logo
ಕನ್ನಡ ಸುದ್ದಿ  /  ಮನರಂಜನೆ  /  Maidaan Box Office: ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮುಂದುವರೆಸಿದ ಮೈದಾನ್‌; ಅಜಯ್‌ ದೇವಗನ್‌ ಸಿನಿಮಾದ 4 ದಿನದ ಕಲೆಕ್ಷನ್‌ ವಿವರ

Maidaan box office: ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮುಂದುವರೆಸಿದ ಮೈದಾನ್‌; ಅಜಯ್‌ ದೇವಗನ್‌ ಸಿನಿಮಾದ 4 ದಿನದ ಕಲೆಕ್ಷನ್‌ ವಿವರ

Praveen Chandra B HT Kannada

Apr 15, 2024 09:30 AM IST

google News

ಮೈದಾನ್‌ ಸಿನಿಮಾದಲ್ಲಿ ಅಜಯ್‌ ದೇವ್‌ಗನ್‌

    • Maidaan box office collection day 4: ಅಜಯ್‌ ದೇವ್‌ಗನ್‌ ನಟನೆಯ, ಅಮಿತ್‌ ಆರ್‌ ಶರ್ಮಾ ನಿರ್ದೇಶನದ ಮೈದಾನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಮುಂದುವರೆಸಿದೆ. ಅಜಯ್‌ ದೇವ್‌ಗನ್‌ ಈ ಸಿನಿಮಾದಲ್ಲಿ ಫುಟ್‌ಬಾಲ್‌ ಕೋಚ್‌ ಆಗಿ ಕಾಣಿಸಿಕೊಂಡಿದ್ದಾರೆ.
ಮೈದಾನ್‌ ಸಿನಿಮಾದಲ್ಲಿ ಅಜಯ್‌ ದೇವ್‌ಗನ್‌
ಮೈದಾನ್‌ ಸಿನಿಮಾದಲ್ಲಿ ಅಜಯ್‌ ದೇವ್‌ಗನ್‌

ಬೆಂಗಳೂರು: ಅಜಯ್‌ ದೇವ್‌ಗನ್‌ ನಟನೆಯ ಸ್ಪೋರ್ಟ್ಸ್‌ ಡ್ರಾಮಾ ಮೈದಾನ್‌ ಕುರಿತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಚ್‌ನಿಲ್ಕ್‌.ಕಾಂನ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಈ ಸಿನಿಮಾ ನಾಲ್ಕನೇ ದಿನ 6 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಮಿತ್‌ ಆರ್‌ ಶರ್ಮಾ ನಿರ್ದೇಶನದ ಈ ಸಿನಿಮಾವು ಸೈಯದ್‌ ಅಬ್ದುಲ್‌ ರಹಿಮ್‌ ಅವರ ಜೀವನ ಕಥೆ ಆಧರಿತವಾಗಿದೆ. ಈ ಸಿನಿಮಾ ನಾಲ್ಕನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಿದೆ ಎಂದು ನೋಡೋಣ ಬನ್ನಿ.

ಮೈದಾನ್‌ ಬಾಕ್ಸ್‌ ಆಫೀಸ್‌ ವರದಿ

ಮೈದಾನ್‌ ಸಿನಿಮಾವು ಆರಂಭದಿಂದಲೇ ದೊಡ್ಡ ಮಟ್ಟದ ಗಳಿಕೆ ಮಾಡಿರಲಿಲ್ಲ. ಸಚ್‌ನಿಲ್ಕ್.ಕಾಂ ಪ್ರಕಾರ ನಾಲ್ಕನೇ ದಿನ ಅಂದರೆ ಭಾನುವಾರ 6.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಮೈದಾನ್‌ ಸಿನಿಮಾದ ಅತ್ಯಧಿಕ ಸಿಂಗಲ್‌ ಡೇ ಕಲೆಕ್ಷನ್‌. ಮೊದಲ ದಿನ ಮೈದಾನ್‌ ಗಳಿಕೆ 4.5 ಕೋಟಿ ರೂಪಾಯಿ ಆಗಿತ್ತು. ಎರಡು ಮತ್ತು ಮೂರನೇ ದಿನ ಕ್ರಮವಾಗಿ 2.75 ಕೋಟಿ ಮತ್ತು 5.75 ಕೋಟಿ ರೂ ಗಳಿಕೆ ಮಾಡಿತ್ತು. ನಾಲ್ಕನೇ ದಿನವನ್ನು ಸೇರಿ ಒಟ್ಟು 21.85 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಾಲ್ಕನೇ ದಿನ ಹಿಂದಿ ಸಿನಿಮಾದ ಆಕ್ಯುಪೆನ್ಸಿ ಶೇಕಡ 24.29ರಷ್ಟಿತ್ತು.

ಮೈದಾನ್‌ ಸಿನಿಮಾಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷಯ್‌ ಕುಮಾರ್‌ ಮತ್ತು ಟೈಗರ್‌ ಶ್ರಾಫ್‌ ನಟನೆಯ ಬಡೇ ಮಿಯಾನ್‌ ಚೋಟೆ ಮಿಯಾನ್‌ ಸ್ಪರ್ಧೆ ಒಡ್ಡಿದೆ. ಇದು ಆಲಿ ಅಬ್ಬಾಸ್‌ ಝಫರ್‌ ನಿರ್ದೇಶನದ ಸಿನಿಮಾ. ಇಲ್ಲಿಯವರೆಗೆ ಬಡೇ ಮಿಯಾ ಚೋಟೆ ಮಿಯಾ ಸಿನಿಮಾವು 40 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.

ಹೆಚ್ಚಿನ ವಿವರ

ಮೈದಾನ್‌ ಸಿನಿಮಾದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಕೂಡ ನಟಿಸಿದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. "ಅಜಯ್‌ ದೇವ್‌ಗನ್‌ ತನ್ನ ಪಾತ್ರಕ್ಕೆ ನ್ಯಾಯಒದಗಿಸಿದ್ದಾರೆ. ಅವರು ಈ ಚಿತ್ರದ ಆತ್ಮವೆಂದರೆ ನಿರಾಕರಿಸಲಗದು. ಚಕ್ ದೇನಲ್ಲಿ ಶಾರುಖ್ ಖಾನ್ ಅವರ ಕಬೀರ್ ಖಾನ್‌ಗಿಂತ ಭಿನ್ನವಾಗಿ ಇಲ್ಲಿ ಅಜಯ್‌ ದೇವ್‌ಗನ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಉದ್ದಕ್ಕೂ ತನ್ನ ಬೆರಳುಗಳ ನಡುವೆ ಸಿಗರೇಟು ಇಟ್ಟುಕೊಂಡಿದ್ದಾರೆ. ಇವರ ಕಣ್ಣುಗಳು ಸಾಕಷ್ಟು ಮಾತನಾಡಿವೆ. ಈ ಸಿನಿಮಾದ ಕಥೆಗೆ ಕಾರಣವಾದ ಸೈಯದ್‌ ಅಬ್ದುಲ್‌ ರಹಿಮ್‌ನ ಬದುಕನ್ನು ಯಶಸ್ವಿಯಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ" ಎಂದು ಹಿಂದೂಸ್ತಾನ್‌ ಟೈಮ್ಸ್‌ ಮೈದಾನ್‌ ಸಿನಿಮಾದ ವಿಮರ್ಶೆಯಲ್ಲಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ