logo
ಕನ್ನಡ ಸುದ್ದಿ  /  ಮನರಂಜನೆ  /  ಮನೆಯಲ್ಲಿನ ನಿತ್ಯ ಜಗಳದ ಅನುಭವ ಹಂಚಿಕೊಂಡ ನಟಿ ಐಶ್ವರ್ಯಾ ರೈ; ಎಲ್ಲರ ಮನೆ ದೋಸೆ ತೂತೇ ಎಂದ ನೆಟ್ಟಿಗರು

ಮನೆಯಲ್ಲಿನ ನಿತ್ಯ ಜಗಳದ ಅನುಭವ ಹಂಚಿಕೊಂಡ ನಟಿ ಐಶ್ವರ್ಯಾ ರೈ; ಎಲ್ಲರ ಮನೆ ದೋಸೆ ತೂತೇ ಎಂದ ನೆಟ್ಟಿಗರು

Raghavendra M Y HT Kannada

Feb 12, 2024 07:30 AM IST

google News

ನಟಿ ಐಶ್ವರ್ಯ ರೈ ಅವರು ಪತಿ-ಪತ್ನಿ ನಡುವಿನ ನಿತ್ಯ ಜಗಳದ ಅನುಭವ ಹಂಚಿಕೊಂಡಿಕೊಂಡಿದ್ದಾರೆ. ಪತ್ನಿ ಎದುರು ಗೆಲ್ಲಲು ಸಾಧ್ಯವೇ ಎಂದು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

  • Aishwarya rai: ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯ ರೈ ತಮ್ಮ ಮನೆಯಲ್ಲಿನ ನಿತ್ಯದ ಜಗಳದ ಅನುಭವ ಹಂಚಿಕೊಂಡಿದ್ದಾರೆ. ಪತ್ನಿ ಎದುರು ಗೆಲ್ಲಲು ಸಾಧ್ಯವೇ ಅಂತ ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ.

ನಟಿ ಐಶ್ವರ್ಯ ರೈ ಅವರು ಪತಿ-ಪತ್ನಿ ನಡುವಿನ ನಿತ್ಯ ಜಗಳದ ಅನುಭವ ಹಂಚಿಕೊಂಡಿಕೊಂಡಿದ್ದಾರೆ. ಪತ್ನಿ ಎದುರು ಗೆಲ್ಲಲು ಸಾಧ್ಯವೇ ಎಂದು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.
ನಟಿ ಐಶ್ವರ್ಯ ರೈ ಅವರು ಪತಿ-ಪತ್ನಿ ನಡುವಿನ ನಿತ್ಯ ಜಗಳದ ಅನುಭವ ಹಂಚಿಕೊಂಡಿಕೊಂಡಿದ್ದಾರೆ. ಪತ್ನಿ ಎದುರು ಗೆಲ್ಲಲು ಸಾಧ್ಯವೇ ಎಂದು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

Aishwarya rai Abhishek bachchan family: ದಾಂಪತ್ಯ ಜೀವನ ಎಂದಮೇಲೆ ಅಲ್ಲಿ ಪ್ರೀತಿಯೂ ಇರಬೇಕು, ಜಗಳವೂ ಇರಬೇಕು. ಇವೆರಡರ ಸಮ್ಮಿಲನ ಸಮತೋಲನದಲ್ಲಿ ಇದ್ದಾಗಲೇ ಆ ದಾಂಪತ್ಯ ಚಂದ ಎನಿಸುತ್ತದೆ. ಆದರೆ ಈ ಸೆಲೆಬ್ರಿಟಿ ದಂಪತಿ ಯಾವ ವಿಷಯಕ್ಕೆ ಕಿತ್ತಾಡಬಹುದು ಎಂಬ ಸಾಮಾನ್ಯ ಕುತೂಹಲ ಎಂದಾದರೂ ಒಮ್ಮೆ ನಿಮ್ಮ ಮನಸಲ್ಲೂ ಮೂಡಿದ್ದಿರಬಹುದು. ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಛನ್​ ಹಾಗೂ ಅಭಿಷೇಕ್​ ಬಚ್ಛನ್​ ಎಂದಾದರೂ ಕಿತ್ತಾಡಿಕೊಂಡಿರಬಹುದೇ ಎಂಬ ಪ್ರಶ್ನೆ ಎಂದಾದರೂ ನಿಮ್ಮ ತಲೆಯಲ್ಲಿ ಕೊರೆದಿದ್ದರೆ ಇದಕ್ಕೆ ಉತ್ತರವನ್ನು ಸಂದರ್ಶನವೊಂದರಲ್ಲಿ ಸ್ವತಃ ಐಶ್ವರ್ಯಾ ಹಾಗೂ ಅಭಿಷೇಕ್​ ದಂಪತಿ ನೀಡಿದ್ದಾರೆ.

ಹಳೆಯ ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯಾ ರೈ ಬಚ್ಛನ್​ ಹಾಗೂ ಅಭಿಷೇಕ್​ ಬಚ್ಛನ್​ ಈ ವಿಷಯವಾಗಿ ಮಾತನಾಡಿದ್ದಾರೆ. ಏಪ್ರಿಲ್​ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಸ್ವಲ್ಪ ಸಮಯಗಳ ಕಾಲ ಈ ಜೋಡಿ ಡೇಟಿಂಗ್​ ನಡೆಸಿತ್ತು. ಈ ದಂಪತಿಗೆ 2011ರಲ್ಲಿ ಆರಾಧ್ಯ ಬಚ್ಛನ್​ ಎಂಬ ಮಗಳು ಜನಿಸಿದ್ದಾಳೆ. ಐಶ್ವರ್ಯಾ ಹಾಗೂ ಅಭಿಷೇಕ್​ ದಂಪತಿ ಧೂಮ್​ 2, ಗುರು ಹಾಗೂ ರಾವನ್​ ಸಿನಿಮಾಗಳ ಮೂಲಕ ಒಟ್ಟಾಗಿ ತೆರೆ ಕೂಡ ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ನಿರೂಪಕರು ನೀವಿಬ್ಬರೂ ಪ್ರತಿನಿತ್ಯ ಜಗಳ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಟಿ ಐಶ್ವರ್ಯಾ ರೈ, ಖಂಡಿತವಾಗಿ ನಾವು ಪ್ರತಿದಿನ ಜಗಳವಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಭಿಷೇಕ್​​ ಬಚ್ಛನ್​​ ಇವು ಜಗಳಗಳು ಅಲ್ಲ ಬದಲಾಗಿ ಕೆಲವು ಭಿನ್ನಾಭಿಪ್ರಾಯಗಳು ಮಾತ್ರ. ಅಲ್ಲದೇ ಅದ್ಯಾವುದೂ ಗಂಭೀರ ವಿಷಯಗಳಲ್ಲ. ನಾವು ಆರೋಗ್ಯಕರವಾಗಿ ಜಗಳ ಮಾಡಿಕೊಳ್ಳುತ್ತೇವೆ. ಅದು ಇಲ್ಲ ಎಂದಿದ್ದರೆ ನನಗೆ ಬಹುಷಃ ಬೋರಾಗುತ್ತಿತ್ತು ಎಂದು ಸ್ಪಷ್ಟನೆ ನೀಡಿದ್ದರು .

ಅಲ್ಲದೇ ಇಬ್ಬರ ನಡುವೆ ಜಗಳವಾದಾಗ ಮೊದಲು ಕ್ಷಮೆಯಾಚಿಸುವುದು ಅಭಿಷೇಕ್​ ಬಚ್ಛನ್​ ಎಂದು ಹೇಳಿಕೊಂಡಿದ್ದಾರೆ. ಮಹಿಳೆಯರು ಎಂದಿಗೂ ಸೋಲೊಪ್ಪಿಕೊಂಡು ಬರುವುದಿಲ್ಲ. ಆದರೆ ನಮ್ಮಿಬ್ಬರ ನಡುವೆ ಒಂದು ಒಪ್ಪಂದವಿದೆ. ನಾವು ಜಗಳವನ್ನು ಬಗೆಹರಿಸಿಕೊಳ್ಳದೇ ಮಲಗುವುದಿಲ್ಲ. ಹೀಗಾಗಿ ಎಷ್ಟೋ ಬಾರಿ ನಾನು ಕ್ಷಮಿಸಿ ಎಂದು ಹೇಳಿದ್ದೇನೆ. ನಾನು ಮಲಗಬೇಕು ಎಂಬ ಒಂದೇ ಕಾರಣಕ್ಕೆ ಕ್ಷಮೆ ಕೇಳಿದ್ದೇನೆ ಎಂದು ನಟ ಅಭಿಷೇಕ್​ ಬಚ್ಛನ್​ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಮಹಿಳೆಯರಿಗೆ ಎಂದಿಗೂ ತಮ್ಮದು ತಪ್ಪಿದೆ ಎಂದು ಎನಿಸುವುದೇ ಇಲ್ಲ. ನಿಮ್ಮ ಬಳಿ ನೀವು ಸರಿಯೆಂದು ಸಾಬೀತುಪಡಿಸಲು ಎಷ್ಟೇ ಬಲವಾದ ಸಾಕ್ಷ್ಯಗಳಿದ್ದರೂ ಸಹ ಪತ್ನಿಯ ಎದುರು ಆ ಸಾಕ್ಷ್ಯಗಳು ನಿಷ್ಪ್ರಯೋಜಕ ಎಂದೇ ಸಾಬೀತಾಗುತ್ತದೆ. ಹೀಗಾಗಿ ನಾವು ವಾದ ಮಾಡುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ಅಭಿಷೇಕ್​ ಬಚ್ಛನ್​ ನಗೆ ಚಟಾಕಿ ಹಾರಿಸಿದ್ದಾರೆ.

ಇತ್ತೀಚೆಗೆ ವೈರಲ್​ ಆದ ವಿಡಿಯೊದಲ್ಲಿ ಐಶ್ವರ್ಯಾ ತಮ್ಮ ಮದುವೆ ಸಮಾರಂಭದಲ್ಲಿ ನಡೆದ ರೋಕಾ ಎಂಬ ಶಾಸ್ತ್ರದ ದಿನದಂದು ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಇದರಲ್ಲಿ ಐಶ್ವರ್ಯಾ ಹೀಗೆ ಹೇಳುತ್ತಾರೆ ‘ ನಾನು ದಕ್ಷಿಣ ಭಾರತದ ಪರಂಪರೆಗೆ ಸೇರಿದವಳು. ನಮ್ಮಲ್ಲಿ ಮದುವೆ ಸಮಾರಂಭಗಳಲ್ಲಿ ರೋಕಾ ಎಂಬ ಕಾರ್ಯಕ್ರಮ ಇರುವುದೇ ಇಲ್ಲ. ಹೀಗಾಗಿ ನನಗೆ ರೋಕಾ ಎಂದರೆ ಏನು ಎನ್ನುವುದೇ ತಿಳಿದಿರಲಿಲ್ಲ. ಒಂದು ದಿನ ಅಭಿಷೇಕ್​ ಮನೆಯವರು ದಿಢೀರ್​ ಎಂದು ಕರೆ ಮಾಡಿ ನಾವು ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದರು. ಆವಾಗ ನನ್ನ ತಂದೆ ಮನೆಯಲ್ಲಿ ಇರಲಿಲ್ಲ. ನಾನು ತಂದೆಗೆ ಕರೆ ಮಾಡಿದೆ. ಅವರು ನನಗೆ ಮನೆಗೆ ಬರಲು ಇನ್ನೂ ಒಂದು ದಿನ ಬೇಕು ಎಂದು ಹೇಳಿದ್ದರು. ಹೀಗಾಗಿ ದೂರದ ಊರಿನಲ್ಲಿದ್ದ ನನ್ನ ತಂದೆಯ ಜೊತೆ ಫೋನ್​ ಕಾಲ್​ನಲ್ಲಿಯೇ ರೋಕಾ ಕಾರ್ಯಕ್ರಮ ನಡೆಸಲಾಗಿತ್ತು. ಅವರೆಲ್ಲರೂ ನಮ್ಮ ಮನೆಗೆ ಆಗಮಿಸಿದ್ದರು. ತಂದೆ ಮನೆಯಲ್ಲಿಯೇ ಇರಲಿಲ್ಲ. ಕೇವಲ ಫೋನ್​ ಕಾಲ್​ನಲ್ಲಿದ್ದರು. ಅಯ್ಯೋ ಇಲ್ಲಿ ನಿಶ್ಚಿತಾರ್ಥ ನಡೆಯುತ್ತಿದ್ಯಾ ಎಂದು ನನಗೆ ಆಮೇಲೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ