Priyanka Chopra: ದೊಡ್ಡ ಪಾಪ್ ಸಿಂಗರ್ ಆದ್ರೂ ಮನೆಯಲ್ಲಿ ಜವಾಬ್ದಾರಿಯುತ ಅಪ್ಪ; ನಿಕ್ ಪಡೆಯಲು ಪುಣ್ಯ ಮಾಡಿದ್ದೆ ಎಂದ ಪ್ರಿಯಾಂಕ ಚೋಪ್ರಾ
Jun 19, 2023 12:56 PM IST
ಪತಿ, ಮಾವ, ತಂದೆಯ ಫೋಟೋಗಳನ್ನು ಹಂಚಿಕೊಂಡ ಪ್ರಿಯಾಂಕ ಚೋಪ್ರಾ
- ನಿಕ್ ಜೋನಸ್ ಪ್ರಿಯಾಂಕಾಗಿಂತ 10 ವರ್ಷ ಕಿರಿಯ. ಇವರಿಬ್ಬರ ಡೇಟಿಂಗ್ ಸುದ್ದಿ ತಿಳಿದವರು ಇವರದ್ದು ಇನ್ನು ಮಂದುವರೆಯುವುದಿಲ್ಲ ಎಂದು ಕಾಲೆಳೆದಿದ್ದರು. ಆದರೆ ಈ ಜೊಡಿ ಹಿರಿಯರನ್ನು ಒಪ್ಪಿಸಿ 2018 ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆ ಆಗುವ ಮೂಲಕ ಮಾತನಾಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು.
ಜೂನ್ 18, ವಿಶ್ವಾದ್ಯಂತ ತಂದೆಯಂದಿರ ದಿನವನ್ನು ಆಚರಿಸಲಾಗಿದೆ. ಜನ ಸಾಮಾನ್ಯರು, ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ತಂದೆ ಹಾಗೂ ತಮ್ಮ ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜೀವನದ ಮೂವರು ಪ್ರಮುಖ ವ್ಯಕ್ತಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ ಬಿಹಾರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಈಗ ಆಕೆ ಗ್ಲೋಬಲ್ ಸ್ಟಾರ್. ಅಮೆರಿಕದ ಖ್ಯಾತ ಪಾಪ್ ಗಾಯಕ ನಿಕ್ ಜೋನಸ್ ಕೈ ಹಿಡಿದಿರುವ ಪಿಗ್ಗಿ ಈಗ ಹೆಣ್ಣು ಮಗುವಿನ ತಾಯಿ. ಮಗು ಹಾಗೂ ಪತಿಯೊಂದಿಗೆ ಪ್ರಿಯಾಂಕ ವಿದೇಶದಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್‌ಗಿಂತ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದಲ್ಲಿ ಕಾಜಲ್ ಅಗರ್‌ವಾಲ್; ಪತಿ, ಮಗುವಿಗಾಗಿ ಸಿನಿಮಾ ತೊರೆಯಲು ಮಗಧೀರ ಸುಂದರಿಯ ನಿರ್ಧಾರ?
ನಿಕ್ ಜೋನಸ್ ಪ್ರಿಯಾಂಕಾಗಿಂತ 10 ವರ್ಷ ಕಿರಿಯ. ಇವರಿಬ್ಬರ ಡೇಟಿಂಗ್ ಸುದ್ದಿ ತಿಳಿದವರು ಇವರದ್ದು ಇನ್ನು ಮಂದುವರೆಯುವುದಿಲ್ಲ ಎಂದು ಕಾಲೆಳೆದಿದ್ದರು. ಆದರೆ ಈ ಜೊಡಿ ಹಿರಿಯರನ್ನು ಒಪ್ಪಿಸಿ 2018 ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆ ಆಗುವ ಮೂಲಕ ಮಾತನಾಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು. 2022 ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದರು. ಈ ಮಗುವಿಗೆ ಮಾಲ್ತಿ ಮೇರಿ ಚೋಪ್ರಾ ಎಂದು ಹೆಸರಿಟ್ಟಿದ್ದಾರೆ. ಮಗು ಹುಟ್ಟಿದಾಗ ಅದರ ಆರೋಗ್ಯ ಸಮಸ್ಯೆ ಬಗ್ಗೆ ಪಿಗ್ಗಿ ಹಾಗೂ ನಿಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಭಾನುವಾರ ವಿಶ್ವ ತಂದೆಯಂದಿರ ದಿನದ ಅಂಗವಾಗಿ ಪ್ರಿಯಾಂಕ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ನಿಕ್, ಮಾವ ಪೌಲ್ ಕೆವಿನ್ ಜೋನಸ್, ತಾಯಿ ಮಧು ಚೋಪ್ರಾ, ಅಶೋಕ್ ಚೋಪ್ರಾ ಫೋಟೋಗಳನ್ನು ಹಂಚಿಕೊಂಡು ಎಲ್ಲರಿಗೂ ಶುಭಾಶಯ, ಧನ್ಯವಾದ ಅರ್ಪಿಸಿದ್ದಾರೆ. ಈ ಫೋಟೋಗಳಲ್ಲಿ ನಿಕ್ ಜೋನಸ್, ಮಗಳು ಮಾಲ್ತಿಯನ್ನು ತಮ್ಮ ತೊಡೆಯ ಮೇಲೆ ಕುಳಿಸಿಕೊಂಡು ಪುಸ್ತಕ ತೋರಿಸುತ್ತಾ ಪಾಠ ಹೇಳಿಕೊಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಐ ಲವ್ ಯು ನಿಕ್, ನಿನ್ನನ್ನು ಪಡೆದ ನಾನು ಅದೃಷ್ಟವಂತೆ ಎಂದು ಬರೆದುಕೊಂಡಿದ್ದಾರೆ . ನೀವು ಇಂದು ಎಂದೆಂದಿಗೂ ಬಹಳ ಸ್ಪೆಷಲ್ ಎಂದು ಮಾವನನ್ನು ಕುರಿತು ಬರೆದಿದ್ದಾರೆ. ಜೊತೆಗೆ ಮಿಸ್ ಯು ಅಪ್ಪ ಎಂದು ಅಪ್ಪನನ್ನು ನೆನೆದಿದ್ದಾರೆ.
ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ
ಪ್ರಿಯಾಂಕ ಚೋಪ್ರಾ ಪೋಸ್ಟ್‌ಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ನಿಕ್‌ನಂಥ ಗಂಡನನ್ನು ಪಡೆಯಲು ನೀವು ಪುಣ್ಯ ಮಾಡಿದ್ದೀರಿ. ಎಷ್ಟೇ ದೊಡ್ಡ ಪಾಪ್ ಸಿಂಗರ್ ಆದ್ರೂ ನೆಲದ ಮೇಲೆ ಕುಳಿತು ಮಗಳಿಗೆ ಪಾಠ ಹೇಳಿಕೊಡುವ ಮೂಲಕ ತಂದೆಯ ಜವಾಬ್ದಾರಿ ಮೆರೆದಿದ್ದಾರೆ. ನೀವು ನಿಜಕ್ಕೂ ಲಕ್ಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪಿಗ್ಗಿ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಮೇ 5ರಂದು ಲವ್ ಎಗೇನ್ ಸಿನಿಮಾ ರಿಲೀಸ್ ಆಗಿತ್ತು. ಸದ್ಯಕ್ಕೆ ಅವರು ಹೆಡ್ಸ್ ಆಫ್ ಸ್ಟೇಟ್ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.