logo
ಕನ್ನಡ ಸುದ್ದಿ  /  ಮನರಂಜನೆ  /  ಅಲ್ಲಿ ನಡೆದಿದ್ದು ನನ್ನ ಮೇಲಿನ ವೈವಾಹಿಕ ಅತ್ಯಾಚಾರವೇ ಹೊರತು ಸೆಕ್ಸ್‌ ಸೀನ್‌ ಅಲ್ಲ! ಮೆಹ್ರೀನ್‌ ಪಿರ್ಜಾದಾ ಸ್ಪಷ್ಟನೆ

ಅಲ್ಲಿ ನಡೆದಿದ್ದು ನನ್ನ ಮೇಲಿನ ವೈವಾಹಿಕ ಅತ್ಯಾಚಾರವೇ ಹೊರತು ಸೆಕ್ಸ್‌ ಸೀನ್‌ ಅಲ್ಲ! ಮೆಹ್ರೀನ್‌ ಪಿರ್ಜಾದಾ ಸ್ಪಷ್ಟನೆ

Oct 18, 2023 12:55 PM IST

google News

ಅಲ್ಲಿ ನಡೆದಿದ್ದು ನನ್ನ ಮೇಲಿನ ವೈವಾಹಿಕ ಅತ್ಯಾಚಾರವೇ ಹೊರತು ಸೆಕ್ಸ್‌ ಸೀನ್‌ ಅಲ್ಲ; ಮೆಹ್ರೀನ್‌ ಪಿರ್ಜಾದಾ ಸ್ಪಷ್ಟನೆ

    • Sultan of Delhi web series: ಸುಲ್ತಾನ್‌ ಆಫ್‌ ದೆಹಲಿ ವೆಬ್‌ ಸಿರೀಸ್‌ನ ದೃಶ್ಯವೊಂದು ಇದೀಗ ನಟಿಯ ಬೇಸರಕ್ಕೆ ಕಾರಣವಾಗಿದೆ. ವೈವಾಹಿಕ ಅತ್ಯಾಚಾರದ ದೃಶ್ಯದಲ್ಲಿ ಕಾಣಿಸಿಕೊಂಡ ದೃಶ್ಯವನ್ನು ಸೆಕ್ಸ್‌ ಸೀನ್‌ ಎಂದು ಸಂಬೋಧಿಸುತ್ತಿರುವುದರ ಬಗ್ಗೆ ನಟಿ ಮೆಹ್ರೀನ್‌ ಸ್ಪಷ್ಟನೆ ನೀಡಿದ್ದಾರೆ.  
ಅಲ್ಲಿ ನಡೆದಿದ್ದು ನನ್ನ ಮೇಲಿನ ವೈವಾಹಿಕ ಅತ್ಯಾಚಾರವೇ ಹೊರತು ಸೆಕ್ಸ್‌ ಸೀನ್‌ ಅಲ್ಲ; ಮೆಹ್ರೀನ್‌ ಪಿರ್ಜಾದಾ ಸ್ಪಷ್ಟನೆ
ಅಲ್ಲಿ ನಡೆದಿದ್ದು ನನ್ನ ಮೇಲಿನ ವೈವಾಹಿಕ ಅತ್ಯಾಚಾರವೇ ಹೊರತು ಸೆಕ್ಸ್‌ ಸೀನ್‌ ಅಲ್ಲ; ಮೆಹ್ರೀನ್‌ ಪಿರ್ಜಾದಾ ಸ್ಪಷ್ಟನೆ

Mehreen Pirzada: ಮೆಹ್ರೀನ್ ಪಿರ್ಜಾದಾ ತೆಲುಗಿನ ಜನಪ್ರಿಯ ನಟಿ. ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಟಾಲಿವುಡ್‌ನಲ್ಲಿ ಕೃಷ್ಣಗಾದಿ ವೀರ ಪ್ರೇಮ ಕಥಾ, ಎಫ್2, ಎಫ್3, ರಾಜಾ ದಿ ಗ್ರೇಟ್, ಮಹಾನುಭಾವುಡು ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೌತ್‌ ಇಂಡಿಯನ್‌ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇದೇ ನಟಿ ಸುಲ್ತಾನ್‌ ಆಫ್‌ ದೆಹಲಿ ಮೂಲಕ ವೆಬ್‌ಸಿರೀಸ್‌ ಲೋಕಕ್ಕೂ ಕಾಲಿರಿಸಿದ್ದರು. ಇದೀಗ ಇದೇ ಸಿರೀಸ್‌ ಬಗ್ಗೆ ಮಾತನಾಡಿದ್ದಾರೆ.

ಸುಲ್ತಾನಾ ಆಫ್‌ ದೆಹಲಿ ಸಿರೀಸ್‌ ಒಂದು ರೆಟ್ರೋ ಶೈಲಿಯ ವೆಬ್‌ ಸಿರೀಸ್‌. ಈ ಸರಣಿಯಲ್ಲಿ ಮೆಹ್ರೀನ್ ಕೆಲವು ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ದೃಶ್ಯಗಳನ್ನೇ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಬೇಸರಗೊಂಡ ಮೆಹ್ರೀನ್‌, ಸುದೀರ್ಘ ಪೋಸ್ಟ್‌ ಹಂಚಿಕೊಳ್ಳುವ ಮೂಲಕ, ಸುದ್ದಿಯನ್ನು ಬೇರೆ ರೀತಿಯಲ್ಲಿ ತಿರುಚಿದವರಿಗೆ, ಬೇರೆ ರೀತಿ ಅರ್ಥೈಸಿಕೊಂಡವರಿಗೆ ಉತ್ತರ ನೀಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಸುಲ್ತಾನ್‌ ಆಫ್‌ ದೆಹಲಿ ಸಿರೀಸ್‌ನಲ್ಲಿ ಪತಿ ಮತ್ತು ಪತ್ನಿ ನಡುವಿನ ಆಪ್ತ ದೃಶ್ಯಗಳಿವೆ. ಮೊದಲ ರಾತ್ರಿಯ ಸನ್ನಿವೇಶಗಳಿವೆ. ಆದರೆ, ಸಿರೀಸ್‌ ನೋಡಿದಾಗ ಈ ದೃಶ್ಯಗಳು ವೈವಾಹಿಕ ಅತ್ಯಾಚಾರ ಎಂಬುದು ತಿಳಿಯುತ್ತದೆ. ಇದೇ ದೃಶ್ಯಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಸೆಕ್ಸ್‌ ಸೀನ್‌ಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗೆ ಅರ್ಥೈಸಿಕೊಳ್ಳುತ್ತಿರುವುದರ ಬಗ್ಗೆ ನಟಿ ಮೆಹ್ರೀನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹೀಗಿದೆ ಮೆಹ್ರೀನ್‌ ಪೋಸ್ಟ್‌..

"ಇತ್ತೀಚೆಗೆ ನಾನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸುಲ್ತಾನ್ ಆಫ್ ದೆಹಲಿ ಎಂಬ ವೆಬ್ ಸರಣಿಯ ಮೂಲಕ OTTಗೆ ಪದಾರ್ಪಣೆ ಮಾಡಿದ್ದೇನೆ. ನನ್ನ ಅಭಿಮಾನಿಗಳು ಸರಣಿಯನ್ನು ನೋಡಿ ಆನಂದಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಸ್ಕ್ರಿಪ್ಟ್‌ಗಳು ನಿಮ್ಮ ಸ್ವಂತ ನೈತಿಕತೆಗೆ ವಿರುದ್ಧವಾಗಿ ಹೋಗುತ್ತವೆ. ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದರಿಂದ, ನಟನೆಯೇ ಒಂದು ಕಲೆ ಎಂದು ಭಾವಿಸಿದ್ದರಿಂದ ಕೆಲವೊಂದಿಷ್ಟು ಬೇಡದ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಲೇಬೇಕಾಗುತ್ತದೆ. ನಾನು ಮಾಡಿದ್ದೂ ಅದನ್ನೇ.

ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ..

"ಸುಲ್ತಾನ್‌ ಆಫ್‌ ದೆಹಲಿ ಸಿರೀಸ್‌ನಲ್ಲಿ ಕ್ರೂರ ವೈವಾಹಿಕ ಅತ್ಯಾಚಾರವನ್ನು ಚಿತ್ರಿಸುವ ದೃಶ್ಯವಿತ್ತು. ವೈವಾಹಿಕ ಅತ್ಯಾಚಾರದಂತಹ ಗಂಭೀರ ಸಮಸ್ಯೆಯನ್ನು ಮಾಧ್ಯಮಗಳಲ್ಲಿ ಅನೇಕರು ಸೆಕ್ಸ್ ಸೀನ್ ಎಂದು ವಿವರಿಸಿರುವುದನ್ನು ನೋಡಿ ನನಗೆ ಬೇಸರವಾಯಿತು. ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಈ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವು ಮಾಧ್ಯಮಗಳು ಮತ್ತು ನೆಟ್ಟಿಗರು ಇದೇ ವಿಚಾರವಾಗಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರಿಗೂ ಅಕ್ಕ- ತಂಗಿಯರು, ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದೂ ಮೆಹ್ರೀನ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ