logo
ಕನ್ನಡ ಸುದ್ದಿ  /  ಮನರಂಜನೆ  /  2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ, ಟಾಪ್‌ 20 ಲಿಸ್ಟ್‌ನಲ್ಲಿ ಸ್ಥಾನ ಪಡೆದ ಕನ್ನಡದ ಬಘೀರ

2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ, ಟಾಪ್‌ 20 ಲಿಸ್ಟ್‌ನಲ್ಲಿ ಸ್ಥಾನ ಪಡೆದ ಕನ್ನಡದ ಬಘೀರ

Praveen Chandra B HT Kannada

Jan 09, 2024 02:02 PM IST

google News

2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

    • IMDb Top 20 Most Anticipated Movies: ಸಿನಿಮಾ, ಟಿವಿಶೋ, ಸಿನಿಮಾ ನಟಿಯರು, ನಟರ ಡೈರೆಕ್ಟರಿಯಾಗಿರುವ ಐಎಂಡಿಬಿ ತಾಣವು ಈ ವರ್ಷದ ಬಹುನಿರೀಕ್ಷಿತ 20 ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಉಪೇಂದ್ರರ ಯುಐ ಸ್ಥಾನ ಪಡೆದಿಲ್ಲ. ಆದರೆ, ಬಘೀರ ಸಿನಿಮಾ ಸ್ಥಾನ ಪಡೆದಿದೆ.
2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ
2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳು ಯಾವುವು? ಈ ಪ್ರಶ್ನೆಗೆ ತನ್ನ ತಾಣಕ್ಕೆ ಭೇಟಿ ನೀಡುವ ಬಳಕೆದಾರರ ಪೇಜ್‌ವ್ಯೂಸ್‌ ಆಧರಿಸಿ ಐಎಂಡಿಬಿಯು ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಹೆಚ್ಚು ಜನರು ಆಸಕ್ತಿ ತೋರಿರುವ ಆಧಾರದಲ್ಲಿ 2024ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ ಪ್ರಕಾರ ಫೈಟರ್‌ನಿಂದ ಜಿಗರದವರೆಗೆ ಒಟ್ಟು 20 ಸಿನಿಮಾಗಳು ಬಹುನಿರೀಕ್ಷಿತ ಸಿನಿಮಾಗಳಾಗಿವೆ.

ಫೈಟರ್ ( 2024ರ ಬಹು ನಿರೀಕ್ಷಿತ ಚಿತ್ರ) ಚಿತ್ರದ ನಾಯಕ ಹೃತಿಕ್ ರೋಷನ್‌ ಐಎಂಡಿಬಿ ಪಟ್ಟಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. " ಐಎಂಡಿಬಿ ಪ್ರಕಾರ ಫೈಟರ್ ಚಿತ್ರದ 2024ರ ಬಹುನಿರೀಕ್ಷಿತ ಚಿತ್ರ ಎಂದು ತಿಳಿಯಿತು. ಫೈಟರ್ ಟೀಸರ್‌ಗೆ ವೀಕ್ಷಕರಿಂದ ದೊರಕಿರುವ ಪ್ರತಿಕ್ರಿಯೆ ಅದ್ಭುತವಾಗಿತ್ತು. ಈ ಸಿನಿಮಾ ಖಂಡಿತಾ ಸಿನಿಪ್ರಿಯರಿಗೆ ಒಂದೊಳ್ಳೆ ಅನುಭವ ನೀಡಲಿದೆ. ಫೈಟರ್‌ ಸಿನಿಮಾ ಜನವರಿ 25, 2024ರಂದು ಚಿತ್ರ ತೆರೆ ಕಾಣಲಿದೆ. ಗಣರಾಜ್ಯದ ಹಿಂದಿನ ದಿನ ಚಿತ್ರಮಂದಿರಗಳಲ್ಲಿ ಸಿಗೋಣ" ಎಂದು ಹೃತಿಕ್‌ ರೋಷಣ್‌ ಹೇಳಿದ್ದಾರೆ.

ಐಎಂಡಿಬಿ: ಬಹುನಿರೀಕ್ಷಿತ ಭಾರತೀಯ ಸಿನಿಮಾಗಳು

ಫೈಟರ್, ಫುಷ್ಪ: ದಿ ರೂಲ್ – ಭಾಗ 2, ವೆಲ್‌ಕಂ ಟು ದಿ ಜಂಗಲ್, ಸಿಂಘಂ ಅಗೇನ್, ಕಲ್ಕಿ 2898ಎಡಿ, ಭಗೀರಾ, ಹನುಮಾನ್, ಬಡೆ ಮಿಯಾ ಛೋಟೆ ಮಿಯಾ, ಕಂಗುವಾ, ದೇವರ ಭಾಗ -1, ಛಾವಾ, ಗುಂಟುರು ಕಾರಂ, ಮಲೈಕೊಟ್ಟೈ ವಾಲಿಬನ್, ಮೆರಿ ಕ್ರಿಸ್‌ಮಸ್‌, ಕ್ಯಾಪ್ಟನ್‌ ಮಿಲ್ಲರ್, ತಂಗಾಲನ್, ಇಂಡಿಯನ್ 2, ಯೋಧ, ಮೈ ಅಟಲ್ ಹೂಂ ಮತ್ತು ಜಿಗರ.

2024ರಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಸಿನಿಮಾಗಳ ಈ ಹೆಸರುಗಳು ಐಎಂಡಿಬಿ ಬಳಕೆದಾರರ ಪೇಜ್‌ವ್ಯೂಸ್‌ ಆಧರಿತವಾಗಿವೆ. ಐಎಂಡಿಬಿಗೆ ಜಗತ್ತಿನಾದ್ಯಂತ ಇರುವ ನೂರಾರು ದಶಲಕ್ಷ ಮಾಸಿಕ ನೈಜ್ಯ ಪೇಜ್‌ ವ್ಯೂ ಆಧರಿಸಿ ನಿರ್ಧರಿಸಲಾಗುತ್ತದೆ" ಎಂದು ಐಎಂಡಿಬಿ ತಿಳಿಸಿದೆ.

ಐಎಂಡಿಬಿ ಪಟ್ಟಿಯಲ್ಲಿರುವ 20 ಸಿನಿಮಾಗಳಲ್ಲಿ ಒಂಬತ್ತು ಹಿಂದಿ ಸಿನಿಮಾಗಳು, ಐದು ತೆಲುಗು, ನಾಲ್ಕು ತಮಿಳು, ಒಂದು ಮಲಯಾಳಂ ಮತ್ತು ಒಂದು ಕನ್ನಡ ಸಿನಿಮಾ ಎಂಬುದು ಗಮನಾರ್ಹ. ಪಟ್ಟಿಯಲ್ಲಿರುವ ಮೊದಲ ಐದು ಸಿನಿಮಾಗಳ ಪೈಕಿ ಮೂರರಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಫೈಟರ್ , ಸಿಂಗಮ್ ಎಗೈನ್, ಮತ್ತು ಕಲ್ಕಿ 2898 AD ಚಿತ್ರಗಳಲ್ಲಿ ಪಡುಕೋಣೆ ನಟಿಸಿದ್ದಾರೆ. ಅವರು ಇತ್ತೀಚೆಗೆ ಘೋಷಿಸಿದ ಐಎಂಡಿಬಿ 2023 ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ 3 ನೇ ಸ್ಥಾನವನ್ನು ಪಡೆದಿದ್ದಾರೆ.

ಐಎಂಡಿಬಿ ಪಟ್ಟಿಯಲ್ಲಿರುವ ನಾಲ್ಕು ಶೀರ್ಷಿಕೆಗಳು ಜನಪ್ರಿಯ ಸಿನಿಮಾಗಳ ಮುಂದುವರೆದ ಭಾಗಗಳಾಗಿವೆ: ಪುಷ್ಪಾ: ದಿ ರೂಲ್ - ಭಾಗ 2 , ವೆಲ್ಕಮ್ ಟು ದಿ ಜಂಗಲ್ , ಸಿಂಗಮ್ ಎಗೇನ್ , ಮತ್ತು ಇಂಡಿಯನ್ 2 ಗಳು ಈ ಹಿಂದೆ ಬಿಡುಗಡೆಯಾದ ಸಿನಿಮಾಗಳ ಮುಂದುವರೆದ ಭಾಗವಾಗಿದೆ.. ಬಳಕೆದಾರರು ಈ ಮತ್ತು ಇತರ ಶೀರ್ಷಿಕೆಗಳನ್ನು ತಮ್ಮ ಐಎಂಡಿಬಿ ವಾಚ್‌ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು ಮತ್ತು ಅವುಗಳ ಅಲರ್ಟ್‌ಗಳನ್ನು ಪಡೆದುಕೊಳ್ಳಬಹುದು ಎಂದು ಐಎಂಡಿಬಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ