ಸೂಪರ್‌ಸ್ಟಾರ್‌ಗಳ ಕಾಲ ಮುಗೀತು, ಸಾಮಾನ್ಯ ರೂಪಿ ಪ್ರತಿಭಾನ್ವಿತರಿಗೆ ಒಟಿಟಿ ಉತ್ತಮ ಅವಕಾಶವೆಂದ ನಾನಾ ಪಾಟೇಕರ್
Dec 22, 2023 05:48 PM IST
ಸಾಮಾನ್ಯ ರೂಪಿ ಪ್ರತಿಭಾನ್ವಿತರಿಗೆ ಒಟಿಟಿ ಉತ್ತಮ ಅವಕಾಶವೆಂದ ನಾನಾ ಪಾಟೇಕರ್
- Nana Patekar: ಒಟಿಟಿಯು ಸಾಮಾನ್ಯ ಲುಕ್ ಹೊಂದಿರುವ ನನ್ನಂತಹ ನಟರಿಗೆ ಅವಕಾಶದ ಬಾಗಿಲು ತೆರೆದಿದೆ. ಸಿನಿಮಾ ಸೇರಲು ಸುಂದರವಾಗಿರಬೇಕು ಎಂಬ ಅಭಿಪ್ರಾಯವನ್ನು ಒಟಿಟಿ ಬದಲಾಯಸಿದೆ ಎಂದು ನಾನಾ ಪಾಟೇಕರ್ ಅಭಿಪ್ರಾಯಪಟ್ಟಿದ್ದಾರೆ.
ನಾನಾ ಪಾಟೇಕರ್ ಅವರು ತಮ್ಮ ಮುಂದಿನ ಸಿನಿಮಾ "ದಿ ವ್ಯಾಕ್ಸಿನ್ ವಾರ್ʼ ಬಿಡುಗಡೆ ಮಾಡುವ ಸಡಗರದಲ್ಲಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಅವರು ಒಟಿಟಿ ಉದಯದ ಕುರಿತು ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಟಿಟಿಯು ಸಾಮಾನ್ಯ ಲುಕ್ ಹೊಂದಿರುವ ನನ್ನಂತಹ ನಟರಿಗೆ ಅವಕಾಶದ ಬಾಗಿಲು ತೆರೆದಿದೆ. ಸಿನಿಮಾ ಸೇರಲು ಸುಂದರವಾಗಿರಬೇಕು ಎಂಬ ಅಭಿಪ್ರಾಯವನ್ನು ಒಟಿಟಿ ಬದಲಾಯಿಸಿದೆ. ಇದರಿಂದ ಸಾಕಷ್ಟು ಪ್ರತಿಭಾನ್ವಿತರಿಗೆ ಅವಕಾಶ ದೊರಕಿದೆ" ಎಂದು ಅವರು ಹೇಳಿದ್ದಾರೆ.
ನಾನಾ ಪಾಟೇಕರ್ ಹೇಳಿದ್ದೇನು?
ನನಗೆ ಆಗ ನಟಿಸಲು ಅವಕಾಶ ದೊರಕಿರಲಿಲ್ಲ. ಆದರೆ, ಈಗ ಒಟಿಟಿಯಲ್ಲಿ ಅವಕಾಶ ದೊರಕಿದೆ. ನಮಗೆ ವೇದಿಕೆ ದೊರಕಿದೆ. ಅಲ್ಲಿ ನಾವು ನಮ್ಮ ಪ್ರತಿಭೆ ಪ್ರದರ್ಶಿಸಬೇಕು. ಜನರು ನಮ್ಮನ್ನು ಇಷ್ಟಪಡುತ್ತಾರೆ. ಒಟಿಟಿ ಆಗಮಿಸಿದ ಬಳಿಕ ಕಲಾವಿದರಿಗೆ ಸಿನಿಮಾ ಥಿಯೇಟರ್ ಮತ್ತು ನಾಟಕ ಹೊರತುಪಡಿಸಿ ಇನ್ನೊಂದು ವೇದಿಕೆ ದೊರಕಿದೆ" ಎಂದು ಅವರು ಹೇಳಿದ್ದಾರೆ.
ಸೂಪರ್‌ಸ್ಟಾರ್ ಕುರಿತು ನಾನಾ ಪಾಟೇಕರ್ ಅಭಿಪ್ರಾಯ
ಇದೇ ಮಾಧ್ಯಮ ಸಂದರ್ಶನದಲ್ಲಿ ಸೂಪರ್‌ಸ್ಟಾರ್‌ಡಾಮ್ ಅಂತ್ಯದ ಕುರಿತು ಹೇಳಿದ್ದಾರೆ. ಈಗ ನಟರು ಬಾಕ್ಸ್ ಆಫೀಸ್ ಫಲಿತಾಂಶದ ಕೆಲವು ವಾರಗಳಲ್ಲಿಯೇ ಮರೆತು ಹೋಗುತ್ತಾರೆ. ಯಾರಿಗೂ ಆ ನಟರ ನೆನಪು ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ನಟರಾಗಬೇಕು ಎಂದು ಕೆಲವು ಉದಾಹರಣೆ ನೀಡಿದ್ದಾರೆ. ದಿಲೀಪ್ ಕುಮಾರ್, ರಾಜ್ ಕಪೂರ್, ದೇವ್ ಆನಂದ್... ಮುಂತಾದವರನ್ನು ಪ್ರೇಕ್ಷಕರು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾನಾ ಪಾಟೇಕರ್ ಅವರು ಭಾರತದ ಸಿನಿಮಾರಂಗದಲ್ಲಿ ಮೂರು ದಶಕಗಳಿಂದ ಇದ್ದಾರೆ. ಪರಿಂದಾ (1989), ಕ್ರಾಂತಿವೀರ್ (1994), ಕಾಮೋಶಿ: ದಿ ಮ್ಯೂಸಿಕಲ್ (1996) ಮತ್ತು ವೆಲ್‌ಕಂ (2007) ಇವರ ಪ್ರಮುಖ ಚಿತ್ರಗಳು.
ಇದೀಗ ನಾನಾ ಪಾಟೇಕರ್ ಅವರು ಮತ್ತೆ ಬಿಗ್ ಸ್ಕ್ರೀನ್‌ಗೆ ಹಿಂತುರುಗಿದ್ದಾರೆ. ವಿವೇಕ್ ಅಗ್ನಿಹೋತ್ರಿಯವರ ದಿ ವ್ಯಾಕ್ಸಿನ್ ವಾರ್ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಭಾರತದ ಮೊದಲ ಲಸಿಕೆ ಕಂಡುಹಿಡಿದ ವಿಷಯದ ಕುರಿತು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ವಿಜ್ಞಾನಿಗಳ ತಂಡದ ನಾಯಕನಾಗಿ ನಾನಾ ಪಾಟೇಕರ್ ನಟಿಸಿದ್ದಾರೆ. ಅನುಪಮ್ ಖೇರ್, ರೈಮ ಸೇನ್, ಸಪ್ತಮಿ ಗೌಡ ಮತ್ತು ಪಲ್ಲವಿ ಜೋಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಸೆಪ್ಟೆಂಬರ್ 28ರಂದು ತೆರೆಗೆ ಬರಲಿದೆ.
ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು
ಸಿನಿಮಾಗಳ ಜತೆಗೆ ಒಟಿಟಿಗೂ ಡಿಮಾಂಡ್ ಹೆಚ್ಚಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಸಲುವಾಗಿ ಕಾಯುವ ಜನರ ನಡುವೆಯೇ ಒಟಿಟಿ ಕ್ಷೇತ್ರಕ್ಕೂ ಅಪಾರ ನೋಡುಗರಿದ್ದಾರೆ. ಪ್ರತಿ ವಾರ ಯಾವ ಸಿನಿಮಾ, ವೆಬ್ ಸಿರೀಸ್‌ಗಳು ಸ್ಕ್ರೀಮಿಂಗ್ ಆರಂಭಿಸಲಿವೆ ಎಂದು ಕಾದು ಕುಳಿತರಿದ್ದಾರೆ. ಅವರೆಲ್ಲರನ್ನು ತಣಿಸುವ ಉದ್ದೇಶಕ್ಕೆ ಪ್ರತಿ ವಾರ ಹೊಸ ಹೊಸ ಕಲೆಕ್ಷನ್ಸ್‌ಗಳನ್ನು ನೋಡುಗರ ತಟ್ಟೆಗೆ ಬಡಿಸುವ ಕೆಲಸವನ್ನು ಒಟಿಟಿಗಳು ಮಾಡುತ್ತಿವೆ. ಅದೇ ರೀತಿ ಈ ವಾರ ಒಂದಷ್ಟು ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಲು ಸಿದ್ಧವಾಗಿವೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.