Animal OTT: ಸಲಾರ್‌ಗೆ ಪೈಪೋಟಿ; ಒಟಿಟಿ ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ ಅನಿಮಲ್
Jan 29, 2024 08:14 PM IST
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್
Animal vs Salar on OTT: ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿದ್ದ ಅನಿಮಲ್ ಸಿನಿಮಾ ಒಟಿಟಿಯಲ್ಲೂ ಜನಪ್ರಿಯವಾಗಿದೆ. ಸದ್ಯ ಈ ಚಿತ್ರ ಟಾಪ್ ಟ್ರೆಂಡಿಂಗ್‌ನಲ್ಲಿದ್ದು, ಸಲಾರ್ ಜೊತೆಗೆ ಪೈಪೋಟಿ ನಡೆಸುತ್ತಿದೆ.
ಬೆಂಗಳೂರು: ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ (Ranbir Kapoor) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಮಲ್ (Animal) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಹಿಂಸಾತ್ಮಾಕ ಬೋಲ್ಡ್ ಆಕ್ಷನ್ ಮೂವಿ ಬಾಕ್ಸ್‌ಆಫೀಸ್ ಶೇಕ್ ಮಾಡಿತ್ತು. ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಅನಿಮಲ್ ಸುಮಾರು 910 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲೂ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜನವರಿ 26 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅನಿಮಲ್ ಸಿನಿಮಾ ಬಿಡುಗಡೆಯಾಗಿದೆ. ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಅನಿಮಲ್ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಸದ್ಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಭಾರತದ ಟ್ರಿಂಡಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದೊಂದಿಗೆ ಪೈಪೋಟಿ ನೀಡುತ್ತಿದೆ. ಅನಿಮಲ್ ಹಿಂದಿ ಅವತರಣಿಕೆ ಮೊದಲ ಸ್ಥಾನದಲ್ಲಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಟಾಲಿವುರ್ ರೆಬಲ್ ಸ್ಟಾರ್ ಪ್ರಭಾಸ್ ಅವರ ಸಲಾರ್ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಜನವರಿ 20 ರಂದು ಸ್ಟ್ರೀಮಿಂಗ್ ಆಗಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಅಂದಿನಿಂದ, ಸಲಾರ್ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ಭಾರತದ ಜೊತೆಗೆ ಹಲವು ದೇಶಗಳಲ್ಲೂ ಇದು ಟಾಪ್ 10 ರಲ್ಲಿ ಮುಂದುವರಿದಿದೆ. ಜನವರಿ 26 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಅನಿಮಲ್ ಪಾದಾರ್ಪಣೆಯೊಂದಿಗೆ ಸಂಚಲ ಮೂಡಿಸಿದ್ದು, ಭಾರತದ ಸಿನಿಮಾಗಳ ಟ್ರೆಂಡಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.
ಬೇರೆ ದೇಶಗಳ ಟಾಪ್ 10 ಟ್ರೆಂಡಿಂಗ್‌ನಲ್ಲಿ ಸಲಾರ್
ಸಲಾರ್ ಇಂದಿಗೂ ಟ್ರೆಂಡಿಂಗ್ ವಿಚಾರದಲ್ಲಿ ಹಲವು ದೇಶಗಳಲ್ಲಿ ಟಾಪ್ 10 ರಲ್ಲಿದೆ. ನೆಟ್‌ಫ್ಲಿಕ್ಸ್‌ಗೆ ಬಂದ ನಂತರ, ಸಲಾರ್ ವರ್ಲ್ಡ್‌ವೈಡ್ ಜನಪ್ರಿಯವಾಗಿದೆ. ಸಲಾರ್ ಗೋಸ್ ಗ್ಲೋಬನ್ ಎಂಬ ಹ್ಯಾಶ್ ಟ್ಯಾಗ್ ಕೂಡ ಸಾಮಾಜಿಗ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಜಾಗತಿಕವಾಗಿ, ಸಲಾರ್ ಇಂಗ್ಲಿಷ್ ಅಲ್ಲದ ವಿಭಾಗದಲ್ಲಿ ಟಾಪ್-3 ರಲ್ಲಿ ಇನ್ನೂ ಟ್ರೆಂಟಿಂಗ್‌ನಲ್ಲಿದೆ. ಅನಿಮಲ್ ನೆಟ್‌ಫ್ಲಿಕ್ಸ್‌ನಲ್ಲಿ ಭಾರತದಲ್ಲಿ ಸಲಾರ್‌ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಸಲಾರ್ ಪ್ರಸ್ತುತ ಭಾರತದ ಒಟಿಟಿ ಟ್ರಿಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಸಲಾರ್‌ನ ಹಿಂದಿ ವರ್ಷನ್ ಕೂಡ ನೆಟ್‌ಫ್ಲಿಕ್ಸ್‌ಗೆ ಬಂದಿದೆ. ಈ ಸಿನಿಮಾ ಇನ್ನಷ್ಟು ಪ್ರಾಬಲ್ಯ ತೋರುವಂತೆ ಕಾಣುತ್ತಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು ಆದರೂ ಥಿಯೇಟರ್‌ಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ ಎನಿಸಿದೆ. ಈ ಮೂವಿಯಲ್ಲಿ ರಣಬೀರ್‌ಗೆ ನಾಯಕಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಬಾಬಿ ಡಿಯೋಲ್, ಅನಿಲ್ ಕಪೂರ್, ತೃಪ್ತಿ ದಿಮ್ರಿ, ಶಕ್ತಿ ಕಪೂರ್, ಬಬ್ಲು ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).