Celebrity Cricket League 2023: ಸಿಸಿಎಲ್ ಅಖಾಡದಲ್ಲಿ ಕರ್ನಾಟಕ ಬುಲ್ಡೋಜರ್ಸ್... ಈ ಬಾರಿಯ ಪಂದ್ಯಾವಳಿ ಮಾಹಿತಿ ಇಲ್ಲಿದೆ
Feb 20, 2023 01:50 PM IST
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023
- ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್ ನಡೆದಿರಲಿಲ್ಲ. ಇದೀಗ ಸಿನಿಪ್ರಿಯರಿಗೆ ಕ್ರಿಕೆಟ್ ನೋಡುವ ಖುಷಿ ಒಂದೆಡೆ ಆದರೆ ತಮ್ಮ ಮೆಚ್ಚಿನ ನಟ-ನಟಿಯರನ್ನು ಒಂದೆಡೆ ನೋಡುವ ಭಾಗ್ಯ ಸಿಕ್ಕಿದೆ. ಈ ಬಾರಿ ಒಟ್ಟು 8 ತಂಡಗಳು 10 ಓವರ್‌ಗಳ ಸಿಸಿಎಲ್ ಆಡಲಿವೆ.
ಫೆಬ್ರವರಿ 11 ಹಾಗೂ 12 ರಂದು ಕೆಸಿಸಿ ಮೂರನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಕನ್ನಡ ಸಿನಿ ಸೆಲೆಬ್ರಿಟಿಗಳು ಈಗ ಸಿಸಿಎಲ್ ಅಖಾಡಕ್ಕೆ ಇಳಿದಿದ್ದಾರೆ. 2011 ರಲ್ಲಿ ಮೊದಲ ಬಾರಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭಿಸಲಾಗಿತ್ತು. ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ಚಿತ್ರರಂಗದ ನಟರು ಈ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಫೆಬ್ರವರಿ 18 ರಿಂದ ಪಂದ್ಯಗಳು ಆರಂಭವಾಗಿದೆ. ಮೊದಲ ದಿನ ಬೆಂಗಾಲ್ ಟೈಗರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವು ಸಾಧಿಸಿದೆ. ಬೆಂಗಳೂರು, ಜೈಪುರ್, ಹೈದರಾಬಾದ್, ರಾಯ್‌ಪುರ್, ಜೋಧ್‌ಪುರ್ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಮಾರ್ಚ್ 19 ರಂದು ಫೈನಲ್ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್ ನಡೆದಿರಲಿಲ್ಲ. ಇದೀಗ ಸಿನಿಪ್ರಿಯರಿಗೆ ಕ್ರಿಕೆಟ್ ನೋಡುವ ಖುಷಿ ಒಂದೆಡೆ ಆದರೆ ತಮ್ಮ ಮೆಚ್ಚಿನ ನಟ-ನಟಿಯರನ್ನು ಒಂದೆಡೆ ನೋಡುವ ಭಾಗ್ಯ ಸಿಕ್ಕಿದೆ. ಈ ಬಾರಿ ಒಟ್ಟು 8 ತಂಡಗಳು 10 ಓವರ್‌ಗಳ ಸಿಸಿಎಲ್ ಆಡಲಿವೆ. ತಂಡಗಳು ಹಾಗೂ ಕ್ಯಾಪ್ಟನ್ ಬಗ್ಗೆ ಇಲ್ಲಿದೆ ವಿವರ.
1. ಕರ್ನಾಟಕ ಬುಲ್ಡೋರ್ಜರ್ಸ್ - ಸುದೀಪ್
2. ಚೆನ್ನೈ ರಿನೋಸ್ - ಆರ್ಯ
3. ಕೇರಳ ಸ್ಟೈಕರ್ಸ್ - ಕುಂಚಕೋ ಬೊಬನ್
4. ಬೆಂಗಾಲ್ ಟೈಗರ್ಸ್ - ಜಿಶು ಸೇನ್ ಗುಪ್ತಾ
5. ಮುಂಬೈ ಹೀರೋಸ್ - ರಿತೇಶ್ ದೇಶ್‌ಮುಖ್
6. ಪಂಜಾಬ್ ಡೆ ಶೇರ್ - ಸೋನು ಸೂದ್
7. ತೆಲುಗು ವಾರಿಯರ್ಸ್ - ವೆಂಕಟೇಶ್ ದಗ್ಗುಬಾಟಿ
8. ಭೋಜ್‌ಪುರಿ ದಬಾಂಗ್ಸ್ - ಮನೋಜ್ ತಿವಾರಿ
ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಈ ಬಾರಿ ಸುದೀಪ್ (ಕ್ಯಾಪ್ಟನ್), ಶಿವರಾಜ್‌ಕುಮಾರ್, ಗಣೇಶ್, ಪ್ರದೀಪ್ , ಸುನಿಲ್ ರಾವ್, ನಿರ್ದೇಶಕ ನಂದಕಿಶೋರ್, ಕರಣ್ ಆರ್ಯನ್, ಅರ್ಜುನ್ ಯೋಗಿ, ಪ್ರತಾಪ್ ನಾರಾಯಣ್, ತ್ರಿವಿಕ್ರಮ, ಜಯರಾಮ್ ಕಾರ್ತಿಕ್, ನಿರೂಪ್ ಭಂಡಾರಿ, ಡಾರ್ಲಿಂಗ್ ಕೃಷ್ಣ, ದಿಗಂತ್, ಪೆಟ್ರೋಲ್ ಪ್ರಸನ್ನ, ಚಂದನ್ ಕುಮಾರ್ ಹಾಗೂ ಇನ್ನಿತರರು ಆಡುತ್ತಿದ್ದಾರೆ. ಬ್ರಾಂಡ್ ಅಂಬಾಸಿಡರ್ ಆಗಿ ಸಪ್ತಮಿ ಗೌಡ ಹಾಗೂ ಶಾನ್ವಿ ಶ್ರೀ ವಾಸ್ತವ್ ಇದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು
'ನಿನ್ನ ತೀರ್ಮಾನ ಮತಗಟ್ಟೆಯಲ್ಲಿ ನಾನು ಮಾಡ್ತೀನಿ'... ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ
ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಈ ಬಾರಿ ಅಧಿಕಾರಕ್ಕೆ ಬರಬೇಕೆಂಬ ಹಂಬಲದಿಂದ ಎಲ್ಲಾ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಈ ನಡುವೆ ನಟ ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ಪಕ್ಷ ಕೂಡಾ ಪ್ರಚಾರಕ್ಕೆ ಮುಂದಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರದ ದೃಶ್ಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರ ವಿರೋಧ ಚರ್ಚೆಯೂ ಶುರುವಾಗಿದೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್ ಮಾಡಿ.
ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂಬ ಆರೋಪ.. ಪತ್ನಿ ರಮ್ಯ ರಘುಪತಿ ವಿರುದ್ಧ ದೂರು ನೀಡಿದ ನರೇಶ್
ಟಾಲಿವುಡ್ ನಟ ನರೇಶ್ ಹಾಗೂ ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ನಡುವಿನ ಪ್ರೀತಿ ಪ್ರೇಮ ಪ್ರಣಯ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವರ್ಷದಂದು ಪವಿತ್ರಾ ಹಾಗೂ ನರೇಶ್ ಮುತ್ತಿಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡ ನಂತರ ಈ ಸುದ್ದಿ ಮತ್ತಷ್ಟು ಚರ್ಚೆಯಾಗಿತ್ತು. ಇದೀಗ ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.