logo
ಕನ್ನಡ ಸುದ್ದಿ  /  ಮನರಂಜನೆ  /  ಕಲ್ಟ್‌ ಚಿತ್ರದ ಡ್ರೋನ್‌ ಆಪರೇಟರ್‌ ಆತ್ಮಹತ್ಯೆಗೆ ಯತ್ನ; ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು

ಕಲ್ಟ್‌ ಚಿತ್ರದ ಡ್ರೋನ್‌ ಆಪರೇಟರ್‌ ಆತ್ಮಹತ್ಯೆಗೆ ಯತ್ನ; ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು

Nov 30, 2024 04:12 PM IST

google News

ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು

    • ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಎಡವಟ್ಟಾಗಿತ್ತು. ಡ್ರೋನ್‌ ಆಪರೇಟರ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ ಝೈದ್‌ ವಿರುದ್ಧ ದೂರು ದಾಖಲಾಗಿದೆ.
ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು
ಸಚಿವ ಜಮೀರ್ ಅಹ್ಮದ್‌ ಖಾನ್‌ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ದೂರು ದಾಖಲು

Case Against Zaid Khan: ಕಲ್ಟ್ ಚಿತ್ರತಂಡ ಮಾಡಿಕೊಂಡಿರುವ ಅವಾಂತರದಿಂದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ಪುತ್ರ ಹಾಗೂ ಚಿತ್ರನಟ ಝೈದ್ ಖಾನ್ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರೋನ್ ತಂತ್ರಜ್ಞ ಸಂತೋಷ್ ಅವರ ಸಹೋದರಿ ಝೈದ್ ಖಾನ್ ಮತ್ತು ನಿರ್ದೇಶಕ ಅನಿಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕಳೆದ ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಹಲವು ಸಿನಿಮಾಗಳಿಗೆ ಡ್ರೋನ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಸಂತೋಷ್ ಸ್ವಂತವಾಗಿ ಡ್ರೋನ್ ಇಟ್ಟುಕೊಂಡಿದ್ದರು. 25 ಲಕ್ಷ ರೂ. ಬಂಡವಾಳ ಹೂಡಿ ಡ್ರೋನ್ ಖರೀದಿಸಿದ್ದರು. ಸಿನಿಮಾ ಚಿತ್ರೀಕರಣಕ್ಕಾಗಿ ದಿನವೊಂದಕ್ಕೆ 25 ಸಾವಿರ ರೂ. ಬಾಡಿಗೆ ನಿಗದಿ ಮಾಡಿದ್ದರು.

ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್‌

ಝೈದ್ ಖಾನ್ ನಾಯಕ ನಟನಾಗಿ ನಟಿಸುತ್ತಿರುವ ಕಲ್ಟ್ ಕನ್ನಡ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕೆ ಸಂತೋಷ್ ಡ್ರೋನ್ ಮೂಲಕ ಶೂಟಿಂಗ್‌ ಮಾಡುತ್ತಿದ್ದರು. ಮಾರ್ಟಿನ್, ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್, ಕಲ್ಟ್ ಚಿತ್ರಕ್ಕೂ ಶೂಟಿಂಗ್ ಮಾಡಲು ಒಪ್ಪಿಕೊಂಡಿದ್ದರು. ಡ್ರೋನ್‌ ಮೂಲಕ ಚಿತ್ರೀಕರಣ ಮಾಡುವುದು ಅಸಾಧ್ಯ. ಇದರಿಂದ ಡ್ರೋನ್‌ ಗೆ ಹಾನಿಯುಂಟಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದರೂ ಶೂಟಿಂಗ್‌ ಮಾಡಲೇಬೇಕು ಎಂದು ನಿರ್ದೇಶಕ ಅನಿಲ್‌ ಒತ್ತಡ ಹೇರಿದ್ದರು. ಶೂಟಿಂಗ್ ಮಾಡುತ್ತಿರುವಾಗ ವಿಂಡ್ ಫ್ಯಾನ್‌ಗೆ ತಗುಲಿ ಡ್ರೋಣ್ ‌ ಛಿದ್ರಛಿದ್ರವಾಗಿತ್ತು.

ಆತ್ಮಹತ್ಯೆಗೆ ಯತ್ನ

ಈ ನಷ್ಟವನ್ನು ಭರಿಸುವಂತೆ ಮನವಿ ಮಾಡಿಕೊಂಡರೂ ಚಿತ್ರದ ನಿರ್ಮಾಪಕರೂ ಆಗಿರುವ ಝೈದ್‌ ಖಾನ್‌ ನಷ್ಟವನ್ನು ಭರಿಸಲು ಒಪ್ಪಿಕೊಳ್ಳಲಿಲ್ಲ. ಆದರೆ ಝೈದ್‌ ಸಂತೋಷ್ ಬಳಿ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡಿದ್ದಾರೆ. ಜತೆಗೆ ಒಂದೂವರೆ ಲಕ್ಷ ರೂ. ಮೌಲ್ಯದ ಫೂಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ಹಾಳೆಯ ಮೇಲೆ ಆಧಾರ್ ಕಾರ್ಡ್ ನಂಬರ್ ಬರೆಸಿಕೊಂಡಿದ್ದಾರೆ. ಇದರಿಂದ ಅವಮಾನಗೊಂಡ ಸಂತೋಷ್‌ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ದೂರು ದಾಖಲು

ಘಟನೆ ಬಳಿಕ ಸಂತೋಷ್ ಸಹೋದರಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸದೆ ಬರಿಗೈಯಲ್ಲಿ ಕಳುಹಿಸಿದ್ದರು ಎನ್ನುವ ಆರೋಪವೂ ಕೇಳಿ ಬರುತ್ತಿದೆ. ನಂತರ ಆಸ್ಪತ್ರೆಯ ದಾಖಲೆಗಳ ಆಧಾರದ ಮೇಲೆ ಗಂಭೀರವಲ್ಲದ ಪ್ರಕರಣ ಎಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಲ್ಟ್ ಚಿತ್ರತಂಡವನ್ನ ಸಂಪರ್ಕಿಸಿದ್ದಾರೆ. ಘಟನೆ ಸಂಬಂಧ ಸಿನಿಮಾ ನಿರ್ದೇಶಕನಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ವರದಿ: ಮಾರುತಿ ಎಚ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ