logo
ಕನ್ನಡ ಸುದ್ದಿ  /  ಮನರಂಜನೆ  /  Budget 2024: ಕೇಂದ್ರ ಬಜೆಟ್‌ ಮಂಡನೆ ವೇಳೆ ಟೊಮೆಟೊ ದರ ಏರಿಕೆ ಕುರಿತ ನಟ ಸುನಿಲ್‌ ಶೆಟ್ಟಿ ಹೇಳಿಕೆ ವೈರಲ್‌

Budget 2024: ಕೇಂದ್ರ ಬಜೆಟ್‌ ಮಂಡನೆ ವೇಳೆ ಟೊಮೆಟೊ ದರ ಏರಿಕೆ ಕುರಿತ ನಟ ಸುನಿಲ್‌ ಶೆಟ್ಟಿ ಹೇಳಿಕೆ ವೈರಲ್‌

Reshma HT Kannada

Feb 01, 2024 09:18 AM IST

google News

ಕೇಂದ್ರ ಬಜೆಟ್‌ ಹಿನ್ನೆಲೆ; ಟೊಮೆಟೊ ದರ ಏರಿಕೆ, ಹಣದುಬ್ಬರದ ಬಗ್ಗೆ ನಟ ಸುನಿಲ್‌ ಶೆಟ್ಟಿ ಕಳವಳ

    • ಇಂದು (ಫೆ.1) ಕೇಂದ್ರ ಮದ್ಯಂತರ ಬಜೆಟ್‌ (Central Budget 2024) ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 6ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ. ಈ ನಡುವೆ ಹಣದುಬ್ಬರ ಪರಿಣಾಮಗಳ ಬಗ್ಗೆ ನಟ ಸುನೀಲ್‌ ಶೆಟ್ಟಿ (Suniel Shetty) ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್‌ ಹಿನ್ನೆಲೆ; ಟೊಮೆಟೊ ದರ ಏರಿಕೆ, ಹಣದುಬ್ಬರದ ಬಗ್ಗೆ ನಟ ಸುನಿಲ್‌ ಶೆಟ್ಟಿ 
 ಕಳವಳ
ಕೇಂದ್ರ ಬಜೆಟ್‌ ಹಿನ್ನೆಲೆ; ಟೊಮೆಟೊ ದರ ಏರಿಕೆ, ಹಣದುಬ್ಬರದ ಬಗ್ಗೆ ನಟ ಸುನಿಲ್‌ ಶೆಟ್ಟಿ ಕಳವಳ

ಕೇಂದ್ರ ಮಧ್ಯಂತರ ಬಜೆಟ್‌ ಇಂದು (ಫೆ.1) ಬೆಳಿಗ್ಗೆ 11 ಗಂಟೆಗೆ ಮಂಡನೆಯಾಗಲಿದೆ. ಕಳೆದ ವರ್ಷ ಫೆಬ್ರುವರಿ ತಿಂಗಳ ಲಾಸ್ಟ್‌ ವರ್ಕಿಂಗ್‌ ದಿನದಂದು ಬಜೆಟ್‌ ಮಂಡನೆಯಾಗಿತ್ತು.

ಈ ಬಾರಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಬಜೆಟ್‌ ಮಂಡಿಸಲಿದ್ದು, ಇದು ಅವರ ಆರನೇ ಬಜೆಟ್‌ ಆಗಿರಲಿದೆ. ಇಂದಿನ ಬಜೆಟ್‌ ನೇರಪ್ರಸಾರವನ್ನು ಡಿಡಿ ನ್ಯೂಸ್‌ ಹಾಗೂ ಮಾಹಿತಿ ಮತ್ತು ಪ್ರಸರಾಂಗ ಸಚಿವಾಲಯದ ಯಟ್ಯೂಬ್‌ನಲ್ಲಿ ವೀಕ್ಷಿಸಬಹುದಾಗಿದೆ.

ಈ ಬಜೆಟ್‌ ದಿನದಂದು ಈ ಹಿಂದೆ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿರುವ ಮಾತೊಂದನ್ನು ಈಗ ನೆನೆಯಬಹುದು. ಆಜ್‌ ತಕ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟೊಮೆಟೊ ಬೆಲೆ ಏರಿಕೆಯ ಬಗ್ಗೆ ಸುನೀಲ್‌ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ಟೊಮೆಟೊ ಬೆಲೆ ಏರಿಕೆಯಾದಾಗ ತಾವು ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದರು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದರು.

ಟೊಮೆಟೊ ಕಡಿಮೆ ತಿನ್ನುತ್ತಿದ್ದೇವೆ

ಕಳೆದ ಬಾರಿ ಟೊಮೆಟೊ ಬೆಲೆ ಗಗನಕ್ಕೇರಿದ ಸಂದರ್ಭ ಸುನಿಲ್‌ ಶೆಟ್ಟಿ ಮನೆಯಲ್ಲಿ ಟೊಮೆಟೊವನ್ನು ಕಡಿಮೆ ತಿನ್ನುತ್ತಿದ್ದರಂತೆ. ಈ ಬಗ್ಗೆ ಮಾತನಾಡಿರುವ ಅವರು ʼಜನರು ನಮ್ಮ ಬಗ್ಗೆ ನಾವು ಸೂಪರ್‌ಸ್ಟಾರ್‌ಗಳು, ಹಣದುಬ್ಬರ ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದುಕೊಳ್ಳುತ್ತಾರೆ. ಆದರೆ ಅದು ನಮಗೂ ಅನ್ವಯ ಆಗುತ್ತದೆ. ನಮ್ಮ ಮನೆಯಲ್ಲಿ ಎಲ್ಲವೂ ತಾಜಾ ತರಕಾರಿಗಳನ್ನು ತಿನ್ನುತ್ತೇವೆ. ನನ್ನ ಹೆಂಡತಿ ಮನಾ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ತರಕಾರಿ ಖರೀದಿಸುತ್ತಾರೆ. ಟೊಮೆಟೊ ಬೆಲೆ ಗಗನಕ್ಕೇರಿದ್ದು, ನಮ್ಮ ಮೇಲೂ ಪರಿಣಾಮ ಬೀರಿದೆʼ ಎಂದು ಅವರು ಹೇಳಿದ್ದರು.

ಕೆಲವು ಆಪ್‌ಗಳಲ್ಲಿ ಖರೀದಿ ಮಾಡುವುದು ಉತ್ತಮ ಎಂದು ಹೇಳಿರುವ ಸುನಿಲ್‌ ಶೆಟ್ಟಿ, ʼನೀವು ಈ ಅಪ್ಲಿಕೇಶನ್‌ಗಳಲ್ಲಿ ಖರೀದಿ ಮಾಡುವುದರಿಂದ ಅಗ್ಗದ ಬೆಲೆಯಲ್ಲಿ ಟೊಮೆಟೊ ಖರೀದಿ ಮಾಡಬಹುದು. ಅವು ಮಾರುಕಟ್ಟೆಯಿಂದ ಪಡೆಯುವುದಕ್ಕಿಂತ ಹೆಚ್ಚು ಅಗ್ಗವಾಗಿದೆ. ನಾನು ಇವುಗಳಿಂದಲೇ ಆರ್ಡರ್‌ ಮಾಡುತ್ತೇನೆ. ಏಕೆಂದರೆ ಅಲ್ಲಿ ತಾಜಾ ಉತ್ಪನ್ನಗಳು ಸಿಗುತ್ತವೆ. ಅಲ್ಲದೆ ಇದರಲ್ಲಿ ತರಕಾರಿಗಳನ್ನು ಎಲ್ಲಿ ಬೆಳೆಯಲಾಯಿತು ಹಾಗೂ ರೈತರಿಗೆ ಇದರಿಂದ ಹೇಗೆ ಲಾಭವಾಗುತ್ತದೆ ಎಂಬ ವಿವರ ಕೂಡ ಇರುತ್ತದೆʼ ಎಂದು ಸುನಿಲ್‌ ಶೆಟ್ಟಿ ಹೇಳಿದ್ದಾರೆ.

ಕಳೆದ ವರ್ಷ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಅಲ್ಲದೆ ಸೂಪರ್‌ಸ್ಟಾರ್‌ ನಟ ಟೊಮೆಟೊ ಬೆಲೆ ಏರಿಕೆ ಸಂದರ್ಭ ತಾವು ಬಳಕೆ ಕಡಿಮೆ ಮಾಡಿರುವ ಬಗ್ಗೆ ಹೇಳಿದ್ದು ಕೇಳಿ, ಅಭಿಮಾನಿಗಳು ಆಶ್ಚರ್ಯ ಚಕಿತರಾಗಿದ್ದರು. ʼನಾನು ಯಾವಾಗಲೂ ಚೌಕಾಶಿ ಮಾಡುತ್ತೇನೆ. ಯಾಕೆಂದರೆ ನಾನು ಸಹ ಹೋಟೆಲ್‌ ಉದ್ಯಮಿ. ಹಣದುಬ್ಬರ ಬೆಲೆ ಏರಿಕೆಯ ಪರಿಣಾಮ ನನ್ನ ಮೇಲೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಅಭಿರುಚಿಯಲ್ಲಿ ರಾಜಿ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲʼ ಎಂದು ಅವರು ಹೇಳಿಕೊಂಡಿದ್ದರು.

ಸಿನಿಮಾ

2023ರಲ್ಲಿ ಜೀ 5ನಲ್ಲಿ ಬಿಡುಗಡೆಯಾದ ಆಪರೇಷನ್‌ ಫ್ರೈಡೇನಲ್ಲಿ ಸುನಿಲ್‌ ಶೆಟ್ಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಸದ್ಯ ವೆಲ್ಕಮ್‌ ಟು ದಿ ಜಂಗಲ್‌ನಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಹೇರಾ ಫೇರಿ 3 ನಲ್ಲೂ ಇವರು ಬಣ್ಣ ಹಚ್ಚುತ್ತಿದ್ದಾರೆ. ಈ ಎರಡೂ ಚಿತ್ರಗಳನ್ನು ಆಹ್ಮದ್‌ ಖಾನ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಗಳ ಬಿಡುಗಡೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ