logo
ಕನ್ನಡ ಸುದ್ದಿ  /  ಮನರಂಜನೆ  /  Parineeti Chopra: ನಟಿ ಪರಿಣಿತಿ ಚೋಪ್ರಾ ಜತೆ ನಿಶ್ಚಿತಾರ್ಥ, ಬದಲಾಯಿತು ನನ್ನ ಬದುಕಿನ ಅರ್ಥ, ಹೀಗಂದ್ರು ಯುವ ರಾಜಕಾರಣಿ

Parineeti Chopra: ನಟಿ ಪರಿಣಿತಿ ಚೋಪ್ರಾ ಜತೆ ನಿಶ್ಚಿತಾರ್ಥ, ಬದಲಾಯಿತು ನನ್ನ ಬದುಕಿನ ಅರ್ಥ, ಹೀಗಂದ್ರು ಯುವ ರಾಜಕಾರಣಿ

Praveen Chandra B HT Kannada

Jul 27, 2023 11:03 AM IST

google News

ಪರಿಣಿತಿ ಚೋಪ್ತಾ ಮತ್ತು ರಾಘವ್‌ ಚಡ್ಡಾ ನಿಶ್ಚಿತಾರ್ಥದ ಫೋಟೊ

    • Raghav Chadha Parineeti Chopra: ಪರಿಣಿತಿ ಚೋಪ್ರಾ ಅವರ ಜತೆ ಎಂಗೇಜ್‌ಮೆಂಟ್‌ ಆದ ಬಳಿಕ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ನನ್ನ ಸಹೋದ್ಯೋಗಿಗಳು ಮತ್ತು ಹಿರಿಯರು ನನ್ನನ್ನು ಕಡಿಮೆ ಟೀಕೆ ಮಾಡುತ್ತಿದ್ದಾರೆ ಎಂದು ರಾಘವ್‌ ಚಡ್ಡಾ ಹೇಳಿದ್ದಾರೆ.
ಪರಿಣಿತಿ ಚೋಪ್ತಾ ಮತ್ತು ರಾಘವ್‌ ಚಡ್ಡಾ ನಿಶ್ಚಿತಾರ್ಥದ ಫೋಟೊ
ಪರಿಣಿತಿ ಚೋಪ್ತಾ ಮತ್ತು ರಾಘವ್‌ ಚಡ್ಡಾ ನಿಶ್ಚಿತಾರ್ಥದ ಫೋಟೊ

ಪರಿಣಿತಿ ಚೋಪ್ರಾ ಅವರ ಜತೆ ಎಂಗೇಜ್‌ಮೆಂಟ್‌ ಆದ ಬಳಿಕ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ನನ್ನ ಸಹೋದ್ಯೋಗಿಗಳು ಮತ್ತು ಹಿರಿಯರು ನನ್ನನ್ನು ಕಡಿಮೆ ಟೀಕೆ ಮಾಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ನಾಯಕ ಮತ್ತು ನಟ ರಾಘವ್‌ ಚಡ್ಡಾ ಹೇಳಿದ್ದಾರೆ. ಇವರಿಬ್ಬರು 2023ರ ನಂತರ ಮದುವೆಯಾಗಲಿದ್ದಾರೆ ಎಂದು ವರದಿಗಳು ಹೇಳಿವೆ. ರಾಘವ್‌ ಚಡ್ಡಾ ಅವರು ಪರಿಣಿತಿ ಚೋಪ್ರಾ ಜತೆ ನಿಶ್ಚಿತಾರ್ಥ ಮಾಡಿದ ಬಳಿಕ ಸಾಕಷ್ಟು ಬದಲಾಗಿದ್ದಾರಂತೆ. ಅವರ ಬದುಕಿನ ಅರ್ಥ ಸಾಕಷ್ಟು ಬದಲಾಗಿದೆ. ಜತೆಗೆ, ಅವರು ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಇವರನ್ನು ಸಹೋದ್ಯೋಗಿಗಳು ಮತ್ತು ಹಿರಿಯರು ಟೀಕೆ ಮಾಡೋದು ಕಡಿಮೆಯಾಗಿದೆಯಂತೆ. ಇಲ್ಲವಾದರೆ, ಯಾವಾಗ ಮದುವೆ, ಏನೋ ಮದುವೆಯಾಗೋಲ್ವ ಎಂದೆಲ್ಲ ಕಿಚಾಯಿಸುತ್ತಿದ್ದರು. ಮುಖ್ಯವಾಗಿ ಪರಿಣಿತಿ ಚೋಪ್ರಾ ಜತೆಗೆ ತಿರುಗಾಡುವ ವಿಷಯಗಳಿಗೆ ಕಿಚಾಯಿಸುತ್ತಿದ್ದರು. ನಿಶ್ಚಿತಾರ್ಥ ಮುಗಿದ ಬಳಿಕ ಇಂತಹ ತೊಂದರೆಯಿಲ್ಲ ಎಂದು ಅವರು ಹೇಳಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ ಚಡ್ಡಾ ಸಂಬಂಧ

ಇವರು ನಿಶ್ಚಿತಾರ್ಥಕ್ಕೆ ಮೊದಲು ತಮ್ಮ ಡೇಟಿಂಗ್‌ ಕುರಿತು ಸಾರ್ವಜನಿಕವಾಗಿ ಎಂದೂ ಮಾತನಾಡಿರಲಿಲ್ಲ. ಆದರೆ, ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದರು. ಅಧಿಕೃತವಾಗಿ ಇದೇ ಮೇ ತಿಂಗಳಿನಲ್ಲಿ ಇವರು ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಇವರ ಫೋಟೊಗಳು, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗತೊಡಗಿತ್ತು. ಇವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪ್ರವಾಸ ಹೋಗಿರುವುದು ಎಲ್ಲವೂ ಬಯಲಾಗಿತ್ತು.

ನಿಶ್ಚಿತಾರ್ಥದ ಬಳಿಕ ಎಲ್ಲರೂ ಗಪ್‌ಚುಪ್‌

ನಿಶ್ಚಿತಾರ್ಥದ ಬಳಿಕ ಜೀವನ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ರಾಘವ್‌ ಚಡ್ಡಾ ಉತ್ತರಿಸಿದ್ದಾರೆ. "ಇದನ್ನು ರಾಜಕರಣ ಎಂದುಕೊಳ್ಳಬಾರದು. ವೈಯಕ್ತಿಕವಾಗಿಯೂ ತೆಗೆದುಕೊಳ್ಳಬಾರದು. ಈಗ ನನ್ನ ಸಹೋದ್ಯೋಗಿಗಳು, ಪಕ್ಷದ ಸ್ನೇಹಿತರು, ಹಿರಿಯರು ನನ್ನನ್ನು ಟೀಕೆ ಮಾಡುತ್ತಿಲ್ಲ. ಅದಕ್ಕೂ ಮೊದಲು ಮದುವೆ ಯಾವಾಗ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾವು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಈಗ ಎಲ್ಲರಿಗೂ ತಿಳಿದಿದೆ. ಜೀವನ ಈಗ ಸಾಕಷ್ಟು ಬದಲಾಗಿದೆ" ಎಂದು ಅವರು ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪರಿಣಿತಿ ಚೋಪ್ರಾ

ಪರಿಣಿತಿ ಚೋಪ್ರಾ ಮತ್ತು ರಾಘವ್‌ ಚಡ್ಡಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮೇ 13ರಂದು ನವದೆಹಲಿಯ ಕಪುರ್ತಳ ಮನೆಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಶ್ವಿತಾರ್ಥ ಬಳಿಕ ಇವರಿಬ್ಬರು ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮಿಬ್ಬರ ಫೋಟೊ ಹಂಚಿಕೊಂಡಿದ್ದರು.

ಮದುವೆ ಯಾವಾಗ

ಇವರಿಬ್ಬರು ಇನ್ನೂ ಮದುವೆ ಎಲ್ಲಿ ಎಂದು ನಿರ್ಧರಿಸಿಲ್ಲ. ಈ ವರ್ಷ ಸೆಪ್ಟೆಂಬರ್‌ ಮತ್ತು ನವೆಂಬರ್‌ ನಡುವೆ ವಿವಾಹವಾಗಲು ಯೋಜಿಸಿದ್ದಾರೆ. ಕೆಲವರ ಪ್ರಕಾರ ಉದಯಪುರದಲ್ಲಿ ವಿವಾಹವಾಗುವ ಸಾಧ್ಯತೆಯಿದೆ. ಕಿಶಾನ್‌ಗಡ್‌ನಲ್ಲಿಯೂ ಸ್ಥಳದ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆ, ಮದುವೆ ಎಲ್ಲಿ ಎನ್ನೋದು ಇನ್ನೂ ಅಂತಿಮವಾಗಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ