Anurag Kashyap: ಆಕೆಗಿಂತ ನನಗೆ ದೊಡ್ಡದೆಂದು ಅವಳಿಗೆ ಅಸೂಯೆ...ನಿರ್ದೇಶಕನ ಫಿಲ್ಟರ್ ಲೆಸ್ ಮಾತು...ವಿಡಿಯೋ
Aug 16, 2022 09:23 PM IST
ಅನುರಾಗ್ ಕಶ್ಯಪ್ ವಿವಾದಾತ್ಮಕ ಹೇಳಿಕೆ
- ತಾಪ್ಸಿ ಮಾತಿಗೆ ಮತ್ತೆ ಉತ್ತರಿಸಿದ ಅನುರಾಗ್ ಕಶ್ಯಪ್, ತಾಪ್ಸಿಗೆ, ಆಕೆಯ ಬೂ..ಕ್ಕಿಂತ ನನ್ನದು ದೊಡ್ಡದು ಇದೆ ಎಂದು ಬಹಳ ಅಸೂಯೆ ಕಾಡುತ್ತಿದೆ, ಆದ್ದರಿಂದ ಹೀಗೆ ಹೇಳುತ್ತಿದ್ದಾಳೆ ಎಂದಿದ್ದಾರೆ. ಈ ಮಾತು ಕೇಳಿ ತಾಪ್ಸಿ ಮರುಮಾತನಾಡದೆ ನಕ್ಕು ಸುಮ್ಮನಾಗಿದ್ದಾರೆ. ಈ ಒಂದು ವಿಡಿಯೋ ಕ್ಲಿಪಿಂಗ್ ಈಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.
ಬಹಳಷ್ಟು ಶೋಗಳಲ್ಲಿ ಬಾಲಿವುಡ್ ಮಂದಿಯ ಫಿಲ್ಟರ್ ಇಲ್ಲದ ಮಾತುಗಳಿಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕೂಡಾ ಫಿಲ್ಮ್ ಮೇಕರ್ ಕರಣ್ ಜೋಹರ್, ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಹೆಚ್ಚಾಗಿ ಸೆಕ್ಸ್ ಬಗ್ಗೆಯೇ ಪ್ರಶ್ನೆ ಕೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಬಾಲಿವುಡ್ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತಾಪ್ಸಿ ಪನ್ನು ಕುರಿತಾಗಿ ಹೇಳಿರುವ ಹೇಳಿಕೆಯೊಂದು ಬಹಳ ಚರ್ಚೆಗೆ ಕಾರಣವಾಗಿದೆ.
ಅನುರಾಗ್ ಕಶ್ಯಪ್ ನಿರ್ದೇಶನದ ದೊಬಾರಾ ಸಿನಿಮಾ ಆಗಸ್ಟ್ 19 ರಂದು ತೆರೆ ಕಾಣುತ್ತಿದೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಿನಿಮಾ ಪ್ರಮೋಷನ್ ಇಂಟರ್ವ್ಯೂಗೆ ತೆರಳಿದ್ದ ವೇಳೆ ಅನುರಾಗ್ ಕಶ್ಯಪ್ ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್ ಬಗ್ಗೆ ಕೂಡಾ ಕಮೆಂಟ್ ಮಾಡಿದ್ದಾರೆ. ಇಂಟರ್ನೆಟ್ನಲ್ಲಿ ಬಹಳ ವೈರಲ್ ಆಗುವಂತೆ ನಾನೂ ಕೂಡಾ ಫೋಟೋಶೂಟ್ ಮಾಡಿಸಬೇಕು ಎಂದುಕೊಂಡಿದ್ದೆ ಆದರೆ ನನಗೆ ಹೊಟ್ಟೆ ಇದೆ, ಅದು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರೂಪಕ, ನೀವು ಪ್ರಯತ್ನಿಸಿದರೆ ಖಂಡಿತ ಸಾಧ್ಯವಾಗುತ್ತದೆ ಎಂದಿದ್ದಾರೆ. ಪಕ್ಕದಲ್ಲೇ ಇದ್ದ ತಾಪ್ಸಿ ಪನ್ನು ದಯವಿಟ್ಟು ಹಾರರ್ ಶೋಗೆ ಅವಕಾಶ ನೀಡಬೇಡಿ ಎಂದಿದ್ದಾರೆ.
ತಾಪ್ಸಿ ಮಾತಿಗೆ ಮತ್ತೆ ಉತ್ತರಿಸಿದ ಅನುರಾಗ್ ಕಶ್ಯಪ್, ತಾಪ್ಸಿಗೆ, ಆಕೆಯ ಬೂ..ಕ್ಕಿಂತ ನನ್ನದು ದೊಡ್ಡದು ಇದೆ ಎಂದು ಬಹಳ ಅಸೂಯೆ ಕಾಡುತ್ತಿದೆ, ಆದ್ದರಿಂದ ಹೀಗೆ ಹೇಳುತ್ತಿದ್ದಾಳೆ ಎಂದಿದ್ದಾರೆ. ಈ ಮಾತು ಕೇಳಿ ತಾಪ್ಸಿ ಮರುಮಾತನಾಡದೆ ನಕ್ಕು ಸುಮ್ಮನಾಗಿದ್ದಾರೆ. ಈ ಒಂದು ವಿಡಿಯೋ ಕ್ಲಿಪಿಂಗ್ ಈಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಜನರು, ಈ ಸಿನಿಮಾವನ್ನು ಬಾಯ್ ಕಾಟ್ ಮಾಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕರಣ್ ಜೋಹರನ್ನು ಪರೋಕ್ಷವಾಗಿ ಟೀಕಿಸಿದ್ದ ತಾಪ್ಸಿ ಪನ್ನು
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಿರೂಪಕ ಕರಣ್, ವೈಯಕ್ತಿಕ ಹಾಗೂ ಲೈಂಗಿಕ ಜೀವನದ ಪ್ರಶ್ನೆಗಳನ್ನೇ ಹೆಚ್ಚು ಕೇಳುತ್ತಾರೆ ಎಂಬುದು ತಿಳಿದ ವಿಚಾರ, ಇತ್ತೀಚಿನ ಎಪಿಸೋಡ್ನಲ್ಲಿ ಭಾಗವಹಿಸಿದ್ದ ವಿಜಯ್ ದೇವರಕೊಂಡ ಅವರನ್ನು ಕೂಡಾ ಕರಣ್, ನೀವು ಕೊನೆಯ ಬಾರಿ ಸೆಕ್ಸ್ ಮಾಡಿದ್ದು ಎಲ್ಲಿ..? ಎಂದು ಪ್ರಶ್ನಿಸಿದ್ದರು. ಈ ಶೋ ನೋಡಿದ್ದ ಹಲವರು, ಇದು ಸುಸಂಸ್ಕೃತರು ಭಾಗವಹಿಸುವ ಕಾರ್ಯಕ್ರಮವಂತೂ ಖಂಡಿತ ಅಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ತಾಪ್ಸಿ ಪನ್ನು ಕೂಡಾ ಕರಣ್ ಜೋಹರ್ ಅವರನ್ನು ಪರೋಕ್ಷವಾಗಿ ಕುಟುಕಿದ್ದರು.
ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸದಾ ಧೈರ್ಯವಾಗಿ ಉತ್ತರಿಸುವ ತಾಪ್ಸಿ ಮತ್ತೊಮ್ಮೆ ತಮ್ಮ ದಿಟ್ಟತನ ತೋರಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ 'ಕಾಫಿ ವಿತ್ ಕರಣ್' ಶೋಗೆ ಹೋಗಲಿಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳು ತಾಪ್ಸಿಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ತಾಪ್ಸಿ, ''ಆ ಕಾರ್ಯಕ್ರಮದಿಂದ ಆಮಂತ್ರಣ ಪಡೆಯಲು ನನಗೆ ಇಂಟ್ರಸ್ಟಿಂಗ್ ಸೆಕ್ಸ್ ಲೈಫ್ ಇಲ್ಲ ಎಂದಿದ್ದಾರೆ. '' ತಾಪ್ಸಿ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದರು. ಆದರೆ ಇದೀಗ ಅನುರಾಗ್ ಕಶ್ಯಪ್ ತಮ್ಮ ಬಗ್ಗೆ ಮಾಡಿರುವ ಕಮೆಂಟ್ಗೆ ತಾಪ್ಸಿ ಏಕೆ ವಿರೋಧಿಸಲಿಲ್ಲ ಎಂದು ನೆಟಿಜನ್ಸ್ ಪ್ರಶ್ನಿಸುತ್ತಿದ್ದಾರೆ.