logo
ಕನ್ನಡ ಸುದ್ದಿ  /  ಮನರಂಜನೆ  /  Poonam Pandey: ಪೂನಂ ಪಾಂಡೆ ನಿಧನ; 2 ದಿನಗಳ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಡಿಯೋ ಈಗ ವೈರಲ್‌

Poonam Pandey: ಪೂನಂ ಪಾಂಡೆ ನಿಧನ; 2 ದಿನಗಳ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಡಿಯೋ ಈಗ ವೈರಲ್‌

Umesh Kumar S HT Kannada

Feb 02, 2024 03:38 PM IST

google News

Poonam Pandey: ಪೂನಂ ಪಾಂಡೆ 2 ದಿನ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಡಿಯೋ ವೈರಲ್‌ ಆಗಿದೆ. ಆ ವಿಡಿಯೋ ಗ್ರ್ಯಾಬ್ ಇಮೇಜ್ ಇದು.

  • Poonam Pandey: ನಟಿ ಪೂನಂ ಪಾಂಡೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡದ್ದು ಎರಡು ದಿನ ಮೊದಲು. ಮುಂಬೈನ ಮೀಡಿಯಾ ಏಜೆನ್ಸಿಯ ಮಾಲೀಕರಾಗಿರುವ ಪರಿಮಳ್ ಮೆಹ್ತಾ ಹುಟ್ಟುಹಬ್ಬದ ಸಮಾರಂಭದಲ್ಲಿ ಪೂನಂ ಪಾಂಡೆ ಕೊನೆಯದಾಗಿ ಕಾಣಿಸಿಕೊಂಡಿದ್ದರು.  ಪೂನಂ ಪಾಂಡೆ 2 ದಿನ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಈ ವಿಡಿಯೋ ವೈರಲ್‌ ಆಗಿದೆ.

Poonam Pandey: ಪೂನಂ ಪಾಂಡೆ 2 ದಿನ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಡಿಯೋ ವೈರಲ್‌ ಆಗಿದೆ. ಆ ವಿಡಿಯೋ ಗ್ರ್ಯಾಬ್ ಇಮೇಜ್ ಇದು.
Poonam Pandey: ಪೂನಂ ಪಾಂಡೆ 2 ದಿನ ಹಿಂದೆ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಡಿಯೋ ವೈರಲ್‌ ಆಗಿದೆ. ಆ ವಿಡಿಯೋ ಗ್ರ್ಯಾಬ್ ಇಮೇಜ್ ಇದು. (tellymasala)

ನಟಿ ಪೂನಂ ಪಾಂಡೆ ನಿಧನ ಸುದ್ದಿ ಇಂದು (ಫೆ.2) ಬೆಳಗ್ಗೆ ಬಹಿರಂಗವಾಗಿದ್ದು, ದಂಗುಬಡಿಸಿದೆ. 32 ವರ್ಷದ ನಟಿ ಗರ್ಭಕೋಶದ ಕ್ಯಾನ್ಸರ್ ಕಾರಣ ಮೃತಪಟ್ಟಿದ್ದಾರೆ. ಅವರ ಅಕಾಲಿಕ ನಿಧನ ಕಾರಣ ಆರೋಗ್ಯ ಸಮಸ್ಯೆ ಸೇರಿ ಹತ್ತಾರು ವಿಚಾರಗಳು ಚರ್ಚೆಗೆ ಒಳಗಾಗಿವೆ.

ಅಂದ ಹಾಗೆ, ಪೂನಂ ಪಾಂಡೆ ಕೊನೆಯದಾಗಿ ಎರಡು ದಿನಗಳ ಹಿಂದೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈಗ ಆ ವಿಡಿಯೋ ವೈರಲ್ ಆಗಿದೆ. ಮುಂಬೈನ ಮೀಡಿಯಾ ಏಜೆನ್ಸಿ ಮಾಲೀಕರಾಗಿರುವ ಪರಿಮಳ್ ಮೆಹ್ತಾ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಪರಿಮಳ್‌ ಮೆಹ್ತಾ ಅವರ ಹುಟ್ಟುಹಬ್ಬ ಕಾರ್ಯಕ್ರಮ ಗೋವಾದಲ್ಲಿ ನಡೆದಿತ್ತು. ಅದಕ್ಕೆ ಹೋಗಿರುವ ಪೂನಂ ಪಾಂಡೆ, ಅಲ್ಲಿ ಬಹಳ ಲವಲವಿಕೆಯೊಂದಿಗೆ ವಿಡಿಯೋಗೂ ಪೋಸ್ ನೀಡಿದ್ದರು. ಆ ವಿಡಿಯೋದಲ್ಲಿ ಪೂನಂ ಪಾಂಡೆ ಅವರಿಗೆ ಅನಾರೋಗ್ಯ ಇರುವಂತಹ ಯಾವ ಲಕ್ಷಣವೂ ಗೋಚರಿಸಿಲ್ಲ. ಅದೇ ವಿಡಿಯೋ ತುಣುಕು ಈಗ ವೈರಲ್ ಆಗಿರುವಂಥದ್ದು.

ಇಲ್ಲಿದೆ ಪೂನಂ ಪಾಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೊನೆಯ ವಿಡಿಯೋ

ಪೂನಂ ಪಾಂಡೆ ನಿಧನದ ಕಾರಣ ಚರ್ಚೆಗೆ ಒಳಗಾಗಿರುವ ವಿಚಾರಗಳಿವು….

1) ಗರ್ಭಕಂಠದ ಕ್ಯಾನ್ಸರ್

ಪೂನಂ ಪಾಂಡೆ ಅವರು ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಹೀಗಾಗಿ ಗರ್ಭಕಂಠದ ಕ್ಯಾನ್ಸರ್ ಎಂದರೇನು, ಅದು ಎಷ್ಟು ಜನರನ್ನು ಬಾಧಿಸಿದೆ ಎಂಬಿತ್ಯಾದಿ ವಿಚಾರ ಚರ್ಚೆಗೆ ಒಳಗಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾಹಿತಿ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಕಾಡುವ ಕ್ಯಾನ್ಸರ್‌ಗಳ ಪೈಕಿ 4ನೇ ಸ್ಥಾನ ಗರ್ಭಕಂಠದ ಕ್ಯಾನ್ಸರ್‌ಗೆ ಇದೆ. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವರದಿ ಪ್ರಕಾರ, ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ಗರ್ಭಕಂಠದ ಕೋಶಗಳ ಅಸಹಜ ಬೆಳವಣಿಗೆಯು ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಈ ಕ್ಯಾನ್ಸರ್‌ ಗರ್ಭಕೋಶದಿಂದ ಯೋನಿವರೆಗೆ ಹರಡುತ್ತದೆ.

2) ಪೂನಂ ಪಾಂಡೆ ಪತಿಯಾಗಿದ್ದ ಸ್ಯಾಮ್ ಬಾಂಬೆ ಯಾರು?

ವಿವಾದಾತ್ಮಕವಾಗಿ ಬದುಕಿದ್ದ ಪೂನಂ ಪಾಂಡೆ ದಾಂಪತ್ಯ ಬದುಕು ಬಹಳ ಅಲ್ಪಾವಧಿಯದ್ದು. ಎಲ್ಲರಿಗೂ ಗೊತ್ತಿರುವಂತೆ ಸ್ಯಾಮ್ ಬಾಂಬೆಯನ್ನು 2020ರ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದ ಅವರು, ಕೆಲವೇ ತಿಂಗಳಲ್ಲಿ ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯ, ದೈಹಿಕ ಹಲ್ಲೆ ಕೇಸ್ ದಾಖಲಿಸಿದ್ದರು. ಹೀಗೆ ಈ ದಾಂಪತ್ಯ ಮುರಿದುಬಿದ್ದಿತ್ತು. ಅಂದು ಸದ್ದಿಲ್ಲದೇ ನಡೆದ ವಿವಾಹದ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿತ್ತು. ಅಂದ ಹಾಗೆ, ಈ ಸ್ಯಾಮ್ ಬಾಂಬೆ ಬಾಲಿವುಡ್‌ನ ಸಿನಿಮಾ ನಿರ್ಮಾಪಕ. ಪೂನಂ ಪಾಂಡೆ ಜೊತೆಗೆ ಅವರು ಎರಡನೆ ವಿವಾಹವಾಗಿದ್ದರು.

3) ಅಶ್ಲೀಲ ಮತ್ತು ವಿವಾದಾತ್ಮಕ ನಡೆಗಳ ಪೂನಂ ಪಾಂಡೆ

ಪೂನಂ ಪಾಂಡೆ ಅಶ್ಲೀಲ ಮತ್ತು ವಿವಾದಾತ್ಮಕ ನಡೆಗಳ ಕಾರಣ ಹೆಚ್ಚು ಪ್ರಚಲಿತದಲ್ಲಿದ್ದರು. ಪೂನಂ ಪಾಂಡೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಶ್ಲೀಲ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಆರೋಪಗಳನ್ನು ಎದುರಿಸಿದ್ದರು. ಬಾತ್ರೂಮ್ ಸೀಕ್ರೆಟ್ಸ್ ಎಂಬ ಶೀರ್ಷಿಕೆಯಡಿ ಅಶ್ಲೀಲ ವಿಡಿಯೊ ಹಂಚಿಕೊಂಡು ಸಮಸ್ಯೆ ಎದುರಿಸಿದ್ದರು.

ಟೀಂ ಇಂಡಿಯಾ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿಕೆ ನೀಡಿದ್ದ ಪೂನಂ ಪಾಂಡೆ ಅವರನ್ನು ಪೊಲೀಸರ ಬಂಧಿಸಿದ್ದರು. ಹೀಗೆ ಹತ್ತು ಹಲವಾರು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ