Hansika Motwani Hot Look: ಮತ್ತೆ ಹಾಟ್ ಲುಕ್‌ನಲ್ಲಿ ದರ್ಶನ ನೀಡಿದ ಹನ್ಸಿಕಾ..ಮದುವೆ ಆದ್ರೆ ಬದಲಾಗ್ಬೇಕಾ ಅಂತಿದ್ದಾರೆ 'ಬಿಂದಾಸ್' ನಟಿ
Jan 27, 2023 08:41 AM IST
ಹನ್ಸಿಕಾ ಮೋಟ್ವಾನಿ ಹಾಟ್ ಲುಕ್
- ಮದುವೆ ನಂತರ ಕೂಡಾ ಹನ್ಸಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಹನ್ಸಿಕಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನೇರಳೆ ಬಣ್ಣದ ಸ್ಲೀವ್‌ಲೆಸ್ ಗೌನ್‌ನಲ್ಲಿ ಮಿಂಚಿದ್ದಾರೆ. ಅವಾರ್ಡ್ ಫಂಕ್ಷನ್‌ಗೆ ಹನ್ಸಿಕಾ ಈ ರೀತಿ ರೆಡಿಯಾಗಿದ್ದರಂತೆ.
ಸಿನಿಮಾಗಳಲ್ಲಿ ಎಕ್ಸ್‌ಪೋಸ್, ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಬಹುತೇಕ ನಟಿಯರು ಮದುವೆ ನಂತರ ತಮಗೆ ತಾವೇ ನಿರ್ಬಂಧ ವಿಧಿಸಿಕೊಳ್ಳುತ್ತಾರೆ. ಮೊದಲಿನಂತೆ ಎಕ್ಸ್‌ಪೋಸ್ ಮಾಡುವುದು ಬೇಡ, ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಬೇಡ ಎಂದುಕೊಳ್ಳುತ್ತಾರೆ. ಆದರೆ ಕೆಲವೇ ನಟಿಯರು ಮಾತ್ರ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಮೊದಲಿನಂತೆ ಇರುತ್ತಾರೆ.
'ಬಿಂದಾಸ್' ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹನ್ಸಿಕಾ ತಮ್ಮ ದೀರ್ಘಕಾಲದ ಗೆಳೆಯ ಸೋಹೈಲ್ ಕಥುರಿಯಾ ಅವರನ್ನು ವರಿಸಿದ್ದರು. ಆದರೆ ಮದುವೆ ನಂತರ ಕೂಡಾ ಹನ್ಸಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಹನ್ಸಿಕಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನೇರಳೆ ಬಣ್ಣದ ಸ್ಲೀವ್‌ಲೆಸ್ ಗೌನ್‌ನಲ್ಲಿ ಮಿಂಚಿದ್ದಾರೆ. ಅವಾರ್ಡ್ ಫಂಕ್ಷನ್‌ಗೆ ಹನ್ಸಿಕಾ ಈ ರೀತಿ ರೆಡಿಯಾಗಿದ್ದರಂತೆ. ಹನ್ಸಿಕಾ ಫೋಟೋಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ಮದುವೆ ನಂತರವೂ ಇದು ಬೇಕಾ..? ದಯವಿಟ್ಟು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಎಂದು ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳ ಕೂಡಾ ಸೂಪರ್ ಲುಕ್ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹನ್ಸಿಕಾ ಮೋಟ್ವಾನಿ ಸಿಂಧಿ ಕುಟುಂಬಕ್ಕೆ ಸೇರಿದವರು. ಅವರು ಹುಟ್ಟಿ, ಬೆಳೆದದ್ದು ಮುಂಬೈನಲ್ಲಿ. ಹನ್ಸಿಕಾ ತಂದೆ ಪ್ರದೀಪ್ ಮೋಟ್ವಾನಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರೆ ತಾಯಿ ಮೋನಾ ಮೋಟ್ವಾನಿ ಚರ್ಮರೋಗ ತಜ್ಞೆಯಾಗಿದ್ದಾರೆ. ಮುಂಬೈನಲ್ಲೇ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ಹನ್ಸಿಕಾ, ಶಾಲೆಯಲ್ಲಿ ಓದುವಾಗಲೇ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದರು. ಅದೇ ವೇಳೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಶಕಲಕ ಬೂಮ್ ಬೂಮ್' ಧಾರಾವಾಹಿ ಮೂಲಕ ಬಾಲನಟಿಯಾಗಿ ನಟನೆ ಆರಂಭಿಸಿದರು. ನಂತರ 'ದೇಸ್ ಮೆ ನಿಕ್ಲಾ ಹೋಗಾ ಚಾಂದ್' ಧಾರಾವಾಹಿಯಲ್ಲಿ ನಟಿಸಿದರು. ಹೃತಿಕ್ ರೋಷನ್ ಹಾಗೂ ಪ್ರೀತಿ ಝಿಂಟಾ ಅಭಿನಯದ 'ಕೋಯಿ ಮಿಲ್ಗಯಾ' ಸಿನಿಮಾದಲ್ಲಿ ಕೂಡಾ ಹನ್ಸಿಕಾ ಬಾಲನಟಿಯಾಗಿ ನಟಿಸಿದ್ದರು. ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದ ಹನ್ಸಿಕಾ ಮೊಟ್ವಾನಿ ನಾಯಕಿಯಾಗಿ ಕೂಡಾ ಹೆಸರು ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಈ ಚೆಲುವೆ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ ನಟಿಸಿದ್ದಾರೆ. 2008 ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು.
ಹನ್ಸಿಕಾ ಮೋಟ್ವಾನಿ, ಡಿಸೆಂಬರ್ 4 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಸೋಹೆಲ್ ಕಥಾರಿಯಾ ಅವರನ್ನು ಹನ್ಸಿಕಾ ಕೈ ಹಿಡಿದಿದ್ದಾರೆ. ರಾಜಸ್ಥಾನದ ಜೈಪುರದ ಮುಂಡೋತ ಪ್ಯಾಲೇಸ್‌ನಲ್ಲಿ ಹನ್ಸಿಕಾ ಮೋಟ್ವಾನಿ ಹಾಗೂ ಸೋಹೆಲ್ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ಫಿಕ್ಸ್ ಆದರೂ ಹನ್ಸಿಕಾ ಕೆಲವು ದಿನಗಳ ಕಾಲ ಈ ವಿಚಾರವನ್ನು ಗುಟ್ಟಾಗಿ ಇರಿಸಿದ್ದರು. ಆದರೆ ವಿಷಯ ವೈರಲ್ ಆಗುತ್ತಿದ್ದಂತೆ ತಮ್ಮ ಭಾವಿ ಪತಿ ಜೊತೆ ಪ್ಯಾರೀಸ್‌ನ ಐಫೆಲ್ ಟವರ್ ಬಳಿ ತೆಗೆದ ಫೋಟೋಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು. ಹನ್ಸಿಕಾ ಮೋಟ್ವಾನಿ ನಟಿಯಾಗಿ ಹೆಸರು ಮಾಡಿರುವುದು ಮಾತ್ರವಲ್ಲದೆ, ಸಮಾಜಸೇವೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಹನ್ಸಿಕಾ ತಮ್ಮ ಮದುವೆಗೆ ಕೆಲವು ಅನಾಥ ಮಕ್ಕಳನ್ನು ಕೂಡಾ ಆಹ್ವಾನಿಸಿದ್ದರಂತೆ.