logo
ಕನ್ನಡ ಸುದ್ದಿ  /  ಮನರಂಜನೆ  /  Lucky Ali On Rohini Sindhuri: ‘ನನ್ನ ಆಸ್ತಿಯನ್ನು ರೋಹಿಣಿ ಸಿಂಧೂರಿ ಕುಟುಂಬ ಅತಿಕ್ರಮಣ ಮಾಡಿದೆ!’; ಬಾಲಿವುಡ್‌ ಗಾಯಕ ಲಕ್ಕಿ ಅಲಿ ಆರೋಪ

Lucky Ali on Rohini Sindhuri: ‘ನನ್ನ ಆಸ್ತಿಯನ್ನು ರೋಹಿಣಿ ಸಿಂಧೂರಿ ಕುಟುಂಬ ಅತಿಕ್ರಮಣ ಮಾಡಿದೆ!’; ಬಾಲಿವುಡ್‌ ಗಾಯಕ ಲಕ್ಕಿ ಅಲಿ ಆರೋಪ

HT Kannada Desk HT Kannada

Dec 06, 2022 10:11 AM IST

google News

‘ನನ್ನ ಆಸ್ತಿಯನ್ನು ರೋಹಿಣಿ ಸಿಂಧೂರಿ ಕುಟುಂಬ ಅತಿಕ್ರಮಣ ಮಾಡಿದೆ!’; ಬಾಲಿವುಡ್‌ ಗಾಯಕ ಲಕ್ಕಿ ಅಲಿ ಆರೋಪ

    • ಯಲಹಂಕ ಸಮೀಪದ ಕೆಂಚೇನಹಳ್ಳಿಯಲ್ಲಿರುವ ತಮ್ಮ ಆಸ್ತಿಯನ್ನು ಭೂಮಾಫಿಯಾ ಕಬಳಿಕೆ ಮಾಡುತ್ತಿದೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ.
‘ನನ್ನ ಆಸ್ತಿಯನ್ನು ರೋಹಿಣಿ ಸಿಂಧೂರಿ ಕುಟುಂಬ ಅತಿಕ್ರಮಣ ಮಾಡಿದೆ!’; ಬಾಲಿವುಡ್‌ ಗಾಯಕ ಲಕ್ಕಿ ಅಲಿ ಆರೋಪ
‘ನನ್ನ ಆಸ್ತಿಯನ್ನು ರೋಹಿಣಿ ಸಿಂಧೂರಿ ಕುಟುಂಬ ಅತಿಕ್ರಮಣ ಮಾಡಿದೆ!’; ಬಾಲಿವುಡ್‌ ಗಾಯಕ ಲಕ್ಕಿ ಅಲಿ ಆರೋಪ

Lucky Ali alleges land grab by IAS officer: ಬಾಲಿವುಡ್‌ನ ಖ್ಯಾತ ಮ್ಯೂಸಿಷಿಯನ್‌ ಹಾಗೂ ನಟರಾಗಿ ಗುರಿತಿಸಿಕೊಂಡಿರುವ ಲಕ್ಕಿ ಅಲಿ ಇದೀಗ ಕರ್ನಾಟಕದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜಮೀನು ಅತಿಕ್ರಮಣ ಮಾಡಿದ ಆರೋಪ ಹೊರಿಸಿದ್ದಾರೆ.

ಯಲಹಂಕ ಸಮೀಪದ ಕೆಂಚೇನಹಳ್ಳಿಯಲ್ಲಿರುವ ತಮ್ಮ ಆಸ್ತಿಯನ್ನು ಭೂಮಾಫಿಯಾ ಕಬಳಿಕೆ ಮಾಡುತ್ತಿದೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತವರ ಪತಿ ಸುಧೀರ್‌ ರೆಡ್ಡಿ, ಮಧುಸೂದನ್‌ ರೆಡ್ಡಿ ಎಂಬುವವರು ನನ್ನ ಜಮೀನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲಿಯ ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ರೋಹಿಣಿಯ ಮಾವ ಮಧುಸೂದನ್ ರೆಡ್ಡಿ, ಅಲಿ ಎಂಬಾತನೇ ತನ್ನ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೂ ರೋಹಿಣಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಈ ಮೂರು ಎಕರೆ ಆಸ್ತಿಯನ್ನು 2012ರಲ್ಲಿಯೇ ಲಕ್ಕಿ ಅಲಿಯ ಸಹೋದರ ಮನ್ಸೂರ್‌ ಎಂ ಅಲಿ ಅವರ ಬಳಿ ಖರೀದಿ ಮಾಡಿದ್ದೇನೆ ಎಂದಿದ್ದಾರೆ.

DG IGಗೆ ದೂರು ನೀಡಿದ ಅಲಿ..

ಈ ವಿವಾದ ಗೊಂದಲದ ಗೂಡಾಗುತ್ತಿದ್ದಂತೆ, ಸದ್ಯ ದುಬೈನಲ್ಲಿರುವ ಲಕ್ಕಿ ಅಲಿ, ಅಲ್ಲಿನಿಂದಲೇ ಸರಣಿ ಟ್ವಿಟ್‌ ಮೂಲಕ ಪ್ರಕರಣದ ಬಗ್ಗೆ ಹೇಳಿಕೊಂಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿ) ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಿದ್ದಾರೆ. "ನಾನು ಕೆಲಸದ ನಿಮಿತ್ತ ದುಬೈನಲ್ಲಿದ್ದೇನೆ. ಇದು ತುಂಬ ತುರ್ತಿನ ವಿಚಾರ ಆಗಿರುವ ಕಾರಣ, ಟ್ವಿಟರ್‌ ಮೂಲಕ ನಿಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ. ಟ್ರಸ್ಟ್ ಪ್ರಾಪರ್ಟಿಯಾಗಿರುವ ತನ್ನ ಜಮೀನನ್ನು ಐಎಎಸ್ ಅಧಿಕಾರಿ ರಾಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಮತ್ತು ಅವರ ಸಹೋದರ ಮಧುಸೂದನ್ ರೆಡ್ಡಿ ಅಕ್ರಮವಾಗಿ ಅತಿಕ್ರಮಿಸಿದ್ದಾರೆ" ಎಂದು ಟ್ವಿಟ್‌ ಮಾಡಿದ್ದಾರೆ.

ರೋಹಿಣಿ ಸಿಂಧೂರಿ ಕೈವಾಡ..

"ಈ ಭೂ ಮಾಫಿಯಾ, ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಲಕ್ಕಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. "ಬಲವಂತವಾಗಿ ಮತ್ತು ಅಕ್ರಮವಾಗಿ ನನ್ನ ಫಾರ್ಮ್‌ಹೌಸ್‌ಗೆ ಪ್ರವೇಶಿಸಿದ್ದಾರೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲೂ ನಿರಾಕರಿಸುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಈ ಭೂಮಾಫಿಯಾಗಳಿಗೆ ಸಹಾಯ ಮಾಡುತ್ತಿದ್ದಾರೆ' ಎಂದು ಅಲಿ ಆರೋಪಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ