Bollywood News:ಬಾಲಿವುಡ್ ನಟ ಶಾರುಖ್ ಖಾನ್ಗೆ ಅಪಘಾತ,ಮೂಗಿನ ಸರ್ಜರಿ ಮಾಡಿಸಿ ಮುಂಬೈನ ಮನ್ನತ್ನಲ್ಲಿ ರೆಸ್ಟ್ ಮಾಡುತ್ತಿರುವ ಕಿಂಗ್ಖಾನ್
Jul 04, 2023 01:17 PM IST
ಶಾರುಖ್ ಖಾನ್
ಶಾರುಖ್ ಖಾನ್ ಹೆಲ್ತ್ ಅಪ್ಡೇಟ್ ತಿಳಿದ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಆದರೆ ಭಯ ಪಡುವ ಅಗತ್ಯ ಏನಿಲ್ಲ, ಅವರು ಈಗ ಆರೋಗ್ಯವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ಗೆ ಈಗ 58 ವರ್ಷ. ಅರವತ್ತರ ಆಸುಪಾಸಿನಲ್ಲಿದ್ದರೂ ಶಾರುಖ್ಗೆ ಆಗಿರುವಷ್ಟೇ ಡಿಮ್ಯಾಂಡ್ ಈಗಲೂ ಇದೆ. ಇತ್ತೀಚೆಗೆ ಶಾರುಖ್ ಖಾನ್ ತಮ್ಮ ಹೊಸ ಸಿನಿಮಾ ಚಿತ್ರೀಕರಣಕ್ಕಾಗಿ ಅಮೆರಿಕ ತೆರಳಿದ್ದ ವೇಳೆಗೆ ಅವರಿಗೆ ಅಪಘಾತವಾಗಿದ್ದು ಚಿಕಿತ್ಸೆ ಆಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೆಸರಿಡದ ಸಿನಿಮಾ ಶೂಟಿಂಗ್ ಒಂದರಲ್ಲಿ ಭಾಗವಹಿಸಲು ಅಮೆರಿಕದ ಲಾಸ್ ಏಂಜಲೀಸ್ ತೆರಳಿದ್ದ ಶಾರುಖ್ ಖಾನ್ಗೆ ಆಕಸ್ಮಿಕವಾಗಿ ಸಣ್ಣ ಅಪಘಾತವಾಗಿದೆ. ಇದರಿಂದ ಅವರ ಮೂಗಿಗೆ ಪೆಟ್ಟಾಗಿದ್ದು ರಕ್ತ ಸುರಿಯಲು ಆರಂಭಿಸಿದೆ. ಕೂಡಲೇ ಶೂಟಿಂಗ್ ನಿಲ್ಲಿಸಿ ಅವರು ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಮೂಗಿಗೆ ಸಣ್ಣ ಸರ್ಜರಿ ಮಾಡಿ ರೆಸ್ಟ್ ಮಾಡಲು ಹೇಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಾರುಖ್ ಖಾನ್ ಶೂಟಿಂಗ್ ಕ್ಯಾನ್ಸಲ್ ಮಾಡಿ ಮುಂಬೈಗೆ ವಾಪಸಾಗಿದ್ದಾರೆ. ಸದ್ಯಕ್ಕೆ ಶಾರುಖ್ ಮೂಗಿಗೆ ಬ್ಯಾಂಡೇಜ್ ಹಾಕಲಾಗಿದ್ದು ಮುಂಬೈನ ಮನ್ನತ್ ನಿವಾಸದಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗುವುದಾಗಿ ಮೂಲಗಳು ತಿಳಿಸಿವೆ. ಆದರೆ ಅಪಘಾತ ಹೇಗೆ ಸಂಭವಿಸಿತು ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ.
ಮೆಚ್ಚಿನ ನಟ ಶಾರುಖ್ ಖಾನ್ ಹೆಲ್ತ್ ಅಪ್ಡೇಟ್ ತಿಳಿದ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಆದರೆ ಭಯ ಪಡುವ ಅಗತ್ಯ ಏನಿಲ್ಲ, ಅವರು ಈಗ ಆರೋಗ್ಯವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಶಾರುಖ್ ಸದ್ಯಕ್ಕೆ ಜವಾನ್ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರವನ್ನು ಸೌತ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಸೆಪ್ಟೆಂಬರ್ 7 ರಂದು ಸಿನಿಮಾ ತೆರೆ ಕಾಣಲಿದೆ.
ಈ ಸಿನಿಮಾ ಹೊರತುಪಡಿಸಿ ಶಾರುಖ್ ಖಾನ್ ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ಬ್ಯಾಚುಲರ್ ಸಲ್ಮಾನ್ ಖಾನ್ ಜೊತೆ 'ಟೈಗರ್ vs ಪಠಾಣ್' ಎಂಬ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪಠಾಣ್ ಸಿನಿಮಾ ತೆರೆ ಕಂಡಿತ್ತು. ವಿವಾದದ ನಡುವೆಯೂ ಈ ಸಿನಿಮಾ ತೆರೆ ಕಂಡು ಸಾಕಷ್ಟು ಲಾಭ ಮಾಡಿದೆ. ಹಿಂದಿ ಸಿನಿಮಾಗಳಲ್ಲೇ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಆಗಿ ದಾಖಲೆ ಬರೆದಿದೆ.