logo
ಕನ್ನಡ ಸುದ್ದಿ  /  ಮನರಂಜನೆ  /  ಮಗಳ ಕನಸು ನನಸು ಮಾಡಹೊರಟ ಅಪ್ಪನ ಕಥೆಯೇ ‘ಬಿ ಹ್ಯಾಪಿ’; ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ಸಿನಿಮಾ

ಮಗಳ ಕನಸು ನನಸು ಮಾಡಹೊರಟ ಅಪ್ಪನ ಕಥೆಯೇ ‘ಬಿ ಹ್ಯಾಪಿ’; ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ಸಿನಿಮಾ

Sep 21, 2024 04:37 PM IST

google News

ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ನಟನೆಯ ಬಿ ಹ್ಯಾಪಿ ಸಿನಿಮಾ

    • ಭಿನ್ನ ಕಂಟೆಂಟಿನ ಮೂಲಕ ಆಗಮಿಸುತ್ತಿದ್ದಾರೆ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್.‌ ಚಿತ್ರಮಂದಿರಗಳಿಗಿಂತ ಒಟಿಟಿ ಕಡೆಗೇ ಹೆಚ್ಚು ವಾಲಿರುವ ಅವರು, ಥ್ರಿಲ್ಲರ್‌ ಎಳೆಯ ಕಥೆಗಳಿಂದಲೇ ನೋಡುಗರನ್ನು ಸೆಳೆದಿದ್ದಾರೆ. ಇದೀಗ ಭಾವನಾತ್ಮಕ ಅಪ್ಪ ಮಗಳ ಕಥೆ ಬಿ ಹ್ಯಾಪಿ ಸಿನಿಮಾ ಮೂಲಕ ಎಂಟ್ರಿಕೊಡುವ ಸನಿಹದಲ್ಲಿದ್ದಾರೆ.   
ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ನಟನೆಯ ಬಿ ಹ್ಯಾಪಿ ಸಿನಿಮಾ
ನೇರವಾಗಿ ಒಟಿಟಿಗೆ ಬರಲಿದೆ ಅಭಿಷೇಕ್‌ ಬಚ್ಚನ್‌ ನಟನೆಯ ಬಿ ಹ್ಯಾಪಿ ಸಿನಿಮಾ

Be Happy OTT Release Update: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇತ್ತೀಚಿನ ಕೆಲ ವರ್ಷಗಳಿಂದ ಕಂಟೆಂಟ್‌ ಆಧರಿತ ಸಿನಿಮಾಗಳ ಕಡೆಗೆ ಹೆಚ್ಚು ವಾಲಿದ್ದಾರೆ. ಅವರ ಈ ಹಿಂದಿನ ಕೆಲವು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳೂ ಅಷ್ಟೇ ಕುತೂಹಲ ಸೃಷ್ಟಿಸಿದ್ದವು. ಇದೀಗ ಆ ಸಾಲಿಗೆ ಸೇರಲು ಅಣಿಯಾಗಿದೆ ಬಿ ಹ್ಯಾಪಿ ಸಿನಿಮಾ. ಅಭಿಷೇಕ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಿ ಹ್ಯಾಪಿ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಅಪ್ಪ- ಮಗಳ ನಡುವಿನ ಭಾವನಾತ್ಮಕ ಡ್ಯಾನ್ಸ್ ಡ್ರಾಮಾ ಸಿನಿಮಾ ಇದಾಗಿದೆ. ಈ ಚಿತ್ರದ ಹೊಸ ಅಪ್‌ಡೇಟ್‌ ಇಲ್ಲಿದೆ.

ಇದು ನವೀಕರಣವಾಗಿದೆ

ಅಮೆಜಾನ್ ಪ್ರೈಮ್ ವಿಡಿಯೋ ಈ ಹಿಂದೆ ಅಭಿಷೇಕ್ ಬಚ್ಚನ್ ಅವರ ಬಿ ಹ್ಯಾಪಿ ಸಿನಿಮಾವನ್ನು ಘೋಷಣೆ ಮಾಡಿತ್ತು. ಆದರೆ, ಮುಂದುವರಿದು ಆ ಚಿತ್ರದ ಲೇಟೆಸ್ಟ್‌ ಅಪ್‌ಡೇಟ್‌ ಸಿಕ್ಕಿರಲಿಲ್ಲ. ಇದೀಗ ಸದ್ದಿಲ್ಲದೆ ಈ ಸಿನಿಮಾದ ಫಸ್ಟ್‌ ಲುಕ್‌ಅನ್ನು ಇಂದು (ಸೆ. 21) ಪ್ರೈಂ ವಿಡಿಯೋ ಘೋಷಣೆ ಮಾಡಿದೆ. ಈ ಮೂಲಕ ಬಿ ಹ್ಯಾಪಿ ಸಿನಿಮಾ ಪ್ರೈಂ ವಿಡಿಯೋದಲ್ಲಿ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಪೋಸ್ಟ್ ಮಾಡಿದ್ದು, ಶೀಘ್ರದಲ್ಲೇ ಬರಲಿದೆ ಎಂದಿದೆ. ಚಿತ್ರದಲ್ಲಿ ಮಗಳು ಇನಾಯತ್ ವರ್ಮಾಳ ತಂದೆಯಾಗಿ ಅಭಿಷೇಕ್‌ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಈ ಹಿಂದೆ ಲುಡೋ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಬಿ ಹ್ಯಾಪಿ ಚಿತ್ರವನ್ನು ರೆಮೋ ಡಿಸೋಜಾ ನಿರ್ದೇಶಿಸಿದ್ದಾರೆ. ಅಭಿಷೇಕ್ ಮತ್ತು ಇನಾಯತ್ ಜೊತೆಗೆ ನೋರಾ ಫತೇಹಿ, ನಾಸರ್, ಜಾನಿ ಲಿವರ್, ಸಂಚಿತ್ ಚನಾನಾ ಮತ್ತು ಹರ್ಲೀನ್ ಸೇಥಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೆಮೋ ಡಿಸೋಜಾ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ಸ್ ಬ್ಯಾನರ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಇದು ಕಥಾಹಂದರ

ಮಗಳು ದೇಶದ ಅತಿ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಕನಸು ಕಾಣುತ್ತಾಳೆ. ಆ ಕನಸನ್ನು ನನಸು ಮಾಡಲು ಅವಳ ತಂದೆ ಮಾರ್ಗದರ್ಶನ ನೀಡುತ್ತಾರೆ. ಮಗಳನ್ನು ಖುಷಿಯಾಗಿರಿಸಲು, ಆಕೆಯ ಕನಸನ್ನು ನನಸಾಗಿಸಲು ಆತ ಹೇಗೆಲ್ಲ ಹೋರಾಡುತ್ತಾನೆ ಎಂಬುದೇ ಈ ಸಿನಿಮಾದ ಎಳೆ. ರೆಮೋ ಡಿಸೋಜಾ ಜೊತೆಗೆ ತುಷಾರ್, ಕಾನಿಷ್ಕಾ ಸಿಂಗ್ ಮತ್ತು ಚಿರಾಗ್ ಗಾರ್ಗ್ ಬಿ ಹ್ಯಾಪಿ ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ನೃತ್ಯವೇ ಈ ಸಿನಿಮಾದ ಮುಖ್ಯ ವಿಷಯ.

ಅಭಿಷೇಕ್ ಲೈನ್ಅಪ್

ನಿರ್ದೇಶಕ ಶೂಜಿತ್ ಸಿರ್ಕಾರ್ ನಿರ್ದೇಶನದಲ್ಲಿ ಅಭಿಷೇಕ್ ಬಚ್ಚನ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ತಂದೆಯ ಪಾತ್ರ. ಪಿಕು, ಸರ್ದಾರ್ ಉದ್ದಂ ಸಿಂಗ್ ಚಿತ್ರಗಳನ್ನು ನಿರ್ದೇಶಿಸಿದ ಅಭಿಷೇಕ್ ಸಿರ್ಕಾರ್ ಅವರೊಂದಿಗೆ ಅಭಿಷೇಕ್‌ ಸಿನಿಮಾ ಮಾಡುತ್ತಿರುವುದರಿಂದ ನಿರೀಕ್ಷೆ ಸೃಷ್ಟಿಯಾಗಿವೆ. ಈ ಚಿತ್ರವನ್ನು ರೋನಿ ಲಾಹಿರಿ ಮತ್ತು ಶೀಲ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಕಿಂಗ್ ಎಂಬ ಇನ್ನೊಂದು ಸಿನಿಮಾ ಕೂಡ ಅಭಿಷೇಕ್ ಅವರ ಸಾಲಿನಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ