logo
ಕನ್ನಡ ಸುದ್ದಿ  /  ಮನರಂಜನೆ  /  ಹಾಕಿದ ಬಂಡವಾಳದ ಅರ್ಧದಷ್ಟೂ ಕಲೆಕ್ಷನ್‌ ಮಾಡದ ಸಿನಿಮಾ; ಟೀಕೆಗಳಿಂದ ಮನನೊಂದು ಕಣ್ಣೀರಿಟ್ಟಿದ್ದ ನಟ ಅಕ್ಷಯ್‌ ಕುಮಾರ್‌

ಹಾಕಿದ ಬಂಡವಾಳದ ಅರ್ಧದಷ್ಟೂ ಕಲೆಕ್ಷನ್‌ ಮಾಡದ ಸಿನಿಮಾ; ಟೀಕೆಗಳಿಂದ ಮನನೊಂದು ಕಣ್ಣೀರಿಟ್ಟಿದ್ದ ನಟ ಅಕ್ಷಯ್‌ ಕುಮಾರ್‌

Rakshitha Sowmya HT Kannada

Sep 05, 2024 02:36 PM IST

google News

ಹಾಕಿದ ಬಂಡವಾಳದ ಅರ್ಧದಷ್ಟೂ ಕಲೆಕ್ಷನ್‌ ಮಾಡದ ಸಿನಿಮಾ; ಟೀಕೆಗಳಿಂದ ಮನನೊಂದು ಕಣ್ಣೀರಿಟ್ಟಿದ್ದ ನಟ ಅಕ್ಷಯ್‌ ಕುಮಾರ್‌

  • 2022 ರಲ್ಲಿ ತೆರೆ ಕಂಡ ಬಹುನಿರೀಕ್ಷಿತ ಸಿನಿಮಾ ಸಾಮ್ರಾಟ್‌ ಪೃಥ್ವಿರಾಜ್‌ ಹೀನಾಯ ಸೋಲು ಕಂಡಿತ್ತು. ಸಿನಿಮಾ ಆರಂಭವಾದಾಗಿನಿಂದ ರಿಲೀಸ್‌ ಆಗುವರೆಗೂ ಬಹಳ ಕ್ರೇಜ್‌ ಸೃಷ್ಟಿಸಿದ್ದ 300 ಕೋಟಿ ಬಜೆಟ್‌ನ ಚಿತ್ರ ಬಾಕ್ಸ್‌ ಆಫೀಸಿನಲ್ಲಿ ಸೋತಿದ್ದು ಚಿತ್ರತಂಡ, ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಅಕ್ಷಯ್‌ ಕುಮಾರ್‌ ಕೂಡಾ ಟೀಕೆಗಳಿಂದ ನೊಂದು ಅತ್ತಿದ್ದರು. 

ಹಾಕಿದ ಬಂಡವಾಳದ ಅರ್ಧದಷ್ಟೂ ಕಲೆಕ್ಷನ್‌ ಮಾಡದ ಸಿನಿಮಾ; ಟೀಕೆಗಳಿಂದ ಮನನೊಂದು ಕಣ್ಣೀರಿಟ್ಟಿದ್ದ ನಟ ಅಕ್ಷಯ್‌ ಕುಮಾರ್‌
ಹಾಕಿದ ಬಂಡವಾಳದ ಅರ್ಧದಷ್ಟೂ ಕಲೆಕ್ಷನ್‌ ಮಾಡದ ಸಿನಿಮಾ; ಟೀಕೆಗಳಿಂದ ಮನನೊಂದು ಕಣ್ಣೀರಿಟ್ಟಿದ್ದ ನಟ ಅಕ್ಷಯ್‌ ಕುಮಾರ್‌

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸಿನಿ ಕರಿಯರ್‌ ಆರಂಭಿಸಿದಾಗಿನಿಂದ ಇಲ್ಲಿವರೆಗೂ ಅನೇಕ ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಅಕ್ಷಯ್‌ ಕುಮಾರ್‌ ಅಭಿನಯದ ಯಾವುದೇ ಸಿನಿಮಾಗಳು ಹೇಳಿಕೊಳ್ಳುವಂಥ ಮೋಡಿ ಮಾಡಿಲ್ಲ. ಅದರಲ್ಲೂ 2022 ರಲ್ಲಿ ತೆರೆ ಕಂಡ ಸಿನಿಮಾವೊಂದು ಬಾಕ್ಸ್‌ ಆಫೀಸಿನಲ್ಲಿ ದೊಡ್ಡ ಸೋಲು ಕಂಡಿತ್ತು. ಈ ಸಿನಿಮಾ ಫ್ಲಾಪ್‌ ಆದಾಗ ಅಕ್ಷಯ್‌ ಕುಮಾರ್‌ ಕಣ್ಣೀರು ಹರಿಸಿದ್ದರು.

2022 ರಲ್ಲಿ ತೆರೆ ಕಂಡಿದ್ದ ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರ

ಅಕ್ಷಯ್‌ ಕುಮಾರ್‌ ನಟಿಸಿದ್ದ ಆ ಸಿನಿಮಾ ಬೇರಾವುದೂ ಅಲ್ಲ, ಅದೇ ಸಾಮ್ರಾಟ್‌ ಪೃಥ್ವಿರಾಜ್‌. ಸಿನಿಮಾ ಅನೌನ್ಸ್‌ ಆದಾಗಿನಿಂದ ಬಿಡುಗಡೆ ಆಗುವರೆಗೂ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಬಾಲಿವುಡ್‌ ಖ್ಯಾತ ನಟ-ನಟಿಯರು ಸಿನಿಮಾ ಇದು. ಮೇಲಾಗಿ 300 ಕೋಟಿ ರೂ. ಸುರಿದು ತಯಾರಿಸಲಾಗಿದ್ದ ಸಿನಿಮಾ ಆದ್ದರಿಂದ ಈ ಚಿತ್ರ ಬಾಕ್ಸ್‌ ಆಫೀಸಿನಲ್ಲಿ ದೊಡ್ಡ ಜಾದೂ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಡುಗಡೆ ಆದಾಗ ಎಲ್ಲಾ ಲೆಕ್ಕಾಚಾರ ತಲೆಕೆಳಕಾಯ್ತು. ಬಿಡುಗಡೆಗೂ ಮುನ್ನ ಸಿನಿಮಾ, ಟೈಟಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಿವಾದ ಸೃಷ್ಟಿಸಿತ್ತು. ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ಸಾಮ್ರಾಟ್‌ ಪೃಥ್ವಿರಾಜ್‌ ಪಾತ್ರದಲ್ಲಿ ನಟಿಸಿದ್ದರು.

ಸುಮಾರು 300 ಕೋಟಿ ರೂ. ಖರ್ಚು ಮಾಡಿ ತಯಾರಾಗಿದ್ದ ಸಿನಿಮಾ, ಅರ್ಧದಷ್ಟು ಲಾಭ ಮಾಡುವಲ್ಲಿ ಕೂಡಾ ವಿಫಲವಾಯ್ತು. ಈ ಸಿನಿಮಾ ಒಟ್ಟು ಗಳಿಸಿದ್ದು ಕೇವಲ 90 ಕೋಟಿ ರೂ. ಮಾತ್ರ. ಸಿನಿಮಾ ತಯಾರಕರಿಗೆ, ಅಭಿಮಾನಿಗಳಿಗೆ ಮಾತ್ರವಲ್ಲ, ಸ್ವತ: ಅಕ್ಷಯ್‌ ಕುಮಾರ್‌ಗೆ ಕೂಡಾ ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಬಹಳ ದಿನಗಳಿಂದ ಸೋಲು ಅನುಭವಿಸುತ್ತಿದ್ದ ಅಕ್ಷಯ್‌ ಕುಮಾರ್‌ಗೆ ಈ ಸಿನಿಮಾವಾದರೂ ಒಂದು ದೊಡ್ಡ ಬ್ರೇಕ್‌ ನೀಡಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಸಿನಿಮಾ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿತು. ಮೇಕಿಂಗ್‌, ನಟನೆ ಅಭಿಮಾನಿಗಳಿಗೆ ಇಷ್ಟವಾದರೂ ಸಿನಿಮಾ, ಜನರನ್ನು ಚಿತ್ರಮಂದಿರದತ್ತ ಸೆಳೆಯಲು ವಿಫಲವಾಯ್ತು.

300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದು ಸಿನಿಮಾ

ಮೂಲಗಳ ಪ್ರಕಾರ ಈ ಚಿತ್ರಕ್ಕೆ 300 ಕೋಟಿ ರೂ. ಖರ್ಚು ಮಾಡಲಾಗಿತ್ತು. ಭಾರತದಲ್ಲಿ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು 81 ಕೋಟಿ ರೂ. ವಿಶ್ವಾದ್ಯಂತ ಒಟ್ಟು ಸಂಗ್ರಹಿಸಿದ್ದು ಒಟ್ಟು 90 ಕೋಟಿ ರೂ. ಮಾತ್ರ. ಈ ಸಿನಿಮಾ ಫ್ಲಾಪ್‌ ಆದ ನಂತರ ನಿರ್ದೇಶಕ ಚಂದ್ರಪ್ರಕಾಶ್‌ ದ್ವಿವೇದಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷಯ್‌ ಕುಮಾರ್‌ ಸಾಕಷ್ಟು ಟೀಕೆಗೆ ಒಳಗಾಗುತ್ತಿರುವ ವಿಚಾರವನ್ನು ರಿವೀಲ್‌ ಮಾಡಿದ್ದರು. ಹಾಗೇ ಚಿತ್ರದಲ್ಲಿ ಮಾನುಷಿ ಚಿಲ್ಲರ್‌ ನಾಯಕಿಯಾಗಿ ನಟಿಸಿದ್ದು ನಾಯಕ, ನಾಯಕಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಅಪಹಾಸ್ಯ ಮಾಡಿದ್ದರು.

ಜೊತೆಗೆ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ಸಾಮ್ರಾಟ್‌ ಪೃಥ್ವಿರಾಜ್‌ ಲುಕ್‌ ಬಗ್ಗೆ ಕೂಡಾ ಟೀಕೆ ಎದುರಿಸಿದ್ದರು. ಗಲ್ಲಾ ಪೆಟ್ಟಿಗೆಯಲ್ಲಿ ಸಿನಿಮಾ ಅಸಲನ್ನು ಕೂಡಾ ದೋಚಲಿಲ್ಲ. ಇವೆಲ್ಲವೂ ಅಕ್ಷಯ್‌ ಕುಮಾರ್‌ಗೆ ಬಹಳ ನೋವುಂಟು ಮಾಡಿತ್ತು. ಇದೇ ಕಾರಣಕ್ಕೆ ಅವರು ಬಹಳ ನೊಂದಿದ್ದರು. ನಮ್ಮ ಎದುರು ಬಹಳ ಅತ್ತಿದ್ದರು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದಾದ ನಂತರ ಅಕ್ಷಯ್‌ ಕುಮಾರ್‌ ನಟಿಸಿದ್ದ ಬಚ್ಚನ್‌ ಪಾಂಡೆ, ರಾಮ್‌ ಸೇತು, ರಕ್ಷಾ ಬಂಧನ್‌ ಸಿನಿಮಾಗಳು ಕೂಡಾ ಬಾಕ್ಸ್‌ ಆಫೀಸಿನಲ್ಲಿ ಸೋಲು ಕಂಡಿವೆ.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ