Amala Paul Second Marriage: ಅಮಲಾ ಪೌಲ್ ಗುಪ್ತ್ ಗುಪ್ತ್ ಎರಡನೇ ಮದುವೆ; ಮಾಜಿ ಪತಿ ಜತೆಗಿನ ಲಿಪ್‌ಲಾಕ್ ಫೋಟೋ ಹಿಂದಿನ ಅಸಲಿಯತ್ತೇನು!?
Sep 09, 2022 10:00 AM IST
Amala Paul Second Marriage: ಅಮಲಾ ಪೌಲ್ ಗುಪ್ತ್ ಗುಪ್ತ್ ಎರಡನೇ ಮದುವೆ; ಮಾಜಿ ಪತಿ ಜತೆಗಿನ ಲಿಪ್‌ಲಾಕ್ ಫೋಟೋ ಹಿಂದಿನ ಅಸಲಿಯತ್ತೇನು!?
- ಬಹುಭಾಷಾ ನಟಿ ಅಮಲಾ ಪೌಲ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸದ್ದು ಮಾಡುತ್ತಿರುತ್ತಾರೆ.
ಬಹುಭಾಷಾ ನಟಿ ಅಮಲಾ ಪೌಲ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಾಜಿ ಪ್ರಿಯಕರ ಭವೀಂದರ್ ಸಿಂಗ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ದೂರಿನ ಮೇಲೆ ಭವೀಂದರ್‌ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಮತ್ತಷ್ಟು ಅಪ್‌ಡೇಟ್ಸ್ ಹೊರಬೀಳುತ್ತಿವೆ.
ಭವೀಂದರ್ ನನಗೆ ಮೋಸ ಮಾಡಿದ್ದಾನೆ. ನನ್ನ ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಮಲಾ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಲುಪುರಂ ಪೊಲೀಸರು ಭವೀಂಧರ್ ಸಿಂಗ್ ಸೇರಿ 12 ಮಂದಿಯನ್ನು ವಶಕ್ಕೆ ಪಡೆದಿದ್ದರು. ಸದ್ಯ ವಿಲ್ಲುಪುರಂ ಬಳಿಯ ವೇದಂಪಟ್ಟು ಜೈಲಿನಲ್ಲಿಯೇ ಇವರನ್ನು ಇರಿಸಲಾಗಿದೆ.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭವೀಂದರ್ ಸಿಂಗ್ ಪರ ವಕೀಲ ಮಹತ್ವದ ಒಂದಷ್ಟು ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ನಾಯಕಿ ಅಮಲಾಪಾಲ್ ಮತ್ತು ಭವೀಂದರ್ ಸಿಂಗ್ 2017 ರಲ್ಲಿಯೇ ಪಂಜಾಬಿ ಪದ್ಧತಿಯ ಪ್ರಕಾರ ವಿವಾಹವಾಗಿದ್ದರು ಎಂದು ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ. ಈ ಸಾಕ್ಷ್ಯ ಸಲ್ಲಿಕೆಯಾಗುತ್ತಿದ್ದಂತೆ, ಭವೀಂದರ್‌ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
2020 ರಲ್ಲಿ, ಅಮಲಾಪಾಲ್ ಮುಂಬೈ ಮೂಲದ ಗಾಯಕ ಭವೀಂದರ್ ಸಿಂಗ್ ದತ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಇಬ್ಬರೂ ಸಾಂಪ್ರದಾಯಿಕ ಪಂಜಾಬಿ ಬಟ್ಟೆಗಳನ್ನು ಧರಿಸಿರುವ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೆ, ಗಾಯಕ ಭವೀಂದರ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅದೇ ಫೋಟೋಗಳನ್ನು ಹಂಚಿಕೊಂಡಿದ್ದರು.
ಇದೆಲ್ಲವನ್ನು ನೋಡಿ ಈ ಹಿಂದೆಯೇ ಈ ಜೋಡಿಯ ಮದುವೆ ಆಗಿರಬಹುದೆಂದೇ ಎಲ್ಲರೂ ಊಹಿಸಿದ್ದರು. ಇದಾಗಿ ಕೆಲ ದಿನಗಳ ನಂತರ ಭವೀಂದರ್ ಜತೆಗಿನ ಎಲ್ಲ ಫೋಟೋಗಳನ್ನು ಅಮಲಾ ಡಿಲಿಟ್ ಮಾಡಿದ್ದರು. ಈ ಮದುವೆಗೂ ಮುನ್ನ 2014ರಲ್ಲಿ ಅಮಲಾ ಪಾಲ್ ನಿರ್ಮಾಪಕ ಎಎಲ್ ವಿಜಯ್ ಅವರನ್ನು ಮದುವೆಯಾಗಿದ್ದರು. ಅದಾದ ಬಳಿಕ 2017 ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಅಮಲಾಪಾಲ್ ಅತಿರನ್ ಖ್ಯಾತಿಯ ವಿವೇಕ್ ನಿರ್ದೇಶನದ "ದಿ ಟೀಚರ್" ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.