logo
ಕನ್ನಡ ಸುದ್ದಿ  /  ಮನರಂಜನೆ  /  ಕಡಿಮೆ ಅವಧಿಯಲ್ಲಿ 531 ಕೋಟಿ ದೋಚಿದ ಹಿಂದಿ ಸಿನಿಮಾ ಜವಾನ್‌; 4ನೇ ದಿನ ಗಳಿಸಿದ್ದು ಎಷ್ಟು?

ಕಡಿಮೆ ಅವಧಿಯಲ್ಲಿ 531 ಕೋಟಿ ದೋಚಿದ ಹಿಂದಿ ಸಿನಿಮಾ ಜವಾನ್‌; 4ನೇ ದಿನ ಗಳಿಸಿದ್ದು ಎಷ್ಟು?

HT Kannada Desk HT Kannada

Sep 11, 2023 05:16 PM IST

google News

4ನೇ ದಿನ ಭಾರತದಲ್ಲಿ 81, ವಿಶ್ವಾದ್ಯಂತ 156.80 ಕೋಟಿ ಸಂಗ್ರಹಿಸಿದ 'ಜವಾನ್‌' ಸಿನಿಮಾ

  • ಮೊದಲ ದಿನಕ್ಕೆ ಹೋಲಿಸಿದರೆ 2 ಹಾಗೂ 3ನೇ ದಿನದ ಕಲೆಕ್ಷನ್‌ ನೀರಸ ಎನಿಸಿದರೂ ವೀಕೆಂಡ್‌ನಲ್ಲಿ ಮೊದಲ ಮೂರು ದಿನಗಳಿಗಿಂತ ಕಲೆಕ್ಷನ್‌ ಜೋರಾಗಿದೆ. 'ಜವಾನ್‌' ಸಿನಿಮಾ 4ನೇ ದಿನ 81 ಕೋಟಿ ರೂಪಾಯಿ ಲಾಭ ಮಾಡಿದೆ. ಒಟ್ಟು ಇದುವರೆಗೂ 287 ಕೋಟಿ ರೂಪಾಯಿ ಸಂಗ್ರಹಿಸಿದೆ.

4ನೇ ದಿನ ಭಾರತದಲ್ಲಿ 81, ವಿಶ್ವಾದ್ಯಂತ 156.80 ಕೋಟಿ ಸಂಗ್ರಹಿಸಿದ 'ಜವಾನ್‌' ಸಿನಿಮಾ
4ನೇ ದಿನ ಭಾರತದಲ್ಲಿ 81, ವಿಶ್ವಾದ್ಯಂತ 156.80 ಕೋಟಿ ಸಂಗ್ರಹಿಸಿದ 'ಜವಾನ್‌' ಸಿನಿಮಾ

ಅಟ್ಲಿ ನಿರ್ದೇಶನದ ಮೊದಲ ಹಿಂದಿ ಸಿನಿಮಾ ಜವಾನ್‌ ಗೆದ್ದಿದೆ. ಬಾಕ್ಸ್‌ ಆಫೀಸಿನಲ್ಲಿ ದಾಖಲೆಯ ಕಲೆಕ್ಷನ್‌ ಮಾಡುವ ಮೂಲಕ ನಾಗಾಲೋಟದಲ್ಲಿ ಮುನ್ನುಗುತ್ತಿದೆ. ಸಿನಿಮಾ ಮೊದಲ ದಿನವೇ 75 ಕೋಟಿ ರೂಪಾಯಿ ಭರ್ಜರಿ ಲಾಭ ಮಾಡುವ ಮೂಲಕ ಒಳ್ಳೆ ಓಪನಿಂಗ್‌ ಪಡೆದುಕೊಂಡಿತ್ತು.

4ನೇ ದಿನ ಭಾರತದಲ್ಲಿ 81, ವಿಶ್ವಾದ್ಯಂತ 156.80 ಕೋಟಿ ಸಂಗ್ರಹ

ಮೊದಲ ದಿನಕ್ಕೆ ಹೋಲಿಸಿದರೆ 2 ಹಾಗೂ 3ನೇ ದಿನದ ಕಲೆಕ್ಷನ್‌ ನೀರಸ ಎನಿಸಿದರೂ ವೀಕೆಂಡ್‌ನಲ್ಲಿ ಮೊದಲ ಮೂರು ದಿನಗಳಿಗಿಂತ ಕಲೆಕ್ಷನ್‌ ಜೋರಾಗಿದೆ. ಜವಾನ್‌ ಸಿನಿಮಾ 4ನೇ ದಿನ 81 ಕೋಟಿ ರೂಪಾಯಿ ಲಾಭ ಮಾಡಿದೆ. ಒಟ್ಟು ಇದುವರೆಗೂ 287 ಕೋಟಿ ರೂಪಾಯಿ ಸಂಗ್ರಹಿಸಿದೆ. ತಮಿಳು ಸಿನಿಮಾ ವಿರ್ಮಶಕ ಮನೋಬಾಲ ವಿಜಯ ಬಾಲನ್‌ ಜವಾನ್‌ ಕಲೆಕ್ಷನ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಇದು ಭಾರತದ ಲೆಕ್ಕ ಮಾತ್ರ. ವಿಶ್ವಾದ್ಯಂತ ಜವಾನ್‌ ಮೊದಲ ದಿನ 125.05 ಕೋಟಿ, ಎರಡನೇ ದಿನ109.24, ಮೂರನೇ ದಿನ 140.17 ಹಾಗೂ 4ನೇ ದಿನ 156.80 ಕೋಟಿ ಕಲೆಕ್ಷನ್‌ ಮಾಡಿದ್ದು 4 ದಿನಗಳಲ್ಲಿ ಒಟ್ಟು 531 ಕೋಟಿ ರೂಪಾಯಿ ಬಾಚಿಕೊಂಡಿದೆ.

ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದ ಜವಾನ್

ಈ ಮೂಲಕ ಶಾರುಖ್ ಖಾನ್‌ ಅಭಿನಯದ ಜವಾನ್‌ ಸಿನಿಮಾ ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. 2023ರಲ್ಲಿ ಪಠಾಣ್‌ ಹಾಗೂ ಸನ್ನಿ ಡಿಯೋಲ್‌ ಅಭಿನಯದ ಗದರ್‌ 2 ಸಿನಿಮಾಗಳ ನಂತರ 300 ಕೋಟಿ ರೂಪಾಯಿ ದಾಟಿದ 3ನೇ ಸಿನಿಮಾ ಜವಾನ್‌ ಆಗಿದೆ. ಅಲ್ಲದೆ ವರ್ಲ್ಡ್‌ ವೈಡ್‌ ಬಾಕ್ಸ್‌ ಆಫೀಸಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ 531 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಹೆಸರು ಜವಾನ್‌ ಮಡಿಲಿಗೆ ಸೇರಿದೆ.‌

ಗೌರಿ ಖಾನ್‌ ನಿರ್ಮಾಣದ ಸಿನಿಮಾ

ಜವಾನ್‌ ಚಿತ್ರವನ್ನು ರೆಡ್‌ ಚಿಲ್ಲಿ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ನಿರ್ಮಾಣ ಮಾಡಿದ್ದಾರೆ. ಗೌರವ ವರ್ಮಾ, ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗು ಸೇರಿ 5 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಶಾರುಖ್‌, ನಯನತಾರಾ, ವಿಜಯ್‌ ಸೇತುಪತಿ, ಯೋಗಿಬಾಬು, ಪ್ರಿಯಾಮಣಿ ಹಾಗೂ ಇನ್ನಿತರರು ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 6ನೇ ಸಿನಿಮಾ ಎಷ್ಟು ಲಾಭ ಮಾಡಿದೆ ಎಂಬುದನ್ನು ತಿಳಿಯಲು ಶಾರುಖ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ