Ileana announced Pregnancy: ಪ್ರೆಗ್ನೆನ್ಸಿ ಘೋಷಿಸಿದ ಇಲಿಯಾನಾ: ಮದುವೆ ಯಾವಾಗ ಆಯ್ತು ಎಂದು ಪ್ರಶ್ನಿಸಿದ ನೆಟಿಜನ್ಸ್!
Apr 18, 2023 11:41 AM IST
ಪ್ರೆಗ್ನೆನ್ಸಿ ಘೋಷಿಸಿದ ನಟಿ ಇಲಿಯಾನಾ
- ಇನ್‌ಸ್ಟಾಗ್ರಾಮ್‌ನಲ್ಲಿ ಇಲಿಯಾನಾ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಟಿ ಷರ್ಟ್ ಇದ್ದು ಅದರ ಮೇಲೆ And So the Adventure Begins ಎಂದು ಬರೆಯಲಾಗಿದೆ. ಮತ್ತೊಂದು ಫೋಟೋದಲ್ಲಿ ತಾವು ಧರಿಸಿರುವ mama (ಅಮ್ಮ) ಲಾಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾರಿಕಾ , ವೀಣಾ ಮಲಿಕ್, ಆಮಿ ಜಾಕ್ಸನ್, ಮಹಿಮಾ ಚೌಧರಿ, ದಿಯಾ ಮಿರ್ಜಾ ಸೇರಿದಂತೆ ಅನೇಕ ನಟಿಯರು ಮದುವೆಗೂ ಮುನ್ನ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಇದೀಗ ಬಹುಭಾಷಾ ನಟಿ ಇಲಿಯಾನಾ ಕೂಡಾ ಇವರ ದಾರಿ ಹಿಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸ್ವತ: ಇಲಿಯಾನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್.
ಕೆಲವು ದಿನಗಳಿಂದ ಇಲಿಯಾನಾ ಭಾರೀ ಸುದ್ದಿಯಾಗುತ್ತಿದ್ದಾರೆ. ಬಾಯ್‌ಫ್ರೆಂಡ್ ಜೊತೆಗಿನ ಫೋಟೋಗಳು, ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಲಿಯಾನಾ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ನೋಡಿ ನೆಟಿಜನ್ಸ್ ಶಾಕ್ ಆಗಿದ್ದಾರೆ. ನಾನು ಪ್ರೆಗ್ನೆಂಟ್ ಎಂದು ಇಲಿಯಾನಾ ಪರೋಕ್ಷವಾಗಿ ಘೋಷಿಸಿದ್ದಾರೆ. ಇದನ್ನು ನೋಡಿದವರು ಮದುವೆ ಯಾವಾಗ ಆಯ್ತು ಎಂದು ಕೇಳ್ತಿದ್ಧಾರೆ. ಇನ್ನೂ ಕೆಲವರು ಮದುವೆ ಆಗದೆ ಆಕೆ ಅಮ್ಮ ಆಗ್ತಿದ್ದಾರೆ ಎನ್ನುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಇಲಿಯಾನಾ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಟಿ ಷರ್ಟ್ ಇದ್ದು ಅದರ ಮೇಲೆ And So the Adventure Begins ಎಂದು ಬರೆಯಲಾಗಿದೆ. ಮತ್ತೊಂದು ಫೋಟೋದಲ್ಲಿ ತಾವು ಧರಿಸಿರುವ mama (ಅಮ್ಮ) ಲಾಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಹಳ ಶೀಘ್ರದಲ್ಲೇ.. ನನ್ನ ಪುಟ್ಟ ಡಾರ್ಲಿಂಗ್ ನೋಡಲು ಬಹಳ ಕಾತರವಾಗುತ್ತಿದೆ ಎಂದು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಇಲಿಯಾನಾ ಪೋಸ್ಟ್‌ಗೆ ಪರ ವಿರೋಧ ಕಮೆಂಟ್ ಹರಿದುಬರುತ್ತಿದೆ. ಸಮಾಜ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದೆ. ಮದುವೆ ಆಗದೆ ಪ್ರೆಗ್ನೆಂಟ್ ಆಗುವುದು ಅವರ ಇಷ್ಟ, ಅದು ಅವರ ಜೀವನ, ಅವರ ಆಯ್ಕೆ ಎಂದು ಒಬ್ಬ ನೆಟಿಜನ್ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಇನ್‌ಸ್ಟಾಗ್ರಾಮ್ ಯೂಸರ್, ಸಮಾಜವನ್ನು ಜಡ್ಜ್ ಮಾಡಲು ನೀವು ಯಾರು? ನಿಮ್ಮ ತಂದೆ, ತಾಯಿ, ಅಕ್ಕ, ಅಣ್ಣ, ತಂಗಿ, ಪತ್ನಿ ಕೂಡಾ ಇದೇ ಸಮಾಜದಲ್ಲಿ ಬದುಕುತ್ತಿದ್ದಾರೆ. ಈ ವಿಚಾರದ ಬಗ್ಗೆ ಅವರನ್ನು ಕೇಳಿ ಎಂದು ಗರಂ ಆಗಿದ್ದಾರೆ. ಒಟ್ಟಿನಲ್ಲಿ ಇಲಿಯಾನಾ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವುದಂತೂ ನಿಜ. ಮದುವೆ ಆಗಿರುವ ವಿಚಾರವನ್ನು ಮುಚ್ಚಿಟ್ಟು ಈಗ ಪ್ರೆಗ್ನಿನ್ಸಿ ಸುದ್ದಿಯನ್ನು ಘೋಷಿಸುತ್ತಿದ್ದಾರಾ ಅಥವಾ ಮದುವೆಗೂ ಮುನ್ನ ಪ್ರೆಗ್ನೆಂಟ್ ಆದ್ರಾ ಅನ್ನೋದನ್ನು ಅವರೇ ಹೇಳಬೇಕಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ಸೌಂದರ್ಯ ಜಾತಕದಲ್ಲಿತ್ತು ಸಾವಿನ ಮುನ್ಸೂಚನೆ: ನಿರ್ದೇಶಕರೊಬ್ಬರಿಗೆ ಮಗಳ ಭವಿಷ್ಯ ಹೇಳಿದ್ರಂತೆ ಸತ್ಯನಾರಾಯಣ!
ನೀವು ಇಂದು, ನಾಳಿನ ಅಗ್ರನಟಿಗೆ ಚೆಕ್ ಕೊಡಲು ಹೊರಟಿದ್ದೀರ ಎಂದರು. ಆ ಮಾತು ಕೇಳಿ ನನಗೆ ಒಂದು ಕ್ಷಣ ಗೊಂದಲ ಆಯ್ತು. ಖಂಡಿತ ನಾನು ಪರಿಚಯಿಸುವ ನಟಿ ದೊಡ್ಡ ಸ್ಥಾನಕ್ಕೆ ಬೆಳೆಯಬೇಕೆಂದು ನಾನು ಬಯಸುತ್ತೇನೆ ಎಂದೆ. ಸೌಂದರ್ಯ ಜಾತಕದ ವಿಚಾರ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.
ಬಾಲ್ಯದಲ್ಲಿ ನೋಡಿದ ಅಣ್ಣಾವ್ರ ಆ ಸಿನಿಮಾ ನನಗೆ ಬಹಳ ಇಷ್ಟ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ: ಭವ್ಯಾಗೌಡ
ಅಣ್ಣಾವ್ರು ಅಭಿನಯಿಸಿರುವ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಚೆಂದ. ಯಾವ ಸಿನಿಮಾಗಳನ್ನು ಮತ್ತೊಂದು ಸಿನಿಮಾಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಅವರ ಪ್ರತಿಯೊಂದು ಸಿನಿಮಾದಲ್ಲೂ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಪೂರ್ತಿ ಸುದ್ದಿಗೆ ಈ ಲಿಂಕ್ ಒತ್ತಿ.