Article 370: ಮೊದಲ ದಿನವೇ ಹಲವು ಕೋಟಿ ಬಾಚಿದ ಆರ್ಟಿಕಲ್ 370; ಪ್ರಿಯಾಮಣಿ, ಯಾಮಿನಿ ಸಿನಿಮಾದ ಬಾಕ್ಸ್ ಆಫೀಸ್ ವರದಿ
Feb 24, 2024 09:36 AM IST
Article 370: ಮೊದಲ ದಿನವೇ ಹಲವು ಕೋಟಿ ಬಾಚಿದ ಆರ್ಟಿಕಲ್ 370
- Article 370 box office collection day 1: ಯಾಮಿ ಗೌತಮ್, ಪ್ರಿಯಾಮಣಿ, ಅರುಣ್ ಗೋವಿಲ್ ಮತ್ತು ಕಿರಣ್ ಕರ್ಮಾರ್ಕರ್ ನಟನೆಯ ಆರ್ಟಿಕಲ್ 370 ಸಿನಿಮಾ ಉತ್ತಮ ಆರಂಭ ಪಡೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 5 ಕೋಟಿ ರೂಪಾಯಿ ಬಾಚಿಕೊಂಡಿದೆ.
ಆರ್ಟಿಕಲ್ 370 ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1: ಯಾಮಿ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆರ್ಟಿಕಲ್ 370 ಸಿನಿಮಾವು ಭಾರತದ ಚಿತ್ರಮಂದಿರಗಳಲ್ಲಿ ಉತ್ತಮ ಆರಂಭವನ್ನು ಪಡೆದಿದೆ. ಸಚ್‌ನಿಲ್ಕ್.ಕಾಂ ಪ್ರಕಾರ ಆರ್ಟಿಕಲ್ 370 ಸಿನಿಮಾವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 5.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಆರಂಭಿಕ ಅಂದಾಜಿನ ಲೆಕ್ಕಾಚಾರವಾಗಿದೆ. ಜ್ಯೋತಿ ದೇಶ್‌ಪಾಂಡೆ, ಆದಿತ್ಯ ಧಾರ್, ಲೋಕೇಶ್ ಧಾರ್ ನಿರ್ಮಾಣದ ಈ ಸಿನಿಮಾವು ಫೆಬ್ರವರಿ 23ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು.
ಆರ್ಟಿಕಲ್ 370 ಸಿನಿಮಾದ ಬಗ್ಗೆ
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಇಂಟಲಿಜೆನ್ಸ್ ಆಫೀಸರ್ ಆಗಿ ಈ ಸಿನಿಮಾದಲ್ಲಿ ಯಾಮಿ ನಟಿಸಿದ್ದಾರೆ. ಆರ್ಟಿಕಲ್ 370 ರದ್ದತಿಗೆ ಕಾರಣವಾದ ಅಂಶಗಳ ಕುರಿತು ಈ ಸಿನಿಮಾ ಮಾತನಾಡುತ್ತದೆ. ಕಾಶ್ಮೀರ ಮಿಷನ್‌ಗಾಗಿ ಎನ್‌ಐಎಗೆ ಯಾಮಿ ನೇಮಕವಾಗುತ್ತಾರೆ. ಈ ಸಿನಿಮಾದಲ್ಲಿ ಪ್ರಿಯಾಮಣಿ ಮತ್ತು ಯಾಮಿ ಇಬ್ಬರು ಮಹಿಳೆಯರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನ ಹತ್ತಿರದಲ್ಲಿರುವ ಸಂದರ್ಭದಲ್ಲಿ ಈ ಚಿತ್ರ ಆಗಮಿಸಿರುವುದು ವಿಶೇಷ.
ಆರ್ಟಿಕಲ್ 370 ಕುರಿತು ಆದಿತ್ಯ ಧಾರ್
ಯಾಮಿ ಮಾತ್ರವಲ್ಲದೆ ಪ್ರಿಯಾಮಣಿ, ಅರುಣ್ ಗೋವಿಲ್ ಮತ್ತು ಕಿರಣ್ ಕರ್ಮಾರ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕುರಿತು ಇತ್ತೀಚೆಗೆ ಆದಿತ್ಯ ಧಾರ್ ಹೀಗೆ ಹೇಳಿದ್ದಾರೆ. "ಈ ಸಿನಿಮಾದ ಉದ್ದೇಶ ಸರಿಯಾಗಿದೆ. ಸಿನಿಮಾ ತಯಾರಕ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಸರಿಯಾದ ಉದ್ದೇಶದಿಂದಲೇ ಈ ಸಿನಿಮಾ ಮಾಡಿದ್ದೇನೆ. ಎಲ್ಲಾದರೂ ನನ್ನ ಉದ್ದೇಶ ತಪ್ಪು ಎಂದು ತಿಳಿದ ತಕ್ಷಣ ನಾನು ಸಿನಿಮಾ ಮಾಡುವುದನ್ನು ನಿಲ್ಲಿಸುತ್ತೇನೆ" ಎಂದು ಅವರು ಹೇಳಿದ್ದರು.
"ಇಂತಹ ಸಿನಿಮಾ ಮಾಡುವುದನ್ನು ಪ್ರೊಪಗಾಂಡ ಎಂದು ಕರೆಯುವವರ ಕುರಿತು ನಾನು ಆಲೋಚಿಸುವುದಿಲ್ಲ. ಯಾರ ಪ್ರೊಪಗಾಂಡ ಎಂದುಕೊಂಡು ಸಿನಿಮಾ ನೋಡುತ್ತಾರೋ ಅಂತವರಿಗೆ ಮಾತ್ರ ಈ ಸಿನಿಮಾ ಪ್ರೊಪಗಾಂಡದಂತೆ ಕಾಣಿಸಬಹುದು. ಆರ್ಟಿಕಲ್ 370 ಎನ್ನುವುದು ಭಾರತ ಕೇಂದ್ರೀತ ಸಿನಿಮಾ. ಇದು ಅದ್ಭುತ ಕಥೆ ಹೊಂದಿದೆ. ನಾನು ಇಲ್ಲಿಯವರೆಗೆ ಕೇಳಿದ ಕಥೆಗಳಲ್ಲಿಯೇ ಅದ್ಭುತವಾದ ಕಥೆ" ಎಂದು ಟ್ರೇಲರ್ ಲಾಂಚ್ ಸಮಯದಲ್ಲಿ ಆದಿತ್ಯ ಧಾರ್ ಹೇಳಿದ್ದರು.
ಆರ್ಟಿಕಲ್ 370 ಸಿನಿಮಾ ವಿಮರ್ಶೆ
ಆರ್ಟಿಕಲ್ 370 ಸಿನಿಮಾವು ಕಾಶ್ಮೀರ ಫೈಲ್‌ನ ಮುಂದುವರೆದ ಭಾಗವ? ಸ್ವಲ್ಪ ಮಟ್ಟಿಗೆ ಹೌದೆನ್ನಬಹುದು. ಆದರೆ, ಆರ್ಟಿಕಲ್ 370 ಸಿನಿಮಾವನ್ನು ಬೇರೆ ಕನ್ನಡಿಯಿಂದ, ದೃಷ್ಟಿಕೋನದಿಂದ ಹೊರತಂದಿರುವುದಕ್ಕೆ ಶಹಬ್ಬಾಸ್ ಎನ್ನಬಹುದು. ಈ ಸಿನಿಮಾ ಜಿಂಗೋಸ್ಟಿಕ್ ನಿರೂಪಣೆಯ ಆಸರೆ ಪಡೆಯುವುದಿಲ್ಲ. ಪ್ರೊಪಗಾಂಡದ ವಲಯವನ್ನೂ ಪ್ರವೇಶಿಸಲು ಪ್ರಯತ್ನಿಸುವುದಿಲ್ಲ. ನಿಖರ ಸಂಶೋಧನೆಯ ಬೆಂಬಲದಿಂದ ಎಲ್ಲಿ ಯಾವಾಗ ಏನು ಘಟನೆ ನಡೆಯಿತು ಎಂದು ಹೇಳುತ್ತಾ ಸಾಗುತ್ತದೆ. ಯಾಮಿ ಗೌತಮ್ ಅವರು ತನಗೆ ನೀಡಲಾದ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದಾರೆ. ಆಕೆಯ ಅಸಂಬದ್ಧ ವರ್ತನೆಯು ಚಿತ್ರದ ತೂಕ ಹೆಚ್ಚಿಸಿದೆ. ಆಕೆಯ ಆಕ್ಷನ್ ಮತ್ತು ತೀವ್ರ ಸಂಭಾಷಣೆಯೂ ಗಮನ ಸೆಳೆಯುತ್ತದೆ. ಸಮವಸ್ತ್ರದಲ್ಲಿ ಸಹವರ್ತಿ ಪುರುಷರಿಗೆ ಸರಿಸಮಾನಾಗಿ ನಿಲ್ಲುತ್ತಾಳೆ. ದಿಟ್ಟ ಹೆಣ್ಣಾಗಿ ಗಮನ ಸೆಳೆಯುತ್ತಾಳೆ. ಇದೇ ಸಮಯದಲ್ಲಿ ಶಕ್ತಿಯುತ ಅಭಿನಯದಿಂದ ಪ್ರಿಯಾಮಣಿ ಗಮನ ಸೆಳೆಯುತ್ತಾರೆ. ಅವರದ್ದು ಸಂಯಮ ಮತ್ತು ಪರಿಣಾಮಕಾರಿ ನಟನೆ. ಚಿತ್ರದ ಉದ್ದಕ್ಕೂ ಸುತ್ತಲಿನ ಎಲ್ಲಾ ಗೊಂದಲದ ನಡುವೆಯೂ ಆಕೆ ಶಾಂತಮೂರ್ತಿ. ಈ ಇಬ್ಬರು ಮಹಿಳೆಯರು ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಾಗಿದ್ದಾರೆ ಎಂದರೆ ತಪ್ಪಾಗದು. ಆರ್ಟಿಕಲ್ 370 ಸಿನಿಮಾದ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡದ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ