Anurag Kashyap: ಇಬ್ಬರ ಮಾಜಿ ಹೆಂಡಿರ ಮುದ್ದಿನ ಡೈರೆಕ್ಟರ್...ಎಕ್ಸ್ ವೈವ್ಸ್ ಜೊತೆಗಿರುವ ಫೋಟೋ ನೋಡಿ ವ್ಯಂಗ್ಯವಾಡಿದ ನೆಟಿಜನ್ಸ್
Aug 18, 2022 08:45 AM IST
ಮಾಜಿ ಪತ್ನಿಯರೊಂದಿಗೆ ಅನುರಾಗ್ ಕಶ್ಯಪ್
- ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೊದಲ ಬಾರಿಗೆ 1997 ರಲ್ಲಿ ಆರತಿ ಬಜಾಜ್ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಆಲಿಯಾ ಕಶ್ಯಪ್ ಎಂಬ ಪುತ್ರಿ ಇದ್ದಾರೆ. ಈ ದಂಪತಿ 2009 ರಲ್ಲಿ ಬೇರೆಯಾದರು. ನಂತರ ಅನುರಾಗ್, ಫ್ರೆಂಚ್ ಮೂಲದ ನಟಿ ಕಲ್ಕಿ ಕೊಚ್ಲಿನ್ ಕೈ ಹಿಡಿದರು. ಆದರೆ ಈ ಜೋಡಿ ಕೂಡಾ 2015ರಲ್ಲಿ ಡೈವೋರ್ಸ್ ಪಡೆಯಿತು.
ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈಗ 'ದೊಬಾರಾ' ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆಗಸ್ಟ್ 19ರಂದು ತೆರೆ ಕಾಣುತ್ತಿದೆ. ಇದೊಂದು ಮರ್ಡರ್ ಮಿಸ್ಟ್ರಿ ಸಿನಿಮಾವಾಗಿದ್ದು ಬಾಲಿವುಡ್ ಸಿನಿಪ್ರಿಯರು ನಾಳಿನ ಶೋಗಾಗಿ ಕಾಯುತ್ತಿದ್ದಾರೆ.
ಈ ನಡುವೆ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಬಹಳ ವೈರಲ್ ಆಗುತ್ತಿದೆ. ತಮ್ಮ ಮಾಜಿ ಪತ್ನಿಯರೊಂದಿಗೆ ಅನುರಾಗ್ ಕಶ್ಯಪ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಎರಡು ಆಧಾರಸ್ತಂಭಗಳು' ಎಂದು ಬರೆದುಕೊಂಡಿದ್ದಾರೆ. ವಿಶೇಷ ಎಂದರೆ ಈ ಫೋಟೋದಲ್ಲಿ ಮೂವರೂ ನಗು ನಗುತ್ತಲೇ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋ ನೋಡಿದ ಕೆಲವರು ಬೆಸ್ಟ್ ಫೋಟೋ, ಮಸ್ತ್ ಎಂದೆಲ್ಲಾ ಕಮೆಂಟ್ ಮಾಡಿದರೆ ಇನ್ನೂ ಕೆಲವರು ನಿರ್ದೇಶಕನನ್ನು ಟೀಕಿಸುತ್ತಿದ್ದಾರೆ. ಸಂಬಂಧಗಳಿಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಮೂರನೆಯದ್ದು..? ಯಾವಾಗ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ವಿಚ್ಛೇದನ ನೀಡಿ ದೂರ ಮಾಡಿಕೊಂಡ ನಂತರ ಅವರು ನಿಮ್ಮ ಆಧಾರಸ್ತಂಭಗಳು ಆಗೋಕೆ ಹೇಗೆ ಸಾಧ್ಯ...? ಎಂದು ಪ್ರಶ್ನಿಸುತ್ತಿದ್ದಾರೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೊದಲ ಬಾರಿಗೆ 1997 ರಲ್ಲಿ ಆರತಿ ಬಜಾಜ್ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಆಲಿಯಾ ಕಶ್ಯಪ್ ಎಂಬ ಪುತ್ರಿ ಇದ್ದಾರೆ. ಈ ದಂಪತಿ 2009 ರಲ್ಲಿ ಬೇರೆಯಾದರು. ನಂತರ ಅನುರಾಗ್, ಫ್ರೆಂಚ್ ಮೂಲದ ನಟಿ ಕಲ್ಕಿ ಕೊಚ್ಲಿನ್ ಕೈ ಹಿಡಿದರು. ಆದರೆ ಈ ಜೋಡಿ ಕೂಡಾ 2015ರಲ್ಲಿ ಡೈವೋರ್ಸ್ ಪಡೆಯಿತು. ಈಗ ವೈರಲ್ ಆಗುತ್ತಿರುವ ಫೋಟೋ ಎಲ್ಲಿ ತೆಗೆದಿದ್ದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಹುಶ: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ IFFM (ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುರಾಗ್ ಕಶ್ಯಪ್ ಸೇರಿದಂತೆ ಅನೇಕ ನಟ ನಟಿಯರು ಭಾಗವಹಿಸಿದ್ದರು. ಬಹುಶ: ಇದು ಆಗ ತೆಗೆದಿರುವ ಫೋಟೋ ಎನ್ನಲಾಗುತ್ತಿದೆ.
'ದೋಬಾರ' ಪ್ರಮೋಷನ್ನಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಿದ್ದ ನಿರ್ದೇಶಕ
ದೋಬಾರ ಪ್ರಮೋಷನ್ಗಾಗಿ ಯೂಟ್ಯೂಬ್ ಚಾನೆಲ್ವೊಂದಕ್ಕೆ ಇಂಟರ್ವ್ಯೂಗೆ ತೆರಳಿದ್ದ ವೇಳೆ ಅನುರಾಗ್ ಕಶ್ಯಪ್, ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇಂಟರ್ನೆಟ್ನಲ್ಲಿ ಬಹಳ ವೈರಲ್ ಆಗುವಂತೆ ನಾನೂ ಕೂಡಾ ಫೋಟೋಶೂಟ್ ಮಾಡಿಸಬೇಕು ಎಂದುಕೊಂಡಿದ್ದೆ ಆದರೆ ನನಗೆ ಹೊಟ್ಟೆ ಇದೆ, ಅದು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರೂಪಕ, ನೀವು ಪ್ರಯತ್ನಿಸಿದರೆ ಖಂಡಿತ ಸಾಧ್ಯವಾಗುತ್ತದೆ ಎಂದಿದ್ದಾರೆ. ಪಕ್ಕದಲ್ಲೇ ಇದ್ದ ತಾಪ್ಸಿ ಪನ್ನು ದಯವಿಟ್ಟು ಹಾರರ್ ಶೋಗೆ ಅವಕಾಶ ನೀಡಬೇಡಿ ಎಂದಿದ್ದಾರೆ.
ತಾಪ್ಸಿ ಮಾತಿಗೆ ಮತ್ತೆ ಉತ್ತರಿಸಿದ ಅನುರಾಗ್ ಕಶ್ಯಪ್, ತಾಪ್ಸಿಗೆ, ಆಕೆಯ ಬೂ..ಕ್ಕಿಂತ ನನ್ನದು ದೊಡ್ಡದು ಇದೆ ಎಂದು ಬಹಳ ಅಸೂಯೆ ಕಾಡುತ್ತಿದೆ, ಆದ್ದರಿಂದ ಹೀಗೆ ಹೇಳುತ್ತಿದ್ದಾಳೆ ಎಂದಿದ್ದರು. ಈ ಮಾತು ಕೇಳಿ ತಾಪ್ಸಿ ಮರುಮಾತನಾಡದೆ ನಕ್ಕು ಸುಮ್ಮನಾಗಿದ್ದಾರೆ. ಈ ಒಂದು ವಿಡಿಯೋ ಕ್ಲಿಪಿಂಗ್ ಈಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಜನರು, ಈ ಸಿನಿಮಾವನ್ನು ಬಾಯ್ ಕಾಟ್ ಮಾಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅನುರಾಗ್ ಕಶ್ಯಪ್ ಅವರ ಅಸಭ್ಯ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.