logo
ಕನ್ನಡ ಸುದ್ದಿ  /  ಮನರಂಜನೆ  /  Parva: ಭೈರಪ್ಪನವರ ಪರ್ವ ಕಾದಂಬರಿಗೆ ವಿವೇಕ್‌ ಅಗ್ನಿಹೋತ್ರಿ ಸಿನಿಮಾ ರೂಪ; ಯಶ್‌ ಹ್ಞೂಂ ಅಂದ್ರೆ ಅವರನ್ನೂ ಕರೆ ತರ್ತಾರಂತೆ

Parva: ಭೈರಪ್ಪನವರ ಪರ್ವ ಕಾದಂಬರಿಗೆ ವಿವೇಕ್‌ ಅಗ್ನಿಹೋತ್ರಿ ಸಿನಿಮಾ ರೂಪ; ಯಶ್‌ ಹ್ಞೂಂ ಅಂದ್ರೆ ಅವರನ್ನೂ ಕರೆ ತರ್ತಾರಂತೆ

Oct 21, 2023 02:10 PM IST

google News

Parva: ಭೈರಪ್ಪನವರ ಪರ್ವ ಕಾದಂಬರಿಗೆ ವಿವೇಕ್‌ ಅಗ್ನಿಹೋತ್ರಿ ಸಿನಿಮಾ ರೂಪ; ಯಶ್‌ ಹ್ಞೂಂ ಅಂದ್ರೆ ಅವರನ್ನೂ ಕರೆತರ್ತಾರಂತೆ

    • Parva: An Epic Tale Of Dharma; ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ದಿ ವ್ಯಾಕ್ಸಿನ್‌ ವಾರ್‌ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಲ ಕನ್ನಡದ ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪನವರ ಪರ್ವವನ್ನು ಆಯ್ದುಕೊಂಡಿದ್ದಾರೆ. 
Parva: ಭೈರಪ್ಪನವರ ಪರ್ವ ಕಾದಂಬರಿಗೆ ವಿವೇಕ್‌ ಅಗ್ನಿಹೋತ್ರಿ ಸಿನಿಮಾ ರೂಪ; ಯಶ್‌ ಹ್ಞೂಂ ಅಂದ್ರೆ ಅವರನ್ನೂ ಕರೆತರ್ತಾರಂತೆ
Parva: ಭೈರಪ್ಪನವರ ಪರ್ವ ಕಾದಂಬರಿಗೆ ವಿವೇಕ್‌ ಅಗ್ನಿಹೋತ್ರಿ ಸಿನಿಮಾ ರೂಪ; ಯಶ್‌ ಹ್ಞೂಂ ಅಂದ್ರೆ ಅವರನ್ನೂ ಕರೆತರ್ತಾರಂತೆ

Parva: ದಿ ಕಾಶ್ಮೀರ್‌ ಫೈಲ್ಸ್‌ ಮತ್ತು ದಿ ವ್ಯಾಕ್ಸಿನ್‌ ವಾರ್‌ ಸಿನಿಮಾ ಬಳಿಕ ಬಾಲಿವುಡ್‌ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ, ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ದಿಲ್ಲದೆ, ತಮ್ಮ ಮುಂದಿನ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕನ್ನಡದ ಹಿರಿಯ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಪರ್ವ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಿತ್ರ ಮಾಡುವುದಾಗಿ ಘೋಷಣೆ ಮಾಡುವುದರ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಸಹ ಅನಾವರಣಗೊಂಡಿದೆ.

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದಲೇ ನಿರ್ದೇಶಕ ಅಗ್ನಿಹೋತ್ರಿ, ಎಸ್‌.ಎಲ್‌. ಭೈರಪ್ಪ ಮತ್ತು ಪ್ರಕಾಶ್‌ ಬೆಳವಾಡಿ ಆಗಮಿಸಿ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ವೇಳೆ ಈ ಸಿನಿಮಾ ಏಕೆ ಮಾಡಬೇಕು ಎಂಬ ವಿಚಾರವನ್ನೂ ವಿವೇಕ್‌ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಭಾಗಗಳಲ್ಲಿ ಬರುತ್ತದೆ’ ಎಂದೂ ಹೇಳಿದ್ದಾರೆ.

‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ’ ಎಂದರು ನಿರ್ಮಾಪಕಿ ಪಲ್ಲವಿ ಜೋಷಿ.

‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನು ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು ಎಸ್.ಎಲ್. ಭೈರಪ್ಪ.

ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನ ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಟ ಯಶ್‌ ಹ್ಞೂಂ ಅಂದ್ರೆ ಒಳ್ಳೆಯದು..

ಇನ್ನು ಈ ಸಿನಿಮಾದಲ್ಲಿ ಕನ್ನಡದ ಒಂದಷ್ಟು ಸ್ಟಾರ್‌ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಮನದಾಸೆಯೂ ಇದೆ ಎಂದಿದ್ದಾರೆ ಅಗ್ನಿಹೋತ್ರಿ. ಕನ್ನಡದಲ್ಲಿ ನನಗೆ ಯಶ್‌ ಇಷ್ಟ. ಈ ಸಿನಿಮಾ ಮೂಲಕ ಯಶ್‌ ಅವರನ್ನೂ ಕರೆತರುವ ಪ್ಲಾನ್‌ ಇದೆ. ಅವರ ಒಪ್ಪಿಗೆ ಸಿಕ್ಕರೆ ಒಳ್ಳೆಯದು. ಒಟ್ಟು ಮೂರು ಭಾಗಗಳಲ್ಲಿ ಇದು ಬಿಡುಗಡೆ ಆಗಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಅದಾದ ಬಳಿಕ ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಸೇರಿ ಭಾರತದ ಇತರ ಭಾಷೆಗಳಲ್ಲಿಯೂ ಸಿನಿಮಾ ಡಬ್‌ ಮಾಡಲಿದ್ದೇವೆ ಎಂದಿದ್ದಾರೆ ವಿವೇಕ್‌ ಅಗ್ನಿಹೋತ್ರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ