logo
ಕನ್ನಡ ಸುದ್ದಿ  /  ಮನರಂಜನೆ  /  ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ ಡಿಸೋಜಾ ರಿತೇಶ್‌ ದೇಶ್‌ಮುಖ್‌ ದಂಪತಿ?

ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ ಡಿಸೋಜಾ ರಿತೇಶ್‌ ದೇಶ್‌ಮುಖ್‌ ದಂಪತಿ?

HT Kannada Desk HT Kannada

Sep 11, 2023 01:21 PM IST

google News

ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ಡಿಸೋಜಾ ದಂಪತಿ

  • ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕಂಗ್ರಾಜುಲೇಶನ್ಸ್‌ ಹೇಳುತ್ತಿದ್ದಾರೆ. ಈ ಜೋಡಿಗೆ ಗಂಡು ಮಕ್ಕಳು ಇರುವುದರಿಂದ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ಡಿಸೋಜಾ ದಂಪತಿ
ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ ಡಿಸೋಜಾ ದಂಪತಿ (PC: viralbhayani)

ಚಿತ್ರರಂಗದ ಕ್ಯೂಟ್‌ ಜೋಡಿಗಳ ಲಿಸ್ಟ್‌ನಲ್ಲಿ ಜೆನಿಲಿಯಾ ಡಿಸೋಜಾ ಹಾಗೂ ರಿತೇಶ್‌ ದೇಶ್‌ಮುಖ್‌ ದಂಪತಿ ಕೂಡಾ ಸೇರುತ್ತಾರೆ. 11 ವರ್ಷಗಳ ಹಿಂದೆ ಮದುವೆ ಆದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ಈ ಕಪಲ್‌ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ತುಜೆ ಮೇರಿ ಕಸಮ್‌' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಜೋಡಿ

ಜೆನಿಲಿಯಾ ಡಿಸೋಜಾ ಹಾಗೂ ರಿತೇಶ್‌ ದೇಶ್‌ಮುಖ್‌ 2003ರಲ್ಲಿ 'ತುಜೆ ಮೇರಿ ಕಸಮ್‌' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆಗಿನಿಂದ ಇವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ರಿತೇಶ್‌ ತಂದೆ, ಆಗಿನ ಮಹಾರಾಷ್ಟ್ರ ಸಿಎಂ ವಿಲಾಸ್‌ರಾವ್‌ ದೇಶ್‌ಮುಖ್‌ ಇಬ್ಬರ ಪ್ರೀತಿಯನ್ನು ಒಪ್ಪಿರಲಿಲ್ಲ ಎನ್ನಲಾಗಿತ್ತು. ಅದೇ ಸಮಯಲ್ಲಿ ಜೆನಿಲಿಯಾ ಹಾಗೂ ರಿತೇಶ್‌ ಇಬ್ಬರೂ, ನಾವಿಬ್ಬರೂ ಒಳ್ಳೆ ಫ್ರೆಂಡ್ಸ್‌. ನಮ್ಮ ನಡುವೆ ಬೇರೆ ಏನಿಲ್ಲ ಎಂದಿದ್ದರು.

ಕೊನೆಗೂ ಈ ಜೋಡಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡರು. 3 ಫೆಬ್ರವರಿ 201 ರಂದು ಮರಾಠಿ ಸಂಪ್ರದಾಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮರುದಿನ ಕ್ರೈಸ್ತ ಸಂಪ್ರದಾಯದಂತೆ ಚರ್ಚ್‌ನಲ್ಲಿ ಮದುವೆ ಆದರು. ಈ ದಂಪತಿಗೆ ರಿಯಾನ್‌ ಹಾಗೂ ರೆಹಲ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗನಿಗೆ 9, ಎರಡನೇ ಮಗನಿಗೆ 7 ವರ್ಷ ವಯಸ್ಸು. ಇದೀಗ ಈ ದಂಪತಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಜೆನಿಲಿಯಾ ಡಿಸೋಜಾ ಬೇಬಿ ಬಂಪ್‌

ಶನಿವಾರ ರಾತ್ರಿ ರಿತೇಶ್‌ ದೇಶ್‌ಮುಖ್‌ ಹಾಗೂ ಜೆನಿಲಿಯಾ ದಂಪತಿ ಬಾಲಿವುಡ್‌ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಈ ವೇಳೆ ಜೆನಿಲಿಯಾ ನೇರಳೆ ಬಣ್ಣದ ಔಟ್‌ಫಿಟ್‌ ಧರಿಸಿದ್ದರು. ವಿಡಿಯೋದಲ್ಲಿ ಅವರ ಬೇಬಿ ಬಂಪ್‌ ಕಾಣುತ್ತಿದ್ದು ಜೆನಿಲಿಯಾ ಹೊಟ್ಟೆ ಮೇಲೆ ಕೈ ಇಟ್ಟುಕೊಂಡೇ ನಿಂತಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕಂಗ್ರಾಜುಲೇಶನ್ಸ್‌ ಹೇಳುತ್ತಿದ್ದಾರೆ. ಈ ಜೋಡಿಗೆ ಗಂಡು ಮಕ್ಕಳು ಇರುವುದರಿಂದ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಜೆನಿಲಿಯಾ ಆಗಲೀ, ಹಾಗೂ ರಿತೇಶ್‌ ಆಗಲೀ ಪ್ರೆಗ್ನೆನ್ಸಿ ವಿಚಾರವನ್ನು ರಿವೀಲ್‌ ಮಾಡಿಲ್ಲ.

ಸಿನಿಮಾ ವಿಚಾರಕ್ಕೆ ಬರುವುದಾದರೆ ರಿತೇಶ್‌ ದೇಶ್‌ಮುಖ್‌ ಕಾಕುಡ, ವಿಸ್ಫಟ್‌, ಹೌಸ್‌ಫುಲ್‌ 5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜೆನಿಲಿಯಾ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಜ್ಯೂನಿಯರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ