್ಯಜಿಸುತ್ತಿದ್ದಂತೆ, ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ಈ ರೀತಿಯ ದಿಢೀರ್ ನಿರ್ಧಾರದ ಹಿಂದಿನ ತಾತ್ಪರ್ಯವೇನು ಎಂದು ಹುಡುಕಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಕಾಂಟ್ರವರ್ಸಿ ಆಗಿಲ್ಲ. ಆದರೂ, ಕರಣ್ ಟ್ವಿಟರ್‌ನಿಂದ ಹಿಂದೆ ಸರಿದಿದ್ದೇಕೆ? ಎಂದು ಕಮೆಂಟ್ ಮಾಡುತ್ತಿದ್ದಾರೆ.
'ಸರ್, ನಿಮಗೆ ಇಡೀ ಭಾರತದಲ್ಲಿ ಶಾಂತಿ ಮತ್ತು ಸಂತೋಷ ಬೇಕಿದ್ದರೆ, ಇಂಟರ್‌ನೆಟ್‌ನಿಂದ ಕಾಫಿ ವಿತ್ ಕರಣ್ ಅನ್ನೋ ಕಸವನ್ನೂ ತೆಗೆದುಹಾಕಿ" ಎಂದಿದ್ದಾರೆ. ಮತ್ತೊಬ್ಬರು 'ಈ ಖಾತೆಯನ್ನು ಕ್ಲೋಸ್ ಮಾಡಿ, ಯಾರಿಗೂ ಗೊತ್ತಾಗದ ಅಜ್ಞಾತ ಖಾತೆಯನ್ನು ಬಳಸುತ್ತಾರೆ' ಎಂದು ಬರೆದಿದ್ದಾರೆ.
ಇತ್ತ ಟ್ವಿಟರ್ ತ್ಯಜಿಸಿರುವ ಕರಣ್, ಇನ್‌ಸ್ಟಾಗ್ರಾಂನಲ್ಲಿ ಇನ್ನೂ ಸಕ್ರಿಯರಿದ್ದಾರೆ. ಆ ವೇದಿಕೆ ಮೂಲಕವೇ ತಮ್ಮ ಸಿನಿಮಾ ಮತ್ತು ಇತರ ವಿಚಾರಗಳನ್ನು ಅಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.