logo
ಕನ್ನಡ ಸುದ್ದಿ  /  ಮನರಂಜನೆ  /  Sanjana Galrani: ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ ಆರೋಪ.. ಸ್ಥಳೀಯ ನಿವಾಸಿಗಳ ವಿರುದ್ಧ ಎಫ್‌ಐಆರ್‌ ದಾಖಲು

Sanjana Galrani: ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ ಆರೋಪ.. ಸ್ಥಳೀಯ ನಿವಾಸಿಗಳ ವಿರುದ್ಧ ಎಫ್‌ಐಆರ್‌ ದಾಖಲು

HT Kannada Desk HT Kannada

Mar 16, 2023 02:21 PM IST

google News

ಸಂಜನಾ ಗಲ್ರಾನಿ

    • ಅಪಾರ್ಟ್‌ಮೆಂಟ್‌ ಬಳಿ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿದ್ದ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿದ್ದಾರೆ. ಅಲ್ಲದೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ಸಂಜನಾಗೆ ಕೊಲೆ ಬೆದರಿಕೆ ಒಡ್ಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ಮುಂದಿನ ವಿಚಾರಣೆ ನಡೆಸುತ್ತಿದ್ಧಾರೆ.
ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ (PC: Sanjjanaa Galrani Facebook)

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದು ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಮತ್ತೆ ಸಂಜನಾ ಸಮಸ್ಯೆಗೆ ಸಿಲುಕಿದ್ದು ಈ ಸಂಬಂಧ ಪೊಲೀಸರ ಮೊರೆ ಹೋಗಿದ್ದಾರೆ. ಸ್ಥಳೀಯರೊಬ್ಬರು ನನಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಸಂಜನಾ ಗಲ್ರಾನಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಪಾರ್ಕಿಂಗ್‌ ವಿಚಾರವಾಗಿ ಸಂಜನಾ ಗಲ್ರಾನಿ ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯ ನಿವಾಸಿಗಳಾದ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಬಳಿ ನಮ್ಮ ಅಪಾರ್ಟ್‌ಮೆಂಟ್‌ ಬಳಿ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿದ್ದ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿದ್ದಾರೆ. ಅಲ್ಲದೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ಸಂಜನಾಗೆ ಕೊಲೆ ಬೆದರಿಕೆ ಒಡ್ಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ಮುಂದಿನ ವಿಚಾರಣೆ ನಡೆಸುತ್ತಿದ್ಧಾರೆ.

ಡಾ. ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಸಂಜನಾ ಗಲ್ರಾನಿ

ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿ ಬರುವವರೆಗೂ ಸಂಜನಾ ಗಲ್ರಾನಿಗೆ ಮದುವೆಯಾಗಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ ನಂತರ ಅವರು ಡಾ. ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂತು. ಅಜೀಜ್ ಪಾಷಾ, ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಸಂಜನಾ, ತಾವು ತಾಯಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ನಡೆದ ಸೀಮಂತ ಕಾರ್ಯಕ್ರಮಗಳ ಫೋಟೋಗಳನ್ನು ಕೂಡಾ ಸಂಜನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 19 ಮೇ 2022 ಮೇ ರಂದು ಸಂಜನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಮಗನಿಗೆ 'ಅಲಾರಿಕ್' ಎಂದು ಹೆಸರಿಟ್ಟಿರುವ ಸಂಜನಾ

ಸಂಜನಾ ಗಲ್ರಾನಿ ತಮ್ಮ ಮಗನಿಗೆ 'ಅಲಾರಿಕ್' ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ ಕಂದನ ಹೆಸರಿನಲ್ಲಿ ಪ್ರಿನ್ಸ್ ಅಲಾರಿಕ್ ಎಂಬ ಒಂದು ಇನ್​ಸ್ಟಾಗ್ರಾಮ್ ಖಾತೆಯನ್ನು ಕೂಡಾ ತೆರೆದಿದ್ದಾರೆ. ಅಲಾರಿಕ್ ಎಂಬ ಪದ ಪ್ರಾಚೀನ ಜರ್ಮನ್ ಮೂಲವಾಗಿದ್ದು ಈ ಪದದ ಅರ್ಥ ಹುಡುಕುವುದಾದರೆ, ಇದು ಎರಡು ಅರ್ಥವನ್ನು ನೀಡುತ್ತದೆ. ಅಲಾರಿಕ್ ಎಂದರೆ ಉದಾತ್ತ, ರಾಜಪ್ರಭುತ್ವದ ಆಡಳಿತಗಾರ ಎಂದು ಅರ್ಥ.

ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿರುವ ಗಲ್ರಾನಿ

ಸಂಜನಾ ಗಲ್ರಾನಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ, ಕಾಲೇಜಿನ ದಿನಗಳಲ್ಲಿ ಮಾಡೆಲಿಂಗ್​​​​​​​​​ನಲ್ಲಿ ಸಕ್ರಿಯರಾಗಿದ್ದ ಸಂಜನಾ, 2005 ರಲ್ಲಿ 'ಸೊಗ್ಗಾಡು' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ತಮಿಳು ಚಿತ್ರದಲ್ಲಿ ನಟಿಸಿದ ಅವರು 2006 ರಲ್ಲಿ 'ಗಂಡ ಹೆಂಡತಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಗಂಡ ಹೆಂಡತಿ ಚಿತ್ರದ ಬೋಲ್ಡ್ ಆ್ಯಕ್ಟಿಂಗ್ ಕೆಲವರಿಗೆ ಇಷ್ಟವಾದರೆ, ಇನ್ನೂ ಕೆಲವರು ಟೀಕೆ ವ್ಯಕ್ತಪಡಿಸಿದ್ದರು. ಅದಾದ ನಂತರ ಜಾಕ್ ಪಾಟ್, ಆಟೋಗ್ರಾಫ್ ಪ್ಲೀಸ್, ಸತ್ಯಮೇವ ಜಯತೇ, ಮಸ್ತ್ ಮಜಾ ಮಾಡಿ, ಹುಡುಗ ಹುಡುಗಿ, ಮೈಲಾರಿ, ನರಸಿಂಹ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸದ್ಯಕ್ಕೆ ಅವರು ತಾಯ್ತನ ಎಂಜಾಯ್‌ ಮಾಡುತ್ತಿದ್ದು ಮಗುವಿನ ಆರೈಕೆಯಲ್ಲಿ ಫುಲ್‌ ಬ್ಯುಸಿ ಇದ್ದಾರೆ. ಮಗು, ಪತಿಯೊಂದಿಗಿನ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ