Heeramandi Trailer: ಸ್ವಾತಂತ್ರ್ಯ ಹೋರಾಟದಲ್ಲಿ ವೇಶ್ಯೆಯರ ಕೊಡುಗೆ ಏನು? ‘ಹೀರಾಮಂಡಿ’ ಟ್ರೇಲರ್‌ನಲ್ಲಿ ಅಚ್ಚರಿಯ ವಿಚಾರಗಳು ರಿವೀಲ್
Apr 11, 2024 06:26 AM IST
Heeramandi Trailer: ಸ್ವಾತಂತ್ರ್ಯ ಹೋರಾಟದಲ್ಲಿ ವೇಶ್ಯೆಯರ ಕೊಡುಗೆ ಏನು? ‘ಹೀರಾಮಂಡಿ’ ಟ್ರೇಲರ್‌ನಲ್ಲಿ ಅಚ್ಚರಿಯ ವಿಚಾರಗಳು ರಿವೀಲ್
- ಸಂಜಯ್ ಲೀಲಾ ಬನ್ಸಾಲಿ ಹೀರಾಮಂಡಿ; ದಿ ಡೈಮಂಡ್ ಬಜಾರ್ ಅನ್ನೋ ಸಿರೀಸ್ ಘೋಷಣೆ ಮಾಡಿದ ಬಳಿಕ, ನಿರೀಕ್ಷೆಯ ಗಡಿ ಮೀರಿತ್ತು. ಫಸ್ಟ್ ಲುಕ್ ಮೂಲಕವೇ ಎಲ್ಲರನ್ನು ಸೆಳೆದಿದ್ದರು. ಈಗ ಆ ಕೌತುಕ ತಣಿದಿದೆ. ಪವರ್ ಪ್ಯಾಕ್ಡ್ ಟ್ರೇಲರ್ ಬಿಡುಗಡೆಯಾಗಿದೆ.
Heeramandi Trailer: ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾಗಳೆಂದರೆ ಅಲ್ಲಿ ಅದ್ಧೂರಿತನಕ್ಕೆ ಕೊರತೆ ಕಾಣಿಸದು. ವೈಭವದ ಜತೆಗೆ ಗಟ್ಟಿ ಕಥೆಯನ್ನೇ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಾರವರು. ಈಗ ಹೀರಾಮಂಡಿ; ದಿ ಡೈಮಂಡ್ ಬಜಾರ್ ಹೆಸರಿನ ವೆಬ್‌ಸಿರೀಸ್ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ಟ್ರೇಲರ್ ಸಹ ಬಿಡುಗಡೆ ಆಗಿದ್ದು, ಒಂದು ಕ್ಷಣ ನೋಡುಗರ ಎದೆ ಝಲ್ ಎನಿಸಿದ್ದಾರೆ. ಬಾಲಿವುಡ್‌ನ ಸ್ಟಾರ್ ಮಹಿಳಾ ನಟಿಯರನ್ನೇ ಪ್ರಧಾನ ಪಾತ್ರಗಳಲ್ಲಿ ಇಳಿಸಿರುವ ಬನ್ಸಾಲಿ, ಸ್ವಾತಂತ್ರ್ಯ ಪೂರ್ವದ ಕಥೆ ಹೇಳಲು ಹೊರಟಿದ್ದಾರೆ. ಹಾಗಾದರೆ, ಬನ್ಸಾಲಿಯ ಈ ಚೊಚ್ಚಲ ವೆಬ್‌ಸಿರೀಸ್‌ನ ತಿರುಳೇನು?
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೀರಾಮಂಡಿ ಅನ್ನೋ ಸಿರೀಸ್ ಘೋಷಣೆ ಮಾಡಿದ ಬಳಿಕ, ನಿರೀಕ್ಷೆಯ ಗಡಿ ಮೀರಿತ್ತು. ಫಸ್ಟ್ ಲುಕ್ ಮೂಲಕವೇ ಎಲ್ಲರನ್ನು ಸೆಳೆದಿದ್ದರು. ಈಗ ಆ ಕೌತುಕ ತಣಿದಿದೆ. ಹೀರಾಮಂಡಿ; ದಿ ಡೈಮಂಡ್ ಬಜಾರ್ ಸಿರೀಸ್‌ನ ಟ್ರೇಲರ್ ಬಿಡುಗಡೆ ಆಗಿದ್ದು, ಮೇಕಿಂಗ್, ಹಿನ್ನೆಲೆ ಸಂಗೀತ, ಕಥೆಯ ಮೂಲಕವೇ ಎಲ್ಲರನ್ನು ಹಿಡಿದಿಟ್ಟುಕೊಂಡಿದೆ. ಈ ಸಿರೀಸ್‌ನ ಕಥೆ ಏನಿರಬಹುದು ಎಂದು ಕಾದವರಿಗೂ ಈಗ ಉತ್ತರ ಸಿಕ್ಕಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ಈ ಹೈ ಬಜೆಟ್‌ನ ವೆಬ್‌ಸಿರೀಸ್ ನಿರ್ಮಾಣ ಮಾಡಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ವೇಶ್ಯೆಯರ ಕೊಡುಗೆ
ಹೀರಾಮಂಡಿ; ದಿ ಡೈಮಂಡ್ ಬಜಾರ್ ಟ್ರೈಲರ್‌ನಲ್ಲಿ, ಸ್ವಾತಂತ್ರ ಭಾರತಕ್ಕಿಂತ ಮೊದಲು ಲಾಹೋರ್‌ನ ರೆಡ್ ಲೈಟ್ ಏರಿಯಾದ ವೇಶ್ಯೆಯರು ಹೇಗೆ ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲ್ಲಾಡಿಸಿದರು ಎಂಬುದನ್ನು ತೋರಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನೂ ಬನ್ಸಾಲಿ ಅವರ ಈ ಸರಣಿಯಲ್ಲಿ ನೋಡಬಹುದಾಗಿದೆ. ಇದಲ್ಲದೇ, ಈ ಟ್ರೇಲರ್‌ನಲ್ಲಿ ಹೀರಾಮಂಡಿಯ ರಾಜಮನೆತನದ ಕಥೆಯೂ ಪ್ರಧಾನ ಪಾತ್ರ ವಹಿಸಿದೆ.
ಪವರ್ ಪ್ಯಾಕ್ಡ್ ಟ್ರೇಲರ್
'ವೇಶ್ಯೆಯರ ಶಕ್ತಿ ಮತ್ತು ಧೈರ್ಯದ ನೋಟ' ಎಂಬ ಡೈಲಾಗ್‌ನ ಜತೆಗೆ ಈ ವೆಬ್ ಸರಣಿಯ ಟ್ರೇಲರ್ ಮೊನಿಶಾ ಕೊಯಿರಾಲಾ ಅವರ ಧ್ವನಿಯಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಇಡೀ ಹೀರಾಮಂಡಿಯನ್ನು ಆಳುತ್ತಿರುವುದೇ ಆ ಮಲಿಕಾಜಾನ್. ಅಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಅನ್ನೋ ಘೋಷಣೆಯೂ ಮೊಳಗುತ್ತದೆ. ಬ್ರಿಟೀಷರ ವಿರುದ್ಧ ಹೀರಾಮಂಡಿಯ ವೇಶ್ಯೆಯರ ಹೋರಾಟ ಹೇಗಿತ್ತು ಎಂಬುದೇ ಈ ಸಿರೀಸ್‌ನ ಕಥೆ. ಸದ್ಯ ಬಿಡುಗಡೆಯಾಗಿರುವ 3ನಿಮಿಷ 11 ಸೆಕೆಂಡ್‌ನ ಟ್ರೇಲರ್‌ನಲ್ಲಿ ಅದ್ದೂರಿತನದ ಜತೆಗೆ ದೇಶಪ್ರೇಮವನ್ನೇ ತುಂಬಿಸಿದ್ದಾರೆ ನಿರ್ದೇಶಕರು.
ಹೀರಾಮಂಡಿ ರಿಲೀಸ್ ಯಾವಾಗ?
ಸೋನಾಕ್ಷಿ ಸಿನ್ಹಾ, ಮೋನಿಶಾ ಕೊಯಿರಾಲಾ, ರಿಚಾ ಚಡ್ಡಾ, ಅದಿತಿ ರಾವ್ ಹೈದರಿ, ಶರ್ಮಿನ್ ಸೆಹಗಲ್, ಸಂಜೀದಾ ಶೇಖ್, ಶೇಖರ್ ಸುಮನ್, ಫರ್ದೀನ್ ಖಾನ್ ಮತ್ತು ಅಧ್ಯಾಯನ್ ಸುಮನ್ ಹೀರಾಮಂಡಿಯ ಟ್ರೇಲರ್‌ನಲ್ಲಿ ಕಂಡಿದ್ದಾರೆ. ಮಿಂಚು ಹರಿಸಿದ್ದಾರೆ. ಅಂದಹಾಗೆ, 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವೆಬ್ ಸಿರೀಸ್ ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಹೀಗೆ ಬಿಡುಗಡೆ ಆಗಿರುವ ಟ್ರೇಲರ್ ಕಂಡು ಇಡೀ ಬಾಲಿವುಡ್ ಬೆಕ್ಕಸ ಬೆರಗಾಗಿದೆ, ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಾಲ್ ಸೇರಿ ಸಾಕಷ್ಟು ಮಂದಿ ಬನ್ಸಾಲಿ ಕೃತಿಗೆ ಬಹುಪರಾಕ್ ಹೇಳುತ್ತಿದ್ದಾರೆ.