logo
ಕನ್ನಡ ಸುದ್ದಿ  /  ಮನರಂಜನೆ  /  Oscar Jury 2022: ಆಸ್ಕರ್‌ ಜ್ಯೂರಿಯಾಗಿ ಪವನ್‌ ಒಡೆಯರ್‌..ಸೋಷಿಯಲ್‌ ಮೀಡಿಯಾದಲ್ಲಿ ಸಂತೋಷ ಹಂಚಿಕೊಂಡ ನಿರ್ದೇಶಕ

Oscar Jury 2022: ಆಸ್ಕರ್‌ ಜ್ಯೂರಿಯಾಗಿ ಪವನ್‌ ಒಡೆಯರ್‌..ಸೋಷಿಯಲ್‌ ಮೀಡಿಯಾದಲ್ಲಿ ಸಂತೋಷ ಹಂಚಿಕೊಂಡ ನಿರ್ದೇಶಕ

HT Kannada Desk HT Kannada

Sep 27, 2022 10:14 PM IST

google News

ಆಸ್ಕರ್‌ ಜ್ಯೂರಿಯಾಗಿ ಪವನ್‌ ಒಡೆಯರ್‌

    • ನಾನು ನಿರ್ಮಿಸಿದ 'ಡೊಳ್ಳು' ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ'' ಎಂದು ಪವನ್ ಒಡೆಯರ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಆಸ್ಕರ್‌ ಜ್ಯೂರಿಯಾಗಿ ಪವನ್‌ ಒಡೆಯರ್‌
ಆಸ್ಕರ್‌ ಜ್ಯೂರಿಯಾಗಿ ಪವನ್‌ ಒಡೆಯರ್‌ (PC: Pawan Wadeyar Instagram)

ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಯಾವ ಸಿನಿಮಾಗಳು, ಯಾವ ತಂತ್ರಜ್ಞರ ಪಾಲಾಗುತ್ತದೆ ಎಂಬ ಲೆಕ್ಕಾಚಾರ ಜೋರಾಗಿದೆ. ಭಾರತದಿಂದ ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಹಲವಾರು ಸಿನಿಮಾಗಳು ನಾಮ ನಿರ್ದೇಶನವಾಗಿ ಗಮನ ಸೆಳೆಯುತ್ತಿವೆ.

ಈ ನಡುವೆ ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರುವುದು ವಿಶೇಷವಾಗಿದೆ. ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್, ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿ ಭಾಗಿಯಾಗಿದ್ದಾರೆ. ಈ ಖುಷಿಯ ಕ್ಷಣವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆಂದು ನಾನು ನಿರೀಕ್ಷೆ ಕೂಡಾ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಸಾರ್ಥಕತೆ ನೀಡಿದೆ. ನಾನು ನಿರ್ಮಿಸಿದ 'ಡೊಳ್ಳು' ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ'' ಎಂದು ಪವನ್ ಒಡೆಯರ್ ಸಂತೋಷ ವ್ಯಕ್ತಪಡಿಸಿದ್ದಾರೆ.

''ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳ ಸಿನಿಮಾಗಳು ಆಸ್ಕರ್‌ಗೆ ಆಯ್ಕೆಯಾಗಿದೆ. ಆದರೆ ಕನ್ನಡ ಭಾಷೆಯಿಂದ ಯಾವ ಸಿನಿಮಾಗಳು ಆಸ್ಕರ್‌ಗೆ ಆಯ್ಕೆ ಆಗಿಲ್ಲದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್‌ಗೆ ನಾಮ ನಿರ್ದೇಶನವಾಗಲಿವೆ'' ಎಂದು ನಿರ್ದೇಶಕ ಪವನ್ ಒಡೆಯರ್ ಭರವಸೆಯ ಮಾತುಗಳನ್ನಾಡಿದ್ದಾರೆ. ಪವನ್ ಒಡೆಯರ್ ನಿರ್ಮಾಣದಲ್ಲಿ ತಯಾರಾಗಿರುವ 'ಡೊಳ್ಳು' ಸಿನಿಮಾ ಜನರ ಮೆಚ್ಚುಗೆ ಗಳಿಸಿದ್ದು, ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದುಕೊಂಡಿದೆ. ಸದ್ಯ ಪವನ್ ಒಡೆಯರ್ ನಿರ್ದೇಶನದ 'ರೇಮೋ' ಸಿನಿಮಾ ಬಿಡುಗಡೆಯಾಗಬೇಕಿದೆ.

ಸೂರ್ಯ ಹಾಗೂ ಕಾಜೊಲ್​​​​ಗೆ ವಿಶೇಷ ಗೌರವ ನೀಡಿದ್ದ ಆಸ್ಕರ್ ಸಮಿತಿ

ಆಸ್ಕರ್ ಸಮಿತಿಯು ಭಾರತದಿಂದ ಆರು ಸೆಲಬ್ರಿಟಿಗಳನ್ನು ತನ್ನ ಸಮಿತಿಯ ಸದಸ್ಯತ್ವಕ್ಕೆ ಆಹ್ವಾನ ನೀಡಿತ್ತು. ಈ ಬಾರಿ ಆಸ್ಕರ್ ಸಮಿತಿಯು ಒಟ್ಟು 397 ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು ಇದರಲ್ಲಿ ಭಾರತದಿಂದ 6 ಸೆಲಬ್ರಿಟಿಗಳಿಗೆ ಅವಕಾಶ ನೀಡಿತ್ತು. ಅದರಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಹಾಗೂ ಬಾಲಿವುಡ್ ನಟಿ ಕಾಜೊಲ್ ಆಯ್ಕೆಯಾಗಿದ್ದರು.

<p>ನಿರ್ದೇಶಕ ನಿರ್ದೇಶಕ ಪವನ್‌ ಒಡೆಯರ್‌ ಇನ್‌ಸ್ಟಾಗ್ರಾಮ್‌ ಸ್ಟೇಟಸ್</p>

1929ರಲ್ಲಿ ಮೊದಲ ಬಾರಿಗೆ ಆಸ್ಕರ್‌ ಪ್ರಶಸ್ತಿ ಕೊಡುವ ಪರಿಪಾಠ ಆರಂಭವಾಯ್ತು. ಭಾರತದಿಂದ ಖ್ಯಾತ ಫಿಲ್ಮ್ ಮೇಕರ್ ಸತ್ಯಜಿತ್ ರೇ , ಕಾಸ್ಟ್ಯೂಮ್ ಡಿಸೈನರ್​ ಭಾನು ಆತಿಯಾ ಹಾಗೂ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಎ.ಆರ್​. ರೆಹಮಾನ್, ಉತ್ತಮ ಸೌಂಡ್​ ಮಿಕ್ಸಿಂಗ್​​​ಗಾಗಿ ರೆಸುಲ್ ಪೂಕುಟ್ಟಿ, ಬೆಸ್ಟ್ ಒರಿಜಿನಲ್ ಹಾಡಿಗಾಗಿ ಗುಲ್ಜಾರ್​​​​​ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ