logo
ಕನ್ನಡ ಸುದ್ದಿ  /  ಮನರಂಜನೆ  /   Sanya Iyer Spiritual Moment: ಸಾನ್ಯಾ ಮೈ ಮೇಲೆ ಕಾಮಾಕ್ಯದೇವಿ ಆವಾಹನೆ..ದೀಕ್ಷೆ ಪಡೆದಿದ್ದೇವೆ ಎಂದ ದೀಪಾ ಅಯ್ಯರ್‌!

Sanya Iyer Spiritual Moment: ಸಾನ್ಯಾ ಮೈ ಮೇಲೆ ಕಾಮಾಕ್ಯದೇವಿ ಆವಾಹನೆ..ದೀಕ್ಷೆ ಪಡೆದಿದ್ದೇವೆ ಎಂದ ದೀಪಾ ಅಯ್ಯರ್‌!

HT Kannada Desk HT Kannada

Dec 04, 2022 08:54 AM IST

google News

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್‌

    • ಮಹಿಷಾಸುರ ಮರ್ದಿನಿ ರೂಪಕದಲ್ಲಿ ದೇವಿ ವೇಷ ಧರಿಸಿ ಸಾನ್ಯಾ ಅಯ್ಯರ್‌, ನೃತ್ಯ ಮಾಡಿದ್ದರು. ವೇದಿಕೆ ಮೇಲೆ ಬರುವ ಮುನ್ನ ಸಾನ್ಯಾಗೆ ದೇವಿ ಆವಾಹನೆಯಾಗಿತ್ತಂತೆ. ಈ ವಿಡಿಯೋ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್‌
ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್‌ (PC: Sanya Iyer, Colors Kannada)

ಸಾನ್ಯಾ ಅಯ್ಯರ್‌, ಎಂದರೆ ನೆನಪಾಗುವುದು 'ಪುಟ್ಟ ಗೌರಿ ಮದುವೆ' ಧಾರಾವಾಹಿ. ಆ ಸೀರಿಯಲ್‌ನಲ್ಲಿ ಆಕೆ ಮಾಡಿದ ಪಾತ್ರವನ್ನು ಕಿರುತೆರೆಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಈ ಧಾರಾವಾಹಿ ನಂತರ ಬಹಳ ದಿನಗಳವರೆಗೂ ನಟನೆಯಿಂದ ದೂರ ಉಳಿದಿದ್ದ ಈ ಚೆಲುವೆ, ನಂತರ ಒಂದು ಕಿರುಚಿತ್ರದ ಮೂಲಕ ಮತ್ತೆ ಕಾಣಿಸಿಕೊಂಡರು.

ಒಟಿಟಿಯಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್‌ ಸೀಸನ್‌ನಲ್ಲಿ ಭಾಗವಹಿಸಿ, ಟಾಪ್‌ 4 ಸ್ಪರ್ಧಿಗಳ ಲಿಸ್ಟ್‌ನಲ್ಲಿದ್ದ ಸಾನಿಯಾ, ಸದ್ಯಕ್ಕೆ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್‌ 9 ರಲ್ಲಿ ಕೂಡಾ ಸ್ಪರ್ಧಿಯಾಗಿದ್ದರು. ಇತ್ತೀಚೆಗೆ ಎಲಿಮಿನೇಟ್‌ ಆಗಿ ಹೊರಬಂದಿರುವ ಸಾನ್ಯಾ ಅಯ್ಯರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಸಾನ್ಯಾ ಅಯ್ಯರ್‌ ಹಾಗೂ ಕುಟುಂಬ ಕಾಮಾಕ್ಯ ದೇವಿಯ ಆರಾಧಕರಾಗಿದ್ದು, ಸಾನ್ಯಾ ಮೇಲೆ ಕೂಡಾ ದೇವಿ ಆವಾಹನೆಯಾಗುತ್ತಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ 2 ದಿನಗಳಿಂದ ಇದೇ ವಿಚಾರ ಸುದ್ದಿಯಲ್ಲಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಸಾನ್ಯ ವಿಡಿಯೋವೊಂದು ಹರಿದಾಡುತ್ತಿದೆ.

ಸಾನ್ಯಾ ಅಯ್ಯರ್‌, ಬಿಗ್‌ ಬಾಸ್‌ಗೆ ಬರುವ ಮುನ್ನ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್‌ ಚಾಂಪಿಯನ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಆ ವೇಳೆ ಅವರು ಮಹಿಷಾಸುರ ಮರ್ದಿನಿ ರೂಪಕದಲ್ಲಿ ದೇವಿ ವೇಷ ಧರಿಸಿ ನೃತ್ಯ ಮಾಡಿದ್ದರು. ವೇದಿಕೆ ಮೇಲೆ ಬರುವ ಮುನ್ನ ಸಾನ್ಯಾಗೆ ದೇವಿ ಆವಾಹನೆಯಾಗಿತ್ತಂತೆ. ಈ ವಿಡಿಯೋ ತುಣುಕು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಸಾನ್ಯಾ, ತಾಯಿ ದೀಪಾ ಅಯ್ಯರ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾನ್ಯಾ, ''ದೇವರು ನನಗೆ ಫ್ರೆಂಡ್‌ ರೀತಿ , ದೇವರು ನಮ್ಮಲ್ಲೇ ಇದ್ದಾರೆ, ಹಾಗಿದ್ದಲ್ಲಿ ಆಕೆ ಮೈ ಮೇಲೆ ಬಂದಾಗ ಏಕೆ ಹೆದರಬೇಕು..? ನಮ್ಮ ಕುಟುಂಬದಲ್ಲಿ ಎಲ್ಲರೂ ಕಾಮಾಕ್ಯ ದೇವಿಯ ಆರಾಧಕರು. ಒಮ್ಮೆ ನನ್ನ ತಾಯಿ, ಅಸ್ಸೋಂನಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಬಂದ ನಂತರ ನನಗೂ ಅಲ್ಲಿ ಭೇಟಿ ನೀಡುವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ನನ್ನಲ್ಲಿ ಒಂದು ರೀತಿಯ ಪಾಸಿಟಿವ್‌ ವೈಬ್ಸ್‌ ಬಂದಂತೆ ಭಾಸವಾಯ್ತು. ಅಲ್ಲಿಂದ ಬಂದ ನಂತರ ನನ್ನ ಲೈಫ್‌ ಬದಲಾಯ್ತು ಅಂದಿನಿಂದ ದೇವಿ ಆವಾಹನೆಯಾಗುತ್ತಾಳೆ. ದೇವಿಯ ಡ್ಯಾನ್ಸ್‌ ಮಾಡುವಾಗ, ನೀನು ಮೈ ಮೇಲೆ ಬರಬೇಕು ಎಂದು ಕೇಳಿಕೊಳ್ಳುತ್ತಿದ್ದೆ, ಆಗ ದೇವಿ ಮೈ ಮೇಲೆ ಬರುತ್ತಿದ್ದಳು, ಆಗ ನಾನು ನನ್ನ ಕಂಟ್ರೋಲ್‌ನಲ್ಲಿ ಇರುತ್ತಿರಲಿಲ್ಲ. ಬಿಗ್‌ಬಾಸ್‌ನಲ್ಲಿ ಕೂಡಾ ಮೈ ಮೇಲೆ ದೇವಿ ಆವಾಹನೆಯಾಗುತ್ತಿತ್ತು'' ಎಂದು ಹೇಳಿಕೊಂಡಿದ್ದಾರೆ.

ಸಾನ್ಯಾ ತಾಯಿ ದೀಪಾ ಅಯ್ಯರ್‌ ಹೇಳಿದ್ದೇನು..?

''ರಿಯಾಲಿಟಿ ಶೋನಲ್ಲಿ ದೇವಿ ವೇಷ ಧರಿಸಿ ಕೂರಿಸಿದ್ದಾಗ ಆಕೆಯ ವರ್ತನೆ ನೋಡಿ ನನಗೆ ಶಾಕ್‌ ಆಯ್ತು. ಅಲ್ಲಿದ್ದವರೂ ಬಹಳ ಗಾಬರಿಯಾಗಿದ್ದರು. ಮನೆಯಲ್ಲಿ ಕೂಡಾ ಸಾನ್ಯಾ ಬಹಳ ಮೆಚ್ಯೂರ್‌ ಆಗಿ ಮಾತಾಡ್ತಾಳೆ. ನಾವೆಲ್ಲರೂ ಆಕೆಯನ್ನು ಅಜ್ಜಿ ಅಂತಾನೇ ರೇಗಿಸುತ್ತೇವೆ. ದೇವಿ ವೇಷ ಹಾಕಿದಾಗಲೆಲ್ಲಾ ಆಕೆ ದೇವಿಯನ್ನು ಮೈ ಮೇಲೆ ಆವಾಹನೆಯಾಗುವಂತೆ ಬೇಡಿಕೊಳ್ಳುತ್ತಿದ್ದಳು. ಸಾನ್ಯಾ ಹಾಗೂ ನಾನು ದೀಕ್ಷೆ ತೆಗೆದುಕೊಂಡಿದ್ದೇವೆ. ಹಾಗಂತ ಆಕೆ ಸನ್ಯಾಸತ್ವ ತೆಗೆದುಕೊಳ್ಳುತ್ತಾಳೆ ಎಂದರ್ಥವಲ್ಲ, ಆಕೆಗೆ ಮೊದಲಿನಿಂದಲೂ ನಟಿಯಾಗುವ ಆಸೆ ಇದೆ. ಅವಳು ಯಾವುದನ್ನೂ ಆಯ್ಕೆ ಮಾಡಿಕೊಳ್ಳುತ್ತಾಳೋ, ಆಕೆಗೆ ಬಿಟ್ಟದ್ದು. ಒಂದು ವೇಳೆ ಅವಳು ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದರೆ ನನಗೆ ಖಂಡಿತ ಭಯ ಅಥವಾ ಬೇಸರ ಇಲ್ಲ, ಆಕೆಗೆ ಸಂಪೂರ್ಣ ಫ್ರೀಡಂ ಕೊಟ್ಟಿದ್ದೇನೆ ಎಂದು ದೀಪಾ ಅಯ್ಯರ್‌, ಮಗಳು ಸಾನ್ಯಾ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ಇದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗ್ತಿರೋದಂತೂ ನಿಜ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ