logo
ಕನ್ನಡ ಸುದ್ದಿ  /  ಮನರಂಜನೆ  /  Abhishek Bachchan: ನನ್ನ ಪ್ರೀತಿಯ ಅ... ನೀನು ರೀಚ್‌ಔಟ್‌ ಆಗು, ಕೈ ಹಿಡಿಯಲು ನಾನಿದ್ದೇನೆ; ಅಭಿಷೇಕ್‌ ಬಚ್ಚನ್‌ ಹೃದಯಸ್ಪರ್ಶಿ ಬರಹ

Abhishek Bachchan: ನನ್ನ ಪ್ರೀತಿಯ ಅ... ನೀನು ರೀಚ್‌ಔಟ್‌ ಆಗು, ಕೈ ಹಿಡಿಯಲು ನಾನಿದ್ದೇನೆ; ಅಭಿಷೇಕ್‌ ಬಚ್ಚನ್‌ ಹೃದಯಸ್ಪರ್ಶಿ ಬರಹ

Praveen Chandra B HT Kannada

Dec 06, 2023 03:25 PM IST

google News

ಅಭಿಷೇಕ್‌ ಬಚ್ಚನ್‌ಸೋದರಳಿಯ ಆಗಸ್ತ್ಯನ ಸಿನಿಮಾ ಪ್ರೀಮಿಯರ್‌ನಲ್ಲಿ ಬಚ್ಚನ್‌ ಕುಟುಂಬ

  • Abhishek Bachchan: ಕರಾವಳಿ ಮೂಲದ ಐಶ್ವರ್ಯಾ ರೈ ಪತಿ ಅಭಿಷೇಕ್‌ ಬಚ್ಚನ್‌ ತನ್ನ ಸೋದರಳಿಯ ಆಗಸ್ತ್ಯ ನಂದನ ಮುಂದಿನ ಸಿನಿಮಾಕ್ಕೆ ಶುಭ ಹಾರೈಸಿದ್ದು, ಪ್ರೀತಿಯ ಒಂದೆರಡು ಸಾಲುಗಳನ್ನು ಬರೆದಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಅಭಿಷೇಕ್‌ ಬಚ್ಚನ್‌ಸೋದರಳಿಯ ಆಗಸ್ತ್ಯನ ಸಿನಿಮಾ ಪ್ರೀಮಿಯರ್‌ನಲ್ಲಿ ಬಚ್ಚನ್‌ ಕುಟುಂಬ
ಅಭಿಷೇಕ್‌ ಬಚ್ಚನ್‌ಸೋದರಳಿಯ ಆಗಸ್ತ್ಯನ ಸಿನಿಮಾ ಪ್ರೀಮಿಯರ್‌ನಲ್ಲಿ ಬಚ್ಚನ್‌ ಕುಟುಂಬ (AFP)

ಬೆಂಗಳೂರು: ನಟ ಅಭಿಷೇಕ್‌ ಬಚ್ಚನ್‌ ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಹೃದಯಸ್ಪರ್ಶಿಯಾಗಿ ಒಂದೆರಡು ವಾಕ್ಯಗಳನ್ನು ಬರೆದಿದ್ದಾರೆ. ತನ್ನ ಸೋದರಳಿಯನ ಮುಂದಿನ ಸಿನಿಮಾದ ಕುರಿತು ಅವರು ಈ ಮಾತು ಹೇಳಿದ್ದಾರೆ. ಆಗಸ್ತ್ಯ ಬಚ್ಚನ್‌ ಯಾರಂದು ನಿಮಗೆ ಸಂದೇಹ ಇರಬಹುದು. ಇವರು ಶ್ವೇತಾ ಬಚ್ಚನ್‌ ಸುಪುತ್ರ. ಶ್ವೇತಾ ಬಚ್ಚನ್‌ ಯಾರೆಂದು ನಿಮಗೆ ಗೊತ್ತಿರಬಹುದು. ಇವರು ಅಮಿತಾಬ್‌ ಬಚ್ಚನ್‌ ಮಗಳು.

ಶ್ವೇತಾ ಬಚ್ಚನ್‌ ನಂದಾ ಅವರ ಮಗ ಆಗಸ್ತ್ಯ ನಂದ ಸಿನಿಮಾ ಇಂಡಸ್ಟ್ರಿಗೆ "ದಿ ಆರ್ಚೀಸ್‌" ಮೂಲಕ ಪ್ರವೇಶಿಸಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಆಗಮಿಸುವ ತನ್ನ ಸೋದರಳಿಯನಿಗೆ ಇನ್‌ಸ್ಟಾಗ್ರಾಂನಲ್ಲಿ ಈ ರೀತಿ ಬರೆದಿದ್ದಾರೆ. "ನೀನು ಇನ್ನಷ್ಟು ತಲುಪಲು ಪ್ರಯತ್ನಿಸುವುದನ್ನಷ್ಟೇ ಮಾಡಬೇಕಷ್ಟೇ. ನಿನ್ನ ಕೈ ಹಿಡಿದು ಮುನ್ನಡೆಸಲು ನಾನಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ನನ್ನ ಪ್ರೀತಿಯ ಆಗಸ್ತ್ಯನಿಗೆ ಸುಸ್ವಾಗತ" ಎಂಬರ್ಥದಲ್ಲಿ ಅಭಿಷೇಕ್‌ ಬಚ್ಚನ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: Celebrity kid: ಆರಾಧ್ಯ ಬಚ್ಚನ್‌ ಸ್ಕೂಲ್‌ ಫೀಸ್‌ ಎಷ್ಟು, ಅಂಬಾನಿ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ ಐಶ್ವರ್ಯ ಅಭಿಷೇಕ್‌ ಬಚ್ಚನ್‌ ಪುತ್ರಿ

ದಿ ಆರ್ಚೀಸ್‌ ಸಿನಿಮಾ

ಆಗಸ್ತ್ಯ ನಂದಾ ಅವರು ಝೋಯಾ ಆಕ್ತರ್‌ ಅವರ ದಿ ಆರ್ಚೀಸ್‌ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿಸುತ್ತಿದ್ದಾರೆ. ಬುಧವಾರ ಈ ಸಿನಿಮಾದ ಕುರಿತು ಮುಂಬೈನಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾರೂಖ್‌ ಖಾನ್‌, ಬಾಬಿ ಡಿಯೋಲ್‌, ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌, ಶಿಲ್ಪಾ ಶೆಟ್ಟಿ, ಜಾನ್ವಿ ಕಪೂರ್‌ ಮುಂತಾದ ಬಿಟೌನ್‌ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಝೊಯಾ ಆಕ್ತರ್‌ ನಿರ್ಮಾಣದ ಈ ಸಿನಿಮಾದ ಮೂಲಕ ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗ, ಶಾರೂಖ್‌ ಖಾನ್‌ ಮಗಳು ಸುಹಾನ ಖಾನ್‌ ಮತ್ತು ಬೋನಿ ಕಪೂರ್‌ ಮಗಳು ಖುಷಿ ಕಪೂರ್‌ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ.

ಈ ಸಿನಿಮಾ ಸ್ನೇಹ, ಪ್ರೀತಿ, ಸ್ವಾತಂತ್ತ್ಯ, ಅಗಳಿಕೆ, ನೋವು ಇತ್ಯಾದಿ ಹಲವು ವಿಷಯಗಳ ಕತೆಯನ್ನು ಹೊಂದಿರಲಿದೆ.

ಈ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್‌ 7ರಂದು ಬಿಡುಗಡೆಯಾಗಲಿದೆ. ಅಂದಹಾಗೆ, ಇದು ಆಗಸ್ತ್ಯ ಇನ್ನೊಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಧರ್ಮೇಂದ್ರರವರ ಏಕೀಸ್‌ ಸಿನಿಮಾ ಜನವರಿ 10, 2025ರಂದು ಬಿಡುಗಡೆಯಾಗಲಿದೆ.

ಅಭಿಷೇಕ್‌ ಬಚ್ಚನ್‌ ಇತ್ತೀಚೆಗೆ ಘೋಮರ್‌ ಎಂಬ ಸ್ಪೋರ್ಟ್ಸ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ