logo
ಕನ್ನಡ ಸುದ್ದಿ  /  ಮನರಂಜನೆ  /  Dr. Veerendra Heggade: ‘ಕಾಂತಾರ’ ಕಣ್ತುಂಬಿಕೊಳ್ಳಲಿದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ

Dr. Veerendra Heggade: ‘ಕಾಂತಾರ’ ಕಣ್ತುಂಬಿಕೊಳ್ಳಲಿದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ

Oct 21, 2022 03:51 PM IST

google News

‘ಕಾಂತಾರ’ ಕಣ್ತುಂಬಿಕೊಳ್ಳಲಿದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ

    • ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬವೂ ಇದೀಗ ‘ಕಾಂತಾರ’ ಕಣ್ತುಂಬಿಕೊಳ್ಳಲಿದೆ. ಇವರಿಂದ ಸಿನಿಮಾಕ್ಕೆ ಅದ್ಯಾವ ರೀತಿಯ ವಿಮರ್ಶೆ ಮತ್ತು ಮೆಚ್ಚುಗೆಯ ಮಾತುಗಳು ಸಿಗಲಿವೆ ಎಂಬುದೂ ಇದೀಗ ಕುತೂಹಲ ಮೂಡಿಸಿದೆ.
‘ಕಾಂತಾರ’ ಕಣ್ತುಂಬಿಕೊಳ್ಳಲಿದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ
‘ಕಾಂತಾರ’ ಕಣ್ತುಂಬಿಕೊಳ್ಳಲಿದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬ

‘ಕಾಂತಾರ’ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ನ ಯಶಸ್ವಿ ಸಿನಿಮಾ. ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಲ್ಲಿ ಸದ್ದು ಮಾಡುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಡಬ್‌ ಆಗಿ ತೆರೆಕಂಡು, ಅಲ್ಲಿನ ಪ್ರೇಕ್ಷಕರನ್ನೂ ಸೆಳೆದಿದೆ. ಬಾಲಿವುಡ್‌ ನಟಿ ಕಂಗನಾ ಸಹ ಸಿನಿಮಾ ನೋಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಇದೀಗ ಈ ತಂಡದ ಖುಷಿಗೆ ಇನ್ನೊಂದು ರೆಕ್ಕೆ ಮೂಡಿದೆ. ಅಂದರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬವೂ ಇದೀಗ ‘ಕಾಂತಾರ’ ಚಿತ್ರವನ್ನು ಕಣ್ತುಂಬಿಕೊಳ್ಳಲಿದೆ. ಇವರಿಂದ ಸಿನಿಮಾಕ್ಕೆ ಅದ್ಯಾವ ರೀತಿಯ ವಿಮರ್ಶೆ ಮತ್ತು ಮೆಚ್ಚುಗೆಯ ಮಾತುಗಳು ಸಿಗಲಿವೆ ಎಂಬುದೂ ಇದೀಗ ಕುತೂಹಲ ಮೂಡಿಸಿದೆ.

ಮಂಗಳೂರಿನ ಪ್ರಭಾತ್‌ ಚಿತ್ರಮಂದಿರದಲ್ಲಿ ವೀಕ್ಷಣೆ..

ಅಂದಹಾಗೆ, ಮಂಗಳೂರಿನ ಪ್ರಭಾತ್‌ ಚಿತ್ರಮಂದಿರದಲ್ಲಿ ಇಂದು (ಅ. 21) ಸಂಜೆ 7 ಗಂಟೆಗೆ ‘ಕಾಂತಾರ’ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇತ್ತೀಚಿನ ಕೆಲ ದಿನಗಳ ಹಿಂದೆ ‘ಕಾಂತಾರ’ ಸಿನಿಮಾ ಬಗ್ಗೆ ನಟ ಚೇತನ್‌ ಅಹಿಂಸಾ, ದೈವ ಆರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ, ಪರ ವಿರೋಧಗಳು ಮುನ್ನೆಲೆಗೆ ಬಂದಿದ್ದವು. ಧಾರವಾಡದಲ್ಲಿ ಹಿಂದೂಪರ ಸಂಘಟನೆಗಳು ಚೇತನ್‌ ವಿರುದ್ಧ ದೂರು ನೀಡಿದ್ದರು. ಪ್ರಚಾರಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿತ್ತು. ಇದೀಗ ಈ ಸಿನಿಮಾವನ್ನು ಡಾ. ವೀರೇಂದ್ರ ಹೆಗ್ಗಡೆ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಲಿದೆ.

ಕಂಗನಾ ಕಡೆಯಿಂದಲೂ ಕಾಂತಾರಕ್ಕೆ ಬಹುಪರಾಕ್..‌

"ನನಗೆ 'ಕಾಂತಾರ' ಸಿನಿಮಾ ನೋಡಬೇಕೆನಿಸುತ್ತದೆ, ಕುತೂಹಲ ತಡೆಯಲಾಗುತ್ತಿಲ್ಲ" ಎಂದು ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್‌ ನಟಿ ಕಂಗನಾ ರಣಾವತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೀಗ ಅವರು ನುಡಿದಂತೆ ನಡೆದಿದ್ದು ತಮ್ಮ ಕುಟುಂಬದೊಂದಿಗೆ 'ಕಾಂತಾರ' ಚಿತ್ರವನ್ನು ನೋಡಿದ್ದಾರೆ. ಸಿನಿಮಾ ನೋಡಿ ಬಂದು ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ಕೂಡಾ ಹಂಚಿಕೊಂಡಿದ್ದಾರೆ.

''ನನ್ನ ಕುಟುಂಬದೊಂದಿಗೆ 'ಕಾಂತಾರ' ಸಿನಿಮಾ ನೋಡಿ ಬರುತ್ತಿದ್ದೇನೆ, ಈಗಲೂ ನಡುಕವಾಗುತ್ತಿದೆ, ಎಂತಹ ಅದ್ಭುತ ಸಿನಿಮಾ. ರಿಷಬ್‌ ಶೆಟ್ಟಿಗೆ ಹ್ಯಾಟ್ಸ್‌ ಆಫ್‌, ರೈಟಿಂಗ್‌, ನಿರ್ದೇಶನ, ಆಕ್ಟಿಂಗ್‌, ಆಕ್ಷನ್‌, ನಿಜಕ್ಕೂ ಅದ್ಭುತವಾಗಿದೆ, ನನಗೆ ನಂಬಲು ಆಗುತ್ತಲೇ ಇಲ್ಲ. ಸಿನಿಮಾದಲ್ಲಿ ಜನಪದ, ಸಾಂಪ್ರದಾಯಿಕ, ಜನರ ಸಮಸ್ಯೆಗಳನ್ನು ಸುಂದರವಾಗಿ ತೋರಿಸಲಾಗಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಬಂದವರು, ಇಂತಹ ಸಿನಿಮಾವನ್ನು ಮೊದಲು ನೋಡಿರಲಿಲ್ಲ ಎಂದು ಹೇಳುತ್ತಿದ್ದರು. ನನಗೂ ಈಗ ಅನುಭವವಾಗಿದೆ. ಈ ಗುಂಗಿನಿಂದ ಇನ್ನೂ ಒಂದು ವಾರ ಹೊರ ಬರಲು ಸಾಧ್ಯವೇ ಇಲ್ಲ. ವಾವ್‌, ಎಂತಹ ಸಿನಿಮಾ'' ಎಂದು ವಿಡಿಯೋ ಸಹ ಹಂಚಿಕೊಳ್ಳಲಿದ್ದಾರೆ.

'ಕಾಂತಾರ'ದ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದಿಷ್ಟು

ಚಿತ್ರಮಂದಿರದಲ್ಲಿ 'ಕಾಂತಾರ' ಸಿನಿಮಾ ನೋಡಿದೆ. OMG! ಎಂತಹ ನಿರೂಪಣೆ, ಭಾವನೆ ಮತ್ತು ಆ ಪ್ರಪಂಚ....ಕ್ಲೈಮಾಕ್ಸ್ ಸಮಯದಲ್ಲಿಂತೂ ಗೂಸ್‌ ಬಂಪ್ಸ್‌ ಬಂತು. ಇದು ಸಿನಿಮಾದ ಶಕ್ತಿ. ಕಾಂತಾರ, ನೋಡುಗರನ್ನು ಹೊಸ ಜಗತ್ತಿಗೆ ಪರಿಚಯಿಸುತ್ತಿದೆ. ಈ ಸಿನಿಮಾ ನಿಜವಾಗಿಯೂ ನನ್ನನ್ನು ನನ್ನ ಮೂಲಕ್ಕೆ ಕರೆದೊಯ್ಯಿತು. ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು. ನಿರೂಪಣೆ, ದೃಶ್ಯಗಳು, ಆ ನಂಬಿಕೆ ಮತ್ತು ನಿರ್ದೇಶನ ಎಲ್ಲವೂ ವಾವ್..ರಿಷಬ್‌ ಶೆಟ್ಟಿ ನಿಮಗೊಂದು ಹ್ಯಾಟ್ಸ್‌ ಆಫ್‌" ಎಂದು ಶಿಲ್ಪಾ ಶೆಟ್ಟಿ ಕರಾವಳಿಗನ ಸಿನಿಮಾ ಕಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ