logo
ಕನ್ನಡ ಸುದ್ದಿ  /  ಮನರಂಜನೆ  /  Kabzaa Screening In Qatar: ಕತಾರ್‌ನಲ್ಲಿ 'ಕಬ್ಜ' ಸಿನಿಮಾ ವಿಶೇಷ ಪ್ರದರ್ಶನ... ಕೇಕ್ ಕತ್ತರಿಸಿ ಸಂಭ್ರಮಾಚರಣೆ

Kabzaa Screening in Qatar: ಕತಾರ್‌ನಲ್ಲಿ 'ಕಬ್ಜ' ಸಿನಿಮಾ ವಿಶೇಷ ಪ್ರದರ್ಶನ... ಕೇಕ್ ಕತ್ತರಿಸಿ ಸಂಭ್ರಮಾಚರಣೆ

HT Kannada Desk HT Kannada

Mar 20, 2023 07:57 AM IST

google News

ಕತಾರ್‌ನಲ್ಲಿ 'ಕಬ್ಜ' ಸಿನಿಮಾ ವಿಶೇಷ ಪ್ರದರ್ಶನ

    • ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಸೇರಿ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.
ಕತಾರ್‌ನಲ್ಲಿ 'ಕಬ್ಜ' ಸಿನಿಮಾ ವಿಶೇಷ ಪ್ರದರ್ಶನ
ಕತಾರ್‌ನಲ್ಲಿ 'ಕಬ್ಜ' ಸಿನಿಮಾ ವಿಶೇಷ ಪ್ರದರ್ಶನ

ಮಾರ್ಚ್‌ 17, ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ರಿಲೀಸ್‌ ಆದ 'ಕಬ್ಜ' ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರದರ್ಶನ ವ್ಯಕ್ತವಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡಾ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆರ್‌. ಚಂದ್ರು ನಿರ್ದೇಶನ, ಉಪೇಂದ್ರ, ಸುದೀಪ್‌, ಶಿವಣ್ಣ ನಟನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಕತಾರ್‌ನಲ್ಲಿ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಇತ್ತೀಚೆಗೆ ದೋಹಾ ಕತಾರ್‌ನಲ್ಲಿ ಕರ್ನಾಟಕ ಸಂಘ ಹಾಗೂ ಕೋರ್ಸಿಸ್ ಕನ್ನಡ ಮೂವೀಸ್ ಸಂಯೋಗದೊಂದಿಗೆ 'ಕಬ್ಜ' ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿತ್ತು. ನೂರಾರು ಕನ್ನಡಿಗರು ಸಿನಿಮಾ ನೋಡಲು ಹಾಜರಿದ್ದರು. ಕತಾರ್‌ನಲ್ಲಿ 'ಕಬ್ಜ' ಸಿನಿಮಾ ಮೊದಲ ಬಾರಿಗೆ 11 ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕಥೆ, ಚಿತ್ರಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ನಂತರ ಉಪೇಂದ್ರ ಹಾಗೂ ಸುದೀಪ್ ಅಭಿಮಾನಿಗಳು ಕೇಕ್ ಕತ್ತರಿಸಿ ಇತರ ಅಭಿಮಾನಿಗಳಿಗೆ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಸೇರಿ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಕೇಕ್‌ ಕಟಿಂಗ್ ನಂತರ ಮಾತನಾಡಿದ ಮಹೇಶ್ ಗೌಡ, 'ಕಬ್ಜ' ಸಿನಿಮಾ ಯಶಸ್ವಿ 100 ದಿನಗಳನ್ನು ಪೂರೈಸಲಿ ಎಂದು ಶುಭ ಹಾರೈಸಿರು. ಸುಬ್ರಮಣ್ಯ ಹೆಸಿನಬ್ಬಾಗಿಲು ಮಾತನಾಡಿ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕತಾರ್‌ನಲ್ಲಿ ಇದೇ ರೀತಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುವಂತೆ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

'ಕಬ್ಜ' ಸಿನಿಮಾ ನೋಡಲು ನೆರೆದಿದ್ದ ಕತಾರ್‌ ಕನ್ನಡಿಗರು

ಮೊದಲ ದಿನವೇ 55 ಕೋಟಿ ರೂಪಾಯಿ ಲಾಭ ಮಾಡಿದ 'ಕಬ್ಜ'

ಕನ್ನಡದೊಂದಿಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ 'ಕಬ್ಜ' ಸಿನಿಮಾ ಮೊದಲ ದಿನವೇ ಎಲ್ಲಾ ಭಾಷೆಗಳಲ್ಲಿ ಉತ್ತಮ ಲಾಭ ಮಾಡಿದೆ. ಕೇವಲ ರಾಜ್ಯ, ರಾಷ್ಟ್ರದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡಾ 'ಕಬ್ಜ' ಕಮಾಲ್‌ ಮಾಡಿದೆ. ಒಂದೊಂದೇ ಭಾಷೆಯಲ್ಲಿ ಈ ಸಿನಿಮಾ ಗಳಿಕೆ ಎಷ್ಟು ಎಂಬುದನ್ನು ನೋಡುವುದಾದರೆ, ಕನ್ನಡದಲ್ಲಿ ಈ ಸಿನಿಮಾ ಶುಕ್ರವಾರ 20 ಕೋಟಿ ರೂ ಗಳಿಸಿದರೆ, ಹಿಂದಿಯಲ್ಲಿ 12 ಕೋಟಿ ರೂ. ಬಾಚಿಕೊಂಡಿದೆ. ತೆಲುಗಿನಲ್ಲಿ 7 ಕೋಟಿ ರೂ. ಮತ್ತು ತಮಿಳಿನಲ್ಲಿ 5 ಕೋಟಿ. ರೂ ಬೊಕ್ಕಸಕ್ಕೆ ಹಾಕಿಕೊಂಡರೆ, ಮಲಯಾಳಂನಲ್ಲಿ 3 ಕೋಟಿ ರೂ. ಕಮಾಯಿ ಮಾಡಿದೆ. ವಿದೇಶದಲ್ಲಿ 8 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಚಿತ್ರತಂಡದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

'ಕಬ್ಜ' ಸಿನಿಮಾ ಮೆಚ್ಚಿದ ಪವನ್‌ ಕಲ್ಯಾಣ್‌

ಟಾಲಿವುಡ್‌ ಸ್ಟಾರ್‌ ನಟ ಪವನ್‌ ಕಲ್ಯಾಣ್‌ ಕೂಡಾ 'ಕಬ್ಜ'‌ ಸಿನಿಮಾ ನೋಡಿ ಮೆಚ್ಚಿದ್ದಾರೆ ಎನ್ನಲಾಗಿದೆ. 'ಕಬ್ಜ'‌ ಆಡಿಯೋ ಲಾಂಚ್ ವೇಳೆ ಪವನ್‌ ಕಲ್ಯಾಣ್‌ ಆರ್‌. ಚಂದ್ರು ಅವರಿಗೆ ಪತ್ರ ಬರೆದು ವಿಶ್‌ ಮಾಡಿದ್ದು, ಇದೀಗ 'ಕಬ್ಜ' ಮೇಕಿಂಗ್‌ ನೋಡಿ ಕೂಡಾ ಮೆಚ್ಚಿದ್ಧಾರಂತೆ. ಚಿತ್ರದ ಮೊದಲಾರ್ಧ ಬಾಲಿವುಡ್‌ ರೀತಿ ಇದ್ರೆ ನಂತರ ಹಾಲಿವುಡ್ ರೀತಿ ಇದೆ. ಇದೊಂದು ಅಮೇಜಿಂಗ್‌ ಸಿನಿಮಾ ಎಂದು ಪವನ್‌ ಕಲ್ಯಾಣ್‌, ಆರ್.ಚಂದ್ರು ಹಾಗೂ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರಂತೆ. ಇದೇ ಖುಷಿಯಲ್ಲಿ ಪವನ್‌ ಕಲ್ಯಾಣ್‌, ಚಂದ್ರು ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೆಷ್ಟು ನಿಜ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ