ಛೀ ಇದೂ ಒಂದು ಡ್ಯಾನ್ಸಾ? ಭಾಗ್ಯಾಗೆ ಎಲ್ಲರ ಮುಂದೆ ಅವಮಾನ ಮಾಡಿದ ಶಿಕ್ಷಕಿ, ಖುಷಿಯಾದ ತಾಂಡವ್ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Oct 27, 2024 08:00 AM IST
Bhagyalakshmi Kannada Serial: ಭಾಗ್ಯಲಕ್ಷ್ಮೀ ಅಕ್ಟೋಬರ್ 26ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಅವಮಾನ ಮಾಡುವ ಶಿಕ್ಷಕಿ ಆಕೆಯನ್ನು ಕ್ಲಾಸ್‌ನಿಂದ ಹೊರ ಹಾಕುತ್ತಾಳೆ.
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 26ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಅವಮಾನ ಮಾಡುವಂತೆ ಶ್ರೇಷ್ಠಾ ತನ್ನ ಗೆಳತಿಗೆ ಹೇಳುತ್ತಾಳೆ. ಆಕೆ ಭಾಗ್ಯಾ ಗುರುಗಳನ್ನು ಎಲ್ಲರ ಮುಂದೆ ಹೀಯಾಳಿಸುವುದಲ್ಲದೆ, ಆಕೆಯನ್ನು ಕ್ಲಾಸ್‌ನಿಂದ ಹೊರ ಹಾಕುತ್ತಾಳೆ.
Bhagyalakshmi Kannada Serial: ಭಾಗ್ಯಾಗಿಂತ ಚೆನ್ನಾಗಿ ಡ್ಯಾನ್ಸ್ ಕಲಿಯಬೇಕೆಂದು ತಾಂಡವ್, ಮನೆಯಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಆರಂಭಿಸುತ್ತಾನೆ. ಅದರೆ ಡ್ಯಾನ್ಸ್ ಮಾಡಲು ಬಾರದೆ ಕೆಳಗೆ ಬೀಳುತ್ತಾನೆ. ಇದನ್ನು ನೋಡಿ ಕುಸುಮಾ, ಪೂಜಾ, ಸುಂದ್ರಿ ಹಾಗೂ ಮಕ್ಕಳು ನಗುತ್ತಾರೆ. ಬಿದ್ದರೂ, ನನಗೆ ಏನೂ ಆಗಿಲ್ಲ ಎಂದು ತಾಂಡವ್ ವಾದ ಮಾಡುತ್ತಾನೆ.
ಭಾಗ್ಯಾ ಹಟಕ್ಕೆ ಹೆದರಿ ಧರ್ಮರಾಜ್‌ಗೆ ಕ್ಷಮೆ ಕೇಳುವ ಶಿಕ್ಷಕಿ
ಬೆಳಗ್ಗೆ ಧರ್ಮರಾಜ್ ಭಾಗ್ಯಾಗೆ ಡ್ರೈವಿಂಗ್ ಕ್ಲಾಸ್ ಹೇಳಿಕೊಟ್ಟು ನಂತರ ಸೊಸೆಯನ್ನು ಡ್ಯಾನ್ಸ್ ಕ್ಲಾಸ್‌ಗೆ ಡ್ರಾಪ್ ಮಾಡುತ್ತಾನೆ. ಅಲ್ಲಿ ಸೆಕ್ಯೂರಿಟಿ ಇಲ್ಲದ ಕಾರಣಕ್ಕೆ ತಾನೇ ಗೇಟ್ ಬಾಗಿಲು ತೆಗೆಯುತ್ತಾನೆ. ಡ್ಯಾನ್ಸ್ ಶಿಕ್ಷಕಿ, ಧರ್ಮರಾಜ್ ಹೊಸ ಸೆಕ್ಯೂರಿಟಿ ಎಂದು ತಪ್ಪು ತಿಳಿದು ಆತನ ಮೇಲೆ ಕೈ ಮಾಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಭಾಗ್ಯಾ, ಆಕೆಯನ್ನು ತಡೆಯುತ್ತಾಳೆ. ನನ್ನ ಮಾವನಿಗೆ ಕ್ಷಮೆ ಕೇಳುವಂತೆ ಹೇಳುತ್ತಾಳೆ. ಕ್ಷಮೆ ಕೇಳಲು ಡ್ಯಾನ್ಸ್ ಶಿಕ್ಷಕಿ ನಿರಾಕರಿಸುತ್ತಾಳೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಭಾಗ್ಯಾ, ನೀವು ಕ್ಷಮೆ ಕೇಳುವರೆಗೂ ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎನ್ನುತ್ತಾಳೆ. ಬೇರೆ ವಿಧಿ ಇಲ್ಲದೆ ಶಿಕ್ಷಕಿ ಕ್ಷಮೆ ಕೇಳುತ್ತಾಳೆ.
ಹೊರಗೆ ತನಗೆ ಅದ ಅವಮಾನವನ್ನೇ ನೆನೆಪಿಸಿಕೊಳ್ಳುವಾಗ ಶ್ರೇಷ್ಠಾ ಅಲ್ಲಿಗೆ ಬರುತ್ತಾಳೆ. ನಿನ್ನೆ ನಾನು ನಿನಗೆ ಹೇಳಿದ್ದೆ, ನಿನ್ನ ಸ್ಟೂಡೆಂಟ್ ಒಬ್ಬಳಿಗೆ ಬುದ್ಧಿ ಕಲಿಸಬೇಕಿತ್ತು ಅಂತ, ಅದಕ್ಕಾಗಿ ಬಂದೆ ಎನ್ನುತ್ತಾಳೆ. ಮೊಬೈಲ್‌ನಲ್ಲಿದ್ದ ಭಾಗ್ಯಾ ಫೋಟೋ ನೋಡುತ್ತಿದ್ದಂತೆ ಡ್ಯಾನ್ಸ್ ಶಿಕ್ಷಕಿ ಶಾಕ್ ಆಗುತ್ತಾಳೆ. ನನಗೆ ಹೊರಗೆ ಅವಮಾನ ಮಾಡಿದ್ದು ಇವಳೇ. ಈಗ ನೋಡು ಇವಳಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಡ್ಯಾನ್ಸ್ ಹಾಲ್‌ಗೆ ಬರುತ್ತಾಳೆ. ಇವರು ಹೊಸ ಅಡ್ಮಿಷನ್, ಕ್ಲಾಸಿಕಲ್ ಡ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ ಎಂದು ಸಹ ಶಿಕ್ಷಕಿ ಹೇಳುತ್ತಾಳೆ. ಅದನ್ನು ನಿರ್ಧರಿಸಬೇಕಾಗಿರುವುದು ನಾನು. ಇಲ್ಲಿ ನಾನು ಡ್ಯಾನ್ಸ್ ಟೀಚರ್ ನೀನಲ್ಲ ಎನ್ನುತ್ತಾಳೆ.
ಭಾಗ್ಯಾಗೆ ಎಲ್ಲರ ಮುಂದೆ ಅವಮಾನ
ಶಿಕ್ಷಕಿ ಸೂಚನೆಯಂತೆ ಭಾಗ್ಯಾ ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಆದರೆ ಶಿಕ್ಷಕಿ, ಬೇಕಂತಲೇ ಡ್ಯಾನ್ಸ್ ನಿಲ್ಲಿಸುವಂತೆ ಹೇಳಿ ಛೀ, ಇದೂ ಒಂದು ಡ್ಯಾನ್ಸಾ ಎಂದು ಹೀಯಾಳಿಸುತ್ತಾಳೆ. ಶಿಕ್ಷಕಿ, ಭಾಗ್ಯಾಗೆ ಬೈಯ್ಯುವುದನ್ನು ನೋಡಿದ ಬೇರೆ ಸ್ಟೂಡೆಂಟ್‌ಗಳು ಆಶ್ಚರ್ಯಗೊಳ್ಳುತ್ತಾರೆ. ಆದರೆ ತಾಂಡವ್ ಹಾಗೂ ಶ್ರೇಷ್ಠಾಗೆ ಮಾತ್ರ ಭಾಗ್ಯಾಗೆ ಅವಮಾನವಾಗುತ್ತಿರುವುದು ಖುಷಿಯಾಗುತ್ತದೆ. ಭಾಗ್ಯಾಗೆ ಬೈಯ್ಯುವುದೂ ಅಲ್ಲದೆ ಆಕೆಗೆ ಡ್ಯಾನ್ಸ್ ಕಲಿಸಿದ ಗುರುಗಳನ್ನೂ ಆ ಶಿಕ್ಷಕಿ ಹೀಯಾಳಿಸುತ್ತಾಳೆ. ಇದರಿಂದ ಭಾಗ್ಯಾ ಕೋಪಗೊಳ್ಳುತ್ತಾಳೆ. ಆದರೆ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಕಿ, ಇಂತವಳು ನನ್ನ ಬಳಿ ಸ್ಟೂಡೆಂಟ್ ಆಗಿರುವುದು ನನಗೆ ಇಷ್ಟವಿಲ್ಲ ಎಂದು ಭಾಗ್ಯಾಳನ್ನು ಡ್ಯಾನ್ಸ್ ಕ್ಲಾಸ್‌ನಿಂದ ಹೊರ ಹಾಕುತ್ತಾಳೆ.
ಭಾಗ್ಯಾ, ಅವಮಾನದಿಂದ ಮನೆಗೆ ವಾಪಸ್ ಹೋಗುತ್ತಾಳಾ? ಅಥವಾ ಶಿಕ್ಷಕಿಯನ್ನು ಎದುರಿಸಿ ಮತ್ತೆ ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಾಳಾ ಕಾದು ನೋಡಬೇಕು.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್