logo
ಕನ್ನಡ ಸುದ್ದಿ  /  ಮನರಂಜನೆ  /  Hayavadana 2nd Movie: ಮೊದಲ ಸಿನಿಮಾ ಶೂಟಿಂಗ್‌ ಮುಗಿಯುವ ಮುನ್ನವೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಹಯವದನ..ಚಿತ್ರದ ಕಥೆಯೇನು?

Hayavadana 2nd Movie: ಮೊದಲ ಸಿನಿಮಾ ಶೂಟಿಂಗ್‌ ಮುಗಿಯುವ ಮುನ್ನವೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಹಯವದನ..ಚಿತ್ರದ ಕಥೆಯೇನು?

HT Kannada Desk HT Kannada

Feb 03, 2023 08:16 PM IST

google News

ಎರಡನೇ ಸಿನಿಮಾ ಘೋಷಿಸಿದ ಹಯವದನ

    • ಹಲವು ಜನರು ಗುರುಗಳ ಧಾರಾವಾಹಿ, ಸಿನಿಮಾ ಮಾಡುತ್ತೇವೆ ಎಂದು ಅನುಮತಿ ಪಡೆಯಲು ಬಂದಿದ್ದರು, ಆದರೆ ನಾವು ಒಪ್ಪಿರಲಿಲ್ಲ. ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ದೆವು. ಆಗ ಬಂದವರೇ ನಿರ್ದೇಶಕ ಹಯವದನ. ಅವರು ವಾದಿರಾಜ ಗುರುಗಳ ಭಕ್ತರು ಕೂಡಾ ಹೌದು, ಅವರಲ್ಲಿ ಅಪಾರ ಶ್ರದ್ದೆ ಇದೆ.
ಎರಡನೇ ಸಿನಿಮಾ ಘೋಷಿಸಿದ ಹಯವದನ
ಎರಡನೇ ಸಿನಿಮಾ ಘೋಷಿಸಿದ ಹಯವದನ

ಕಿರುತೆರೆಯ ಖ್ಯಾತ ನಿರ್ದೇಶಕ ಹಯವದನ ಇತ್ತೀಚೆಗೆ ತಮ್ಮ ಮೊದಲ ಸಿನಿಮಾ ಹೆಸರನ್ನು ರಿವೀಲ್‌ ಮಾಡಿದ್ದರು. ತಮ್ಮ ಚಿತ್ರಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಎಂದು ಹೆಸರಿಟ್ಟಿರುವ ಹಯವದನ ಮೊದಲ ಸಿನಿಮಾ ಮುಗಿಯುವ ಮುನ್ನವೇ ಎರಡನೇ ಚಿತ್ರವನ್ನು ಘೋಷಿಸಿದ್ದಾರೆ. ಇದು ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಸಿನಿಮಾವಾಗಿದೆ.

ವಾದಿರಾಜ ಸ್ವಾಮಿ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದೆ. ವಾದಿರಾಜ ಗುರುಗಳ ಜಯಂತಿಯಂದೇ ಶ್ರೀ ವಾದಿರಾಜ ಸ್ವಾಮಿ ಮಠ, ಹೂವಿನಕೆರೆ, ಕುಂದಾಪುರದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ದು ವಿಶೇಷವಾಗಿತ್ತು. ತಮ್ಮ ಹೊಸ ಚಿತ್ರದ ಬಗ್ಗೆ ನಿರ್ದೇಶಕ ಹಯವದನ ಮಾಹಿತಿ ಹಂಚಿಕೊಂಡಿದ್ದಾರೆ. ''ಈ ಚಿತ್ರದ ಸ್ಕ್ರಿಪ್ಟ್ ಹಾಗೂ ರಿಸರ್ಚ್ ಕೆಲಸ ನಡೆಯುತ್ತಿದೆ. ಸಿನಿಮಾ ತಾರಾಗಣ, ತಾಂತ್ರಿಕ ಬಳಗ ಯಾವುದೂ ಇನ್ನೂ ಫೈನಲ್ ಆಗಿಲ್ಲ. 15ನೇ ಶತಮಾನದಲ್ಲಿ ನಡೆದ ಕಥೆ ಇದು. ಶ್ರೀ ವಾದಿರಾಜ ಸ್ವಾಮಿಗಳು 120 ವರ್ಷಗಳ ಕಾಲ ಬದುಕಿದ್ದರು. ಆ ಕಾಲಘಟ್ಟವನ್ನು ಸೃಷ್ಟಿ ಮಾಡುವುದೇ ಒಂದು ಚಾಲೆಂಜ್. ಈ ಚಿತ್ರದಲ್ಲಿ ಸಿಜಿ, ಗ್ರಾಫಿಕ್ಸ್ ಹೆಚ್ಚಾಗಿರುತ್ತದೆ, ಭಕ್ತಿ, ಸಮಾಜ ಸೇವೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಸಮಾಜ ಸುಧಾರಣೆ ಮಾಡಿದ್ದಾರೆ, 15ನೇ ಶತಮಾನದಲ್ಲೇ ಕನ್ನಡದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ, ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ. ಭಕ್ತಿ ಮತ್ತು ಗೌರವದಿಂದ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದೇವೆ'' ಎಂದು ಮಾಹಿತಿ ನೀಡಿದರು.

ವಾದಿರಾಜ ಸ್ವಾಮಿ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು ಮಾತನಾಡಿ ''ವಾದಿರಾಜ ಗುರುಗಳು 15,16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ, ಈ ಜಗತ್ತಿಗೆ ಬಹುಮುಖ ಸಂದೇಶ ನೀಡಿದವರು. 113 ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸೋದು ಕಷ್ಟಸಾಧ್ಯ. ಈ ಹಿಂದೆ ಹಲವು ಜನರು ಗುರುಗಳ ಧಾರಾವಾಹಿ, ಸಿನಿಮಾ ಮಾಡುತ್ತೇವೆ ಎಂದು ಅನುಮತಿ ಪಡೆಯಲು ಬಂದಿದ್ದರು, ಆದರೆ ನಾವು ಒಪ್ಪಿರಲಿಲ್ಲ. ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ದೆವು. ಆಗ ಬಂದವರೇ ನಿರ್ದೇಶಕ ಹಯವದನ. ಅವರು ವಾದಿರಾಜ ಗುರುಗಳ ಭಕ್ತರು ಕೂಡಾ ಹೌದು, ಅವರಲ್ಲಿ ಅಪಾರ ಶ್ರದ್ದೆ ಇದೆ. ಸಮಾಜಕ್ಕೆ ವಾದಿರಾಜರು ಯಾವ ರೀತಿ ಸಂದೇಶ ನೀಡಿದ್ದರು ಅನ್ನೋದನ್ನು ಸಿನಿಮಾದಲ್ಲಿ ತರಬೇಕು ಎಂದು ನಾವು ಹೇಳಿದ್ದೇವೆ'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ವಿಕ್ರಮ್ ಹತ್ವಾರ್ ಹಾಗೂ ನಿರ್ದೇಶಕ ಹಯವದನ ಹೊಸ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 5-6 ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಟೈಟಲ್, ತಾರಾ ಬಳಗ, ತಾಂತ್ರಿಕ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ಅಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಈ ಹೊಸ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಗಮನ ಸೆಳೆಯುತ್ತಿರುವ 'ಎಲ್ಲೋ ಜೋಗಪ್ಪ ನಿನ್ನರಮನೆ' ಪೋಸ್ಟರ್‌ಗಳು

ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಯವದನ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್‌ ಗಮನ ಸೆಳೆಯುತ್ತಿದೆ. 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂಬುದು ಈ ಚಿತ್ರದ ಟೈಟಲ್.‌ ಈ ಚಿತ್ರದಲ್ಲಿ 'ಕಂಬ್ಳಿಹುಳ' ಸಿನಿಮಾ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾ ತಂಡ ಈಗಾಗಲೇ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರೀಕರಣ ಆರಂಭಿಸಿದೆ. ಇದು ಸೋಷಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಸಿನಿಮಾ . ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಷನ್ ಗ್ಯಾಪನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ