logo
ಕನ್ನಡ ಸುದ್ದಿ  /  ಮನರಂಜನೆ  /   Dr Bro Youtuber: ಸಹಾಯ‌ ಪಡೆದವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ರು ಎಂದು ಬೇಸರ ವ್ಯಕ್ತಪಡಿಸಿದ ಕನ್ನಡ ಯೂಟ್ಯೂಬರ್‌...!

Dr Bro YouTuber: ಸಹಾಯ‌ ಪಡೆದವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ರು ಎಂದು ಬೇಸರ ವ್ಯಕ್ತಪಡಿಸಿದ ಕನ್ನಡ ಯೂಟ್ಯೂಬರ್‌...!

HT Kannada Desk HT Kannada

Dec 13, 2022 09:50 PM IST

google News

ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್‌ ಗಗನ್

    • ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂಥ ಕೆಲಸ ಮಾಡುವುದಿಲ್ಲ. ಆಲ್ ಮೋಸ್ಟ್ ಎಲ್ಲಾ ನ್ಯೂಸ್ ಚಾನೆಲ್ ನವರೂ ಇಂಟರ್‌ವ್ಯೂಗೆ ಕರೆದಿದ್ದರು , ಕನಿಷ್ಠ 100 ಜನ ಯೂಟ್ಯೂಬರ್ಸ್ ಕೊಲಾಬ್ರೆಷನ್‌ಗೆ ಕರೆದಿದ್ದರು. ಎಲ್ಲಾ ಬಿಟ್ಟು ಲೋಹಿತ್‌ ಕುಮಾರ್‌ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದೆ. ಆದರೆ ನನಗೆ ಅವರು ಕೊಟ್ಟ ಬಹುಮಾನವಿದು ಎಂದು ಗಗನ್‌ ಬೇಸರ ತೋಡಿಕೊಂಡಿದ್ದಾರೆ. 
ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್‌ ಗಗನ್
ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್‌ ಗಗನ್ (PC: Dr Bro YouTube)

ಡಾ ಬ್ರೋ ಅಲಿಯಾಸ್‌ ಗಗನ್‌, ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಬಹಳ ಪರಿಚಯ. ಬೆಂಗಳೂರು ಯುವಕನ ಈ ವಿಡಿಯೋಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಪಾಕಿಸ್ತಾನ, ಆಫ್ರಿಕಾ, ಆಫ್ಘಾನಿಸ್ತಾನದಂತ ದೇಶಗಳಿಗೆ ಒಬ್ಬಂಟಿಯಾಗಿ ಹೋಗಿ ಬಂದಿರುವ ಈ ಯುವಕನ ಧೈರ್ಯ, ಸಾಹಸ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ. ಆದರೆ ಈ ಯುವಕನಿಗೆ ಮತ್ತೊಬ್ಬ ಯೂಟ್ಯೂಬರ್‌ ಮೋಸ ಮಾಡಿದ್ದಾರಂತೆ. ಸ್ವತ: ಗಗನ್‌ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

"ಹೆಲ್ಪ್ ಮಾಡಿದವರಿಗೆ ಬೆನ್ನ ಹಿಂದೆ ಚೂರಿ ಹಾಕುವ ಜನರಿರುತ್ತಾರೆ" ಅಂತ ಕೇಳಿದ್ದೆ. ಈಗ ಸ್ವತಃ ನಂಗೆ ಅನುಭವ ಆಗಿದೆ. ವ್ಲಾಗರ್ Lohith kannada Traveller ಅವರು ಅಫಘಾನಿಸ್ತಾನದಲ್ಲಿ ವಿಡಿಯೊ ಮಾಡಲು ಯತ್ನಿಸಿ ತಾಲಿಬಾನ್‌ನಿಂದ ಹೆದರಿ ದುಬೈಗೆ ಓಡಿ ಬಂದಿದ್ದರು. ಈ ವಿಷಯ ನನಗೆ ತಿಳಿದ ತಕ್ಷಣ, ಅವರನ್ನು ನಾನೇ ಸಂಪರ್ಕಿಸಿ ಧೈರ್ಯ ತುಂಬಿದೆ. ನಂತರ "ನಿಮ್ಮ ವಿಡಿಯೋದಲ್ಲಿ ಬಂದು ನನ್ನ ಜನರಿಗೆ ನಿಮಗೆ ಸಪೋರ್ಟ್ ಮಾಡಲು ಹೇಳ್ತೇನೆ ಅಂದೆ. ನನ್ನ ಚಾನೆಲ್‌ನಲ್ಲಿ ನಾನು ಎಂದಿಗೂ ಸಬ್ಸ್‌ಕೈಬ್‌ ಮಾಡಿ ಲೈಕ್ ಮಾಡಿ, ಶೇರ್ ಮಾಡಿ ಅಂತ ಹೇಳಲಿಲ್ಲ. ಆದ್ರೆ ಲೋಹಿತ್‌ ವಿಡಿಯೋದಲ್ಲಿ ಹೇಳಿದೆ. ನಂತರ ನಿಮ್ಮಲ್ಲೇ ಸಾಕಷ್ಟು ಜನ ಅವರಿಗೆ ಸಪೋರ್ಟ್ ಕೂಡಾ ಮಾಡಿದೀರಿ . ಅದು ನನಗೆ ತುಂಬ ಖುಷಿ ನೀಡಿತು.

ಲೋಹಿತ್‌ ಕನ್ನಡ ಟ್ರಾವೆಲರ್‌ ಯೂಟ್ಯೂಬ್

ನಾನು ಆಫ್ಘಾನಿಸ್ತಾನದ ನಂತರ ಕೀನ್ಯಾಗೆ ಹೋಗಲು ಸಿದ್ದವಾಗಿದ್ದೆ. ಆದರೆ ಅಲ್ಲಿ ಆಗಲೇ ಫ್ರೈಯಿಂಗ್‌ ಪಾಸ್‌ಪೋರ್ಟ್‌ನವರು ಇದ್ದರು. ಅವರಿದ್ದಾಗ ನಾನು ಅಲ್ಲಿಗೆ ಹೋಗಿ ನನ್ನ ಚಾನೆಲ್‌ಗೆ ವಿಡಿಯೋ ಮಾಡುವುದು ಧರ್ಮ ಅಲ್ಲ ಅನ್ನಿಸಿತು. ಹೀಗಾಗಿ ಕೀನ್ಯಾಗೆ ಹೋಗಲಿಲ್ಲ. ಬದಲಿಗೆ ತಾಂಜಾನಿಯಾಗೆ ಬಂದೆ. ನಂತರ ಲೋಹಿತ್‌, ಇಥಿಯೋಪಿಯಾಗೆ ಹೋದ್ರು. ನಿಮಗೆ ಗೊತ್ತು- ನನ್ನ ವಿಡಿಯೋ ಲೇಟ್ ಬರುತ್ತೆ. ಯಾಕಂದ್ರೆ ನನ್ನ ರಿಸರ್ಚ್, ವಿಡಿಯೋ ಶೂಟ್ ಹಾಗೂ ಎಡಿಟ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಇದರ ಮಧ್ಯೆ ಲೋಹಿತ್‌ ನಂಗೆ ಮೆಸೇಜ್ ಮಾಡಿದರು. "ತಾಂಜಾನಿಯಾದ ಹಾಡ್ಜಬಿ ಟ್ರೈಬ್ ಬಗೆ ವಿಡಿಯೋ ಮಾಡ್ತೀರಾ?" ಅಂತ ವಿಚಾರಿಸಿದರು. ನಾನು ಆಲ್ ರೆಡಿ ಹಾಡ್ಜಬಿ ಟ್ರೈಬ್ ಬಗ್ಗೆ ರಿಸರ್ಚ್‌ನಲ್ಲಿ ತೊಡಗಿದ್ದೇನೆ ಹಾಗೂ ಭಾನುವಾರ ವಿಡಿಯೋ ಮಾಡುವುದಾಗಿ ತಿಳಿಸಿದ್ದೆ. ನನ್ನ ವಿಡಿಯೋದಲ್ಲಿ ಸಾಕಷ್ಟು ಜನ ಇರ್ತಾರೆ, ಸಾಕಷ್ಟು ಕ್ಯಾಮೆರಾ ಶಾಟ್‌ಗಳು ಇರುತ್ತವೆ. ಹೀಗಾಗಿ ಎಡಿಟ್ ಮಾಡಲು ಸಾಕಷ್ಟು ಸಮಯ ಹಿಡಿಯುತ್ತೆ ಅನ್ನೋದು ತಿಳಿದಿದ್ದ ಲೋಹಿತ್‌ ತಾನಿದ್ದ ಭಾರತದಿಂದ ಬೇಗ ತಾಂಜಾನಿಯಾಗೆ ಬಂದ. ನಾನು ಇರುವ ಊರಿಗೇ ಬಂದು ನಾನು ಆಲ್ ರೆಡಿ ಎಡಿಟ್ ಮಾಡುತ್ತಿದ್ದ ಹಡ್ಜಬಿ ಟ್ರೈಬ್‌ಗಳ ಬಗ್ಗೆಯೇ ತರಾತುರಿಯಲ್ಲಿ ವಿಡಿಯೋ ಮಾಡಿ ಮರು ದಿನ ಅದಾಗಲೇ ಅಪ್‌ಲೋಡ್‌ ಮಾಡಿಬಿಟ್ಟರು!

ಲೋಹಿತ್‌ ಜೊತೆ ಗಗನ್‌ ಚಾಟ್‌ ಮಾಡಿರುವ ಸ್ಕ್ರೀನ್‌ ಶಾಟ್

ಇದರಲ್ಲೇನು ತಪ್ಪಿದೆ ಅಂತ ಕೆಲವರಿಗೆ ಅನ್ನಿಸಬಹುದು. ಎಲ್ಲಾ ವಿಷಯ ತಿಳಿದಿದ್ದು ಅವಸರವಾಗಿ ತಾಂಜಾನಿಯಾ ಹಾಡ್ಜಬಿಗೆ ಬಂದು ಅಂದೇ ವಿಡಿಯೋ ಮಾಡಿ ಅಪ್ಲೋಡ್ ಮಾಡೋದು ಸರೀನಾ..? ಈಗಾಗಲೇ 1 ವಾರದಿಂದ ಆ ಒಂದೇ ವಿಡಿಯ ಗಾಗಿ ಕೆಲಸ ಮಾಡುತ್ತಿದ್ದ ನನ್ನ ಕತೆ ಏನಾಗಬೇಡ..? ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂಥ ಕೆಲಸ ಮಾಡುವುದಿಲ್ಲ. ಆಲ್ ಮೋಸ್ಟ್ ಎಲ್ಲಾ ನ್ಯೂಸ್ ಚಾನೆಲ್ ನವರೂ ಇಂಟರ್‌ವ್ಯೂಗೆ ಕರೆದಿದ್ದರು , ಕನಿಷ್ಠ 100 ಜನ ಯೂಟ್ಯೂಬರ್ಸ್ ಕೊಲಾಬ್ರೆಷನ್‌ಗೆ ಕರೆದಿದ್ದರು. ಎಲ್ಲಾ ಬಿಟ್ಟು ಲೋಹಿತ್‌ ಕುಮಾರ್‌ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದೆ. ಆದರೆ ನನಗೆ ಅವರು ಕೊಟ್ಟ ಬಹುಮಾನವಿದು. ‌

ಧನ್ಯವಾದ, ಲೋಹಿತ್‌. ದೇವರು ನಿಮಗೆ ಆಯುಷ್ಯ, ಆರೋಗ್ಯ, ಐಶ್ವರ್ಯ ಎಲ್ಲಾ ಕೊಟ್ಟು ಕಾಪಾಡಲಿ. ಇನ್ನು ಮುಂದೆಯಾದರೂ ಸಹಾಯ ಮಾಡಿದವರಿಗೆ ಎಂದಿಗೂ ನಂಬಿಕೆದ್ರೋಹ ಮಾಡಬೇಡಿ ಪ್ಲೀಸ್ ಎಂದು ಗಗನ್‌ ತಮ್ಮ ಯೂಟ್ಯೂಬ್‌ ಕಮ್ಯುನಿಟಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಲೋಹಿತ್‌, ಹಾಡ್ಜಬಿ ಜನರೊಂದಿಗೆ ರೆಕಾರ್ಡ್‌ ಮಾಡಿದ ಸ್ಕ್ರೀನ್‌ ಶಾಟ್‌ ಕೂಡಾ ಹಾಕಿದ್ದಾರೆ. ಇದಕ್ಕೆ ಕಮೆಂಟ್‌ ಮಾಡಿರುವ ಜನರು, ಇಂತ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳುತ್ತಿದ್ದಾರೆ.

ಗಗನ್‌ ಮೂಲತಃ ಬೆಂಗಳೂರಿನವರು. ಸದ್ಯಕ್ಕೆ ಅವರಿಗೆ ಯೂಟ್ಯೂಬ್‌ನಲ್ಲಿ 1 ಮಿಲಿಯನ್‌ ಚಂದಾದಾರರಿದ್ದಾರೆ. ವಿಡಿಯೋಗಳಿಗೆ ಮಿಲಿಯನ್‌ಗಟ್ಟಲೆ ವ್ಯೂವ್ಸ್‌ ಬರುತ್ತಿದೆ ಇಷ್ಟೆಲ್ಲಾ ಖ್ಯಾತಿ ಗಳಿಸಿರುವ ಗಗನ್‌ ಅಪ್ಪ-ಅಮ್ಮನ ಬಳಿ ದುಡ್ಡು ಕೇಳದೆ, ತಮ್ಮ ಯೂಟ್ಯೂಬ್‌ನಿಂದ ಬರುವ ಹಣವನ್ನೇ ದೇಶ ಸುತ್ತಲು ಬಳಸಿಕೊಳ್ಳುತ್ತಿದ್ದಾರಂತೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ