logo
ಕನ್ನಡ ಸುದ್ದಿ  /  ಮನರಂಜನೆ  /  ನಕ್ಕಿದ್ದಾನೆ, ನಗಿಸಿದ್ದಾನೆ, ಮನಸಾರೆ ಆಡಿದ್ದಾನೆ, ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ; ಧನರಾಜ್‌ ಆಟ ಹೊಗಳಿದ ಮಾಜಿ ಸ್ಪರ್ಧಿ

ನಕ್ಕಿದ್ದಾನೆ, ನಗಿಸಿದ್ದಾನೆ, ಮನಸಾರೆ ಆಡಿದ್ದಾನೆ, ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ; ಧನರಾಜ್‌ ಆಟ ಹೊಗಳಿದ ಮಾಜಿ ಸ್ಪರ್ಧಿ

Jan 20, 2025 01:34 PM IST

google News

ಧನರಾಜ್‌ ಆಟ ಹೊಗಳಿದ ಮಾಜಿ ಸ್ಪರ್ಧಿ

    • Bigg Boss Kannada 11: ಫಿನಾಲೆ ವಾರದಿಂದ ಕೂದಲೆಳೆ ಅಂತರದಲ್ಲಿ ಎಲಿಮಿನೇಟ್‌ ಆಗಿದ್ದಾರೆ ಧನರಾಜ್‌ ಆಚಾರ್.‌ ಮನೆಯಲ್ಲಿ 110 ದಿನ ಕಳೆದ ಧನರಾಜ್‌, ಫಿನಾಲೆವರೆಗೂ ಇರಬೇಕಿತ್ತು ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಅದರಂತೆ, ಮಾಜಿ ಬಿಗ್‌ ಬಾಸ್‌ ರನ್ನರ್‌ ಅಪ್‌ ಸಹ ಧನರಾಜ್ ಆಟಕ್ಕೆ‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 ಧನರಾಜ್‌ ಆಟ ಹೊಗಳಿದ ಮಾಜಿ ಸ್ಪರ್ಧಿ
ಧನರಾಜ್‌ ಆಟ ಹೊಗಳಿದ ಮಾಜಿ ಸ್ಪರ್ಧಿ

Kirik Keerthi about Dhanraj Achar: ಬಿಗ್‌ ಬಾಸ್‌ ಕನ್ನಡ 11ರಲ್ಲಿ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರನ್ನು ನಗಿಸುತ್ತ, ಖುಷಿ ಹಂಚುತ್ತಿದ್ದವರು ಧನರಾಜ್‌ ಆಚಾರ್.‌ ಅದರಲ್ಲೂ ಹೊರಗಡೆ ಹನುಮಂತು ಮತ್ತು ಧನರಾಜ್‌ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇತ್ತು. ಹೀಗಿರುವಾಗ, ಭಾನುವಾರ ಅಚ್ಚರಿಯ ರೀತಿಯಲ್ಲಿ ತಮ್ಮ 16 ವಾರಗಳ ಆಟಕ್ಕೆ ಧನರಾಜ್‌ ಬ್ರೇಕ್‌ ಹಾಕಿದರು. ಫಿನಾಲೆ ವಾರ ಪ್ರವೇಶಿಸುವ ಮೊದಲೇ ಎಲಿಮಿನೇಟ್‌ ಆಗಿ ಮನೆಯಿಂದ ಹೊರಬಂದರು. ಧನರಾಜ್‌ ಹೀಗೆ ಹೊರಬರುತ್ತಿದ್ದಂತೆ, ವೀಕ್ಷಕರ ವಲಯದಲ್ಲಿಯೂ ಕೊಂಚ ಬೇಸರ ಮೂಡಿದೆ.

ಧನರಾಜ್‌ ಅವರ ಪ್ರಾಮಾಣಿಕತೆ ಬಗ್ಗೆ ಮನೆ ಮಂದಿ ಮಾತ್ರವಲ್ಲದೆ, ಕಿಚ್ಚ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ ತಪ್ಪನ್ನು ಕ್ಯಾಮರಾ ಮುಂದೆ ಹೇಳಿಕೊಂಡು, ವೀಕ್ಷಕರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಸ್ವತಃ ಕಿಚ್ಚನಿಂದಲೇ ಚಪ್ಪಾಳೆ ಸಿಕ್ಕಿತ್ತು. ಆದರೆ, ಕಳೆದ ವಾರದ ಎಡವಟ್ಟುಗಳೇ ಅವರಿಗೆ ಮುಳುವಾಯ್ತೆ? ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ, ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ ಕೀರ್ತಿ ಶಂಕರಘಟ್ಟ ಅಲಿಯಾಸ್ ಕಿರಿಕ್‌ ಕೀರ್ತಿ‌ ಸೋಷಿಯಲ್‌ ಮೀಡಿಯಾದಲ್ಲಿ ಧನರಾಜ್‌ ಎಲಿಮಿನೇಟ್‌ ಆದ ಬೆನ್ನಲ್ಲೇ ಪೋಸ್ಟ್‌ ಹಂಚಿಕೊಂಡು, ಫಿನಾಲೆ ವಾರ ಪ್ರವೇಶಿಸುವ ಎಲ್ಲ ಅರ್ಹತೆ ಅವರಿಗಿತ್ತು ಎಂದಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 4ರಲ್ಲಿ ಸ್ಪರ್ಧಿಯಾಗಿದ್ದ ಕಿರಿಕ್‌ ಕೀರ್ತಿ, ಆ ಸೀಸನ್‌ನ ರನ್ನರ್‌ ಅಪ್‌ ಆಗಿದ್ದರು. ವಿನ್ನರ್‌ ಆಗಿ ಪ್ರಥಮ್‌ ಕಪ್‌ ಎತ್ತಿ ಹಿಡಿದಿದ್ದರು. ಈಗ ಆ ಕೊನೇ ಕ್ಷಣದಲ್ಲಿ ಕಪ್‌ ಮಿಸ್ಸಾಗುವ ನೋವು ಹೇಗಿರುತ್ತದೆ ಮತ್ತು ಒಳ್ಳೆಯ ಆಟ ಆಡಿದ ಧನರಾಜ್‌ ಅವರ ಬಗ್ಗೆಯೂ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹೀಗಿದೆ ಕಿರಿಕ್‌ ಕೀರ್ತಿ ಪೋಸ್ಟ್‌.

ಕಿರಿಕ್‌ ಕೀರ್ತಿ ಹೇಳುವುದೇನು?

"ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬ ಧನರಾಜ್ ಆಚಾರ್... ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ... ತನ್ನ ಶಕ್ತಿ‌ಮೀರಿ ಟಾಸ್ಕ್ ಆಡಿದ್ದ... ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ... ನಕ್ಕಿದ್ದಾನೆ... ನಗಿಸಿದ್ದಾನೆ... ಮನಸಾರೆ ಆಟವಾಡಿದ್ದಾನೆ... ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ... ಸ್ನೇಹ ಉಳಿಸಿಕೊಂಡಿದ್ದಾನೆ... ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ... ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ" ಎಂದು ಕೀರ್ತಿ ಬರೆದುಕೊಂಡಿದ್ದಾರೆ.

ನೀನು ಸೋತಿಲ್ಲ, ಸೋಲಲ್ಲ

"ಕಪ್ ಗೆಲ್ಲೋ ಅಷ್ಟು ಆಡಿದ್ದಾನಾ ಗೊತ್ತಿಲ್ಲ... ಆದ್ರೆ ಫಿನಾಲೆ ವಾರದಲ್ಲಿರೋ ಎಲ್ಲಾ ಯೋಗ್ಯತೆ ಧನ್‌ರಾಜ್‌ಗೆ ಇತ್ತು... ಫಿನಾಲೆಗೆ ವಾರ ಬಾಕಿ‌ ಇದ್ದಾಗ ಮನೆಯಿಂದ ಹೊರಹೋಗೋ ಸಂಕಟ ಸಾಮಾನ್ಯವಾದುದ್ದಲ್ಲ‌... ಬೇಜಾರಗಬೇಡ ತಮ್ಮ... ನಿನ್ನ ತಾಕತ್ತು ಇನ್ನೂ ಇದೆ‌‌... ನೀನು ಸೋತಿಲ್ಲ... ಸೋಲಲ್ಲ... ಮತ್ಯಾವತ್ತೂ ಕಣ್ಣೀರು ಹಾಕಬೇಡ.. ಭವಿಷ್ಯ ಉಜ್ವಲವಾಗಿರಲಿ... ಬದುಕು ಬಂಗಾರವಾಗಲಿ... U gave ur best... ಸಕಲವೂ ಸನ್ಮಂಗಳವಾಗಲಿ" ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ