logo
ಕನ್ನಡ ಸುದ್ದಿ  /  ಮನರಂಜನೆ  /  Donald Trump Speech: ಈ ಕ್ಷಣದಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಭಾಷಣ

Donald Trump Speech: ಈ ಕ್ಷಣದಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಿದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಭಾಷಣ

Suma Gaonkar HT Kannada

Jan 20, 2025 11:15 PM IST

google News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಭಾಷಣ

    • ಅಮೇರಿಕಾ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಅಮೇರಿಕಾದ ಸುವರ್ಣ ಯುಗ ಇಂದಿನಿಂದ ಆರಂಭ ಎಂದಿದ್ದಾರೆ. 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಭಾಷಣ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಭಾಷಣ

ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು ಯುನೈಟೆಡ್ ಸ್ಟೇಟ್ಸ್ನ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭವು ಯುಎಸ್ ಕ್ಯಾಪಿಟಲ್ ಕಟ್ಟಡದ ರೋಟುಂಡಾದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಸುವರ್ಣಯುಗ ಇಂದಿನಿಂದ ಆರಂಭವಾಗಿದೆ. ನಮ್ಮ ದೇಶ ಇಂದಿನಿಂದ ಅಭಿವೃದ್ಧಿ ಹೊಂದುತ್ತದೆ ಎನ್ನುತ್ತಲೇ ಭಾಷಣ ಆರಂಭಿಸಿದ್ದಾರೆ. ಜನರಿಗೆ ಅವರ ನಂಬಿಕೆ, ಅವರ ಸಂಪತ್ತು, ಅವರ ಪ್ರಜಾಪ್ರಭುತ್ವ ಮತ್ತು ಅವರ ಸ್ವಾತಂತ್ರ್ಯವನ್ನು ಮರಳಿ ನೀಡಲು ನಾನು ಶ್ರಮಿಸುತ್ತೇನೆ ಎಂದಿದ್ದಾರೆ. ಈ ಕ್ಷಣದಿಂದ, ಅಮೆರಿಕದ ಅವನತಿ ಮುಗಿದಿದೆ.

ಅಮೆರಿಕದಲ್ಲಿ ಸುವರ್ಣ ಯುಗ ಆರಂಭ: ಈ ಕ್ಷಣದಿಂದ ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಿದೆ. ನಮ್ಮ ದೇಶವು ಸಮೃದ್ಧವಾಗಿ ಬೆಳೆಯುತ್ತದೆ. ಜಗತ್ತಿನಾದ್ಯಂತ ಗೌರವ ಪಡೆಯುತ್ತದೆ. ಎಲ್ಲ ದೇಶಗಳೂ ನಮ್ಮನ್ನು ಕಂಡು ಅಸೂಯೆ ಪಡಲಿವೆ. ನಮ್ಮನ್ನು ಇನ್ನೊಬ್ಬರ ಸ್ವಾರ್ಥಕ್ಕೆ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ.

ಟ್ರಂಪ್ ಆದ್ಯತೆ: ನಮ್ಮ ದೇಶದ ಹೆಮ್ಮೆ, ಸಮೃದ್ಧಿ ಮತ್ತು ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆ. ಅಮೆರಿಕ ಶೀಘ್ರದಲ್ಲಿಯೇ ಹಿಂದೆಂದಿಗಿಂತಲೂ ಪ್ರಬಲ, ಶಕ್ತಿಶಾಲಿ ದೇಶವಾಗಲಿದೆ.

ಜನರ ನಂಬಿಕೆಗೆ ಬೆಲೆ: ಈ ದಿನ ನಮ್ಮ ಸರ್ಕಾರವು ವಿಶ್ವಾಸದ ಕೊರತೆಗೆ ಮುಖಾಮುಖಿಯಾಗಬೇಕಾಗಿದೆ. ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಭ್ರಷ್ಟ ಆಡಳಿತ ವ್ಯವಸ್ಥೆಯು ಜನರ ಅಧಿಕಾರ ಮತ್ತು ಸಂಪತ್ತನ್ನು ಕಿತ್ತುಕೊಂಡಿತ್ತು.

ಸಮಸ್ಯೆಗಳು ಮಾಯವಾಗಲಿವೆ: ಅಮೆರಿದಾದ್ಯಂತ ಇಂದು ಬದಲಾವಣೆಯ ಅಲೆ ಕಾಣಿಸುತ್ತಿದೆ. ಇಡೀ ಜಗತ್ತಿನಲ್ಲಿ ಹೊಸ ಆಶಯದ ಬೆಳಕಿನ ಕಿರಣಗಳು ಕಂಗೊಳಿಸುತ್ತಿವೆ. ಅವಕಾಶಗಳನ್ನು ಬಳಸಿಕೊಳ್ಳಲು ಅಮೆರಿಕಗೆ ಈ ಹಿಂದಿಗಿಂತಲೂ ಹೆಚ್ಚಿನ ಅವಕಾಶಗಳಿವೆ. ಆದರೆ ನಮ್ಮೆದುರು ಇರುವ ಸವಾಲುಗಳನ್ನು ನಾವು ಪ್ರಾಮಾಣಿಕವಾಗಿ ಎದುರಿಸಬೇಕು. ಈ ಸುವರ್ಣ ಗಳಿಗೆಯಲ್ಲಿ ಆ ಎಲ್ಲ ತೊಡಕುಗಳೂ ಮಾಯವಾಗಲಿವೆ.

ಬಿಡನ್ ಆಡಳಿತ ಟೀಕೆ: ವಿಶ್ವದ ಹಲವು ದೇಶಗಳಿಂದ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದವರು ಸೇರಿದಂತೆ ಅಪಾಯಕಾರಿ ಅಪರಾಧಿಗಳಿಗೆ ಆಶ್ರಯ ಮತ್ತು ರಕ್ಷಣೆ ನೀಡಲಾಯಿತು. ಕಾನೂನು ಪಾಲಿಸುವ ಅಮೆರಿಕದ ನಾಗರಿಕರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಯಿತು ಎಂದು ಬೈಡೆನ್ ಆಡಳಿತವನ್ನು ಟ್ರಂಪ್ ನೇರವಾಗಿ ಟೀಕಿಸಿದರು. 'ಜಗತ್ತು ನೋಡಿದ ಪ್ರಬಲ ಮಿಲಿಟರಿಯನ್ನು ಮತ್ತೆ ನಿರ್ಮಿಸುತ್ತೇವೆ' ಎಂದು ಇದೇ ಸಂದರ್ಭ ಭರವಸೆ ನೀಡಿದರು.

ದೇಶವನ್ನೇ ಸಂಭಾಳಿಸದ ಆಡಳಿತ: ಜಗತ್ತಿನಲ್ಲಿ ಪಾರಮ್ಯ ಮೆರೆಯುವುದು ಅಂತಿರಲಿ, ಸ್ವದೇಶದ ಸಮಸ್ಯೆಗಳನ್ನೇ ಹಿಂದಿನ ಆಡಳಿತ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಟ್ರಂಪ್ ಹೇಳಿದರು. ಮಾತು ಹಲವು ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಪಡುತ್ತಿದೆ. ನಿಕಟಪೂರ್ವ ಅಧ್ಯಕ್ಷ ಜೋ ಬೈಡೆನ್ ಸಮಕ್ಷಮ ಆಡಿದ ಈ ಮಾತುಗಳು ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು ಮತ್ತು ಉತ್ತರ ಕೆರೊಲಿನಾ ಪ್ರಾಂತ್ಯದ ಪ್ರವಾಹಗಳ ನಿರ್ವಹಣೆಯಲ್ಲಿ ಆದ ಲೋಪಗಳ ಟೀಕೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸದ್ಯ, ದೇವರು ಅಮೆರಿಕವನ್ನು ಉಳಿಸಿದ: ನನಗೆ ಕಳೆದ ಬಾರಿ ಆಗಿದ್ದ ಮೋಸವನ್ನು ಈ ಸಲದ ಫಲಿತಾಂಶ ಸರಿಪಡಿಸಿದೆ. ಸದ್ಯ ದೇವರು ದೊಡ್ಡವನು. ಅಮೆರಿಕವನ್ನು ಮತ್ತೊಮ್ಮೆ ಪ್ರಬಲಗೊಳಿಸಲು ಅವಕಾಶ ಕೊಟ್ಟ. ಈ ಕ್ಷಣದಿಂದ ಅಮೆರಿಕದ ಎಲ್ಲ ಪ್ರಜೆಗಳಿಗೆ ಅವರ ವಿಶ್ವಾಸ, ಅವರ ಸಂಪತ್ತು, ಅವರ ಪ್ರಜಾಪ್ರಭುತ್ವ ಮತ್ತು ಅವರ ಸ್ವಾತಂತ್ರ್ಯ ಮತ್ತೆ ದೊರೆಯಲಿದೆ ಎಂದು ಟ್ರಂಪ್ ಭರವಸೆ ಕೊಟ್ಟರು. ಟ್ರಂಪ್ ಈ ಮಾತು ಆಡುವಾಗ ಜೋ ಬೈಡೆನ್, ಕಮಲಾ ಹ್ಯಾರಿಸ್ ಸೇರಿದಂತೆ ಡೆಮಕ್ರಾಟ್ ಪಕ್ಷದ ಹಲವು ಗಣ್ಯರು ಸಮೀಪದಲ್ಲಿಯೇ ಆಸೀನರಾಗಿದ್ದರು.

ಮಾರ್ಟಿನ್ ಲೂಥರ್‌ ಕಿಂಗ್ ಕನಸು ನನಸಾಗಿಸುವೆ: ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ಜನ್ಮದಿಂದೇ ನಡೆಯುತ್ತಿರುವುದನ್ನು ಟ್ರಂಪ್ ಪ್ರಸ್ತಾಪಿಸಿದರು. ಅವರ ಕನಸು ನನಸಾಗಿಸಲು ನನ್ನ ಆಡಳಿತದ ಎಲ್ಲರೂ ಅವಿರತ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಕಾಮನ್‌ ಸೆನ್ಸ್ ಕ್ರಾಂತಿ: ಅಮೆರಿಕವನ್ನು ನಾವು ಸಂಪೂರ್ಣವಾಗಿ ಮರುನಿರ್ಮಿಸುತ್ತೇವೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ಶೀಘ್ರದಲ್ಲಿಯೇ ಕಾಮನ್‌ ಸೆನ್ಸ್ ಕ್ರಾಂತಿ ನಡೆಯಲಿದೆ ಎಂದು ಟ್ರಂಪ್ ಹೇಳಿದರು. ತಮ್ಮ ಹೇಳಿಕೆಗೆ ಪೂರಕವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಿದರು; 'ಜನವರಿ 20, 2025 ವಿಮುಕ್ತಿ ದಿನ. ಅಮೆರಿಕದಲ್ಲಿ ರಾಷ್ಟ್ರೀಯ ಏಕತೆ ಮರುಸ್ಥಾಪನೆಯಾಗುತ್ತಿದೆ ಮತ್ತು ನಾನು ಇಂದು ಹಲವು ಐತಿಹಾಸಿಕ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದೇನೆ' ಎಂದು ಟ್ರಂಪ್ ಘೋಷಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ