Hisaab Barabar OTT: ಯಾರೂ ಊಹಿಸದ ಕೋಟಿ ಕೋಟಿ ಹಗರಣದ ಕಥೆಯೇ ‘ಹಿಸಾಬ್ ಬರಾಬರ್’; ಯಾವ ಒಟಿಟಿಯಲ್ಲಿ ಆರ್ ಮಾಧವನ್ ಚಿತ್ರದ ವೀಕ್ಷಣೆ?
Jan 21, 2025 10:02 AM IST
‘ಹಿಸಾಬ್ ಬರಾಬರ್’ ಒಟಿಟಿ ಬಿಡುಗಡೆ ಯಾವಾಗ
- Hisaab Barabar OTT Release Date: ಆರ್ ಮಾಧವನ್ ನಟನೆಯ ಹಿಸಾಬ್ ಬರಾಬರ್ ಸಿನಿಮಾ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಟ್ರೇಲರ್ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿರುವ ಈ ಸಿನಿಮಾ, ಸಾಮಾನ್ಯನ ಕಣ್ಣ ಮುಂದಿರುವ ಹಗರಣವೊಂದರ ಸುತ್ತ ಸುತ್ತುತ್ತದೆ.

Hisaab Barabar OTT Release: ಬಾಲಿವುಡ್‌ನಲ್ಲಿ ನಟ ಅಜಯ್ ದೇವಗನ್ ಅವರ 'ಶೈತಾನ್' ಚಿತ್ರದ ಮೂಲಕ ಹೆದರಿಸಿದ್ದ ನಟ ಆರ್ ಮಾಧವನ್, ಈಗ ಮತ್ತೊಂದು ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಅದೇ ಹಿಸಾಬ್ ಬರಾಬರ್. ದಿನ ನಿತ್ಯದ ಬದುಕಿನಲ್ಲಿನ, ಯಾರೂ ಅತ್ತಕಡೆಗೆ ಗಮನಹರಿಸದ ಸಾಮಾನ್ಯ ಸಂಗತಿಯೊಂದು ಹೇಗೆ ದೊಡ್ಡ ಹಗರಣವಾಗಿ ಬದಲಾಗುತ್ತದೆ ಎಂಬ ಕಥೆಯನ್ನು ಹಿಡಿದು ತಂದಿದ್ದಾರೆ ಮಾಧವನ್. ಚಿತ್ರಮಂದಿರದ ಬದಲು ನೇರವಾಗಿ ಒಟಿಟಿ ಅಂಗಳಕ್ಕೆ ಬರುತ್ತಿರುವ 'ಹಿಸಾಬ್ ಬರಾಬರ್' ಸಿನಿಮಾ ಕುರಿತ ಮಾಹಿತಿ ಇಲ್ಲಿದೆ.
'ಹಿಸಾಬ್ ಬರಾಬರ್' ಸಿನಿಮಾದಲ್ಲಿ ಪ್ರಾಮಾಣಿಕ ರೈಲ್ವೆ ಟಿಟಿ ರಾಧೇ ಮೋಹನ್ ಶರ್ಮಾ ಪಾತ್ರದಲ್ಲಿ ಮಾಧವನ್ ಕಂಡಿದ್ದಾರೆ. ಅಶ್ವಿನಿ ಧೀರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕಣ್ಣಿಗೆ ಕಾಣದ, ಕಂಡರೂ ಹೆಚ್ಚು ಪರಿಣಾಮ ಬೀರದ ಸಂಗತಿಯೊಂದನ್ನು ವೀಕ್ಷಕನ ಮುಂದಿರಿಸುತ್ತಿದ್ದಾರೆ ನಿರ್ದೇಶಕರು. ಇನ್ನೇನು ಇದೇ ತಿಂಗಳಲ್ಲಿ 'ಹಿಸಾಬ್ ಬರಾಬರ್' ಒಟಿಟಿ ಅಂಗಳಕ್ಕೆ ಕಾಲಿಡಲಿದೆ.
ಹಿಸಾಬ್ ಬರಾಬರ್ ವೀಕ್ಷಣೆ ಎಲ್ಲಿ
ಆರ್ ಮಾಧವನ್ ನಟನೆಯ 'ಹಿಸಾಬ್ ಬರಾಬರ್' ಸಿನಿಮಾ ಇದೇ ಜನವರಿ 24ರಂದು ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಗಲಿದೆ. ಮೂಲ ಹಿಂದಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗಳಿಗೂ ಡಬ್ ಆಗಿ ZEE5ನಲ್ಲಿ ಪ್ರಸಾರ ಕಾಣಲಿದೆ. ಜತೆಗೆ ಅಷ್ಟೇ ರೋಚಕ ಎನಿಸುವ ಟ್ರೇಲರ್ ಸಹ ಬಿಡುಗಡೆ ಆಗಿದ್ದು "ವ್ಯವಸ್ಥೆಯೇ ಅಲುಗಾಡಲಿದೆ, ವಂಚಕರು ಭಯಭೀತರಾಗಲಿದ್ದಾರೆ! ಈಗ ಸಾಮಾನ್ಯ ಮನುಷ್ಯನೂ ಸಹ ಸಮಸ್ಯೆ ಬಗೆಹರಿಸಿಕೊಳ್ಳುತ್ತಾನೆ" ಎಂದು ಟ್ರೇಲರ್‌ಗೆ ಕ್ಯಾಪ್ಷನ್ ನೀಡಿದೆ ಜೀ5 ಒಟಿಟಿ.
ಚಿತ್ರದ ಕಥೆ ಏನು?
ಈ ಚಿತ್ರದ ಕಥೆ ಆರ್ ಮಾಧವನ್ ನಿರ್ವಹಿಸಿದ ರಾಧೆ ಮೋಹನ್ ಶರ್ಮಾ ಅವರ ಸುತ್ತ ಸುತ್ತುತ್ತದೆ. ರಾಧೆ ಮೋಹನ್ ಒಬ್ಬ ಪ್ರಾಮಾಣಿಕ ರೈಲ್ವೆ ಟಿಕೆಟರ್. ಹೀಗಿರುವಾಗ ಒಂದು ದಿನ ತನ್ನ ಬ್ಯಾಂಕ್ ಖಾತೆಯಲ್ಲಿ ಸಣ್ಣ ವ್ಯತ್ಯಾಸವನ್ನು ಕಂಡುಕೊಳ್ಳುತ್ತಾನೆ. ಈ ಸಣ್ಣ ತಪ್ಪು ದೊಡ್ಡ ಹಗರಣ ಬೆಳಕಿಗೆ ಬರುವಂತೆ ಮಾಡುತ್ತದೆ. ಈ ಆರ್ಥಿಕ ಹಗರಣದ ಹಿಂದಿರುವ ಮಿಕ್ಕಿ ಮೆಹ್ತಾ ಎಂಬ ಭ್ರಷ್ಟ ಬ್ಯಾಂಕರ್‌ನ ಬುಡವನ್ನೇ ಸಾಮಾನ್ಯ ಟಿಟಿ ರಾಧೆ ಮೋಹನ್ ಅಲುಗಾಡಿಸುತ್ತಾನೆ. ಆ ರೋಚಕ ಸವಿಯಲು ಇನ್ನೆರಡು ದಿನ ಕಾಯಲೇಬೇಕು.
'ಹಿಸಾಬ್ ಬರಾಬರ್' ಪಾತ್ರವರ್ಗ
'ಹಿಸಾಬ್ ಬರಾಬರ್' ಚಿತ್ರದಲ್ಲಿ ಆರ್ ಮಾಧವನ್, ನೀಲ್ ನಿತಿನ್ ಮುಖೇಶ್, ರಶಾಮಿ ದೇಸಾಯಿ, ಕೀರ್ತಿ ಕುಲ್ಹಾರಿ, ಇಮ್ರಾನ್ ಹಸ್ನಿ, ಇಶ್ತಿಯಾಕ್ ಖಾನ್, ಸಚಿನ್ ವಿದ್ರೋಹಿ ಮತ್ತು ಮಹೇಂದ್ರ ರಜಪೂತ್ ನಟಿಸಿದ್ದಾರೆ. ಇದನ್ನು ಜಿಯೋ ಸ್ಟುಡಿಯೋ ಮತ್ತು ಎಸ್‌ಪಿ ಸಿನೆಕಾರ್ಪ್ ಬ್ಯಾನರ್‌ನಡಿಯಲ್ಲಿ ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಜನವರಿ 24ರಂದು ಜೀ5 ಒಟಿಟಿಯಲ್ಲಿ ಈ ಸಿನಿಮಾ ನೇರವಾಗಿ ಪ್ರಸಾರ ಕಾಣಲಿದೆ.