logo
ಕನ್ನಡ ಸುದ್ದಿ  /  ಮನರಂಜನೆ  /  ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ ಮಗಳಿಗೆ 3ನೇ ವರ್ಷದ ಹುಟ್ಟುಹಬ್ಬ; ವಮಿಕಾಳ ಮುಖ ಪಬ್ಲಿಕ್‌ ಮಾಡದೆ ಇರೋ ಕಾರಣ ಬಹಿರಂಗ

ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ ಮಗಳಿಗೆ 3ನೇ ವರ್ಷದ ಹುಟ್ಟುಹಬ್ಬ; ವಮಿಕಾಳ ಮುಖ ಪಬ್ಲಿಕ್‌ ಮಾಡದೆ ಇರೋ ಕಾರಣ ಬಹಿರಂಗ

Praveen Chandra B HT Kannada

Jan 11, 2024 12:36 PM IST

google News

ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ ಮಗಳು ವಾಮಿಕಾಳಿಗೆ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    • ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಮಗಳು ವಮಿಕಾ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. ಇಲ್ಲಿಯವರೆಗೆ ವಾಮಿಕಾಳ ಮುಖವನ್ನು ಎಲ್ಲಿಯೂ ತೋರಿಸದೆ ಇರುವ ಕಾರಣವನ್ನು ವಿರಾಟ್‌ ಕೊಹ್ಲಿ ಈ ಹಿಂದೆಯೇ ಬಹಿರಂಗಪಡಿಸಿದ್ದಾರೆ. 
ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ ಮಗಳು ವಾಮಿಕಾಳಿಗೆ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ ಮಗಳು ವಾಮಿಕಾಳಿಗೆ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಅವರು 2017ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇವರು ವಿವಾಹವಾಗಿದ್ದರು. ಜನವರಿ 11, 2021ರಲ್ಲಿ ಇವರಿಗೆ ವಮಿಕಾ ಎಂಬ ಮಗಳು ಜನಿಸಿದ್ದಳು. ಸೆಲೆಬ್ರಿಟಿಗಳ ಮಕ್ಕಳನ್ನು ಕಂಡರೆ ಮಾಧ್ಯಮಗಳಿಗೆ ಏನೋ ಮೋಹ. ಮಗುವಿನ ಮುಖವನ್ನು ಬಹಿರಂಗಪಡಿಸಿದ ಬಳಿಕ ಮಗು ಅವರಂತೆ ಇದೆ, ಇವರಂತೆ ಇದೆ ಎಂದೆಲ್ಲ ಬಣ್ಣಿಸೋದು ಸಾಮಾನ್ಯ. ಇದೇ ಕಾರಣಕ್ಕೆ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಇಲ್ಲಿಯವರೆಗೆ ತಮ್ಮ ಮಗಳ ಮುಖವನ್ನು ಸಾರ್ವಜನಿಕವಾಗಿ ತೋರಿಸಿಯೇ ಇಲ್ಲ.

ಕಳೆದ ಮೂರು ವರ್ಷಗಳಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಮ್ಮ ಮಗಳ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಮಗುವನ ಹಿಂಬದಿ ಮಾತ್ರ ಕಾಣಿಸುವಂತೆ ಇವರು ಫೋಟೋ ಹಂಚಿಕೊಂಡಿದ್ದಾರೆ. ಇಂದು ವಮಿಕಾಳ ಮೂರನೇ ವರ್ಷದ ಹುಟ್ಟುಹಬ್ಬ. ಪುಟಾಣಿ ವಮಿಕಾ ಕುರಿತು ಇವರಿಬ್ಬರೂ ಆಗಾಗ ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾ ಇರುತ್ತಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ

ನನ್ನ ನಗುವಿನ ಗುಟ್ಟು- ವಮಿಕಾ

2022ರಲ್ಲಿ ಹಾರ್ಪರ್ಸ್‌ ಬಜಾರ್‌ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ವಮಿಕಾ ತನ್ನ ನಗುವಿನ ಗುಟ್ಟೆಂದು ಅನುಷ್ಕಾ ಶೆಟ್ಟಿ ಹೇಳಿದ್ದರು. "ನನ್ನ ಮಗಳು ನನ್ನ ಮುಖದಲ್ಲಿ ನಗು ಬರುವಂತೆ ಮಾಡುತ್ತಾಳೆ. ನನ್ನ ಮುಖದಲ್ಲಿ ಸದಾ ನಗು ಇರಲು ವಮಿಕಾ ಕರಾಣ. ಅವಳು ನನ್ನನ್ನು ಮತ್ತೆ ಮತ್ತೆ ನಗಿಸುತ್ತಾಳೆ. ಅವಳು ತುಂಬಾ ಚಿಕ್ಕವಳು. ನಾನು ನಕ್ಕಾಗ ಅವಳೂ ನಗುತ್ತಾಳೆ. ನನ್ನ ನಗು ಅವಳ ನಗು ಸೇರಿದಾಗ ಸಂಭ್ರಮ ಮನೆ ಮಾಡುತ್ತದೆ" ಎಂದು ಅನುಷ್ಕಾ ಶರ್ಮಾ ಹೇಳಿದ್ದರು.

ವಮಿಕಾಳಿಗೆ ನನ್ನ ಒಂದು ಗುಣವಿದೆ- ಅನುಷ್ಕಾ ಶರ್ಮಾ

2021ರಲ್ಲಿ ಗ್ರಾಜಿಯಾ ಇಂಡಿಯಾ ಜತೆ ಮಾತನಾಡುತ್ತ ಅನುಷ್ಕಾ ಶರ್ಮಾ ಅವರು ವಾಮಿಕಾಳ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಅವಳಲ್ಲಿ ಕೆಲವೊಂದು ಗುಣಗಳು ನನ್ನಂತೆಯೇ ಇದೆ. ನನ್ನಲ್ಲಿರುವ ಗುಣವೇ ಅವಳಲ್ಲಿ ಇದೆ. ಅವಳು ಏನನ್ನಾದರೂ ಮಾಡಲು ಬಯಸಿದರೆ ಅದನ್ನು ಮಾಡಿಯೇ ತೀರುತ್ತಾಳೆ. ಈಗ ಅವಳು ಏನು ಬೇಕೋ ಅದನ್ನು ಪಡೆದೇ ತೀರುತ್ತಾಳೆ. ಭವಿಷ್ಯದಲ್ಲಿ ಅವಳ ಜೀವನದ ಕೆಲವು ಉದ್ದೇಶಗಳನ್ನು ಸಾಧಿಸಲು ಈ ಗುಣ ನೆರವಾಗಬಹುದು. ನಾನೂ ಕೂಡ ಹಾಗೆಯೇ ಇದ್ದೆ. ಅವಳಿಗೆ ಯಾವುದೇ ತಡೆ ಮಾಡದೆ, ಅವಳಿಗೆ ಮಾರ್ಗದರ್ಶನ ನೀಡುವುದು ಮತ್ತು ಬೆಂಬಲಿಸುವುದು ಮಾತ್ರ ನನ್ನ ಕೆಲಸ. ಎಲ್ಲರ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿ ಹೊಂದಿರುವುದನ್ನು ಮಗುವಿಗೆ ಕಲಿಸುವುದು ಮಾತ್ರ ಪೋಷಕರ ಪಾತ್ರ" ಎಂದು ಅವರು ಹೇಳಿದ್ದರು.

ನಾವು ಸಾಮಾನ್ಯವಾಗಿ ಭಾನುವಾರ ಮನೆಯುಲ್ಲೇ ಇರಲು ಬಯಸುತ್ತೇವೆ. ನಾವು ನಮ್ಮ ಫ್ಯಾಮಿಲಿ ಕೊಠಡಿಯಲ್ಲಿ ಒಂದು ಕಫ್‌ ಕಾಫಿ ಜತೆಗೆ ಮಗಳ ಜತೆ ಆಡುತ್ತ ಕಳೆಯುತ್ತೇವೆ ಎಂದು 2023ರಲ್ಲಿ ಲೈವ್‌ಸ್ಪೇಸ್‌ ಅನ್‌ಫಿಲ್ಟರ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಬೆಂಗಳೂರಿನಲ್ಲಿ ಕಳೆದ ವರ್ಷ ಪೂಮಾ ಕಾರ್ಯಕ್ರಮವೊಂದರಲ್ಲಿ "ವಮಿಕಾಳಿಗೆ ನಾನು ಹೆಚ್ಚು ಸಮಯ ನೀಡಬೇಕು. ಈ ವಯಸ್ಸಿನಲ್ಲಿ ನಾನು ಹೆಚ್ಚು ಸಮಯ ಅವಳ ಜತೆ ಇರಬೇಕು. ಅವಳಿಗೆ ಈಗ ನಾನೇ ಬೇಕು. ನನ್ನ ಜತೆಗೇ ಇರಲು ಬಯಸುತ್ತಾಳೆ" ಎಂದು ಹೇಳಿದ್ದರು.

ಅನುಷ್ಕಾ ಶರ್ಮಾರ ಮಗಳು ವಾಮಿಕಾ

ಯಾಕೆ ವಮಿಕಾಳ ಫೋಟೋ ಬಹಿರಂಗಪಡಿಸ್ತಿಲ್ಲ?

2021ರಲ್ಲಿ ವಿರಾಟ್‌ ಕೊಹ್ಲಿ ಅವರು ತಮ್ಮ ಮಗಳ ಮುಖವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚದೆ ಇರುವುದಕ್ಕೆ ಸೂಕ್ತ ಕಾರಣ ನೀಡಿದ್ದರು. "ಇಲ್ಲ ನಾವಿಬ್ಬರು ನಮ್ಮ ಮಗಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದೆ ಇರಲು ನಿರ್ಧರಿಸಿದ್ದೇವೆ. ವಮಿಕಾಳಿಗೆ ಸೋಷಿಯಲ್‌ ಮೀಡಿಯಾ ಎಂದರೆ ಏನೆಂದು ಅರ್ಥವಾಗುವವರೆಗೆ ಅವಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚುವುದಿಲ್ಲ" ಎಂದು ಅವರು ಹೇಳಿದ್ದರು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ