logo
ಕನ್ನಡ ಸುದ್ದಿ  /  ಮನರಂಜನೆ  /  Kl Rahul And Athiya Marriage: ಜನವರಿಯಲ್ಲಿ ರಾಹುಲ್‌-ಅಥಿಯಾ ಧಾಂ ಧೂಂ ಮದುವೆ..ರಜೆಗೆ ಅನುಮತಿ ನೀಡಿದ ಬಿಸಿಸಿಐ

KL Rahul and Athiya Marriage: ಜನವರಿಯಲ್ಲಿ ರಾಹುಲ್‌-ಅಥಿಯಾ ಧಾಂ ಧೂಂ ಮದುವೆ..ರಜೆಗೆ ಅನುಮತಿ ನೀಡಿದ ಬಿಸಿಸಿಐ

HT Kannada Desk HT Kannada

Dec 13, 2022 03:26 PM IST

google News

ಅಥಿಯಾ ಶೆಟ್ಟಿ, ಕೆ.ಎಲ್‌. ರಾಹುಲ್

    • ಮುಂಬೈನ ಲೋಖಂಡವಾಲದ ಸುನಿಲ್‌ ಶೆಟ್ಟಿ ಮನೆಯಲ್ಲೇ ಈ ಮದುವೆ ನಡೆಯಲಿದೆಯಂತೆ. ಜನವರಿ 21 ರಿಂದ ಆರಂಭವಾಗುವ ಮದುವೆ ಸಮಾರಂಭ ಮೂರು ದಿನಗಳ ಕಾಲ ನಡೆಯಲಿದೆಯಂತೆ. ಈಗಾಗಲೇ ಬಿಸಿಸಿಐ ರಾಹುಲ್‌ ಮದುವೆಗೆ ಜನವರಿಯಲ್ಲಿ ರಜೆಗೆ ಕೂಡಾ ಅನುಮತಿ ನೀಡಿದೆ ಎಂಬ ಮಾತು ಕೇಳಿಬಂದಿದೆ.
ಅಥಿಯಾ ಶೆಟ್ಟಿ, ಕೆ.ಎಲ್‌. ರಾಹುಲ್
ಅಥಿಯಾ ಶೆಟ್ಟಿ, ಕೆ.ಎಲ್‌. ರಾಹುಲ್ (PC: ‌Athiya Shetty Instagram)

ತಮ್ಮ ಲವ್‌ ಸುದ್ದಿ ಜಗಜ್ಜಾಹೀರಾತಾದರೂ ಕೆಲವು ಸೆಲೆಬ್ರಿಟಿಗಳು ಮಾತ್ರ ನಮ್ಮ ನಡುವೆ ಏನೂ ಇಲ್ಲಪ್ಪ, ನಾವಿಬ್ಬರೂ ಫ್ರೆಂಡ್ಸ್‌ ಅಷ್ಟೇ ಎಂದು ಹೇಳಿಕೊಂಡು ತಿರುಗುತ್ತಾರೆ. ಇದೀಗ ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ವಿಚಾರದಲ್ಲಿ ಕೂಡಾ ಆಗಿರೋದು ಇದೆ. ಇಬ್ಬರೂ ಪ್ರೀತಿಯಲ್ಲಿರುವುದು, ಜೊತೆಗೆ ಸುತ್ತಾಡುತ್ತಿರೋದು ಎಲ್ಲರಿಗೂ ತಿಳಿದ ವಿಚಾರ. ಆದರೂ ಈ ಜೋಡಿ ಮದುವೆ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದೆ.

ರಾಹುಲ್‌ ಹಾಗೂ ಅಥಿಯಾ ಶೀಘ್ರದಲ್ಲೇ ಮದುವೆಯಾಗ್ತಾರೆ ಎಂಬ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಜೋಡಿ ಮಾತ್ರ ತಮ್ಮ ಮದುವೆ ವಿಚಾರವಾಗಿ ಏನೂ ಬಾಯಿ ಬಿಡುತ್ತಿಲ್ಲ. ಕೊನೆಗೂ ಇವರ ಮದುವೆ ಫಿಕ್ಸ್‌ ಆಗಿದ್ದು ಜನವರಿಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರಂತೆ. ಬಹಳ ದಿನಗಳಿಂದ ಈ ಜೋಡಿ ಪ್ರೀತಿಸುತ್ತಿದ್ದು ಕೊನೆಗೂ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಜನವರಿ ಕೊನೆಯ ವಾರದಲ್ಲಿ ದಿನಾಂಕ ಫಿಕ್ಸ್‌ ಮಾಡಿದ್ದಾರಂತೆ. ಮೂಲಗಳ ಪ್ರಕಾರ ಜನವರಿ 23 ರಂದು ಮದುವೆಗೆ ದಿನಾಂಕ ಫಿಕ್ಸ್‌ ಆಗಿದೆಯಂತೆ. ಈಗಾಗಲೇ ಮದುವೆ ಆಹ್ವಾನ ಪತ್ರಿಕೆ ಕೂಡಾ ಅಚ್ಚಾಗಲು ಹೋಗಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಮದುವೆ ದಿನಾಂಕವನ್ನು ಅನೌನ್ಸ್‌ ಮಾಡಲಿದ್ದಾರಂತೆ. ಸುನಿಲ್‌ ಶೆಟ್ಟಿ ಕೂಡಾ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಮಗಳ ಆಯ್ಕೆಯೇ ನನ್ನ ಆಯ್ಕೆ ಎಂದಿದ್ದರು.

ಮುಂಬೈನ ಲೋಖಂಡವಾಲದ ಸುನಿಲ್‌ ಶೆಟ್ಟಿ ಮನೆಯಲ್ಲೇ ಈ ಮದುವೆ ನಡೆಯಲಿದೆಯಂತೆ. ಜನವರಿ 21 ರಿಂದ ಆರಂಭವಾಗುವ ಮದುವೆ ಸಮಾರಂಭ ಮೂರು ದಿನಗಳ ಕಾಲ ನಡೆಯಲಿದೆಯಂತೆ. ಈಗಾಗಲೇ ಬಿಸಿಸಿಐ ರಾಹುಲ್‌ ಮದುವೆಗೆ ಜನವರಿಯಲ್ಲಿ ರಜೆಗೆ ಕೂಡಾ ಅನುಮತಿ ನೀಡಿದೆ ಎಂಬ ಮಾತು ಕೇಳಿಬಂದಿದೆ. ನ್ಯೂಜಿಲೆಂಡ್‌ ಟೂರ್‌ ನಂತರ ಕೆ.ಎಲ್‌. ರಾಹುಲ್‌ ಮದುವೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಈ ಬಾರಿಯಂತೂ ಇವರ ಮದುವೆ ಪಕ್ಕಾ ಎನ್ನಲಾಗುತ್ತಿದೆ. ಆದರೂ ಈ ಎರಡೂ ಕುಟುಂಬ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಅಭಿಮಾನಿಗಳ ಕುತೂಹಲ ಹೀಗೇ ಮುಂದುವರೆಯಲಿದೆ.

ನನ್ನ ಮದುವೆಗೆ ನನ್ನನ್ನೂ ಆಹ್ವಾನಿಸಿ ಎಂದಿದ್ದ ಅಥಿಯಾ

ಕೆಲವು ದಿನಗಳ ಹಿಂದೆ ಕೂಡಾ ಅಥಿಯಾ-ರಾಹುಲ್‌ ಮದುವೆ ಸುದ್ದಿ ವೈರಲ್‌ ಆಗಿತ್ತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅಥಿಯಾ, ಇನ್ನು ಮೂರು ತಿಂಗಳಲ್ಲಿ ನಡೆಯುವ ಆ ಮದುವೆಗೆ ನನ್ನನ್ನೂ ಆಹ್ವಾನಿಸುತ್ತೀರೆಂದು ನಂಬಿಕೆ ಇದೆ ಎಂದು ಅಥಿಯಾ ಬರೆದುಕೊಂಡಿದ್ದರು. ಜೊತೆಗೆ ಲಾಫಿಂಗ್​​​​ ಎಮೋಜಿಯನ್ನೂ ಹಂಚಿಕೊಂಡಿದ್ದರು. ಈ ಸ್ಟೇಟಸ್ ನೋಡಿದವವರು, ಹಾಗಿದ್ರೆ ನಿಮ್ಮ ಹಾಗೂ ಕೆ.ಎಲ್. ರಾಹುಲ್ ನಡುವೆ ಏನೂ ಇಲ್ಲವೇ..? ನೀವಿಬ್ಬರೂ ಮದುವೆ ಆಗುವುದೇ ಇಲ್ಲವೇ...? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದರು.

ಇಬ್ಬರ ಮದುವೆ ದಿನಾಂಕವನ್ನು ಫಿಕ್ಸ್ ಮಾಡಲು ಕೆ.ಎಲ್. ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರು ಎಂಬ ವದಂತಿ ಬಾಲಿವುಡ್​​​ನಲ್ಲಿ ಕೇಳಿ ಬಂದಿತ್ತು. ಇದೀಗ ಮತ್ತೆ ಈ ಎರಡೂ ಕುಟುಂಬಗಳು ಒಟ್ಟಾಗಿ ಸೇರಿ, ಮದುವೆ ನಂತರ ರಾಹುಲ್ ಹಾಗೂ ಅಥಿಯಾ ಜೊತೆಗೆ ಇರಲು ಮುಂಬೈನಲ್ಲಿ ಒಂದು ಹೊಸ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಮದುವೆಯ ಎಲ್ಲಾ ವ್ಯವಸ್ಥೆಗಳನ್ನು ಸ್ವತ: ಅಥಿಯಾ ಶೆಟ್ಟಿ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡಿತ್ತು. ಅಥಿಯಾ ಶೆಟ್ಟಿ ಸಿನಿಮಾಗಳ ಬಗ್ಗೆ ಹೇಳುವುದಾರೆ 2015 ರಲ್ಲಿ ತೆರೆ ಕಂಡ 'ಹೀರೋ' ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್​​​ಗೆ ಎಂಟ್ರಿ ಕೊಟ್ಟರು. ನಂತರ ಮುಬಾರಕ್, ನವಾಬ್​ಜಾದೆ ಹಾಗೂ ಮೋತಿಚೂರ್ ಚಕ್ನಚೂರ್ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅಪ್ಪನಂತೆ ಅಥಿಯಾ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲಿಲ್ಲ. 2019 ರ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ